Homeಮುಖಪುಟ'ನಮಗೆ ಪಿತೂರಿಯ ಶಂಕೆಯಿದೆ': ತಮಿಳುನಾಡು ಎಸ್‌ಐಆರ್ ವಿರುದ್ದ ಸರ್ವಪಕ್ಷ ಸಭೆ ಕರೆದ ಡಿಎಂಕೆ ಮೈತ್ರಿಕೂಟ

‘ನಮಗೆ ಪಿತೂರಿಯ ಶಂಕೆಯಿದೆ’: ತಮಿಳುನಾಡು ಎಸ್‌ಐಆರ್ ವಿರುದ್ದ ಸರ್ವಪಕ್ಷ ಸಭೆ ಕರೆದ ಡಿಎಂಕೆ ಮೈತ್ರಿಕೂಟ

- Advertisement -
- Advertisement -

ತಮಿಳುನಾಡಿನ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್‌) ಮುಂದಾಗಿರುವ ಭಾರತೀಯ ಚುನಾವಣಾ ಆಯೋಗದ (ಇಸಿಐ) ಕ್ರಮಲ್ಲಿ ‘ಪಿತೂರಿ’ಯ ಶಂಕೆ ವ್ಯಕ್ತಪಡಿಸಿರುವ ಡಿಎಂಕೆ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್, ನವೆಂಬರ್ 2ರಂದು ಚೆನ್ನೈನಲ್ಲಿ ನಡೆಯಲಿರುವ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸುವಂತೆ ಎಲ್ಲಾ ರಾಜಕೀಯ ಪಕ್ಷಗಳ ನಾಯಕರಿಗೆ ಮನವಿ ಮಾಡಿದ್ದಾರೆ.

ತಮಿಳುನಾಡು ಸೇರಿದಂತೆ ಒಂಬತ್ತು ರಾಜ್ಯಗಳಲ್ಲಿ ಮುಂದಿನ ಹಂತದ ಎಸ್‌ಐಆರ್ ನಡೆಯಲಿದೆ ಎಂದು ಭಾರತೀಯ ಚುನಾವಣಾ ಆಯೋಗ ಸೋಮವಾರ ಘೋಷಿಸಿದೆ. ಈ ಬೆನ್ನಲ್ಲೇ ಚೆನ್ನೈನ ಅಣ್ಣಾ ಅರಿವಾಲಯಂನಲ್ಲಿ ಜಾತ್ಯತೀತ ಪ್ರಗತಿಪರ ಒಕ್ಕೂಟದ ನಾಯಕರ ಸಮಾಲೋಚನಾ ಸಭೆ ನಡೆದಿದೆ. ಸಭೆಯ ಬಳಿಕ ನವೆಂಬರ್ 2ರ ಸರ್ವಪಕ್ಷ ಸಭೆಗೆ ಆಹ್ವಾನ ನೀಡಲಾಗಿದೆ.

ಜಂಟಿ ಹೇಳಿಕೆಯಲ್ಲಿ, ಎಲ್ಲಾ ರಾಜಕೀಯ ಪಕ್ಷಗಳು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸರ್ವಪಕ್ಷ ಸಭೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಗಿದೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನಿರಂತರವಾಗಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ನಾಶಪಡಿಸುತ್ತಿದೆ. ಸ್ವತಂತ್ರ ಸಂಸ್ಥೆಗಳನ್ನು ತನ್ನ ಇಚ್ಛೆಯಂತೆ ದುರುಪಯೋಗಪಡಿಸಿಕೊಳ್ಳುತ್ತಿದೆ. ಚುನಾವಣಾ ಆಯೋಗದ ಕಾರ್ಯನಿರ್ವಹಣೆ ವಿವಾದಾತ್ಮಕ ಮಾತ್ರವಲ್ಲದೆ, ಅನುಮಾನಾಸ್ಪದವಾಗಿದೆ ಎಂದು ಡಿಎಂಕೆ ಮೈತ್ರಿಕೂಟದ ನಾಯಕರು ಹೇಳಿದ್ದಾರೆ.

ಬಿಹಾರದಲ್ಲಿ ನಡೆಸಲಾದ ಎಸ್‌ಐಆರ್ ಅನ್ನು ಉಲ್ಲೇಖಿಸಿದ ನಾಯಕರು, “ಬಿಹಾರದಲ್ಲಿ ನಡೆದ ಎಸ್‌ಐಆರ್ ವಾಸ್ತವವಾಗಿ ನಿಜವಾದ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕುವ ಸಂಚು ಎಂಬುವುದು ನಮಗೆ ಗೊತ್ತಾಗಿದೆ. ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ನ ನಿರ್ದೇಶನಗಳನ್ನು ಕೂಡ ಪಾಲಿಸಿಲ್ಲ. ಈ ಪ್ರಜಾಪ್ರಭುತ್ವ ವಿರೋಧಿ ಚಟುವಟಿಕೆಯನ್ನು ನಡೆಸಲು ಬಿಜೆಪಿ ಸರ್ಕಾರ ಚುನಾವಣಾ ಆಯೋಗವನ್ನು ಪ್ರಚೋದಿಸಿದೆ” ಎಂದು ಆರೋಪಿಸಿದ್ದಾರೆ.

ನವೆಂಬರ್ ಮತ್ತು ಡಿಸೆಂಬರ್ ಮಳೆಗಾಲದ ತಿಂಗಳುಗಳಲ್ಲಿ ತಮಿಳುನಾಡಿನಲ್ಲಿ ಎಸ್‌ಐಆರ್ ನಡೆಸುವುದು ತುಂಬಾ ಕಷ್ಟಕರ ಮತ್ತು ಪ್ರಾಯೋಗಿಕವಾಗಿ ಅಸಾಧ್ಯ. ಚುನಾವಣಾ ಆಯೋಗ ಘೋಷಿಸಿದ ಕಾರ್ಯವಿಧಾನಗಳು ಜನಸಂಖ್ಯೆಯ ಹೆಚ್ಚಿನ ಭಾಗಕ್ಕೆ ತೊಂದರೆಯನ್ನುಂಟುಮಾಡುತ್ತವೆ ಎಂದು ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸುಪ್ರೀಂ ಕೋರ್ಟ್ ತೀರ್ಪಿನ ನಂತರವೂ ಎಸ್‌ಐಆರ್‌ಗೆ ಆಧಾರ್ ಕಾರ್ಡ್ ಅನ್ನು ಏಕೆ ಸ್ವೀಕರಿಸಿಲ್ಲ? ಪದೇ ಪದೇ ಒತ್ತಾಯಿಸಿದರೂ ಪಡಿತರ ಚೀಟಿಯನ್ನು ಏಕೆ ಸ್ವೀಕರಿಸಿಲ್ಲ ಎಂದು ಡಿಎಂಕೆ ಮೈತ್ರಿಕೂಟದ ನಾಯಕರು ಪ್ರಶ್ನಿಸಿದ್ದಾರೆ.

ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಅಗತ್ಯವನ್ನು ಒಪ್ಪಿಕೊಂಡರೂ, ಆತುರದಿಂದ ಈ ಪ್ರಕ್ರಿಯೆ ನಡೆಸಬಾರದು ಎಂದಿದ್ದಾರೆ.

“ಏಪ್ರಿಲ್‌ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವಾಗ, ಈಗ ಎಸ್‌ಐಆರ್ ಘೋಷಿಸುವುದು ಅನ್ಯಾಯ. ತಮಿಳುನಾಡಿನ ಜನರ ಹಕ್ಕುಗಳನ್ನು ಕಸಿದುಕೊಳ್ಳುವ ಪಿತೂರಿ ನಡೆಯುತ್ತಿದೆ ಎಂಬ ಅನುಮಾನ ನಮಗಿದೆ. ಬಿಹಾರದಲ್ಲಿ ಮುಸ್ಲಿಮರು, ಪರಿಶಿಷ್ಟ ಜಾತಿ ಸಮುದಾಯಗಳು ಮತ್ತು ಮಹಿಳೆಯರನ್ನು ಹೆಸರು ತೆಗೆಯುವಿಕೆಗೆ ಗುರಿಯಾಗಿಸಲಾಗಿತ್ತು. ತಮಿಳುನಾಡು ಅಂತಹ ಸಂಚನ್ನು ಎಂದಿಗೂ ಅನುಮತಿಸುವುದಿಲ್ಲ. ಈ ವಿಷಯದಲ್ಲಿ ರಾಜ್ಯವು ಒಗ್ಗಟ್ಟಾಗಿ ವಿರೋಧ ವ್ಯಕ್ತಪಡಿಸಲಿದೆ” ಎಂದು ನಾಯಕರು ಹೇಳಿದ್ದಾರೆ.

ಇದೇ ವಿಷಯದ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಸಿಎಂ ಸ್ಟಾಲಿನ್, “ಮತದಾನದ ಹಕ್ಕು ಪ್ರಜಾಪ್ರಭುತ್ವದ ಅಡಿಪಾಯ. ತಮಿಳುನಾಡು ಅದನ್ನು ಕೊಲ್ಲುವ ಯಾವುದೇ ಪ್ರಯತ್ನದ ವಿರುದ್ಧ ಹೋರಾಡುತ್ತದೆ ಮತ್ತು ತಮಿಳುನಾಡು ಗೆಲ್ಲುತ್ತದೆ” ಎಂದು ಬರೆದುಕೊಂಡಿದ್ದಾರೆ.

“ಆತುರ ಮತ್ತು ಅಪಾರದರ್ಶಕ ರೀತಿಯಲ್ಲಿ ಎಸ್‌ಐಆರ್‌ ನಡೆಸುವುದು ನಾಗರಿಕರ ಹಕ್ಕುಗಳನ್ನು ಕಸಿದುಕೊಳ್ಳಲು ಮತ್ತು ಬಿಜೆಪಿಗೆ ಸಹಾಯ ಮಾಡಲು ಚುನಾವಣಾ ಆಯೋಗ ನಡೆಸುತ್ತಿರುವ ಪಿತೂರಿಯಲ್ಲದೆ ಬೇರೇನೂ ಅಲ್ಲ” ಎಂದು ಸ್ಟಾಲಿನ್ ಹೇಳಿದ್ದಾರೆ.

ಬಿಹಾರದ ಎಸ್‌ಐಆರ್‌ನಲ್ಲಿ ಉಂಟಾದ ಗೊಂದಲಗಳನ್ನು ಬೆಟ್ಟು ಮಾಡಿದ ಸ್ಟಾಲಿನ್, “ಎಸ್‌ಐಆರ್ ಪ್ರಕ್ರಿಯೆಯಲ್ಲಿನ ಪಾರದರ್ಶಕತೆಯ ಕೊರತೆಯು ಸಾರ್ವಜನಿಕ ಮನಸ್ಸಿನಲ್ಲಿ ಅನುಮಾನವನ್ನು ಹೆಚ್ಚಿಸಿದೆ ಎಂದಿದ್ದಾರೆ.

12 ರಾಜ್ಯಗಳಲ್ಲಿ ಎರಡನೇ ಹಂತದ ಮತದಾರರ ಪಟ್ಟಿ ಪರಿಷ್ಕರಣೆ: ಚುನಾವಣಾ ಆಯೋಗ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಎಂಯು ಕ್ಯಾಂಪಸ್‌ನಲ್ಲಿ ಗುಂಡಿನದಾಳಿ; ಅಪಹರಣ ಪ್ರಯತ್ನದ ಆರೋಪ

ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ (ಎಎಂಯು) ವಿದ್ಯಾರ್ಥಿ ಕಾರ್ಯಕರ್ತನೊಬ್ಬನ ಮೇಲೆ ನವೆಂಬರ್ 5, 2025 ರ ಸಂಜೆ ಗ್ರಂಥಾಲಯದ ಪಾರ್ಕಿಂಗ್ ಪ್ರದೇಶದಲ್ಲಿ ನಾಲ್ವರು ಅಪರಿಚಿತ ವ್ಯಕ್ತಿಗಳು ಸೇರಿದಂತೆ ಏಳು ಜನರ ಗುಂಪು ದಾಳಿ ನಡೆಸಿದೆ...

ಹೆದ್ದಾರಿ, ಶಾಲೆ, ಆಸ್ಪತ್ರೆ, ರೈಲು ನಿಲ್ದಾಣಗಳಿಂದ ಬೀದಿ ನಾಯಿಗಳನ್ನು ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್ ಆದೇಶ

ನಾಯಿ ಕಡಿತದ ಘಟನೆಗಳಲ್ಲಿ ಆತಂಕಕಾರಿ ಏರಿಕೆಯನ್ನು ಉಲ್ಲೇಖಿಸಿ ಪ್ರಮುಖ ನಿರ್ದೇಶನ ನೀಡಿರುವ ಸುಪ್ರೀಂ ಕೋರ್ಟ್, ಎಲ್ಲ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಸಾರ್ವಜನಿಕ ಕ್ರೀಡಾ ಸಂಕೀರ್ಣಗಳು, ಬಸ್ ನಿಲ್ದಾಣಗಳು, ಡಿಪೋಗಳು ಮತ್ತು ರೈಲು ನಿಲ್ದಾಣಗಳಿಗೆ...

ಉತ್ತರ ಪ್ರದೇಶ| ಆರ್‌ಪಿಎಫ್ ಕಸ್ಟಡಿಯಲ್ಲಿ ದಲಿತ ವ್ಯಕ್ತಿ ಸಾವು; ಚಿತ್ರಹಿಂಸೆ ಆರೋಪ ಮಾಡಿದ ಮೃತನ ಕುಟುಂಬ

ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ರೈಲ್ವೆ ರಕ್ಷಣಾ ಪಡೆ ಕಸ್ಟಡಿಯಲ್ಲಿ ದಲಿತ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಅವರ ಮೇಲೆ ಕಬ್ಬಿಣದ ರಾಡ್ ಮತ್ತು ಚಾಕುಗಳಿಂದ ಹಲ್ಲೆ ನಡೆಸಿರುವ ಆಳವಾದ ಗಾಯದ ಗುರುತುಗಳು ಇವೆ ಎಂದು...

ಜೆಎನ್‌ಯು ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಎಡಪಂಥೀಯ ಒಕ್ಕೂಟ

ನವದೆಹಲಿ: ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ವಿದ್ಯಾರ್ಥಿಗಳ ಒಕ್ಕೂಟದ ಚುನಾವಣೆಯ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ನಾಲ್ಕೂ ಸ್ಥಾನಗಳಲ್ಲಿ ಎಡ ಪಕ್ಷಗಳ ವಿದ್ಯಾರ್ಥಿ ಸಂಘಟನೆಗಳು ಜಯ ಸಾಧಿಸಿವೆ. ಈ ಮೂಲಕ ಆರ್‌ಎಸ್‌ಎಸ್‌ ಬೆಂಬಲಿತ ಅಖಿಲ...

‘ಚುನಾವಣೆ ಕಳ್ಳತನ’ದ ಮೂಲಕ ನರೇಂದ್ರ ಮೋದಿ ಪ್ರಧಾನಿಯಾಗಿರುವುದನ್ನು ತೋರಿಸುತ್ತೇನೆ’: ರಾಹುಲ್ ಗಾಂಧಿ

ದೆಹಲಿ: ಚುನಾವಣಾ ಅಕ್ರಮಗಳನ್ನು ಬಹಿರಂಗಪಡಿಸುವ ಪ್ರಕ್ರಿಯೆಯನ್ನು ಮುಂದುವರಿಸುವುದಾಗಿ ಮತ್ತು ನರೇಂದ್ರ ಮೋದಿ "ಚುನಾವ್ ಚೋರಿ" (ಚುನಾವಣಾ ಕಳ್ಳತನ) ಮೂಲಕ ಹೇಗೆ ಪ್ರಧಾನಿಯಾದರು ಎಂಬುದನ್ನು ದೇಶದ ಯುವಜನರಿಗೆ ತೋರಿಸುವುದಾಗಿ ಲೋಕಸಭೆಯ ವಿರೋಧ ಪಕ್ಷದ ನಾಯಕ...

ಬಹುಜನರನ್ನು ಬಾಲಿವುಡ್ ನಿರ್ಲಕ್ಷಿಸಿದೆ, ಶೇ.10-15 ರಷ್ಟಿರುವ ಪ್ರಬಲ ಜಾತಿಗಳ ಕಥೆ ಮಾತ್ರ ಹೇಳಿದೆ: ನೀರಜ್ ಘಯ್ವಾನ್

ನೀರಜ್ ಘಯ್ವಾನ್ ಅವರ ಇತ್ತೀಚಿನ ಬಾಲಿವುಡ್ ಚಿತ್ರ 'ಹೋಮ್‌ಬೌಂಡ್' ಆಧುನಿಕ ಭಾರತೀಯ ಸಮಾಜದಲ್ಲಿ ಇರುವ ಜಾತಿ ಅಸಮಾನತೆಗಳ ಮೇಲೆ ಬೆಳಕು ಚೆಲ್ಲುತ್ತದೆ. ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮುಂದಿನ ವರ್ಷ ಆಸ್ಕರ್‌ಗೆ...

ಬಿಹಾರದಲ್ಲೂ ಮತಗಳ್ಳತನ ಮಾಡಲು ಎನ್‌ಡಿಎ ಪ್ರಯತ್ನಿಸುತ್ತಿದೆ: ಪ್ರಿಯಾಂಕಾ ಗಾಂಧಿ

ಹರಿಯಾಣದಲ್ಲಿ ಮತಗಳ್ಳತನ ಮಾಡಿದಂತೆ ಬಿಹಾರದಲ್ಲೂ ಮಾಡಲು ಎನ್‌ಡಿಎ ತಯಾರಿ ನಡೆಸುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಸಂಸದೆ ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ.  ಸೀತಮ್‌ ಹಾರಿ ಹಾಗೂ ಚಂಪಾರಣ್ಯ ಜಿಲ್ಲೆಯಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ...

ಕಬ್ಬಿಗೆ ‘ಎಫ್‌ಆರ್‌ಪಿ’ ನಿರ್ಧಾರ ಮಾಡಿರುವುದು ಕೇಂದ್ರ ಸರ್ಕಾರ: ಸಿಎಂ ಸಿದ್ದರಾಮಯ್ಯ

ಕಬ್ಬಿಗೆ ಎಫ್‌ಆರ್‌ಪಿ (ನ್ಯಾಯಯುತ ಮತ್ತು ಲಾಭದಾಯಕ ಬೆಲೆ) ನಿರ್ಧರಿಸಿರುವುದು ಕೇಂದ್ರದ ಬಿಜೆಪಿ ಸರ್ಕಾರ. ಆದ್ದರಿಂದ, ರೈತರು ಯಾವುದೇ ಕಾರಣಕ್ಕೂ ರೈತ ದ್ರೋಹಿಯಾದ ರಾಜ್ಯದ ಬಿಜೆಪಿಯವರ ಮರಳು ಮಾತುಗಳಿಗೆ ಬಲಿಯಾಗಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ...

ಬಿಹಾರ ವಿಧಾನಸಭಾ ಚುನಾವಣೆ 2025: ಮಧ್ಯಾಹ್ನ 3 ಗಂಟೆಯವರೆಗೂ ಶೇ. 53 ರಷ್ಟು ಮತದಾನ

ಪಾಟ್ನಾ: ತೀವ್ರ ಕುತೂಹಲ ಕೆರಳಿಸಿರುವ ಬಿಹಾರ ವಿಧಾನಸಭೆಯ ಮೊದಲ ಹಂತದ ಚುನಾವಣೆ ಪ್ರಗತಿಯಲ್ಲಿದ್ದು, ಕೇಂದ್ರ ಚುನಾವಣಾ ಆಯೋಗ ಹಂಚಿಕೊಂಡ ಮಾಹಿತಿಯ ಪ್ರಕಾರ ಮಧ್ಯಾಹ್ನ 3 ಗಂಟೆಯವರೆಗೂ ಶೇ.53.77 ರಷ್ಟು ಮತದಾನವಾಗಿದೆ. 18 ಜಿಲ್ಲೆಗಳ ಪೈಕಿ...

ಛತ್ತೀಸ್‌ಗಢ| ₹17 ಲಕ್ಷ ಬಹುಮಾನ ಹೊಂದಿದ್ದ ಮಾವೋವಾದಿ ಕಮಲಾ ಸೋಡಿ ಶರಣಾಗತಿ

₹17 ಲಕ್ಷ ಬಹುಮಾನ ಹೊಂದಿದ್ದ 'ಮೋಸ್ಟ್‌ ವಾಂಟೆಡ್' ಮಾವೋವಾದಿ ಕಾರ್ಯಕರ್ತೆ ಕಮಲಾ ಸೋಡಿ ಗುರುವಾರ ಖೈರಾಗಢ-ಚುಯಿಖಾದನ್-ಗಂಡೈ ಜಿಲ್ಲೆಯಲ್ಲಿ ಪೊಲೀಸರಿಗೆ ಶರಣಾಗಿದ್ದು, ಛತ್ತೀಸ್‌ಗಢದ ನಕ್ಸಲ್ ವಿರೋಧಿ ಅಭಿಯಾನದಲ್ಲಿ ಪ್ರಮುಖ ಪ್ರಗತಿಯಾಗಿದೆ. ಉಂಗಿ ಮತ್ತು ತರುಣ ಎಂಬ...