Home Authors Posts by ನಾನು ಗೌರಿ

ನಾನು ಗೌರಿ

20546 POSTS 16 COMMENTS

ಪ್ಯಾಲೆಸ್ತೀನ್ : ಒಕ್ಕೂಟ ಸರ್ಕಾರ ರಚನೆಗೆ ಹಮಾಸ್, ಫತಾಹ್ ಸಮ್ಮತಿ

0
ಪ್ಯಾಲೆಸ್ತೀನ್‌ನ ಎರಡು ಬಣಗಳಾದ ಹಮಾಸ್ ಮತ್ತು ಫತಾಹ್ 'ಒಕ್ಕೂಟ ಸರ್ಕಾರ' ರಚಿಸುವ ಐತಿಹಾಸಿಕ ಘೋಷಣೆಗೆ ಸಹಿ ಹಾಕಿವೆ. ಗಾಝಾ ಮೇಲಿನ ಇಸ್ರೇಲ್ ಆಕ್ರಮಣ ನಡುವೆ ಇದು ಮಹತ್ವದ ಬೆಳವಣಿಗೆಯಾಗಿದೆ. ವರದಿಗಳ ಪ್ರಕಾರ, ಚೀನಾದ ಮಧ್ಯಸ್ಥಿಕೆಯಲ್ಲಿ...

ಕನ್ನಡಿಗರಿಗೆ ಉದ್ಯೋಗ ಮೀಸಲು ಮಸೂದೆ ಪ್ರಶ್ನಿಸಿ ಹೈಕೋರ್ಟ್‌ಗೆ ಪಿಐಎಲ್‌ ಸಲ್ಲಿಕೆ

0
ಕೈಗಾರಿಕೆ, ಕಾರ್ಖಾನೆಗಳು ಮತ್ತು ಇತರೆ ಸಂಸ್ಥೆಗಳಲ್ಲಿ ರಾಜ್ಯದ ಸ್ಥಳೀಯ ಅಭ್ಯರ್ಥಿಗಳಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ಮಸೂದೆಯನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಕೆಯಾಗಿದೆ. ಈ ಅರ್ಜಿಯ ವಿಚಾರಣೆ ಆಗಸ್ಟ್...

ಕೇಂದ್ರ ಬಜೆಟ್‌ ತಿರಸ್ಕರಿಸುವ ನಿರ್ಣಯ ಅಂಗೀಕರಿಸಿದ ತೆಲಂಗಾಣ

0
ರಾಜ್ಯಕ್ಕೆ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿ ಕೇಂದ್ರ ಬಜೆಟ್‌ ತಿರಸ್ಕರಿಸುವ ನಿರ್ಣಯವನ್ನು ತೆಲಂಗಾಣ ಸರ್ಕಾರ ಬುಧವಾರ(ಜು.24) ಅಂಗೀಕರಿಸಿದೆ. ಆಂಧ್ರ ಪ್ರದೇಶ ಮರು ಸಂಘಟನೆ ಅಥವಾ ರಾಜ್ಯ ವಿಭಜನೆ ಕಾಯ್ದೆಯ ಅನ್ವಯ ಎರಡೂ ರಾಜ್ಯಗಳನ್ನು ಸಮಾನ...

FACT CHECK : ‘ಪಿಎಂ ಕನ್ಯಾ ಯೋಜನೆ’ ಎಂಬ ಸ್ಕೀಂ ಅನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿಲ್ಲ

0
"ಮನೆಯಲ್ಲಿ ಹೆಣ್ಣು ಮಕ್ಕಳಿದ್ದರೆ ಪ್ರಧಾನಿ ಮೋದಿ ಜಾರಿಗೆ ತಂದಿರುವ 'ಪಿಎಂ ಕನ್ಯಾ ಆಯುಷ್ ಯೋಜನೆ'ಯ ಅಡಿಯಲ್ಲಿ ಪತ್ರಿ ತಿಂಗಳು 2000 ರೂ. ಸಿಗುತ್ತದೆ" ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಸಂದೇಶವು ಹಲವಾರು...

ಕ್ಷಿಪಣಿ ಪರೀಕ್ಷೆಗೆ ಮುನ್ನ ಒಡಿಶಾ ಕರಾವಳಿಯಿಂದ 10,000 ಜನರ ಸ್ಥಳಾಂತರ

0
ಒಡಿಶಾ ಕರಾವಳಿಯ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ಐಟಿಆರ್) ಸಮೀಪವಿರುವ ಹಳ್ಳಿಗಳ 10,000 ಕ್ಕೂ ಹೆಚ್ಚು ಜನರನ್ನು ಬುಧವಾರ ಕ್ಷಿಪಣಿ ಪರೀಕ್ಷೆಗೆ ಮುಂಚಿತವಾಗಿ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ. ಸುರಕ್ಷತಾ ಕ್ರಮಗಳ ಭಾಗವಾಗಿ, ರಕ್ಷಣಾ ಅಧಿಕಾರಿಗಳು ಬಾಲಸೋರ್ ಜಿಲ್ಲಾಡಳಿತದ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರಿಗೆ ನೋಟಿಸ್ ಜಾರಿ ಮಾಡಿದ ದೆಹಲಿ ಹೈಕೋರ್ಟ್

0
2020 ರ ದೆಹಲಿ ಗಲಭೆ ಪಿತೂರಿಗೆ ಸಂಬಂಧಿಸಿದ ಯುಎಪಿಎ ಪ್ರಕರಣದಲ್ಲಿ, ವಿದ್ಯಾರ್ಥಿ ಹೋರಾಟಗಾರ ಉಮರ್ ಖಾಲಿದ್ ಅವರ ಜಾಮೀನು ಅರ್ಜಿಯ ಕುರಿತು ದೆಹಲಿ ಹೈಕೋರ್ಟ್ ಬುಧವಾರ ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ. ನ್ಯಾಯಮೂರ್ತಿಗಳಾದ...

ಪ್ರಶ್ನೆ ಪತ್ರಿಕೆ ಸೋರಿಕೆ, ಅವ್ಯವಹಾರ ತಡೆಗೆ ಮಸೂದೆ ಅಂಗೀಕರಿಸಿದ ಬಿಹಾರ ವಿಧಾನಸಭೆ

0
ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ರಿಗ್ಗಿಂಗ್ ಅನ್ನು ತಡೆಯಲು, ನಿತೀಶ್ ಕುಮಾರ್ ಸರ್ಕಾರವು ಬಿಹಾರದ ಸಾರ್ವಜನಿಕ ಪರೀಕ್ಷೆ (ಅನ್ಯಾಯ ವಿಧಾನಗಳ ತಡೆಗಟ್ಟುವಿಕೆ) ಮಸೂದೆ 2024 ಅನ್ನು ಬುಧವಾರ ವಿಧಾನಸಭೆಯಲ್ಲಿ ಮಂಡಿಸಿತು. ತಪ್ಪಿತಸ್ಥರಿಗೆ ಮೂರರಿಂದ ಹತ್ತು...

ಶಿರೂರು ಭೂಕುಸಿತ: ಟ್ರಕ್ ಇರುವ ಸ್ಥಳ ಪತ್ತೆಹಚ್ಚಿದ ರಕ್ಷಣಾ ಪಡೆ; ತೀವ್ರಗೊಂಡ ಕಾರ್ಯಾಚರಣೆ

0
ಶಿರೂರಿನಲ್ಲಿ ಭೂಕುಸಿತದಿಂದ ನಾಪತ್ತೆಯಾಗಿರುವ ಕೇರಳ ಮೂಲದ ಅರ್ಜುನ್‌ಗಾಗಿ ಶೋಧ ನಡೆಸುತ್ತಿರುವ ಮಧ್ಯೆ, ಗಂಗಾವಳಿ ನದಿಯಲ್ಲಿ ಟ್ರಕ್ ಪತ್ತೆಯಾಗಿದೆ ಎಂದು ಕರ್ನಾಟಕ ಸರ್ಕಾರ ಬುಧವಾರ ಖಚಿತಪಡಿಸಿದೆ. ರಕ್ಷಣಾ ಕಾರ್ಯಾಚರಣೆಗಳು ನಿರ್ಣಾಯಕ ಹಂತವನ್ನು ತಲುಪಿದ್ದು, ನೀರಿನಲ್ಲಿ...

ಉತ್ತರ ಪ್ರದೇಶ: ಹಣ್ಣು ಕೀಳಲು ನಿರಾಕರಿಸಿದ ದಲಿತ ವಿದ್ಯಾರ್ಥಿಯನ್ನು ಥಳಿಸಿ, ತರಗತಿಯಲ್ಲಿ ಕೂಡಿಹಾಕಿದ ಶಿಕ್ಷಕಿ

0
ತಾನು ಹೇಳಿದಾಗ ಹಣ್ಣುಗಳನ್ನು ಕೀಳಲು ನಿರಾಕರಿಸಿದ್ದಕ್ಕಾಗಿ ನಾಲ್ಕನೇ ತರಗತಿಯ ವಿದ್ಯಾರ್ಥಿಯನ್ನು ಆತನ ಪ್ರಾಥಮಿಕ ಶಾಲಾ ಶಿಕ್ಷಕಿಯೊಬ್ಬರು ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಉತ್ತರ ಪ್ರದೇಶದ ಬರೇಲಿಯ ಕುಲಾಡಿಯಾದಲ್ಲಿ ಘಟನೆ ನಡೆದಿದ್ದು, "ತಮ್ಮ ಒಂಬತ್ತು ವರ್ಷದ...

ಶಂಭು ಗಡಿ ದಿಗ್ಬಂಧನ: ರೈತರು ಮತ್ತು ಸರ್ಕಾರದ ನಡುವೆ ವಿಶ್ವಾಸದ ಕೊರತೆಯಿದೆ ಎಂದ ಸುಪ್ರೀಂ ಕೋರ್ಟ್

0
ಪಂಜಾಬ್-ಹರಿಯಾಣ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಮತ್ತು ಸರ್ಕಾರದ ನಡುವೆ ವಿಶ್ವಾಸದ ಕೊರತೆಯಿದೆ; ಅವರನ್ನು ತಲುಪಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಇಂದು ಹೇಳಿದೆ. ಶಂಭು ಗಡಿಯಲ್ಲಿ ರೈತರ ಪ್ರತಿಭಟನೆ ಮತ್ತು...