Homeಮುಖಪುಟಬೆಳ್ಳಿ ಚುಕ್ಕಿ; ಏಮ್ಸ್ ಕೊಠಡಿ!

ಬೆಳ್ಳಿ ಚುಕ್ಕಿ; ಏಮ್ಸ್ ಕೊಠಡಿ!

- Advertisement -
- Advertisement -

ಏಮ್ಸ್ ಕೊಠಡಿ ಅಂದ ತಕ್ಷಣ, ದೆಹಲಿಯಲ್ಲಿರುವ ಏಮ್ಸ್ ಆಸ್ಪತ್ರೆಯ ಯಾವುದೋ ಒಂದು ಕೊಠಡಿ ಬಗ್ಗೆ ಇರಬಹುದೇ? ಆ ಕೊಠಡಿ ಒಳಗೆ ಏನಿರಬಹುದು? ಯಾಕಿರಬಹುದು? ಅಂತೆಲ್ಲಾ ಊಹಿಸಿದಿರಾ! ಇದು ದೆಹಲಿಯ ಏಮ್ಸ್ ಕೊಠಡಿಯ ಬಗ್ಗೆ ಅಲ್ಲ. ಆದರೂ ಇದು ಏಮ್ಸ್ ಕೊಠಡಿ!

ಈ ಮೇಲಿನ ಎರಡು ಚಿತ್ರಗಳನ್ನು ಗಮನಿಸಿ. ಏನನ್ನಿಸಿತು? ಚಿತ್ರ (1)ರಲ್ಲಿ ಪುರುಷನು ಮಹಿಳೆಗಿಂತ ಎತ್ತರವಾಗಿದ್ದಾರೆ, ಅದೇ ಚಿತ್ರ (2)ರಲ್ಲಿ ಮಹಿಳೆ ಪುರುಷನಿಗಿಂತ ಎತ್ತರವಾಗಿದ್ದಾರೆ ಅಲ್ಲವೇ? ಆದರೆ, ಚಿತ್ರ (1) ಮತ್ತು (2)ಕ್ಕಿರುವ ಬದಲಾವಣೆಯೆಂದರೆ, ಇಬ್ಬರೂ ತಮ್ಮ ತಮ್ಮ ಸ್ಥಾನಗಳನ್ನು ಬದಲಾಯಿಸಿರುವರು ಅಷ್ಟೇ! ಅದೇ ಕೊಠಡಿ, ಅದೇ ಸ್ಥಳ! ಮತ್ತೊಮ್ಮೆ ಸೂಕ್ಷ್ಮವಾಗಿ ಚಿತ್ರಗಳನ್ನು ಗಮನಿಸಿ.

ಮೇಲಿನ ಚಿತ್ರಗಳಲ್ಲಿರುವ ಕೊಠಡಿಯು ಸಾಮಾನ್ಯ ಕೊಠಡಿಯಂತೆಯೇ ಕಾಣುತ್ತಿದೆ. ಹೇಳಿಕೊಳ್ಳುವಂತಹ ಯಾವ ಬದಲಾವಣೆಗಳೂ ಗೋಚರಿಸುತ್ತಿಲ್ಲ. ಅಲ್ಲದೆ, ವೀಕ್ಷಕರಿಂದ ಇಬ್ಬರೂ ಒಂದೇ ಅಂತರದಲ್ಲಿ ನಿಂತಿದ್ದಾರೆ. ಆದರೆ, ಒಂದು ಬದಿಯಲ್ಲಿ ನಿಂತಿರುವರು ಎತ್ತರವಾಗಿದ್ದಾರೆ. ಅವರೇ ಮತ್ತೊಂದು ಬದಿಗೆ ಹೋದರೆ ಅವರ ಎತ್ತರ ಕಡಿಮೆಯಾಗುತ್ತಿದೆ. ಅವರು ಒಂದು ಬದಿಯಿಂದ ಇನ್ನೊಂದು ಬದಿಗೆ ನಡೆದುಕೊಂಡು ಹೊಗುವ ವಿಡಿಯೋವನ್ನು ನೀವು ನೋಡಿದರೆ, ಎತ್ತರಗಳು ವ್ಯತ್ಯಾಸವಾಗುವುದನ್ನು ಗಮನಿಸಬಹುದು. ವಿಡಿಯೋ ನೋಡಲು QR ಕೋಡ್ ಸ್ಕ್ಯಾನ್ ಮಾಡಿ.

ಅರೆ, ಏನಿದು, ನಮ್ಮ ಕಣ್ಣಿಗೆ ಹೀಗೇಕೆ ಮೋಸವಾಗುತ್ತಿದೆ? ಇಂತಹ ಮೋಸಮಾಡುವ ಪ್ರಕ್ರಿಯೆಗಳನ್ನು ವೈಜ್ಞಾನಿಕವಾಗಿ ಭ್ರಮೆ (Illusion) ಎಂದು ಕರೆಯುತ್ತೇವೆ. ಮೇಲಿನ ಚಿತ್ರದಲ್ಲಿರುವ ಕೊಠಡಿಯು ಸಹ ಅಂತಹ ದೃಷ್ಟಿಭ್ರಮೆಗೆ ಒಂದು ಉದಾಹರಣೆ (Optical Illusion).

ಅಮೆರಿಕಾದ ಅಡೆಲ್ಬರ್ಟ್ ಏಮ್ಸ್ ಎಂಬ ಹೆಸರಿತ ನೇತ್ರ ತಜ್ಞ ಮೊದಲ ಬಾರಿಗೆ ಇಂತಹ ಕೊಠಡಿಯನ್ನು ವಿನ್ಯಾಸ ಮಾಡಿದರು. ಖ್ಯಾತ ಭೌತವಿಜ್ಞಾನಿಯಾದ ಹರ್ಮನ್ ಹೆಲ್ಮೋಲ್ಟ್ಸ್ (Hermann Helmholtz) ಅವರು ಮೊದಲ ಬಾರಿಗೆ ಇಂತಹ ಕೊಠಡಿಯ ಪರಿಕಲ್ಪನೆಯನ್ನು ವಿವರಿಸಿದ್ದರೂ, ಅದನ್ನು ಮೊಟ್ಟಮೊದಲ ಬಾರಿಗೆ ನಿರ್ಮಿಸಿದ್ದು ನೇತ್ರ ತಜ್ಞ ಏಮ್ಸ್. ಈ ಕೊಠಡಿಯಲ್ಲಿನ ವಿಶೇಷವೆಂದರೆ, ವಸ್ತುವು ನೋಡುಗರಿಂದ ಒಂದೇ ದೂರದಲ್ಲಿದ್ದರೂ, ಅದನ್ನು ಒಂದು ಬದಿಯಲ್ಲಿಟ್ಟರೆ ಅದು ದೈತ್ಯವಾಗಿ, ಮತ್ತೊಂದು ಬದಿಯಲ್ಲಿಟ್ಟರೆ ಕುಬ್ಜವಾಗಿರುವಂತೆ ಕಾಣುತ್ತದೆ.

ಏಮ್ಸ್ ಕೊಠಡಿಯ ವಿನ್ಯಾಸ

ಮೇಲಿನ ಚಿತ್ರಗಳು ಏಮ್ಸ್ ಕೊಠಡಿಯ ವಿನ್ಯಾಸದ top view ಮತ್ತು side viewಗಳನ್ನು ತೋರಿಸುತ್ತವೆ. ಸಾಮಾನ್ಯವಾಗಿ ನಾವು ಕೊಠಡಿ ಎಂದಾಕ್ಷಣಾ ಛಾವಣಿ ಮತ್ತು ನೆಲವು ಸಮಾನಾಂತರವಾಗಿದ್ದು, ಗೋಡೆಗಳು ನೇರವಾಗಿರುವಂತೆ ಗ್ರಹಿಸುತ್ತೇವೆ. ಹಾಗೆಯೇ, ಏಮ್ಸ್ ಕೊಠಡಿಯನ್ನು ಹೊರಗಿನಿಂದ ಕಂಡಾಗ, ಇದೇ ರೀತಿ ಗೋಚರಿಸುವಂತೆ ವಿನ್ಯಾಸ ಮಾಡಲಾಗಿರುತ್ತದೆ. ಆ ಕೊಠಡಿಯನ್ನು ಒಂದು ವೀಕ್ಷಣಾ ಕಿಂಡಿಯಿಂದ ಕಂಡಾಗ ಮಾತ್ರ ಅದರ ಮ್ಯಾಜಿಕ್ ಅನಾವರಣಗೊಂಡು ನಮ್ಮನ್ನು ಚಕಿತಗೊಳಿಸುತ್ತದೆ.

ಏಮ್ಸ್ ಕೊಠಡಿ, ಹೊರಗಿನಿಂದ ಸಾಮಾನ್ಯ ಕೊಠಡಿಯಾಗಿದ್ದರೂ, ಅದನ್ನು trapezoidal shapeನಲ್ಲಿ (ವಿಷಮ ಸಮಾನಾಂತರ ಚತುರ್ಭುಜ) ವಿನ್ಯಾಸ ಮಾಡಿರುತ್ತಾರೆ. ಈ ಕೊಠಡಿಯಲ್ಲಿ ಯಾವ ಗೋಡೆಗಳೂ ಸಮಾನಾಂತರವಾಗಿರುವುದಿಲ್ಲ, ಎಲ್ಲವೂ ಒಂದಕ್ಕೊಂದು ಓರೆಯಾಗಿರುತ್ತದೆ. ನೆಲ ಮತ್ತು ಛಾವಣಿಯೂ ಕೂಡ ಸಮಾನಾಂತರವಾಗಿರದೆ, ಛಾವಣಿಯು ಇಳಿಜಾರಾಗಿರುತ್ತದೆ. ಏಮ್ಸ್ ಕೊಠಡಿಯ ಒಳಗೆ ವೀಕ್ಷಿಸಲು ನಿರ್ದಿಷ್ಟ ಜಾಗವನ್ನು ಅಥವಾ ವೀಕ್ಷಣಾ ಕಿಂಡಿಯನ್ನು ಕಲ್ಪಿಸಿರುತ್ತಾರೆ. ಅಲ್ಲಿಂದಲೇ ಒಳಗೆ ನಡೆಯುವ ಕ್ರಿಯೆಯನ್ನು ನೋಡಬೇಕು. ಈ ವೀಕ್ಷಣಾ ಕಿಂಡಿಯಿಂದ ನೋಡಿದಾಗ ಮಾತ್ರ ಒಂದು ಬದಿ ಹತ್ತಿರವಿರುವಂತೆ, ಮತ್ತೊಂದು ಬದಿ ದೂರವಿರುವಂತೆ ಕಾಣುತ್ತದೆ. ಮೇಲಿನ ಚಿತ್ರಗಳಲ್ಲಿ ಅದನ್ನು ನೋಡಬಹುದು. ಆದರೆ, ನೋಡುಗರಿಗೆ ಇದ್ಯಾವುದು ಗೊತ್ತಾಗದ ರೀತಿಯಲ್ಲಿ ಏಮ್ಸ್ ಕೊಠಡಿಯು ಒಳಗೆ ನೆಲ, ಛಾವಣಿ ಮತ್ತು ಗೋಡೆಗಳ ಮೇಲೆ ಚಿತ್ರ ಅಥವಾ ವಿನ್ಯಾಸಗಳನ್ನು ರಚಿಸಲಾಗಿರುತ್ತದೆ. ಈ ಚಿತ್ರಗಳು ಈ ಕೊಠಡಿ ಒಂದು ಸಾಮಾನ್ಯ ಕೊಠಡಿಯಂತೆಯೇ ಇದೆ ಎನ್ನುವ ಭ್ರಮೆಯನ್ನು ನಮ್ಮ ಕಣ್ಣಿನಲ್ಲಿ ಬಿಂಬಿಸುತ್ತಲೇ ಇರುತ್ತದೆ. ಆದರೆ, ಕೊಠಡಿಯೊಳಗೆ ಒಂದು ಬದಿಯಿಂದ ಇನ್ನೊಂದು ಬದಿಗೆ ಯಾರಾದರೂ ನಡೆದರೆ ಅಥವಾ ವಸ್ತುಗಳ ಸ್ಥಾನವನ್ನು ಬದಲಾಯಿಸಿದರೆ, ಅರೆ ಏನಿದು, ಏನಾಯಿತು, ಹೇಗೆ ಆ ವಸ್ತು ಚಿಕ್ಕದಾಯ್ತು, ದೊಡ್ಡದಾಯ್ತು ಎನ್ನುವ ಪ್ರಶ್ನೆಗಳು ಮೂಡುತ್ತವೆ. ಇದೇ ದೃಷ್ಟಿ ಭ್ರಮೆ! ಮನುಷ್ಯನ ಮೆದುಳು ವಸ್ತುವಿನ ಗಾತ್ರವನ್ನು ಹೇಗೆ ಕಂಡುಕೊಳ್ಳುತ್ತದೆ ಎನ್ನುವ ಆಂಶವನ್ನು ತಿಳಿಯಲು ಇಂತಹ ದೃಷ್ಟಿ ಭ್ರಮೆಯ ಪ್ರಯೋಗಗಳನ್ನು ಕೈಗೊಂಡು ಮನಶಾಸ್ತಜ್ಞರು ಅಧ್ಯಯನ ನಡೆಸುತ್ತಾರೆ.

ಅಂದಹಾಗೆ ಮೇಲಿನ ವಿನ್ಯಾಸದಂತೆ ಈ ಏಮ್ಸ್ ಕೊಠಡಿಯನ್ನು ನೀವು ಕಟ್ಟಿಸಬಹುದು, ಅಥವಾ ದೊಡ್ಡದಾದ ಕಾರ್ಡ್‌ಬೋರ್ಡ್‌ಗಳಲ್ಲಿ, ಗೋಡೆ, ಛಾವಣಿ ಮತ್ತು ನೆಲಹಾಸುಗಳನ್ನು ಮಾಡಿ, ಬಣ್ಣ ಬಳಿದು ಏಮ್ಸ್ ಕೊಠಡಿಯನ್ನು ಶಾಲೆ, ಕಾಲೇಜು ಅಥವಾ ಮ್ಯೂಸಿಯಂಗಳಲ್ಲಿ ನಿರ್ಮಿಸಬಹುದು. ಬೆಂಗಳೂರಿನ ಜವಾಹಾರಲಾಲ್ ನೆಹರೂ ತಾರಾಲಯದಲ್ಲಿ ದೊಡ್ಡದಾದ ಏಮ್ಸ್ ಕೊಠಡಿಯನ್ನೇ ನಿರ್ಮಿಸಿದ್ದಾರೆ. ಒಮ್ಮೆ ಅಲ್ಲಿಗೆ ಭೇಟಿ ನೀಡಿದಾಗ, ಖಗೋಳ ಪ್ರದರ್ಶನದ ಜೊತೆಗೆ, ಏಮ್ಸ್ ಕೊಠಡಿ ಒಳಗೂ ಒಂದು ವಾಕ್ ಮಾಡಿ ಬನ್ನಿ.


ಇದನ್ನೂ ಓದಿ: ಐದು ಶತಮಾನಗಳಲ್ಲೇ ಅತ್ಯಂತ ದೀರ್ಘವಾದ ಭಾಗಶಃ ಚಂದ್ರ ಗ್ರಹಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...