Homeಮುಖಪುಟ'ಬಾಂಗ್ಲಾದೇಶಿ' ಎಂಬ ಹಣೆಪಟ್ಟಿ, 87 ದಿನಗಳ ಬಂಧನ, ಬಳಿಕ ಜಾಮೀನು : ಇದು ಬಂಗಾಳಿ ಮುಸ್ಲಿಮನ...

‘ಬಾಂಗ್ಲಾದೇಶಿ’ ಎಂಬ ಹಣೆಪಟ್ಟಿ, 87 ದಿನಗಳ ಬಂಧನ, ಬಳಿಕ ಜಾಮೀನು : ಇದು ಬಂಗಾಳಿ ಮುಸ್ಲಿಮನ ಕರುಣಾಜನಕ ಕಥೆ

- Advertisement -
- Advertisement -

ಜಲೀಲ್ ಅಖ್ತರ್ ಅವರು ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರ ಜಿಲ್ಲೆಯ ಬಾಗ್ರೋಯಿ ಗ್ರಾಮದಲ್ಲಿ 70 ವರ್ಷಗಳ ಕಾಲ ಅತ್ಯಂತ ಶಾಂತಿಯುತ ಮತ್ತು ನಿರಾಳವಾದ ಜೀವನವನ್ನು ನಡೆಸುತ್ತಿದ್ದರು. ಭೂ ರಹಿತ ಗ್ರಾಮಸ್ಥರಾಗಿದ್ದ ಅವರು, ದಿನಗೂಲಿ ಕೆಲಸ ಮತ್ತು ದೂರದ ರಾಜ್ಯಗಳಲ್ಲಿ ವಲಸೆ ಕಾರ್ಮಿಕರಾಗಿ ದುಡಿಯುತ್ತಿದ್ದ ತಮ್ಮ ಗಂಡು ಮಕ್ಕಳು ಕಳುಹಿಸುತ್ತಿದ್ದ ಹಣದಿಂದ ಜೀವನ ಸಾಗಿಸುತ್ತಿದ್ದರು.

ಯಾರ ತಂಟೆಗೂ ಹೋಗದೆ ತನ್ನಷ್ಟೆ ತಾನಿದ್ದ ಅಖ್ತರ್ ಅವರ ಜೀವನಕ್ಕೆ ಬರಸಿಡಿಲು ಬಡಿದಂತಹ ಘಟನೆಯೊಂದು 2026ರ ಜೂನ್ 19ರ ರಾತ್ರಿ ನಡೆಯಿತು. ಬಾಂಗ್ಲಾದೇಶದ ಪ್ರಜೆ ಎಂಬ ಶಂಕೆಯ ಮೇಲೆ ಸ್ಥಳೀಯ ಪೊಲೀಸರು ಅವರನ್ನು ವಶಕ್ಕೆ ಪಡೆದರು. ಆ ಬಳಿಕ ಅವರ ಬಿಡುಗಡೆಗಾಗಿ ಕುಟುಂಬಸ್ಥರು ಕಾನೂನು ಹೋರಾಟ ನಡೆಸುತ್ತಿದ್ದರೆ, ಅತ್ತ ಅಖ್ತರ್ ಮುಂದಿನ 87 ದಿನಗಳನ್ನು ಬಂಧನ ಕೇಂದ್ರ (ಹೋಲ್ಡಿಂಗ್ ಸೆಂಟರ್) ಮತ್ತು ಜೈಲಿನ ನಡುವೆ ಕಳೆಯಬೇಕಾಯಿತು.

ಜೂನ್ 19ರಂದು ರಾತ್ರಿ ಸುಮಾರು 11 ಗಂಟೆಗೆ, ಇಡೀ ಗ್ರಾಮವೇ ಮಲಗಿದ್ದಾಗ ಸಮೀಪದ ದಾಲ್‌ಖೋಲಾ ಪೊಲೀಸ್ ಠಾಣೆಯ ಅಧಿಕಾರಿಗಳು ಅಖ್ತರ್ ಅವರ ಮನೆಯ ಬಳಿ ಬಂದಿದ್ದರು. ಅವರು ತಮ್ಮ ವಾಹನವನ್ನು ಸ್ವಲ್ಪ ದೂರದಲ್ಲೇ ನಿಲ್ಲಿಸಿ, ವೃದ್ಧ ಅಖ್ತರ್ ಮಲಗಿದ್ದ ಮಂಚದ ಬಳಿ ನಡೆದುಕೊಂಡು ಬಂದು ಅವರನ್ನು ಕರೆದೊಯ್ದರು ಎಂದು ಅವರ ಕುಟುಂಬಸ್ಥರು ಆರೋಪಿಸಿದ್ದಾರೆ.

"ನಮ್ಮಲ್ಲಿ ಯಾರಿಗೂ ವಿಷಯ ತಿಳಿದಿರಲಿಲ್ಲ; ಕೊನೆಗೆ ಅವರ ಕುಟುಂಬಕ್ಕೂ ಇದರ ಸುಳಿವಿರಲಿಲ್ಲ. ಪೊಲೀಸರು ರಾತ್ರೋರಾತ್ರಿ ಅಖ್ತರ್ ಅವರನ್ನು ಕರೆದುಕೊಂಡು ಹೋಗಿದ್ದರು. ಮರುದಿನ ಬೆಳಗ್ಗೆ ನಾವು ಹುಡುಕಾಡಿದಾಗ ಅವರು ಎಲ್ಲಿಯೂ ಪತ್ತೆಯಾಗಲಿಲ್ಲ. ನಾನು ಪೊಲೀಸ್ ಠಾಣೆಗೆ ಮಾಹಿತಿ ನೀಡಿದಾಗ, ಅವರು ಬಾಂಗ್ಲಾದೇಶದ ಪ್ರಜೆ ಎಂದು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದರು. ಆಗ ನಾನು, 'ಅವರು ಬಾಂಗ್ಲಾದೇಶದವರಾಗಲು ಹೇಗೆ ಸಾಧ್ಯ? ಯಾವ ಆಧಾರದ ಮೇಲೆ ನೀವು ಇವರನ್ನು ಕರೆದುಕೊಂಡು ಬಂದಿದ್ದೀರಿ?' ಎಂದು ಪ್ರಶ್ನಿಸಿದೆ. ಆದರೆ ನಮಗೆ ಪೊಲೀಸರಿಂದ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ" ಎಂದು ಅಖ್ತರ್ ಅವರ ಸೋದರಸಂಬಂಧಿ ಮೋತಿಯುರ್ ರೆಹಮಾನ್ ನೆನಪಿಸಿಕೊಂಡಿದ್ದಾಗಿ indianexpress.com ವರದಿ ಹೇಳಿದೆ.

ಬಂಧನದ ನಂತರ, ಅಖ್ತರ್ ಅವರನ್ನು 35 ಕಿ.ಮೀ ದೂರದಲ್ಲಿರುವ ನಿಝಾಂಪುರದ ಬಂಧನ ಕೇಂದ್ರ (ಹೋಲ್ಡಿಂಗ್ ಸೆಂಟರ್) ಮತ್ತು ಇಸ್ಲಾಂಪುರ ಜೈಲು ಸೇರಿದಂತೆ ಹಲವು ಸ್ಥಳಗಳಿಗೆ ಸ್ಥಳಾಂತರಿಸಲಾಗಿತ್ತು.

"ನನ್ನನ್ನು ನಾಲ್ಕರಿಂದ ಐದು ದಿನಗಳ ಕಾಲ ಬಾಂಗ್ಲಾದೇಶದ ಗಡಿಯ ಹತ್ತಿರವೂ ಇರಿಸಲಾಗಿತ್ತು. ನಾನು ಭಾರತದ ನಾಗರಿಕನಾಗಿದ್ದರಿಂದ ಅವರಿಗೆ ನನ್ನನ್ನು ಅಲ್ಲಿಗೆ ಕಳುಹಿಸಲು ಸಾಧ್ಯವಾಗಲಿಲ್ಲ. ನಾನು ಒಂದು ತಿಂಗಳಿಗೂ ಹೆಚ್ಚು ಕಾಲ ಬಂಧನ ಕೇಂದ್ರ ಮತ್ತು ಗಡಿಯಲ್ಲಿ ಕಳೆದರೆ, ಉಳಿದ ದಿನಗಳನ್ನು ಜೈಲಿನಲ್ಲಿ ಕಳೆಯಬೇಕಾಯಿತು. ನನಗಾದ ಈ ಎಲ್ಲ ಅವಮಾನ ಮತ್ತು ಕಿರುಕುಳಕ್ಕೆ ಯಾರು ಹೊಣೆ ಹೊರುತ್ತಾರೆ ಅಥವಾ ಪರಿಹಾರ ನೀಡುತ್ತಾರೆ?" ಎಂದು ಅಖ್ತರ್ ಪ್ರಶ್ನಿಸಿದ್ದಾಗಿ indianexpress.com ವರದಿ ಉಲ್ಲೇಖಿಸಿದೆ. 

ಆರಂಭಿಕ ಕೆಲವು ಭೇಟಿಗಳ ನಂತರ ಜೈಲಿನಲ್ಲಿ ಅಖ್ತರ್ ಅವರನ್ನು ಭೇಟಿಯಾಗಲು ಕುಟುಂಬಸ್ಥರಿಗೆ ಪೊಲೀಸರು ಹೇಗೆ ಅವಕಾಶ ನೀಡಲಿಲ್ಲ ಎಂಬುದನ್ನು ರೆಹಮಾನ್ ನೆನಪಿಸಿಕೊಳ್ಳುತ್ತಾರೆ.

"ಅವರನ್ನು ಬಂಧನ ಕೇಂದ್ರದಲ್ಲಿ ಇರಿಸಲಾಗಿತ್ತು. ನಾನು ಒಂದೆರಡು ಬಾರಿ ಹೋಗಿದ್ದೆ, ಆದರೆ ಆ ನಂತರ ಅವರು ಭೇಟಿಯಾಗಲು ಬಿಡಲಿಲ್ಲ. ಅವರ ಬಳಿ ಮೊಬೈಲ್ ಫೋನ್ ಇಟ್ಟುಕೊಳ್ಳಲು ಸಹ ಅನುಮತಿ ಇರಲಿಲ್ಲ. ಯಾವುದೇ ಕಾರಣವಿಲ್ಲದೆ ಅವರನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸ್ಥಳಾಂತರಿಸುತ್ತಲೇ ಇದ್ದರು.." ಎಂದು ರೆಹಮಾನ್ ಬೇಸರದಿಂದ ನುಡಿದಿದ್ದಾರೆ.

ಮತದಾರರ ಪಟ್ಟಿಯಲ್ಲಿ ಹೆಸರು: ಆರೋಪಗಳನ್ನು ನಿರಾಕರಿಸಿದ ಕುಟುಂಬ

ವರದಿಗಳ ಪ್ರಕಾರ, ಅಖ್ತರ್ ಅವರು “ಬಾಂಗ್ಲಾದೇಶದ ಠಾಕೂರ್‌ಗಾಂವ್ ಜಿಲ್ಲೆಯ ಅಂಧಾರಹಮತ್‌ಪುರ ಗ್ರಾಮದ” ಅಕ್ರಮ ವಲಸಿಗರಾಗಿದ್ದು, ಸರಿಸುಮಾರು 24 ವರ್ಷಗಳ ಹಿಂದೆ ಹಿಲಿ-ಮಾಲ್ಡಾ ಗಡಿಯ ಮೂಲಕ ಭಾರತವನ್ನು ಪ್ರವೇಶಿಸಿದ್ದರು ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ. ಆದರೆ, ಅವರ ಕುಟುಂಬಸ್ಥರು ನ್ಯಾಯಾಲಯಕ್ಕೆ ಸಲ್ಲಿಸಿರುವ ಅಧಿಕೃತ ದಾಖಲೆಗಳು ಈ ಆರೋಪಗಳನ್ನು ಸಂಪೂರ್ಣವಾಗಿ ಸುಳ್ಳಾಗಿಸುತ್ತವೆ.

ಅಖ್ತರ್ ಅವರ ಕುಟುಂಬದ ಪ್ರಕಾರ, ಅವರ ಹೆಸರು 1995ರ ಮತದಾರರ ಪಟ್ಟಿ ಹಾಗೂ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ನಂತರದ 2002 ಮತ್ತು 2026ರ ಮತದಾರರ ಪಟ್ಟಿಗಳಲ್ಲಿ ಇದೆ. ಪೊಲೀಸರ ಕೇಸ್ ಡೈರಿಗಳ ಮೂಲಕ ಅಖ್ತರ್ ಅವರು 1982ರಷ್ಟು ಹಿಂದಿನ ಚುನಾವಣೆಗಳಲ್ಲೇ ಮತದಾನ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಇಡೀ ಕುಟುಂಬವು ಮಾನ್ಯತೆ ಪಡೆದ ಚುನಾವಣಾ ದಾಖಲೆಗಳನ್ನು ಹೊಂದಿದ್ದು, ಎಲ್ಲರೂ 2026ರ ಚುನಾವಣೆಯಲ್ಲೂ ಮತ ಚಲಾಯಿಸಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

“ಅವರ (ಅಖ್ತರ್) ಕುಟುಂಬದಲ್ಲಿ ಯಾರ ಹೆಸರನ್ನೂ ಮತದಾರರ ಪಟ್ಟಿಯಿಂದ ತೆಗೆದುಹಾಕಿಲ್ಲ. 2026ರಲ್ಲಿ ಅವರು ಮತ ಚಲಾಯಿಸಿದ್ದಾರೆ. ಮತದಾರರ ಚೀಟಿ ಇದೆ… ಮತದಾರರ ಪಟ್ಟಿಯೂ ಇದೆ. ಅವರಿಗೆ ಇಬ್ಬರು ಗಂಡುಮಕ್ಕಳು ಮತ್ತು ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಗಂಡುಮಕ್ಕಳ ಹೆಸರುಗಳೂ ಮತದಾರರ ಪಟ್ಟಿಯಲ್ಲಿವೆ ಮತ್ತು ಅವರೂ ಮತ ಚಲಾಯಿಸಿದ್ದಾರೆ” ಎಂದು ರೆಹಮಾನ್ ಒತ್ತಿ ಹೇಳಿದ್ದಾರೆ.

ಭಾರತೀಯ ಪೌರತ್ವ ಕಾಯ್ದೆಯಡಿ, 1987ಕ್ಕಿಂತ ಮೊದಲು ಜನಿಸಿದ ವ್ಯಕ್ತಿಗಳು ತಮ್ಮ ಪೌರತ್ವವನ್ನು ಸಾಬೀತುಪಡಿಸಲು ಪೋಷಕರ ಜನ್ಮ ದಾಖಲೆಗಳನ್ನು ಹಾಜರುಪಡಿಸುವ ಅಗತ್ಯವಿಲ್ಲ. ಇಂತಹ ಕಾನೂನು ರಕ್ಷಣೆಗಳಿದ್ದಾಗ್ಯೂ, ದಾಖಲೆಗಳ ಪರಿಶೀಲನೆಯ ನೆಪವೊಡ್ಡಿ ಪೊಲೀಸರು ಅಖ್ತರ್ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ನಾಲ್ಕು ಬಾರಿ ಮುಂದೂಡುವಂತೆ ಮಾಡಿದ್ದರು ಎಂದು ಅಖ್ತರ್ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.

ಬಂಧನದಿಂದ ಯಾವುದೇ ಪ್ರಯೋಜನವಿಲ್ಲ

ಇಸ್ಲಾಂಪುರ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯ ಸಂದರ್ಭದಲ್ಲಿ, ಅಖ್ತರ್ ಅವರ ಪರ ವಕೀಲರ ತಂಡವು—ಅಂದರೆ ಸ್ಥಳೀಯ ಉಚಿತ ಕಾನೂನು ನೆರವು (ಲೀಗಲ್ ಏಡ್) ವಕೀಲರಾದ ಫಿರೋಝ್ ಅಹಮದ್, ಹೈಕೋರ್ಟ್ ವಕೀಲರಾದ ಸೈಯದ್ ನಫಿರುಲ್ ಇಸ್ಲಾಂ ಮತ್ತು ನಾಗರಿಕ ಹಕ್ಕುಗಳ ರಕ್ಷಣಾ ಸಂಘದ (APCR) ಸತ್ಯಶೋಧನಾ ಸಮಿತಿ—ದಾಖಲೆಗಳಲ್ಲಿರುವ ವಿವರಗಳನ್ನು ತಕ್ಷಣವೇ ಪರಿಶೀಲಿಸುವಂತೆ ಪೊಲೀಸರನ್ನು ಒತ್ತಾಯಿಸಿತ್ತು.

ಮ್ಯಾಜಿಸ್ಟ್ರೇಟ್ (ನ್ಯಾಯಾಧೀಶರ) ನಿರ್ದೇಶನಗಳ ನಂತರ, ತನಿಖಾಧಿಕಾರಿಯು ಅಂತಿಮವಾಗಿ ವರದಿಯೊಂದನ್ನು ಸಲ್ಲಿಸಿದ್ದರು. ಅದರಲ್ಲಿ ಅಖ್ತರ್ ಅವರ ವೋಟರ್ ಐಡಿ (ಮತದಾರರ ಗುರುತಿನ ಚೀಟಿ), ಪಾನ್ ಕಾರ್ಡ್, 1995ರ ಮತದಾರರ ಪಟ್ಟಿಯ ದಾಖಲೆ ಮತ್ತು 2002ರ ಎಸ್‌ಐಆರ್ ದಾಖಲೆಗಳೆಲ್ಲವೂ ಅಧಿಕೃತ ಭಾರತೀಯ ದಾಖಲೆಗಳಾಗಿವೆ ಎಂಬುದನ್ನು ಅವರು ದೃಢಪಡಿಸಿದ್ದರು.

ಸೆಪ್ಟೆಂಬರ್ 2ರಂದು ಹೆಚ್ಚುವರಿ ಮುಖ್ಯ ನ್ಯಾಯಿಕ ಮೆಜಿಸ್ಟ್ರೇಟ್ (ACJM) ಮುಂದೆ ನಡೆದ ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಾಧೀಶರು ತನಿಖಾಧಿಕಾರಿಗೆ ನೇರವಾಗಿ ಪ್ರಶ್ನೆಗಳನ್ನು ಹಾಕಿದ್ದು, ಕುಟುಂಬದವರು ಒದಗಿಸಿರುವ ಸರ್ಕಾರಿ ದಾಖಲೆಗಳು ಅಸಲಿಯೇ ಅಥವಾ ನಕಲಿಯೇ ಎಂದು ತನಿಖಾಧಿಕಾರಿಗೆ ನೇರವಾಗಿ ಪ್ರಶ್ನಿಸಿದ್ದಾರೆ. ಆದರೆ, ಅಧಿಕಾರಿ ಯಾವುದೇ ಉತ್ತರವಿಲ್ಲದೆ ಮೌನವಾಗಿ ನಿಂತಿದ್ದರು ಎಂದು ವರದಿಗಳು ಉಲ್ಲೇಖಿಸಿವೆ.

"ಅವರನ್ನು (ಅಖ್ತರ್) ಗಡಿಪಾರು ಮಾಡಲು ಈಗಾಗಲೇ ಹಲವು ಬಾರಿ ಪ್ರಯತ್ನಗಳು ನಡೆದಿವೆ. ಆದರೆ, ಅದು ಯಶಸ್ವಿಯಾಗಿಲ್ಲ ಎಂಬುವುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ. ಅಖ್ತರ್ ಅವರು ತಾನು ಭಾರತದ ನಾಗರಿಕನೆಂಬ ತನ್ನ ವಾದವನ್ನು ಸತತವಾಗಿ ಪ್ರತಿಪಾದಿಸುತ್ತಾ ಬಂದಿದ್ದಾರೆ. ಇಂತಹ ಸಂದರ್ಭಗಳಲ್ಲಿ, ಈ ಹಂತದಲ್ಲಿ ಅವರನ್ನು ದೀರ್ಘಕಾಲದವರೆಗೆ ಬಂಧನದಲ್ಲಿ ಇಡುವುದರಿಂದ ಯಾವುದೇ ಪ್ರಯೋಜನವಿರುವಂತೆ ಕಾಣುತ್ತಿಲ್ಲ" ಎಂದು ಮ್ಯಾಜಿಸ್ಟ್ರೇಟ್ ಅವರು ಅಖ್ತರ್ ಅವರಿಗೆ ಜಾಮೀನು ಮಂಜೂರು ಮಾಡುವಾಗ ಅಭಿಪ್ರಾಯಪಟ್ಟಿದ್ದಾರೆ. 

“ಪರಿಸ್ಥಿತಿಯ ಸಂಪೂರ್ಣ ಸ್ವರೂಪವನ್ನು ಪರಿಗಣಿಸಿದಾಗ, ವಿಶೇಷವಾಗಿ ಆರೋಪಿಯ ವಯಸ್ಸು, ಯಾವುದೇ ಅಪರಾಧ ಹಿನ್ನೆಲೆ ಇಲ್ಲದಿರುವುದು, ಅವರು ಒದಗಿಸಿರುವ ಕೆಲವು ಸರ್ಕಾರಿ ದಾಖಲೆಗಳು ಪರಿಶೀಲನೆಯಲ್ಲಿ ಅಸಲಿ ಎಂದು ಸಾಬೀತಾಗಿರುವುದು, ಸತತ ಚುನಾವಣಾ ಮತದಾರರ ಪಟ್ಟಿಗಳಲ್ಲಿ ಅವರ ಹೆಸರು ಇರುವುದು, ಸದರಿ ದಾಖಲೆಗಳು ನಕಲಿ ಎಂದು ತೋರಿಸುವ ಯಾವುದೇ ಪುರಾವೆಗಳು ಇಲ್ಲದಿರುವುದು, ಕಸ್ಟಡಿ ವಿಚಾರಣೆಗೆ ಯಾವುದೇ ಮನವಿ ಇಲ್ಲದಿರುವುದು, ಅವರು ತಲೆಮರೆಸಿಕೊಳ್ಳಬಹುದು ಅಥವಾ ತನಿಖೆಯನ್ನು ದಾರಿ ತಪ್ಪಿಸಬಹುದು ಎಂಬ ಯಾವುದೇ ಸಮಂಜಸವಾದ ಆತಂಕ ಇಲ್ಲದಿರುವುದು ಮತ್ತು ಅವರ ಪೌರತ್ವದ ಪ್ರಶ್ನೆಯನ್ನು ಸಮರ್ಥ ಪ್ರಾಧಿಕಾರವು ಇನ್ನೂ ಅಂತಿಮವಾಗಿ ನಿರ್ಧರಿಸಬೇಕಾಗಿದೆ ಎಂಬ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಆರೋಪಿಯನ್ನು ಇನ್ನು ಮುಂದೆ ಬಂಧನದಲ್ಲಿ ಇಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂಬ ಅಭಿಪ್ರಾಯಕ್ಕೆ ನಾನು ಬಂದಿದ್ದೇನೆ” ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಜಾಮೀನಿನ ಮೇಲೆ ಅಖ್ತರ್ ಮನೆಗೆ ಮರಳಿದ್ದಾರೆ, ಆದರೆ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ

87 ದಿನಗಳ ಬಂಧನದ ನಂತರ, ಸೆಪ್ಟೆಂಬರ್ 15ರಂದು ಅಖ್ತರ್ ಅವರನ್ನು ಅಧಿಕೃತವಾಗಿ ಬಂಧನದಿಂದ ಬಿಡುಗಡೆ ಮಾಡಲಾಗಿದೆ.

ಸೆಪ್ಟೆಂಬರ್ 14ರಂದು ನಡೆದ ಅಂತಿಮ ವಿಚಾರಣೆಯ ಫಲಿತಾಂಶದ ಬಗ್ಗೆ ಮಾತನಾಡಿದ ವಕೀಲ ಇಸ್ಲಾಂ, “ತನಿಖಾ ಸಂಸ್ಥೆಯು ಸಲ್ಲಿಸಿದ ಎಲ್ಲಾ ದಾಖಲೆಗಳು ಅಸಲಿ ಎಂದು ನ್ಯಾಯಾಲಯ ಹೇಳಿದೆ. ಅದರೊಂದಿಗೆ, ಸಲ್ಲಿಕೆಯಾಗಿರುವ ವರದಿಗಳ ಪ್ರಕಾರ ಜಲೀಲ್ ಅಖ್ತರ್ ಅವರು ಭಾರತೀಯ ನಾಗರಿಕರಾಗಿದ್ದಾರೆ ಎಂದು ತಿಳಿಸಿ ನ್ಯಾಯಾಲಯವು ಅವರಿಗೆ ಜಾಮೀನು ಮಂಜೂರು ಮಾಡಿದೆ” ಎಂದು ತಿಳಿಸಿದ್ದಾರೆ.

ಅಖ್ತರ್ ಅವರ ಕುಟುಂಬ ಇನ್ನೂ ಹಲವು ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುತ್ತಿದೆ. “ನ್ಯಾಯಾಲಯದ ಆದೇಶದಲ್ಲಿ ಅವರ ದಾಖಲೆಗಳು ಅವರು ಸಂಪೂರ್ಣವಾಗಿ ಮಾನ್ಯತೆ ಪಡೆದ ಭಾರತೀಯ ನಾಗರಿಕ ಎಂಬುದನ್ನು ತೋರಿಸುತ್ತವೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಅದಕ್ಕೆ ಬೇಕಾದಷ್ಟು ಪುರಾವೆಗಳೂ ಇವೆ. ಹಾಗಿರುವಾಗ ಪೊಲೀಸರು ಅವರನ್ನು ಏಕೆ ವಶಕ್ಕೆ ಪಡೆದರು? ಈ ಪ್ರಶ್ನೆಗೆ ಉತ್ತರಿಸಲು ಪೊಲೀಸರಿಗೂ ಸಾಧ್ಯವಾಗಿಲ್ಲ” ಎಂದು ರೆಹಮಾನ್ ಹೇಳಿದ್ದಾರೆ.



ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಂದೇ ಮಾತರಂ ಕಡ್ಡಾಯವಲ್ಲ, ಹಾಡದಿದ್ದರೆ ಶಿಕ್ಷೆಯಿಲ್ಲ: ಸುಪ್ರೀಂ ಕೋರ್ಟ್ ಸ್ಪಷ್ಟನೆ

‘ವಂದೇ ಮಾತರಂ’ ದೇಶದ ರಾಷ್ಟ್ರೀಯ ಗೀತೆಯಾಗಿ (National Song) ಮುಂದುವರಿಯಲಿದೆ, ಆದರೆ ಸಂವಿಧಾನದ ವಿಧಿ 25 ಮತ್ತು 26ರ ಅಡಿಯಲ್ಲಿ ನೈಜ ಧಾರ್ಮಿಕ ಆಕ್ಷೇಪಣೆ ಹೊಂದಿರುವ ಯಾವುದೇ ವ್ಯಕ್ತಿಯು ಅದರ ಕೆಲವು ಚರಣಗಳನ್ನು...

ಉತ್ತರ ಪ್ರದೇಶ ಸೇರಿದಂತೆ 3 ರಾಜ್ಯಗಳ 12 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ದಿನಾಂಕ ಘೋಷಣೆ

ಭಾರತೀಯ ಚುನಾವಣಾ ಆಯೋಗವು (ಇಸಿಐ) 11 ರಾಜ್ಯಸಭಾ ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆಗಳು ಹಾಗೂ ಪಶ್ಚಿಮ ಬಂಗಾಳದ ಒಂದು ಸ್ಥಾನಕ್ಕೆ ಉಪಚುನಾವಣೆಯನ್ನು ಅಕ್ಟೋಬರ್ 16ರಂದು ನಡೆಸುವುದಾಗಿ ಘೋಷಿಸಿದೆ. ದ್ವೈವಾರ್ಷಿಕ ಚುನಾವಣೆಯಲ್ಲಿ ಮತದಾನ ನಡೆಯಲಿರುವ 11 ಸ್ಥಾನಗಳ...

ಪತ್ರಕರ್ತ ರವಿ ನಾಯರ್ ಬಂಧನ ಮುಂದುವರಿಕೆ: ಅದಾನಿ ಮಾನನಷ್ಟ ಪ್ರಕರಣದಲ್ಲಿ ಬಿಡುಗಡೆ ಅರ್ಜಿ ಮುಂದೂಡಿದ ಗುಜರಾತ್ ಹೈಕೋರ್ಟ್ 

ಅದಾನಿ ಎಂಟರ್‌ಪ್ರೈಸಸ್ ವಿರುದ್ಧದ ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ ಬಂಧನ ಪ್ರಶ್ನಿಸಿ ಪತ್ರಕರ್ತ ರವಿ ನಾಯರ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಗುಜರಾತ್ ಹೈಕೋರ್ಟ್ ಸೋಮವಾರ ಮುಂದೂಡಿದೆ. ನಾಯರ್ ಅವರ ಅರ್ಜಿಗೆ ಪ್ರತಿಕ್ರಿಯಿಸಲು ಅದಾನಿ ಎಂಟರ್‌ಪ್ರೈಸಸ್‌ಗೆ...

ರಾಮನ ಹೆಸರಿಗೆ ಕಳಂಕ ತರಬೇಡಿ’: ರಾಮಮಂದಿರ ದೇಣಿಗೆ ಪ್ರಕರಣದ ಚಾರ್ಜ್‌ಶೀಟ್‌ ವಿಳಂಬದ ಕುರಿತು ಕಾಂಗ್ರೆಸ್‌ ಆಕ್ರೋಶ

ಅಯೋಧ್ಯೆಯ ರಾಮಮಂದಿರದ ದೇಣಿಗೆ ಹಣದಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ಚಾರ್ಜ್‌ಶೀಟ್‌ ಸಲ್ಲಿಕೆ ಕುರಿತು ಕಾಂಗ್ರೆಸ್‌ ಪ್ರಶ್ನೆಗಳನ್ನು ಎತ್ತಿದ್ದು, ಪ್ರಕರಣದಲ್ಲಿ ಪ್ರಭಾವಿ ವ್ಯಕ್ತಿಗಳನ್ನು ರಕ್ಷಿಸಲಾಗುತ್ತಿದೆಯೇ ಎಂಬ ಅನುಮಾನ ವ್ಯಕ್ತಪಡಿಸಿದೆ. ದೇಣಿಗೆ ನಿರ್ವಹಣೆ ಮತ್ತು...

SIR ಹೆಸರಿನಲ್ಲಿ ಚುನಾವಣಾ ಆಯೋಗದ ವಿಐಪಿ ಹಾಗೂ ಸಾಮಾನ್ಯ ಮತದಾರರು ಎಂಬ ಪದವೇ ಅಸಂವಿಧಾನಿಕ: ಮಲ್ಲಿಕಾರ್ಜುನ ಖರ್ಗೆ

ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಹೆಸರಿನಲ್ಲಿ ದೇಶದ ಪ್ರಜೆಗಳ ಮತದಾನದ ಹಕ್ಕನ್ನೇ ಕಸಿಯಲಾಗುತ್ತಿದೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರದ ವಿರುದ್ಧ...

ದೆಹಲಿ ಎಸ್‌ಐಆರ್‌: ಮುಸ್ಲಿಂ, ಎಸ್‌ಸಿ ಹಾಗೂ ವಲಸಿಗರ ಪ್ರದೇಶಗಳಲ್ಲೇ ಭಾರೀ ಮತದಾರರ ಹೆಸರುಗಳ ಹೊರಗಿಡುವಿಕೆ: ವರದಿ

ನವದೆಹಲಿ: ದೆಹಲಿಯಲ್ಲಿ ನಡೆದಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ನಂತರ ಪ್ರಕಟಿಸಲಾದ ಕರಡು ಮತದಾರರ ಪಟ್ಟಿಯಲ್ಲಿ ಈ ಹಿಂದೆ ನೋಂದಾಯಿತರಾಗಿದ್ದ ಸುಮಾರು ಮೂವರಲ್ಲಿ ಒಬ್ಬರ ಹೆಸರು ಕಾಣೆಯಾಗಿರುವುದು ಗಮನಾರ್ಹ ಸಂಗತಿಯಾಗಿ ಹೊರಹೊಮ್ಮಿದೆ. ಅದರಲ್ಲೂ...

ಅಪಹರಣ ಪ್ರಕರಣದಲ್ಲಿ ಬಂಧನ: ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಗೆ ಶರಣಾದ ದಲಿತ ಯುವಕ

ಉತ್ತರ ಪ್ರದೆಶದ ಪ್ರತಾಪ್‌ಗಢದ ಪಟ್ಟಿ ಪೊಲೀಸ್ ಠಾಣೆಯ ತನಿಖಾ ಕೊಠಡಿಯ ಶೌಚಾಲಯದಲ್ಲಿ ಸೋಮವಾರ ಮುಂಜಾನೆ 22 ವರ್ಷದ ದಲಿತ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪ್ರತಾಪ್‌ಗಢ ಎಸ್‌ಪಿ,...

ಕೆಲಸ ಮಾಡಿಕೊಟ್ಟ ಅಧಿಕಾರಿಗಳಿಗೆ ಗೌರವಯುತವಾಗಿ ಕೊಡುವುದು ಧರ್ಮ: ಸಚಿವ ಶಿವಲಿಂಗೇಗೌಡ ವಿವಾದದ ಹೇಳಿಕೆ ಲೋಕಾಯುಕ್ತ ಮತ್ತು ರಾಜ್ಯಪಾಲರಿಗೆ ದೂರು

ಜನಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಸಚಿವ ಕೆ.ಎಂ. ಶಿವಲಿಂಗೇಗೌಡ ನೀಡಿದ್ದಾರೆನ್ನಲಾದ ಹೇಳಿಕೆಯೊಂದು ಭಾರಿ ವಿವಾದಕ್ಕೆ ಕಾರಣವಾಗಿದ್ದು, ಸಚಿವರ ವಿರುದ್ಧ ಹಾಸನ ಜಿಲ್ಲಾ ಲೋಕಾಯುಕ್ತ ಕಚೇರಿಗೆ ವಕೀಲರು ದೂರು ಸಲ್ಲಿಸಿದ್ದಾರೆ. ವಕೀಲ ಎಂ.ಡಿ. ಗೋಪಾಲಗೌಡ ನೇತೃತ್ವದ...

‘ನಿಮಗೆ ಮೀಸಲಾತಿ ಏಕೆ ಬೇಕು..?’; ಪ್ರಯಾಗ್‌ರಾಜ್ ಎನ್‌ಎಲ್‌ಯು ಪ್ರಾಧ್ಯಾಪಕರಿಂದ ದಲಿತ ವಿದ್ಯಾರ್ಥಿಗೆ ಜಾತಿ ತಾರತಮ್ಯ

ಪ್ರಯಾಗ್‌ರಾಜ್‌ನ ಡಾ. ರಾಜೇಂದ್ರ ಪ್ರಸಾದ್ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ (ಎನ್‌ಎಲ್‌ಯು) ಕಾನೂನು ವಿಭಾಗದ ಮುಖ್ಯಸ್ಥರ ವಿರುದ್ಧ ದಲಿತ ವಿದ್ಯಾರ್ಥಿಯೊಬ್ಬರು ಮಾಡಿದ ಜಾತಿ ಆಧಾರಿತ ತಾರತಮ್ಯ ಮತ್ತು ಅವಮಾನದ ಆರೋಪಗಳ ಬಗ್ಗೆ ತನಿಖೆ ನಡೆಸಲು...

KPSC ಅಕ್ರಮ: ಅಲೋಕ್ ಕುಮಾರ್ ನೇತೃತ್ವದಲ್ಲಿ SIT ತನಿಖೆಗೆ ಹೈಕೋರ್ಟ್ ಆದೇಶ

ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ಇತ್ತೀಚೆಗೆ ನಡೆಸಿದ್ದ ಪಶುವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಬೃಹತ್ ಅಕ್ರಮಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಸೋಮವಾರ ಅತ್ಯಂತ ಮಹತ್ವದ ಆದೇಶ ಹೊರಡಿಸಿದೆ. ಈ ಬಹುಕೋಟಿ ನೇಮಕಾತಿ...