ಪೆಟ್ರೋಲ್, ಡೀಸೆಲ್ ಬೆಲೆಗಳ ಏರಿಕೆ ಬಗ್ಗೆ ಕೇಂದ್ರ ಸರ್ಕಾರವನ್ನು ಒಂದು ಕಾಲದಲ್ಲಿ ಟೀಕಿಸಿದ್ದ ಸೆಲೆಬ್ರಿಟಿಗಳು, ಹಿಂದಿಗಿಂತಲೂ ಈಗ ದರ ಹೆಚ್ಚಾಗಿದ್ದರೂ ಮೌನ ವಹಿಸಿರುವವರ ವಿರುದ್ಧ ಮಹಾರಾಷ್ಟ್ರ ಕಾಂಗ್ರೆಸ್ ಗುರುವಾರ (ಫೆ.18) ಕಠಿಣ ನಿಲುವು ತೆಗೆದುಕೊಂಡಿದೆ.
ಅಮಿತಾಬ್ ಬಚ್ಚನ್ ಮತ್ತು ಅಕ್ಷಯ್ ಕುಮಾರ್ ಅವರಂತಹ ನಟರನ್ನು ಒಳಗೊಂಡ ಚಲನಚಿತ್ರಗಳ ಪ್ರದರ್ಶನ ಮತ್ತು ಚಲನಚಿತ್ರಗಳ ಚಿತ್ರೀಕರಣವನ್ನು ಮಹಾರಾಷ್ಟ್ರದಲ್ಲಿ ನಿಲ್ಲಿಸುವುದಾಗಿ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ಎಚ್ಚರಿಕೆ ನೀಡಿದ್ದಾರೆ.
“ಮನಮೋಹನ್ ಸಿಂಗ್ ಅವಧಿಯಲ್ಲಿ ನಟ ಅಮಿತಾಬ್ ಬಚ್ಚನ್ ಮತ್ತು ಅಕ್ಷಯ್ ಕುಮಾರ್ ಅವರಂತಹ ಜನರು ಇಂಧನ ಬೆಲೆಗಳ ಬಗ್ಗೆ ಟ್ವೀಟ್ ಮಾಡುತ್ತಿದ್ದರು. ಈಗ ಹೆಚ್ಚುತ್ತಿರುವ ಇಂಧನ ಬೆಲೆಗಳು ಸಾಮಾನ್ಯ ಜನರನ್ನು ಹಿಂಸಿಸುತ್ತಿವೆ. ಆದರೆ ಇಂದು ಈ ನಟರೆಲ್ಲಾ ಮೌನವಾಗಿದ್ದಾರೆ. “ಸರ್ವಾಧಿಕಾರಿ ಮೋದಿ ಸರ್ಕಾರ”ದ ವಿರುದ್ಧ ಮಾತನಾಡಲು ಅವರಿಗೆ ಧೈರ್ಯವಿಲ್ಲವೇ?” ಎಂದು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ: ಸರ್ಕಾರದ ವಿರುದ್ದ ಎಳ್ಳು ನೀರು ಬಿಡುವ ಅಭಿಯಾನ
ಸದ್ಯ ಮುಂಬೈಯಲ್ಲಿ ಪೆಟ್ರೋಲ್‌ಗೆ ಲೀಟರ್‌ಗೆ. 96.32 ರೂಪಾಯಿ ಮತ್ತು ಡೀಸೆಲ್ 87.32 ರೂಪಾಯಿಗೆ ಏರಿದೆ.
“ಮಹಾರಾಷ್ಟ್ರದಲ್ಲಿ, ಅಮಿತಾಬ್ ಬಚ್ಚನ್ ಅಥವಾ ಅಕ್ಷಯ್ ಕುಮಾರ್ ಒಳಗೊಂಡ ಚಿತ್ರಗಳ ಚಿತ್ರೀಕರಣಕ್ಕೆ ನಾವು ಅವಕಾಶ ನೀಡುವುದಿಲ್ಲ. ಒಂದೋ ನೀವು ನರೇಂದ್ರ ಮೋದಿ ಸರ್ಕಾರದ ರಾಷ್ಟ್ರ ವಿರೋಧಿ ನೀತಿಗಳ ವಿರುದ್ಧ ಮಾತನಾಡಿ ಇಲ್ಲವಾದರೇ ನಿಮ್ಮ ಚಲನಚಿತ್ರಗಳ ಚಿತ್ರೀಕರಣವನ್ನು ಅನ್ನು ನಾವು ನಿಲ್ಲಿಸುತ್ತೇವೆ” ಎಂದು ಎಚ್ಚರಿಕೆ ನೀಡಿದ್ದಾರೆ.
T 753 -Petrol up Rs 7.5 : Pump attendent – 'Kitne ka daloon ?' ! Mumbaikar – '2-4 rupye ka car ke upar spray kar de bhai, jalana hai !!'
— Amitabh Bachchan (@SrBachchan) May 24, 2012
ಮತ್ತೊಂದೆಡೆ, ರಾಜ್ಯದಲ್ಲಿ ಆಡಳಿತ ಪಕ್ಷ ಹೊರಡಿಸಿರುವ ಎಚ್ಚರಿಕೆ ಹಿನ್ನೆಲೆಯಲ್ಲಿ ಬಿಜೆಪಿ ಈ ನಟರಿಗೆ ಬೆಂಬಲ ನೀಡಿದೆ. ರಾಜ್ಯ ಬಿಜೆಪಿ ನಾಯಕ ಸುಧೀರ್ ಮುಂಗಂತಿವಾರ್ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
“ಕಾಂಗ್ರೆಸ್ ಆತ್ಮವು ಸರ್ವಾಧಿಕಾರವಾಗಿದ್ದು, ಅದು ಪ್ರಜಾಪ್ರಭುತ್ವದ ಮುಖವಾಡವನ್ನು ಧರಿಸಿತ್ತು. ಕಾಂಗ್ರೆಸ್ ಕಚೇರಿ ಅಕ್ಬರ್ ರಸ್ತೆಯಲ್ಲಿರುವುದರಿಂದ, ಅವರು ಅಕ್ಬರ್‌ನ ಹಾದಿಯಲ್ಲಿ ಮಾತ್ರ ನಡೆಯುತ್ತಾರೆ. ಅಮಿತಾಬ್ ಬಚ್ಚನ್ ಅವರ ಬೆದರಿಕೆಗಳ ಬಗ್ಗೆ ಚಿಂತಿಸಬೇಕಾಗಿಲ್ಲ. ಶೋಲೆ ಚಿತ್ರದಲ್ಲಿ ಗಬ್ಬರ್ ಸಿಂಗ್ ಅವರಿಂದ ಇದೇ ರೀತಿಯ ಬೆದರಿಕೆಗಳನ್ನು ಅವರು ಎದುರಿಸಿದ್ದರು” ಎಂದು ಮುಂಗಂತಿವಾರ್ ಹೇಳಿದ್ದಾರೆ.
ಇದನ್ನೂ ಓದಿ: ಪಂಜಾಬ್: ಬಟಿಂಡಾದಲ್ಲಿ 53 ವರ್ಷಗಳ ಬಳಿಕ ಮೇಯರ್ ಸ್ಥಾನ ಕಾಂಗ್ರೆಸ್‌ಗೆ!