Homeಮುಖಪುಟಪಂಜಾಬ್‌ ಸ್ಥಳೀಯ ಚುನಾವಣೆ: `ಜೋಗಾ' ನಗರ ಪಂಚಾಯತ್‌‌ ಸಿಪಿಐ ಬೆಂಬಲಿತರು ಅಧಿಕಾರಕ್ಕೆ

ಪಂಜಾಬ್‌ ಸ್ಥಳೀಯ ಚುನಾವಣೆ: `ಜೋಗಾ’ ನಗರ ಪಂಚಾಯತ್‌‌ ಸಿಪಿಐ ಬೆಂಬಲಿತರು ಅಧಿಕಾರಕ್ಕೆ

- Advertisement -
- Advertisement -

ಪಂಜಾಬ್‌ನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಯು ಮುಖಭಂಗಕ್ಕೊಳಗಾಗಿದ್ದು, ಕಾಂಗ್ರೆಸ್ ಭಾರಿ ಗೆಲುವನ್ನು ಕಂಡಿದೆ. ಈ ನಡುವೆ ರಾಜ್ಯದ ಜೋಗ ನಗರ ಪಂಚಾಯತ್‌ನ 13 ಸ್ಥಾನಗಳಲ್ಲಿ 12 ಭಾರತೀಯ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಬೆಂಬಲಿತ 12 ಅಭ್ಯರ್ಥಿಗಳು ಗೆಲುವು ಕಂಡಿದ್ದಾರೆ. ಈ ಮೂಲಕ ಈ ನಗರ ಪಂಚಾಯತ್‌ನಲ್ಲಿ ಸಿಪಿಐ ಸತತ ಎರಡನೆ ಬಾರಿಗೆ ಅಧಿಕಾರ ಹಿಡಿಯುತ್ತಿದೆ.

2015 ರಲ್ಲೂ 13 ಅಭ್ಯರ್ಥಿಗಳಲ್ಲಿ 9 ಜನ ಸಿಪಿಐ ಬೆಂಬಲಿತರು ಈ ನಗರ ಪಂಚಯತ್‌ನಲ್ಲಿ ಗೆಲುವು ಸಾಧಿಸಿದ್ದರು. ಈ ಬಾರಿ ಸಿಪಿಐ ಬೆಂಬಲಿತ 13 ಅಭ್ಯರ್ಥಿಗಳಲ್ಲಿ 12 ಮಂದಿ ಚುನಾವಣೆಯಲ್ಲಿ ಗೆದ್ದಿದ್ದಾರೆ.

ಇದನ್ನೂ ಓದಿ: ಪಿ.ಸಾಯಿನಾಥ್ ಉಪನ್ಯಾಸ; ಕರಾವಳಿಯಲ್ಲಿ ಮೊಳಗಿದ ಎಡಪಂಥದ ಕಹಳೆ

“ಜೋಗಾ ಎಡಪಂಥೀಯ ನಗರ ಪಂಚಾಯತ್ ಆಗಿದೆ. 2015 ರಲ್ಲಿ, ನಮ್ಮ ಅಭ್ಯರ್ಥಿಗಳು ಪಕ್ಷದ ಚಿಹ್ನೆಯ ಅಡಿಯಲ್ಲಿ ಗೆದ್ದಿದ್ದು, ಈ ಬಾರಿ ಸ್ವತಂತ್ರವಾಗಿ ನಮ್ಮ ನಿಂತಿದ್ದು, ನಮ್ಮ ಪಕ್ಷ ಅವರಿಗೆ ಬೆಂಬಲ ನೀಡಿತ್ತು” ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಕ್ರಿಶನ್ ಚೌಹಾನ್ ಹೇಳಿದ್ದಾರೆ.

ಅವರು ಹೇಳಿದರು, “13 ಸ್ಥಾನಗಳಿಗೆ ಒಟ್ಟು 28 ಅಭ್ಯರ್ಥಿಗಳು ಕಣದಲ್ಲಿದ್ದರು, ಅದರಲ್ಲಿ 13 ನಮ್ಮ ಸಿಪಿಐ ಬೆಂಬಲಿತ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ನಮ್ಮನ್ನು ಸೋಲಿಸಲು ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿ ಜಂಟಿಯಾಗಿ ಸ್ಪರ್ಧಿಸಿತ್ತು. ಆದಾಗ್ಯೂ, ಎಡಪಂಥೀಯ ಅಭ್ಯರ್ಥಿಗಳನ್ನು ದಾಖಲೆಯ ಮತಗಳಿಂದ ಆಯ್ಕೆಯಾಗಿದ್ದಾರೆ” ಎಂದು ವಿಜೇತ ಅಭ್ಯರ್ಥಿ ಗುರ್ಮೀತ್ ಸಿಂಗ್ ಹೇಳಿದ್ದಾರೆಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಇದನ್ನೂ ಓದಿ: ಎಲ್ಲಾ ಧಾರೆಗಳು ಇಂದು ಒಗ್ಗೂಡುವ ಅಗತ್ಯ; ಐಕ್ಯ ಹೋರಾಟ ಏಕೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇರಳ: ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿಗೆ ಹಲ್ಲೆ ನಡೆಸಿದ ಸ್ವಪಕ್ಷದ ಮುಖಂಡ

0
ಕೇರಳದ ಕೊಲ್ಲಂ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ ಕೃಷ್ಣಕುಮಾರ್ ಅವರ ಕಣ್ಣಿಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಪಕ್ಷದ ಸ್ಥಳೀಯ ನಾಯಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಕೃಷ್ಣಕುಮಾರ್ ಇತ್ತೀಚೆಗೆ...