Homeಮುಖಪುಟರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಶಂಕಿತನಿಗಾಗಿ ಚೆನ್ನೈನಾದ್ಯಂತ ತೀವ್ರ ಶೋಧ

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಶಂಕಿತನಿಗಾಗಿ ಚೆನ್ನೈನಾದ್ಯಂತ ತೀವ್ರ ಶೋಧ

- Advertisement -
- Advertisement -

ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬುಧವಾರ ಬೆಳಗ್ಗೆ ಚೆನ್ನೈನ ಮೂರು ಸ್ಥಳಗಳಲ್ಲಿ ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಮಾರ್ಚ್ 1 ರ ಸ್ಫೋಟದ ಇಬ್ಬರು ಶಂಕಿತರು ಚೆನ್ನೈನಲ್ಲಿ ತಂಗಿದ್ದಾರೆ ಎಂಬ ಗುಪ್ತಚರ ಮಾಹಿತಿಯ ನಂತರ ಈ ದಾಳಿಗಳನ್ನು ಪ್ರಾರಂಭಿಸಲಾಯಿತು.

ಈಗಾಗಲೇ ಪ್ರಮುಖ ಶಂಕಿತನನ್ನು ಗುರುತಿಸಿರುವ ಕೇಂದ್ರೀಯ ಭಯೋತ್ಪಾದನಾ ನಿಗ್ರಹ ತನಿಖಾ ಸಂಸ್ಥೆ ಇನ್ನೂ ಆತನನ್ನು ಪತ್ತೆ ಹಚ್ಚಿಲ್ಲ. ತಲೆಗೆ ಟೋಪಿ ಮತ್ತು ಮಾಸ್ಕ್‌ ಧರಿಸಿದ್ದ ಆರೋಪಿಯು, ನಗರದ ಜನಪ್ರಿಯ ಕೆಫೆಯಲ್ಲಿ ಕನಿಷ್ಠ ಹತ್ತು ಮಂದಿ ಗಾಯಗೊಂಡ ಕಡಿಮೆ ತೀವ್ರತೆಯ ಬಾಂಬ್ ಅನ್ನು ಸ್ಪೋಟಿಸಿದ್ದನು.

ಮಾರ್ಚ್ 23 ರಂದು, ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದಿಂದ ಬಂದ ಪ್ರಮುಖ ಶಂಕಿತ ಮುಸ್ಸಾವಿರ್ ಹುಸೇನ್ ಶಾಜಿಬ್ ಅವರನ್ನು ಗುರುತಿಸಲಾಗಿದೆ ಎಂದು ಎನ್ಐಎ ಮೂಲಗಳು ತಿಳಿಸಿವೆ. ಪ್ರಮುಖ ಆರೋಪಿಯನ್ನು ಗುರುತಿಸಲು ಸಂಸ್ಥೆಯು 1,000 ಸಿಸಿಟಿವಿ ಕ್ಯಾಮೆರಾಗಳನ್ನು ಜಾಲಾಡಿದೆ.

ಈ ಸ್ಫೋಟದ ಹಿಂದೆ ಶಿವಮೊಗ್ಗ ಐಸಿಸ್ ಮಾಡ್ಯೂಲ್ ಕೈವಾಡವಿರಬಹುದು ಎಂದು ತನಿಖಾ ಸಂಸ್ಥೆಯ ಮೂಲಗಳು ಈ ಹಿಂದೆ ಹೇಳಿದ್ದವು. ಅಧಿಕಾರಿಗಳ ಪ್ರಕಾರ, ಕರ್ನಾಟಕದ ತೀರ್ಥಹಳ್ಳಿಯಲ್ಲಿ ಈ ಮಾಡ್ಯೂಲ್‌ನ 11 ಜನರನ್ನು ವಿಚಾರಣೆ ನಡೆಸಲಾಯಿತು. ನಂತರ ಅವರು ಕಳೆದ ಕೆಲವು ವರ್ಷಗಳಲ್ಲಿ ದಕ್ಷಿಣ ಭಾರತದಲ್ಲಿ ತಮ್ಮ ಜಾಲವನ್ನು ವಿಸ್ತರಿಸಿದರು.

ಎನ್‌ಐಎ ಅಧಿಕಾರಿಗಳು ತೀರ್ಥಹಳ್ಳಿಯ ಐದು ಸ್ಥಳಗಳಲ್ಲಿಯೂ ದಾಳಿ ನಡೆಸುತ್ತಿದೆ. ಬೆಂಗಳೂರಿನಿಂದ 15ಕ್ಕೂ ಹೆಚ್ಚು ತನಿಖಾ ಸಂಸ್ಥೆ ಅಧಿಕಾರಿಗಳು ಪಟ್ಟಣಕ್ಕೆ ಆಗಮಿಸಿದ್ದಾರೆ. ಶಂಕಿತ ವ್ಯಕ್ತಿಗಳ ಮನೆಗಳ ಮೇಲೆ ದಾಳಿ ನಡೆಸಲು ಎನ್‌ಐಎ ತಂಡವು ಸ್ಥಳೀಯ ಪೊಲೀಸರ ಸಹಕಾರ ಪಡೆದುಕೊಂಡಿದೆ.

ಕೇಂದ್ರ ಭಯೋತ್ಪಾದನಾ ವಿರೋಧಿ ತನಿಖಾ ಸಂಸ್ಥೆಯು ಬಾಂಬರ್‌ನ ಬಂಧನಕ್ಕೆ ಕಾರಣವಾಗುವ ಮಾಹಿತಿಗಾಗಿ 10 ಲಕ್ಷ ರೂಪಾಯಿ ನಗದು ಬಹುಮಾನವನ್ನು ಘೋಷಿಸಿದೆ; ಶಂಕಿತನ ಸಿಸಿಟಿವಿ ಚಿತ್ರಗಳು ಮತ್ತು ವೀಡಿಯೊಗಳನ್ನು ಸಹ ಬಿಡುಗಡೆ ಮಾಡಿದೆ.

ಇದನ್ನೂ ಓದಿ; ಲಡಾಖ್‌ಗೆ ರಾಜ್ಯ ಸ್ಥಾನಮಾನ ಹೋರಾಟ; 21 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ಸೋನಮ್ ವಾಂಗ್ಚುಕ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read