Homeಮುಖಪುಟಆರ್ಯನ್ ಖಾನ್ ಜಾಮೀನಿಗೆ ನಟಿ ಜೂಹಿ ಚಾವ್ಲ ಶ್ಯೂರಿಟಿ: 1 ಲಕ್ಷ ರೂ ಬಾಂಡ್‌ಗೆ ಸಹಿ

ಆರ್ಯನ್ ಖಾನ್ ಜಾಮೀನಿಗೆ ನಟಿ ಜೂಹಿ ಚಾವ್ಲ ಶ್ಯೂರಿಟಿ: 1 ಲಕ್ಷ ರೂ ಬಾಂಡ್‌ಗೆ ಸಹಿ

- Advertisement -
- Advertisement -

ಮುಂಬೈ ಕ್ರೂಸ್ ಹಡಗು ಡ್ರಗ್ಸ್ ಪ್ರಕರಣದಲ್ಲಿ ಮೂರು ವಾರಗಳ ಜೈಲು ವಾಸದ ನಂತರ ಆರೋಪಿ ಆರ್ಯನ್ ಖಾನ್‌ಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿದ್ದು, ಆರ್ಯನ್ ಖಾನ್ ಜಾಮೀನಿಗೆ ನಟಿ ಜೂಹಿ ಚಾವ್ಲ ಶ್ಯೂರಿಟಿಯಾಗಿದ್ದು ಇಂದು ಸಂಜೆ ಎನ್‌ಡಿಪಿಸ್ ಕೋರ್ಟಿಗೆ ಹಾಜರಾಗಿ 1 ಲಕ್ಷ ರೂ ಬಾಂಡ್‌ಗೆ ಸಹಿ ಹಾಕಲಿದ್ದಾರೆ.

ಶಾರೂಕ್ ಖಾನ್‌ರವರ ಹಲವು ವರ್ಷದ ಸ್ನೇಹಿತೆಯಾದ ಜೂಹಿ ಚಾವ್ಲ ಆರ್ಯನ್ ಖಾನ್‌ರನ್ನು ಹುಟ್ಟಿದಾಗಿನಿಂದಲೇ ಬಲ್ಲವರು. ಶಾರೂಕ್ ಮತ್ತು ಚಾವ್ಲ ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ.

ಬಾಂಬೆ ಹೈಕೋರ್ಟ್‌ನ ಆದೇಶದ ಆಪರೇಟಿವ್ ಭಾಗ ನಮಗೆ ಸಿಕ್ಕಿದೆ. ನಾವು ಶ್ಯೂರಿಟಿಗಳಂತಹ ಇತರ ವಿಧಿವಿಧಾನಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ನಮ್ಮ ಕಾನೂನು ತಂಡವು ಕೆಲಸ ಮಾಡುತ್ತಿದೆ. ನಾವು ಇಂದು ಬಿಡುಗಡೆಗೆ ಪ್ರಯತ್ನಿಸುತ್ತಿದ್ದೇವೆ,” ಜಾಮೀನು ಷರತ್ತುಗಳು ಲಭ್ಯವಾದ ಕೂಡಲೆ ನಟಿ ಜೂಹಿ ಚಾವ್ಲಾ ಅವರು ಆರ್ಯನ್ ಖಾನ್‌ಗೆ ಶ್ಯೂರಿಟಿಯಾಗಲು ನ್ಯಾಯಾಲಯಕ್ಕೆ ಬಂದರು ಎಂದು ಆರ್ಯನ್ ಖಾನ್ ಪರ ವಕೀಲ ಸತೀಶ್ ಮಾನೆಶಿಂಧೆ ತಿಳಿಸಿದ್ದಾರೆ.

“ಜೂಹಿ ಚಾವ್ಲಾ ಜಾಮೀನು ಆಗಿದ್ದಾರೆ. ಪಾಸ್‌ಪೋರ್ಟ್‌ನಲ್ಲಿ ಅವರ ಹೆಸರಿದೆ. ಆಧಾರ್ ಕಾರ್ಡ್ ಇದೆ” ಎಂದು ಆರ್ಯನ್ ಖಾನ್ ಅವರ ಶ್ಯೂರಿಟಿಯನ್ನು ಮಾನೆಶಿಂಧೆ ಹಾಜರುಪಡಿಸಿದರು. ಜೂಹಿ ಚಾವ್ಲಾ ಸಾಕ್ಷಿ ಪೆಟ್ಟಿಗೆಯನ್ನು ಪ್ರವೇಶಿಸಿದರು. ಅರ್ಬಾಜ್ ಮರ್ಚೆಂಟ್ ಮತ್ತು ಮುನ್‌ಮುನ್ ಧಮೇಚಾ ಅವರ ಪರವಾಗಿ ಹಾಜರಾಗದಿದ್ದರೂ ಅವರನ್ನು ಬಿಡುಗಡೆ ಮಾಡುವಂತೆ ಮನೇಶಿಂಡೆ ನ್ಯಾಯಾಲಯಕ್ಕೆ ಮನವಿ ಮಾಡಿದರು.

ಆರ್ಯನ್ ಖಾನ್ ಮತ್ತು ಆತನ ಸಹ ಆರೋಪಿಗಳಿಗೆ ಜಾಮೀನು ಮಂಜೂರಾಗಿದ್ದರೂ ಆದೇಶ ಜೈಲು ತಲುಪಲು ಸಮಯ ತೆಗೆದುಕೊಳ್ಳುತ್ತಿದೆ. ಇಂದು ಸಂಜೆ 5.30ರೊಳಗೆ ಜೈಲು ಅಧಿಕಾರಿಗಳಿಗೆ ತಲುಪಿದರೆ ಆರ್ಯನ್ ಖಾನ್ ಇಂದೇ ಬಿಡುಗಡೆಯಾಗುತ್ತದೆ. ಇಲ್ಲದಿದ್ದಲ್ಲಿ  ಇಂದು ರಾತ್ರಿ ಸಹ ಜೈಲಿನಲ್ಲೆ ಉಳಿಯಬೇಕಾಗುತ್ತದೆ.

ನಿನ್ನೆ ಜಾಮೀನು ನೀಡಿರುವ ಮುಂಬೈ ಹೈಕೋರ್ಟ್ 14 ಷರತ್ತುಗಳನ್ನು ವಿಧಿಸಿದೆ. ಆದೇಶದ ಪ್ರಕಾರ ಅವರು ₹ 1 ಲಕ್ಷದ ವೈಯಕ್ತಿಕ ಬಾಂಡ್ ಅನ್ನು ಸಲ್ಲಿಸಬೇಕು ಮತ್ತು ಅವರ ಪಾಸ್‌ಪೋರ್ಟ್ ಅನ್ನು ಒಪ್ಪಿಸಬೇಕು.

ಅನುಮತಿಯಿಲ್ಲದೆ ದೇಶವನ್ನು ತೊರೆಯಬಾರದು, ಇದೇ ರೀತಿಯ ಚಟುವಟಿಕೆಗಳಲ್ಲಿ ತೊಡಗಬಾರದು, ಅವನ ಸ್ನೇಹಿತ ಅರ್ಬಾಜ್ ಮರ್ಚೆಂಟ್‌ನಂತಹ ಇತರ ಆರೋಪಿಗಳೊಂದಿಗೆ ಸಂವಹನ ಮಾಡಬಾರದು ಮತ್ತು ಮಾಧ್ಯಮಗಳೊಂದಿಗೆ ಮಾತನಾಡಬಾರದು” ಎಂಬ ಷರತ್ತುಗಳು ಸೇರಿವೆ.

ಆರ್ಯನ್ ಖಾನ್ ಪ್ರತಿ ಶುಕ್ರವಾರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ರ ನಡುವೆ ಎನ್‌ಸಿಬಿ ಕಚೇರಿಗೆ ಹೋಗಬೇಕು, ನ್ಯಾಯಾಲಯದ ವಿಚಾರಣೆಗೆ ಹಾಜರಾಗಬೇಕು ಮತ್ತು ಅಗತ್ಯವಿದ್ದಾಗ ತನಿಖೆಗೆ ಸಹಕರಿಸಬೇಕಿದೆ. ಇವುಗಳಲ್ಲಿ ಯಾವುದಾದರೂ ಷರತ್ತುಗಳನ್ನು ಉಲ್ಲಂಘಿಸಿದರೆ, ಎನ್‌ಸಿಬಿಯು ಜಾಮೀನು ರದ್ದುಗೊಳಿಸುವಂತೆ ಕೋರಬಹುದು ಎಂದು ನ್ಯಾಯಾಲಯ ಹೇಳಿದೆ.

ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಕ್ರೂಸ್ ಹಗಡಿನಲ್ಲಿ ನಡೆಯುತ್ತಿದ್ದ ಪಾರ್ಟಿಯ ಮೇಲೆ ದಾಳಿ ನಡೆಸಿದ ಕೆಲವು ಗಂಟೆಗಳ ನಂತರ ಬಾಲಿವುಡ್ ನಟ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್‌ರನ್ನು ಅಕ್ಟೋಬರ್ 3 ರಂದು ಬಂಧಿಸಲಾಗಿತ್ತು.

ಅಕ್ಟೋಬರ್ 8 ರಿಂದ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿರುವ ಆರ್ಯನ್ ಖಾನ್ ಅವರಿಗೆ ಈ ಹಿಂದೆ ಎರಡು ಬಾರಿ ಜಾಮೀನು ನಿರಾಕರಿಸಲಾಗಿತ್ತು.


ಇದನ್ನೂ ಓದಿ: ಡ್ರಗ್ಸ್ ಪ್ರಕರಣ: ಮೂರು ವಾರಗಳ ಬಳಿಕ ಆರ್ಯನ್‌ ಖಾನ್‌ಗೆ ಜಾಮೀನು ಮಂಜೂರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪನ್ನೂನ್‌ ಹತ್ಯೆ ಸಂಚು: ವಾಷಿಂಗ್ಟನ್ ಪೋಸ್ಟ್ ವರದಿಗೆ ಅಮೆರಿಕ ಪ್ರತಿಕ್ರಿಯೆ

0
ಸಿಖ್ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್ ಸಿಂಗ್ ಪನ್ನೂನ್‌ ಹತ್ಯೆಯ ಸಂಚಿಗೆ ಸಂಬಂಧಿಸಿದ 'ದಿ ವಾಷಿಂಗ್ಟನ್ ಪೋಸ್ಟ್ ವರದಿ' ಬೆನ್ನಲ್ಲಿ ಆರೋಪಗಳ ಬಗ್ಗೆ ತನಿಖೆಗೆ ಭಾರತ ಸರ್ಕಾರದೊಂದಿಗೆ ನಿಯಮಿತವಾಗಿ ಕೆಲಸ ಮಾಡುತ್ತಿದೆ ಎಂದು ಅಮೆರಿಕ...