Homeಮುಖಪುಟಪ್ರೊ ಕಬಡ್ಡಿ: 32 ಅಂಕಗಳ ಭಾರೀ ಅಂತರದಿಂದ ಗೆದ್ದು ಸೆಮಿಫೈನಲ್ ತಲುಪಿದ ಬೆಂಗಳೂರು ಬುಲ್ಸ್

ಪ್ರೊ ಕಬಡ್ಡಿ: 32 ಅಂಕಗಳ ಭಾರೀ ಅಂತರದಿಂದ ಗೆದ್ದು ಸೆಮಿಫೈನಲ್ ತಲುಪಿದ ಬೆಂಗಳೂರು ಬುಲ್ಸ್

- Advertisement -
- Advertisement -

ಮೊದಲ ಎಲಿಮೇಟರ್ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ಕೆ.ಸಿ ವಿರುದ್ಧ ರೈಡಿಂಗ್ ಹಾಗೂ ಡಿಫೆಂಡಿಂಗ್ ಎರಡೂ ವಿಭಾಗದಲ್ಲಿ ಪಾರಮ್ಯ ಮೆರೆದ ಬೆಂಗಳೂರು ಬುಲ್ಸ್ ಭರ್ಜರಿ ಗೆಲುವು ಸಾಧಿಸಿ ಸೆಮಿಫೈನಲ್ ಗೆ ಲಗ್ಗೆ ಇಟ್ಟಿತು.

ರೈಡಿಂಗ್ ವಿಭಾಗದಲ್ಲಿ ಭರತ್ 15 ಅಂಕ ಮತ್ತು ವಿಕಾಸ್ ಖಂಡೋಲ 12 ಗಳಿಸಿ ಮಿಂಚಿದರೆ ಡಿಫೆಂಡಿಂಗ್ ನಲ್ಲಿ ಪೊನ್ ಪಾರ್ಥಿಬನ್ 7 ಅಂಕ ಮತ್ತು ಸೌರಭ್ ನಂದಲ್ 05 ಗಳಿಸಿ ಅದ್ಭುತ ಪ್ರದರ್ಶನ ನೀಡಿದರು. ಪರಿಣಾಮವಾಗಿ ಬೆಂಗಳೂರು 56 ಅಂಕ ಗಳಿಸಿದರೆ ಡೆಲ್ಲಿ ಕೇವಲ 24 ಅಂಕ ಗಳಿಸಿ 32 ಅಂಕಗಳಿಂದ ಸೋಲೊಪ್ಪಿಕೊಂಡಿತು.

ಈ ಗೆಲುವಿನೊಂದಿಗೆ ಬೆಂಗಳೂರು ತಂಡ ಸೆಮಿಫೈನಲ್ ಪ್ರವೇಶಿಸಿದೆ. ಡಿಸೆಂಬರ್ 15 ರಂದು ಜೈಪುರ್ ಪಿಂಕ್ ಪ್ಯಾಂಥರ್ಸ್ ವಿರುದ್ಧ ಸೆಣಸಲಿದೆ.

ಎರಡನೇ ಎಲಿಮಿನೇಟರ್ ಪಂದ್ಯ ಯುಪಿ ಯೋಧ ಮತ್ತು ತಮಿಳು ತಲೈವಾಸ್ ನಡುವೆ ನಡೆಯುತ್ತಿದೆ. ತಲೈವಾಸ್ 04 ಅಂಕಗಳಿಂದ ಮುಂದಿದ್ದಾರೆ. ಗೆದ್ದವರು ಸೆಮಿಫೈನಲ್ ನಲ್ಲಿ ಪುಣೇರಿ ಪಲ್ಟಾನ್ ವಿರುದ್ಧ ಸೆಣಸಲಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...