Homeಮುಖಪುಟದುಷ್ಕರ್ಮಿ ಗುಂಡು ಹಾರಿಸುವಾಗ ಪೊಲೀಸರು ಕೈಕಟ್ಟಿ ನಿಂತಿದ್ದೇಕೆ? ದೆಹಲಿ ಪೊಲೀಸರ ವಿರುದ್ಧ ದೇಶವ್ಯಾಪಿ ಖಂಡನೆ

ದುಷ್ಕರ್ಮಿ ಗುಂಡು ಹಾರಿಸುವಾಗ ಪೊಲೀಸರು ಕೈಕಟ್ಟಿ ನಿಂತಿದ್ದೇಕೆ? ದೆಹಲಿ ಪೊಲೀಸರ ವಿರುದ್ಧ ದೇಶವ್ಯಾಪಿ ಖಂಡನೆ

ಇದಕ್ಕೆ ಪ್ರೇರೇಪಣೆ ಕೊಟ್ಟಿದ್ದಕ್ಕಾಗಿ ಅನುರಾಗ್ ಠಾಕೂರ್ ಅವರನ್ನು ಈಗ ಬಂಧಿಸಲಾಗುತ್ತದೆಯೇ? ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

- Advertisement -
- Advertisement -

ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಬಳಿ ಸಿಎಎ ವಿರುದ್ಧ ಪ್ರತಿಭಟಿಸುತ್ತಿದ್ದ ಜನರ ಮೇಲೆ ಇಂದು ಮಧ್ಯಾಹ್ನ ಅಪರಿಚಿತ ವ್ಯಕ್ತಿ ಗುಂಡು ಹಾರಿಸಿದ್ದು, ಅದನ್ನು ತಡೆಯದೇ ಕೈಕಟ್ಟಿ ನಿಂತಿದ್ದ ಪೊಲೀಸರ ವಿರುದ್ಧ ದೇಶಾವ್ಯಾಪಿ ಖಂಡನೆ ವ್ಯಕ್ತವಾಗಿದೆ.

ಕೆಲ ದಿನಗಳ ಹಿಂದೆ ಅನುರಾಗ್ ಠಾಕೂರ್ ’ದೇಶ್ ಕೆ ಗಡ್ಡಾರೊ ಕೊ ಗೋಲಿ ಮಾರೊ ಸಾಲೋ ಕೋ’ (ದೇಶದೊಳಗಿನ ದೇಶದ್ರೋಹಿಗಳನ್ನು ಗುಂಡು ಹೊಡೆದು ಸಾಯಿಸಿ) ಎಂದು ಘೋಷಣೆ ಕೂಗಿದ್ದರು. ಇಂದು ನಾನು ನಿಮಗೆ ಅಜಾದಿ ನೀಡುತ್ತೇನೆ ಎಂದು ಕೂಗುತ್ತಾ ಜಾಮಿಯಾ ವಿದ್ಯಾರ್ಥಿಗಳ ಮೇಲೆ ಒಬ್ಬ ಗುಂಡು ಹಾರಿಸಿದ್ದಾನೆ. ಇದಕ್ಕೆ ಪ್ರೇರೇಪಣೆ ಕೊಟ್ಟಿದ್ದಕ್ಕಾಗಿ ಅನುರಾಗ್ ಠಾಕೂರ್ ಅವರನ್ನು ಈಗ ಬಂಧಿಸಲಾಗುತ್ತದೆಯೇ? ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಗಾಂಧಿಯವರ ಮರಣದಿನದಂದು ಒಬ್ಬ ವ್ಯಕ್ತಿಯು ಸಾರ್ವಜನಿಕವಾಗಿ ಬಂದೂಕಿನಿಂದ ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸುತ್ತಾನೆ. ಬಿಜೆಪಿ ನಿಯಂತ್ರಿತ ದೆಹಲಿ ಪೊಲೀಸರು ಹಿಂದೆ ನಿಂತು ಅವನನ್ನು ನೋಡುತ್ತಿದ್ದಾರೆ. ಇದಕ್ಕೂ ಮೊದಲು ಬಿಜೆಪಿ ನಾಯಕರು ಗೋಲಿ ಮಾರೊ ಎಂಬ ಘೋಷಣೆಗಳನ್ನು ಕೂಗಿದ್ದರು. ಈ ಪಕ್ಷವು ಇಡೀ ರಾಷ್ಟ್ರವನ್ನು ರಾಜಕೀಯಕ್ಕಾಗಿ ಸುಡಬಹುದು ಎಂದು ಖ್ಯಾತ ಯೂಟ್ಯೂಬರ್‌ ಧೃವ್‌ ರಾಠೀ ಕಿಡಿಕಾರಿದ್ದಾರೆ.

ಅಸಾದುದ್ದೀನ್‌ ಒವೈಸಿ ಟ್ವೀಟ್‌ ಮಾಡಿ, “ದೆಹಲಿ ಪೊಲೀಸರೆ, ಕಳೆದ ತಿಂಗಳು ಜಾಮಿಯಾದಲ್ಲಿ ವಿದ್ಯಾರ್ಥಿಗಳ ಮೇಲೆ ನೀವು ತೋರಿಸಿದ ಧೈರ್ಯಶಾಲಿ ಏನಾಯಿತು? ‘ಅಸಹಾಯಕ’ ಪ್ರೇಕ್ಷಕರಾಗಿರುವುದಕ್ಕೆ ಬಹುಮಾನವಿದ್ದರೆ, ನೀವು ಅದನ್ನು ಪ್ರತಿ ಬಾರಿಯೂ ಗೆಲ್ಲುತ್ತೀರಿ. ಗುಂಡೇಟಿಗೆ ಬಲಿಯಾದವನು ಬ್ಯಾರಿಕೇಡ್‌ನ ಮೇಲೆ ಹತ್ತಲು ಏಕೆ ಬಿಟ್ಟಿರಿ ಎಂಬುದನ್ನು ನೀವು ವಿವರಿಸಬಹುದೇ? ನಿಮ್ಮ ಸೇವಾ ನಿಯಮಗಳು ನಿಮ್ಮನ್ನು ಮಾನವೀಯತೆಯಿಂದ ತಡೆಯುತ್ತವೆಯೇ?” ಎಂದು ಪ್ರಶ್ನಿಸಿದ್ದಾರೆ.

ಅರೆಸ್ಟ್‌ ಅನುರಾಗ್‌ ಠಾಕೂರ್‌ ಎಂಬ ಹ್ಯಾಸ್‌ಟ್ಯಾಗ್‌ ಟ್ವಿಟ್ಟರ್‌ನಲ್ಲಿ ಟ್ರೆಂಡ್‌ ಆಗಿದೆ. ಈ ಘಟನೆಗೆ ಅವರೆ  ಹೊಣೆಹೊರಬೇಕು, ಅವರನ್ನು ಬಂಧಿಸಬೇಕು ಎಂಬ ಒತ್ತಾಯ ಬಲವಾಗಿ ಕೇಳಿಬಂದಿದೆ.

ಪ್ರತಿಭಟನಾಕಾರರ ಮೇಲೆ “ಯೆ ಲೋ ಆಜಾದಿ (ತೆಗೆದುಕೊಳ್ಳಿ ನಿಮ್ಮ ಸ್ವಾತಂತ್ರ್ಯ) ಎಂದು ಕೂಗಿ ಗುಂಡು ಹಾರಿಸಿದ ವ್ಯಕ್ತಿಯನ್ನು ಗೋಪಾಲ್‌ ಎಂದು ಗುರುತಿಸಲಾಗಿದ್ದು ಸದ್ಯಕ್ಕೆ ಪೊಲೀಸ್‌ ಕಸ್ಟಡಿಯಲ್ಲಿದ್ದಾನೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಪ್ರಕರಣ: ಸಂತ್ರಸ್ತರ ನೆರವಿಗೆ ನಿಲ್ಲುವಂತೆ ಸಿಎಂಗೆ ರಾಹುಲ್ ಗಾಂಧಿ ಪತ್ರ

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯರ ನೆರವಿಗೆ ನಿಲ್ಲುವಂತೆ ಮತ್ತು ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ...