Homeಮುಖಪುಟಬಿಜೆಪಿಯ "400 ಪಾರ್" ಸಿನಿಮಾ ಮೊದಲ ದಿನವೇ ಫ್ಲಾಪ್ ಆಗಿದೆ: ತೇಜಸ್ವಿ ಯಾದವ್

ಬಿಜೆಪಿಯ “400 ಪಾರ್” ಸಿನಿಮಾ ಮೊದಲ ದಿನವೇ ಫ್ಲಾಪ್ ಆಗಿದೆ: ತೇಜಸ್ವಿ ಯಾದವ್

- Advertisement -
- Advertisement -

ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನದ ಬೆನ್ನಲ್ಲಿ ಪ್ರತಿಕ್ರಿಯಿಸಿದ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್, ಬಿಜೆಪಿಯ “400 ಪಾರ್” ಚಿತ್ರವು ಮೊದಲ ದಿನವೇ ಸೂಪರ್ ಫ್ಲಾಪ್ ಆಗಿದೆ ಎಂದು ಹೇಳಿದ್ದಾರೆ.

ಮಹಾಘಟಬಂಧನ್ ಮೊದಲ ಹಂತದ ಚುನಾವಣೆಯ ಎಲ್ಲಾ ನಾಲ್ಕು ಸ್ಥಾನಗಳನ್ನು ಗೆಲ್ಲಲಿದೆ. ನಾವು ಬ್ಲಾಕ್‌ಗಳಲ್ಲಿ ಸಭೆಗಳನ್ನು ನಡೆಸಿದ್ದೇವೆ ಮತ್ತು ಪ್ರತಿಕ್ರಿಯೆ ತುಂಬಾ ಚೆನ್ನಾಗಿದೆ. ಬಿಜೆಪಿಯ “400 ಪಾರ್” ಚಿತ್ರವು ಮೊದಲ ದಿನವೇ ಸೂಪರ್ ಫ್ಲಾಪ್ ಆಗಿದೆ. ಬಿಹಾರದ ಜನರು ಜಾಗೃತರಾಗಿದ್ದು, ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಬಿಹಾರ ಈ ಬಾರಿ ಅಚ್ಚರಿ ಫಲಿತಾಂಶಗಳನ್ನು ನೀಡಿರುವುದರಿಂದ ಮೊದಲ ಹಂತದಲ್ಲಿ ನಮಗೆ ಅವರ ಜೊತೆ ಸ್ಪರ್ಧೆಯೇ ಇರಲಿಲ್ಲ ಎಂದು ತೇಜಸ್ವಿ ಯಾದವ್‌ ಹೇಳಿದ್ದಾರೆ.

ಮೊದಲ ಹಂತದಲ್ಲಿ ಯಾವುದೇ ಪೈಪೋಟಿ ಇಲ್ಲ. ಬಿಹಾರ ಈ ಬಾರಿ ಅಚ್ಚರಿ ಫಲಿತಾಂಶ ಹೊರಬರಲಿದೆ ಎಂದು ನಾವು ಈ ಮೊದಲು ಸಾಕಷ್ಟು ಬಾರಿ ಹೇಳಿದ್ದೆವು. ಅವರು ಬಿಹಾರದ ಜನರಿಗೆ ಏನನ್ನೂ ಮಾಡಿಲ್ಲ. 2014 ಮತ್ತು 2019ರಲ್ಲಿ ಮೋದಿ ಜಿ ನೀಡಿದ ಭರವಸೆಗಳನ್ನು ಈಡೇರಿಸಲಿಲ್ಲ. ಈಗ ಅವರ ಹೇಳಿಕೆಗಳು ಮತ್ತು ಸುಳ್ಳು ಭರವಸೆಗಳಿಂದ ಸಾರ್ವಜನಿಕರು ಬೇಸತ್ತಿದ್ದಾರೆ, ನಾವು ಬಿಹಾರಕ್ಕೆ ವಿಶೇಷ ಸ್ಥಾನಮಾನದ ಜೊತೆಗೆ ವಿಶೇಷ ಪ್ಯಾಕೇಜ್ ನೀಡುತ್ತೇವೆ ಎಂದು ತೇಜಸ್ವಿ ಯಾದವ್‌ ಹೇಳಿದ್ದಾರೆ.

ಈ ಚುನಾವಣೆಯಲ್ಲಿ ಸ್ಥಳೀಯ ಸಮಸ್ಯೆಗಳು ಪ್ರಮುಖವಾಗಿವೆ. ಇಡೀ ಮಹಾಘಟಬಂಧನ್ ಮತ್ತು ಇಂಡಿಯಾ ಬಣ ಒಟ್ಟಾಗಿ ಕೆಲಸ ಮಾಡುತ್ತಿವೆ. ಹಣದುಬ್ಬರ, ಬಡತನ ಮತ್ತು ಹೂಡಿಕೆಯ ಜೊತೆಗೆ ಬಿಹಾರದಲ್ಲಿ ನಿರುದ್ಯೋಗವು ದೊಡ್ಡ ಸಮಸ್ಯೆಯಾಗಿದೆ. ವಲಸೆ ಮತ್ತು ಪ್ರವಾಹಗಳು ಸಹ ಸಮಸ್ಯೆಗಳಾಗಿವೆ. ಈ ಬಾರಿ ಬಿಜೆಪಿ ತುಂಬಾ ಚಿಂತಿತವಾಗಿದೆ. ಅವರು ಸಂವಿಧಾನವನ್ನು ರದ್ದುಗೊಳಿಸುವುದಾಗಿ ಹೇಳುತ್ತಾರೆ. ಯಾರು ಸಂವಿಧಾನವನ್ನು ನಾಶಪಡಿಸುತ್ತಾರೋ ಅವರೇ ನಾಶವಾಗುತ್ತಾರೆ ಎಂದು ಯಾದವ್ ಹೇಳಿದ್ದಾರೆ.

ಚುನಾವಣಾ ಆಯೋಗದ ಪ್ರಕಾರ, ಬಿಹಾರದಲ್ಲಿ ಮೊದಲ ಹಂತದ ಮತದಾನದಲ್ಲಿ ಶೇಕಡಾ 48.88 ರಷ್ಟು ಮತದಾನವಾಗಿದೆ. ಜಮುಯಿ, ನವಾಡ, ಗಯಾ ಮತ್ತು ಔರಂಗಾಬಾದ್ ಎಂಬ ನಾಲ್ಕು ಸ್ಥಾನಗಳಿಗೆ ಶುಕ್ರವಾರ ಮತದಾನ ನಡೆದಿತ್ತು. 2019ರ ಲೋಕಸಭಾ ಚುನಾವಣೆಯಲ್ಲಿ, ಬಿಜೆಪಿ ನೇತೃತ್ವದ ಎನ್‌ಡಿಎ 40 ಸ್ಥಾನಗಳಲ್ಲಿ 39 ಸ್ಥಾನಗಳನ್ನು ಪಡೆದುಕೊಂಡಿದ್ದರೆ, ಮಹಾಘಟಬಂಧನ್ ಕೇವಲ ಒಂದು ಸ್ಥಾನವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

ಇದನ್ನು ಓದಿ: ಲೋಕಸಭೆ ಚುನಾವಣೆ: ಎಕ್ಸಿಟ್ ಪೋಲ್ ಪ್ರಸಾರ ಮಾಡದಂತೆ ನಿಷೇಧ ವಿಧಿಸಿದ ಚುನಾವಣಾ ಆಯೋಗ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಕಾಂಗ್ರೆಸ್ ಪ್ರಣಾಳಿಕೆ ಸರ್ಕಾರಿ ಟೆಂಡರ್‌ಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ಭರವಸೆ ನೀಡಿದೆ...

0
ಮೇ 2,2024ರಂದು ಗುಜರಾತ್‌ನ ಸುರೇಂದ್ರನಗರದಲ್ಲಿ ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ " ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಸರ್ಕಾರಿ ಟೆಂಡರ್‌ಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸುವ ಭರವಸೆ ನೀಡಿದೆ" ಎಂದಿದ್ದಾರೆ. "ಕಾಂಗ್ರೆಸ್‌ನ ಪ್ರಣಾಳಿಕೆ...