Homeಚಳವಳಿರೈತ ಹೋರಾಟ: ದೇಶಾದ್ಯಂತ ಯಶಸ್ಸು ಕಂಡ ರೈಲ್ ರೋಕೋ ಚಳವಳಿ

ರೈತ ಹೋರಾಟ: ದೇಶಾದ್ಯಂತ ಯಶಸ್ಸು ಕಂಡ ರೈಲ್ ರೋಕೋ ಚಳವಳಿ

ದೇಶಾದ್ಯಂತ ನಡೆದ ರೈಲ್ ರೋಕೋ ಚಳವಳಿಯ ಚಿತ್ರಗಳು ಇಲ್ಲಿವೆ.

- Advertisement -
- Advertisement -

ಕೃಷಿ ಕಾನೂನುಗಳ ವಿರುದ್ಧ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದ್ದ ರಾಷ್ಟ್ರವ್ಯಾಪಿ ರೈಲ್ ರೋಕೋ ಪ್ರತಿಭಟನೆ ಯಶಸ್ಸು ಕಂಡಿದೆ. ದೇಶಾದ್ಯಂತ ಎಲ್ಲಾ ಕಡೆಗಳಲ್ಲೂ ಬೆಳಗ್ಗೆಯಿಂದಲೇ ರೈಲು ನಿಲ್ದಾಣಗಳ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ರೈತ ಹೋರಾಟದ ಮುಂದಾಳತ್ವ ವಹಿಸಿರುವ ಸಂಯುಕ್ತ ಕಿಸಾನ್ ಮೋರ್ಚ್ ಫೆಬ್ರವರಿ 10 ರಂದು ಪತ್ರಿಕಾ ಹೇಳಿಕೆಯಲ್ಲಿ ಫೆ.18ರ ಮಧ್ಯಾಹ್ನ 12  ಗಂಟೆಯಿಂದ ಸಂಜೆ 4 ರವರೆಗೆ ರೈಲ್ ರೋಕೋಗೆ ಕರೆ ನೀಡಿತ್ತು. ಆದರೆ ದೇಶದ ಹಲವು ಕಡೆಗಳಲ್ಲಿ ಬೆಳಗ್ಗೆ 10 ಗಂಟೆಗೆ ಚಳವಳಿ ಆರಂಭವಾಗಿತ್ತು.

ಕೇಂದ್ರದ ಹೊಸ ಕೃಷಿ ಕಾನೂನುಗಳನ್ನು ವಿರೋಧಿಸುವ ಪಂಜಾಬ್, ಹರಿಯಾಣ ಉತ್ತರ ಪ್ರದೇಶ, ಮಧ್ಯಪ್ರದೇಶ, ಒರಿಸ್ಸಾ, ಮಹಾರಾಷ್ಟ್ರ, ಮತ್ತು ಕರ್ನಾಟಕದ ಕೆಲವು ಭಾಗಗಳಲ್ಲಿ ರೈತರು ರೈಲು ಹಳಿಗಳ ಬಳಿ “ರೈಲು ರೋಕೋ” ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ: ಪಂಜಾಬ್ ಚುನಾವಣೆ: ನನ್ನ ಕುಟುಂಬದವರ ಮತವೇ ನನಗೆ ಬಿದ್ದಿಲ್ಲ ಎಂದ ಬಿಜೆಪಿ ಅಭ್ಯರ್ಥಿ!

ಕೇಂದ್ರ ಸರ್ಕಾರ ಮತ್ತು ಕೃಷಿ ಕಾನೂನುಗಳ ವಿರುದ್ಧ ಘೋಷಣೆ ಮತ್ತು ಧರಣಿ ಮಧ್ಯಾಹ್ನದಿಂದ ಪ್ರಾರಂಭವಾಗಿ ಸಂಜೆ 4 ರವರೆಗೆ ನಡೆಯಿತು. ಮುನ್ನೆಚ್ಚರಿಕೆ ಕ್ರಮಗಳ ಭಾಗವಾಗಿ ಹಲವಾರು ಪ್ರದೇಶಗಳಲ್ಲಿ ರೈಲು ಸೇವೆಗಳನ್ನು ನಿಲ್ಲಿಸಲಾಗಿತ್ತು.

ದೇಶಾದ್ಯಂತ ನಡೆದ ರೈಲ್ ರೋಕೋ ಚಳವಳಿಯ ಚಿತ್ರಗಳು ಇಲ್ಲಿವೆ.

ಇಂದೋರ್‌, ಮಧ್ಯಪ್ರದೇಶ
ಉತ್ತರ ಪ್ರದೇಶದ ಹಾಪುರ್‌
ಹರಿಯಾಣದ ಇಸ್ಮಾಯಿಲಾ ರೈಲು ನಿಲ್ದಾಣ
ಪಂಜಾಬ್‌ನ ಮಾನ್ಸಾ ರೈಲು ನಿಲ್ದಾಣ
ಒಡಿಸ್ಸಾದ ಬ್ರಹ್ಮಪುರ್‌
ರಾಜಸ್ಥಾನದ ಅಜರ್‍ಕಾ ರೈಲು ನಿಲ್ದಾಣ
ಹರಿಯಾಣದ ಯಮುನಾನಗರ್ ರೈಲು ನಿಲ್ದಾಣ
ಜಾರ್ಖಂಡ್ ರಾಜ್ಯದ ನಾಮ್‌ಕೋಮ್‌
ಒರಿಸ್ಸಾದ ಕಟಕ್‌ ರೈಲು ನಿಲ್ದಾಣ
ಪಂಜಾಬ್‌ನ ಬರ್ನಾಲಾ ಜಿಲ್ಲಾ ರೈಲು ನಿಲ್ದಾಣ
ಪಶ್ಚಿಮ ಬಂಗಾಳದ ಬೆಲ್ದಾ ರೈಲು ನಿಲ್ದಾಣ

ಆದರೆ, “ರೈಲು ರೋಕೊ” ಇಲಾಖೆ ಮೇಲೆ ಭಾರಿ ಪರಿಣಾಮ ಬೀರಿಲ್ಲ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಕೆಲವು ವಲಯಗಳಲ್ಲಿ ಯಾವುದೇ ರೈಲು ನಿಲ್ಲಿಸಲಾಗಿಲ್ಲ, ಆದರೆ, ಉತ್ತರ ವಲಯದಲ್ಲಿ ಸುಮಾರು 25 ರೈಲುಗಳನ್ನು ನಿಯಂತ್ರಿಸಲಾಗಿದೆ ಎಂದು ವಲಯ ರೈಲ್ವೆ ವಕ್ತಾರರು ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ: ಟೀ ಮಾರುವವನಿಗೆ ಬಡವರ ನೋವಿನ ಅರಿವಿರುತ್ತೆ ಎಂಬ ಭ್ರಮೆಯಲ್ಲಿ ಮತ ನೀಡಿದ್ದೆವು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್‌ಗೆ ಯಾರೂ ದೇಶ ಪ್ರೇಮದ ಪಾಠ ಹೇಳಿ ಕೊಡುವ ಅಗತ್ಯವಿಲ್ಲ: ಸಚಿವ ಪರಮೇಶ್ವರ್

0
ರಾಜ್ಯಸಭೆ ಚುನಾವಣೆಯ ಗೆಲುವಿನ ಸಂಭ್ರಮಾಚರಣೆ ವೇಳೆ ನಾಸಿರ್ ಹುಸೇನ್ ಬೆಂಬಲಿಗರು 'ಪಾಕಿಸ್ತಾನ್ ಝಿಂದಾಬಾದ್' ಘೋಷಣೆ ಕೂಗಿದ್ದಾರೆ ಎಂಬ ಆರೋಪದ ಕುರಿತು ಗೃಹ ಸಚಿವ ಡಾ.ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿಗೆ ತಿರುಗೇಟು ಕೊಟ್ಟಿದ್ದಾರೆ. ಇಂದು...