Homeಮುಖಪುಟಎಸಿಬಿ ದಾಳಿ: ಮೈಸೂರು ಉಪ ಆಯುಕ್ತ, ಬಿಡಿಎ ಅಧಿಕಾರಿಗಳಿಂದ ಹಣ, ಚಿನ್ನ ವಶ

ಎಸಿಬಿ ದಾಳಿ: ಮೈಸೂರು ಉಪ ಆಯುಕ್ತ, ಬಿಡಿಎ ಅಧಿಕಾರಿಗಳಿಂದ ಹಣ, ಚಿನ್ನ ವಶ

- Advertisement -
- Advertisement -

ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಇಂದು ಬೆಳಿಗ್ಗೆ ಇಬ್ಬರು ಅಧಿಕಾರಿಗಳಿಗೆ ಸೇರಿದ ಐದು ಜಾಗಗಳಲ್ಲಿ ದಾಳಿ ನಡೆಸಿದ್ದು, ಭಾರಿ ಪ್ರಮಾಣದ ಚಿನ್ನಾಭರಣ, ಹಣ ಸೇರಿದಂತೆ ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಭ್ರಷ್ಟಾಚಾರ ದೂರು ದಾಖಲಾದ ಹಿನ್ನೆಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ಉಪ ಆಯುಕ್ತರಾಗಿರುವ ನಾಗರಾಜು ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಉಪಕಾರ್ಯದರ್ಶಿ ಎಂ.ಎಸ್.ಎನ್ ಬಾಬು ನಿವಾಸದ ಮೇಲೆ ದಾಳಿ ನಡೆದಿದೆ.

ಇದನ್ನೂ ಓದಿ: ಲಾಕ್‌ಡೌನ್ ವಿಧಿಸಿದ್ದು ನೀವು, ಈಗ ನೀವೇ ನೆರವು ನೀಡಿ: ಕೇಂದ್ರಕ್ಕೆ ಸುಪ್ರೀಂ ತಾಕೀತು

ಮೈಸೂರು ಮಹಾನಗರ ಪಾಲಿಕೆ ಅಭಿವೃದ್ಧಿ ಅಧಿಕಾರಿ ಮತ್ತು ಉಪ ಆಯುಕ್ತರಾಗಿರುವ ನಾಗರಾಜು ಅವರ ರಾಮನಗರ ಹಾಗೂ ಮೈಸೂರಿನ ನಿವಾಸಗಳ ಮೇಲೆ ದಾಳಿ ಮಾಡಿರುವ ಎಸಿಬಿ 1.3 ಕೆಜಿ ಚಿನ್ನ, 9 ಲಕ್ಷ ನಗದು ಹಾಗು ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದೆ.

ಬಿಡಿಎ ಉಪಕಾರ್ಯದರ್ಶಿಯಾಗಿದ್ದ ಎಮ್‌.ಎಸ್‌.ಎನ್‌. ಬಾಬು ಅವರ ತುಮಕೂರು ನಿವಾಸದ ಮೇಲೆ ನಡೆದ ದಾಳಿಯಲ್ಲಿ 1.5 ಕೆಜಿ ಚಿನ್ನ, 5 ಲಕ್ಷ ನಗದು ಹಾಗು ದಾಖಲೆಗಳನ್ನು ಎಸಿಬಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಕೆಎಎಸ್‌ ಅಧಿಕಾರಿಯಾಗಿದ್ದ ಬಾಬು ಸ್ಲಂ ಬೋರ್ಡ್ ಕಾರ್ಯದರ್ಶಿಯಾಗಿ ಇನ್ನಷ್ಟೇ ಅಧಿಕಾರ ಸ್ವೀಕರಿಸಬೇಕಿತ್ತು ಎನ್ನಲಾಗಿದೆ.


ಒದಿ: ನಾಜಿ ಜರ್ಮನಿ-IBM, ಫೇಸ್‌ಬುಕ್ ಭಾರತ-BJP: ‘ಸುಮಧುರ ಬಾಂಧವ್ಯ’ದ ಕತೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...