Homeಮುಖಪುಟಒಪ್ಪಿಗೆ ಪಡೆಯದೆ ಅಟಲ್ ಪಿಂಚಣಿ ಯೋಜನೆಯಡಿ ಖಾತೆ ತೆರೆದ ಬ್ಯಾಂಕ್‌ಗಳು: ತಿರಸ್ಕರಿಸಿದ ಶೇ.32ರಷ್ಟು ಚಂದಾದಾರರು

ಒಪ್ಪಿಗೆ ಪಡೆಯದೆ ಅಟಲ್ ಪಿಂಚಣಿ ಯೋಜನೆಯಡಿ ಖಾತೆ ತೆರೆದ ಬ್ಯಾಂಕ್‌ಗಳು: ತಿರಸ್ಕರಿಸಿದ ಶೇ.32ರಷ್ಟು ಚಂದಾದಾರರು

- Advertisement -
- Advertisement -

ಅಸಂಘಟಿತ ವಲಯಕ್ಕಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಟಲ್ ಪಿಂಚಣಿ ಯೋಜನೆ (ಎಪಿವೈ) ಯ ಪ್ರತಿ ಮೂವರು ಚಂದಾದಾರಲ್ಲಿ ಒಬ್ಬರು ಯೋಜನೆಯಿಂದ ಹೊರಗುಳಿದಿದ್ದಾರೆ. ಚಂದಾದಾರ ಅನುಮತಿ ಪಡೆಯದೆ ಖಾತೆಗಳನ್ನು ತೆರೆದಿರುವುದೇ ಇದಕ್ಕೆ ಕಾರಣ ಎಂಬುವುದು ಇಂಡಿಯನ್ ಕೌನ್ಸಿಲ್ ಆಫ್ ಸೋಶಿಯಲ್ ಸೈನ್ಸ್ ರಿಸರ್ಚ್ (ಐಸಿಎಸ್ಎಸ್‌ಆರ್‌) ಇತ್ತೀಚೆಗೆ ನಡೆಸಿದ ಅಧ್ಯಯನದಲ್ಲಿ ತೋರಿಸಿದೆ. ಬ್ಯಾಂಕ್ ಉದ್ಯೋಗಿಗಳು ತಮಗೆ ನಿಗದಿಪಡಿಸಿದ ದಾಖಲಾತಿ ಗುರಿ ಸಾಧಿಸಲು ಹೀಗೆ ಮಾಡಿದ್ದಾರೆ ಎಂದು business-standard.com ವರದಿ ಮಾಡಿದೆ.

ಶೇ.32ರಷ್ಟು ಚಂದಾದಾರರು ಬ್ಯಾಂಕ್ ತಮ್ಮ ಅನುಮತಿಯಿಲ್ಲದೆ ಖಾತೆಗಳನ್ನು ತೆರೆದಿದ್ದಕ್ಕಾಗಿ ಯೋಜನೆಯಿಂದ ಹೊರನಡೆದಿದ್ದರೆ, ಶೇ.38ರಷ್ಟು ಚಂದಾದಾರರು ಹಣದ ಅಗತ್ಯಕ್ಕಾಗಿ ಖಾತೆಗಳನ್ನು ಸ್ಥಗಿತಗೊಳಿಸಿದ್ದಾರೆ ಮತ್ತು ಶೇ.15ರಷ್ಟು ಚಂದಾದಾರರ ಬಳಿ ಖಾತೆಗಳನ್ನು ನಿರ್ವಹಿಸಲು ಹಣವಿರಲಿಲ್ಲ ಎನ್ನುವುದು ಅಧ್ಯಯನದಿಂದ ಬೆಳಕಿಗೆ ಬಂದಿದೆ.

ಸರ್ಕಾರದ ಚಿಂತಕರ ಚಾವಡಿ ಐಸಿಎಸ್‌ಎಸ್‌ಆರ್‌ನ ಅಧ್ಯಯನವು ಪಿಎಂ ಉಜ್ವಲಾ, ಪಿಎಂ ಆವಾಸ್, ದೀನ್‌ದಯಾಳ್‌ ಅಂತ್ಯೋದಯ ಮತ್ತು ಪಿಎಂ ಕೃಷಿ ಸಿಂಚಾಯಿ ಯೋಜನೆಗಳಂತಹ ಸರ್ಕಾರ 31 ಕಾರ್ಯಕ್ರಮಗಳು ಮತ್ತು ನೀತಿ ಉಪಕ್ರಮಗಳ ಅಧ್ಯಯನಕ್ಕಾಗಿ ದೇಶವ್ಯಾಪಿ ಪ್ರಕ್ರಿಯೆಯ ಭಾಗವಾಗಿದೆ.

ಅಧ್ಯಯನವು ಯೋಜನೆ ಕುರಿತು ಜಾಗೃತಿ ಮಟ್ಟವನ್ನು ತಿಳಿದುಕೊಳ್ಳಲು, ಎಪಿವೈ ಖಾತೆಗಳ ಲಭ್ಯತೆ ಮತ್ತು ನಿರ್ವಹಣೆಯಲ್ಲಿ ಚಂದಾದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಗುರುತಿಸಲು ಮತ್ತು ಯೋಜನೆಯಿಂದ ಅವರು ಹೊರಗುಳಿಯಲು ಕಾರಣಗಳ ಮೌಲ್ಯಮಾಪನಕ್ಕಾಗಿ ಉತ್ತರ ಪ್ರದೇಶದ ಪ್ರಯಾಗರಾಜ್ ವಿಭಾಗದಲ್ಲಿ 2,461 ಜನರನ್ನು ಸಮೀಕ್ಷೆಗೊಳಪಡಿಸಿತ್ತು. ಈ ವೇಳೆ 342 ಚಂದಾದಾರರ ಪೈಕಿ 119 ಜನರು ಯೋಜನೆಯಿಂದ ಹೊರನಡೆದಿರುವುದು ಬೆಳಕಿಗೆ ಬಂದಿದೆ.

1 ಸಾವಿರ ರೂ.ಗಳ ಕನಿಷ್ಠ ಮಟ್ಟದಲ್ಲಿ ಚಂದಾದಾರರ ಸಂಖ್ಯೆ ಅಧಿಕವಾಗಿದೆ ಎನ್ನುವುದನ್ನು ಗಮನಿಸಿರುವ ಅಧ್ಯಯನವು, ಮಾಸಿಕ ದೇಣಿಗೆ ಕಡಿಮೆಯಿರುವುದರಿಂದ ಚಂದಾದಾರರು ಆ ಬಗ್ಗೆ ಹೆಚ್ಚಿನ ಗಮನವನ್ನು ನೀಡುವುದಿಲ್ಲ ಎನ್ನುವುದು ಇದಕ್ಕೆ ಕಾರಣ ಎಂದು ಬೆಟ್ಟು ಮಾಡಿದೆ.

ಮೋತಿಲಾಲ್ ನೆಹರು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಬೋಧಿಸುವ ಮತ್ತು ಅಧ್ಯಯನದ ಪ್ರಮುಖ ಲೇಖಕರಾದ ತನುಜ್ ನಂದನ್ ಅವರು, “ಕಡಿಮೆ ಪಿಂಚಣಿ ಸ್ಲ್ಯಾಬ್‌ಗಳಲ್ಲಿ ಚಂದಾದಾರ ಸಂಖ್ಯೆ ವರ್ಷಗಳಿಂದ ಸತತವಾಗಿ ಹೆಚ್ಚಳವಾಗ್ತಿದೆ. ಹೀಗಾಗಿ ಇತರ ಪಿಂಚಣಿ ಸ್ಲ್ಯಾಬ್‌ಗಳು ಹೆಚ್ಚಾಗಿ ಅಸಮಂಜಸವಾಗಿದೆ ಎಂದಿದ್ದಾರೆ.

ಬ್ಯಾಂಕಿಂಗ್ ಏಜೆಂಟ್‌ಗಳು ಗುರಿ ಸಾಧನೆಯಲ್ಲಿ ತೊಡಗಿದ್ದಾರೆ. ಆದ್ದರಿಂದ ಅನುಮತಿಯಿಲ್ಲದೆ ವ್ಯಕ್ತಿಗಳ ಹೆಸರಿನಲ್ಲಿ ಖಾತೆಗಳನ್ನು ತೆರೆದಿದ್ದಾರೆ. ಚಂದಾದಾರರ ಖಾತೆಗಳಿಂದ ಸ್ವಲ್ಪ ಮೊತ್ತದ ಹಣ ಕಡಿತವಾಗುವುದರಿಂದ ಅದರ ಬಗ್ಗೆ ಅವರು ಹೆಚ್ಚಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ. ಕೆಲವೊಮ್ಮೆ ಅದು ಅವರ ಗಮನಕ್ಕೂ ಬರುವುದಿಲ್ಲ. ಇದು ಬ್ಯಾಂಕ್‌ ಸಿಬ್ಬಂದಿ ಮಾಹಿತಿ ನೀಡದೆ ಖಾತೆ ತೆರೆಯಲು ಸಹಕಾರಿಯಾಗಿದೆ.

ಯೋಜನೆಯಡಿಯಲ್ಲಿ, ಚಂದಾದಾರರು 19 ವರ್ಷ ವಯಸ್ಸಿನಲ್ಲಿ ರೂ 1,000 ಪಿಂಚಣಿ ಸ್ಲ್ಯಾಬ್‌ಗೆ ರೂ 46 ರ ಮಾಸಿಕ ಕೊಡುಗೆಯನ್ನು ನೀಡಬೇಕು. ರೂ 5,000 ಪಿಂಚಣಿಗೆ ರೂ 228 ಗೆ ಹೋಲಿಸಿದರೆ ಇದು ತುಂಬಾ ಕಡಿಮೆ. ಹಾಗಾಗಿ, 46 ರೂ. ಖಾತೆಯಿಂದ ಕಡಿತಗೊಳ್ಳುವುದು ಚಂದಾದಾರರಿಗೆ ಗೊತ್ತಾಗುವುದಿಲ್ಲ.

ರಾಷ್ಟ್ರೀಯ ಮಟ್ಟದಲ್ಲಿ ಎಪಿವೈ ಖಾತೆಗಳ ಬಗ್ಗೆ ಅಧ್ಯಯನವು ಗಮನಿಸಿದೆ, ತಿಂಗಳಿಗೆ ರೂ 1,000 ಪಿಂಚಣಿ ಸ್ಲ್ಯಾಬ್‌ನಲ್ಲಿನ ಖಾತೆಗಳ ಪಾಲು ಹಣಕಾಸು ವರ್ಷ 16 ರ ಶೇಕಡಾ 38.6 ರಿಂದ ಹಣಕಾಸು ವರ್ಷ 23ಕ್ಕೆ ಶೇಕಡಾ 82.6 ಕ್ಕೆ ಹೆಚ್ಚಾಗಿದೆ. ಇದೇ ವೇಳೆ 5,000 ರೂ. ಪಿಂಚಣಿ ಸ್ಲ್ಯಾಬ್‌ ಖಾತೆಗಳ ಪಾಲು ಶೇ. 46 ರಿಂದ 11ಕ್ಕೆ ಇಳಿಕೆಯಾಗಿದೆ.

ಇದನ್ನೂ ಓದಿ : ಬೋಗಸ್ ದಾಖಲೆ ಬಳಸಿ ಮೋದಿ ಸರ್ಕಾರದ ಯೋಜನೆಗಳಿಗೆ ಫಲಾನುಭವಿಗಳನ್ನು ಸೃಷ್ಟಿಸುತ್ತಿರುವ ಬ್ಯಾಂಕ್‌ಗಳು: ವರದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...