Homeಚಳವಳಿರೈತರಿಗೆ ಕೊರೊನಾ ಸಾಂಕ್ರಮಿಕದಿಂದ ರಕ್ಷಣೆ ನೀಡಲಾಗಿದೆಯೆ?: ಕೇಂದ್ರಕ್ಕೆ ಸುಪ್ರೀಂಕೋರ್ಟ್ ಪ್ರಶ್ನೆ

ರೈತರಿಗೆ ಕೊರೊನಾ ಸಾಂಕ್ರಮಿಕದಿಂದ ರಕ್ಷಣೆ ನೀಡಲಾಗಿದೆಯೆ?: ಕೇಂದ್ರಕ್ಕೆ ಸುಪ್ರೀಂಕೋರ್ಟ್ ಪ್ರಶ್ನೆ

- Advertisement -
- Advertisement -

ಹೊಸ ಕೃಷಿ ಕಾನೂನನ್ನು ವಿರೋಧಿಸಿ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ “ಕೊರೊನಾ ಸಾಂಕ್ರಮಿಕದಿಂದ ರಕ್ಷಣೆ ನೀಡಲಾಗಿದೆಯೆ” ಎಂದು ಮುಖ್ಯನ್ಯಾಯಮೂರ್ತಿ ಅರವಿಂದ ಬೋಬ್ಡೆ ನೇತೃತ್ವದ ಸುಪ್ರೀಂಕೋರ್ಟ್ ಪೀಠವು ಕೇಂದ್ರ ಸರ್ಕಾರವನ್ನು ಗುರುವಾರ ಪ್ರಶ್ನಿಸಿದೆ.

2020 ರ ಮಾರ್ಚ್‌ನಲ್ಲಿ ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ತಬ್ಲೀಘಿ ಸಭೆಯನ್ನು ನಡೆಸಲು ನೀಡಲಾದ ಅನುಮತಿಯ ಹಿಂದೆ ದೆಹಲಿ ಮತ್ತು ಕೇಂದ್ರ ಕೇಂದ್ರ ಸರ್ಕಾರದ ಪಾತ್ರವನ್ನು ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಶಕ್ತಿ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಈ ಬಗ್ಗೆ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ರೈತ ಹೋರಾಟದ ಕೇಂದ್ರಗಳಾದ ಟಿಕ್ರಿ- ಸಿಂಘು ಗಡಿಗಳು ಹೇಗಿವೆ? ಅವುಗಳ ಹಿನ್ನೆಲೆಯೇನು?

ತಬ್ಲೀಗಿ ಜಮಾತ್ ಘಟನೆಯ ಬಗ್ಗೆ ಉಲ್ಲೇಖಿಸಿದ ಸುಪ್ರೀಂಕೋರ್ಟ್, “ರೈತರನ್ನು ಕೊರೊನಾದಿಂದ ರಕ್ಷಣೆ ನೀಡಲಾಗಿದೆಯೆ ಎಂಬುದು ತಿಳಿದಿಲ್ಲ. ಏನಾಯಿತೆಂದು ನಿಮ್ಮ ಅನುಭವದಿಂದ ಪಾಠ ಕಲಿತಿದ್ದೀರಾ? ಅದೇ ಸಮಸ್ಯೆ ರೈತರ ಪ್ರತಿಭಟನೆಗಳಿಂದ ಮತ್ತೆ ಕಾಣಿಸಿಕೊಳ್ಳಬಹುದು” ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

ಕೇಂದ್ರ ಸರ್ಕಾರವನ್ನು ಸಾಲಿಟರ್‌ ಜನರಲ್ ತುಷಾರ್‌ ಮೆಹ್ತಾ ಪ್ರತಿನಿಧಿಸಿದ್ದರು. ಸುಪ್ರೀಂಕೋರ್ಟ್ ಕೇಳಿದ ‌ಪ್ರಶ್ನೆಗಳಿಗೆ ಅವರು ಎರಡು ವಾರಗಳೊಳಗಾಗಿ ಉತ್ತರಿಸುವುದಾಗಿ ನ್ಯಾಯಾಲಯದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ’ರೈತ ಹೋರಾಟಕ್ಕೆ ಹೆಗಲು ಕೊಟ್ಟು ನಿಂತಿದೆ ಖಾಲ್ಸಾ ಏಡ್‌ ಸೇವಾ ಸಂಸ್ಥೆ’

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಕೇಜ್ರಿವಾಲ್ ಚುನಾವಣಾ ಪ್ರಚಾರ ಮಾಡಬಾರದೆಂದು ಬಿಜೆಪಿ ಬಯಸುತ್ತದೆ, ಅವರ ಪರವಾಗಿ ನಾನು ಪ್ರಚಾರ ಮಾಡುತ್ತೇನೆ’;...

0
ಎಎಪಿ ಎನ್‌ಜಿಒ ಅಲ್ಲ, ಅದು ರಾಷ್ಟ್ರೀಯ ಪಕ್ಷ, ಕೇಜ್ರಿವಾಲ್ ಅವರು ಚುನಾವಣಾ ಪ್ರಚಾರದಿಂದ ದೂರವಿರಬೇಕೆಂದು ಬಿಜೆಪಿ ಬಯಸುತ್ತದೆ, ನಾನು ಅವರ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಪಂಜಾಬ್‌ ಸಿಎಂ ಭಗವಂತ್ ಸಿಂಗ್ ಮಾನ್...