Homeಅಂತರಾಷ್ಟ್ರೀಯಬ್ರೆಜಿಲ್: ಅಮೆಜಾನ್ ಹೋರಾಟಗಾರ್ತಿಗೆ ಪರಿಸರ ಖಾತೆ - ಲುಲಾ ಕ್ಯಾಬಿನೆಟ್‌ನಲ್ಲಿ ದಾಖಲೆಯ 11 ಮಹಿಳಾ ಸಚಿವರು

ಬ್ರೆಜಿಲ್: ಅಮೆಜಾನ್ ಹೋರಾಟಗಾರ್ತಿಗೆ ಪರಿಸರ ಖಾತೆ – ಲುಲಾ ಕ್ಯಾಬಿನೆಟ್‌ನಲ್ಲಿ ದಾಖಲೆಯ 11 ಮಹಿಳಾ ಸಚಿವರು

- Advertisement -
- Advertisement -

ಬ್ರೆಜಿಲ್‌ನ ಅಧ್ಯಕ್ಷರಾಗಿ ಲೂಯಿಝ್‌ ಇನಾಸಿಯೊ ಲುಲಾ ಡಾ ಸಿಲ್ವಾ ಅವರು 2023ರ ಜನವರಿ 1ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅಮೆಜಾನ್ ಉಳಿಸಿ ಕಾರ್ಯಕರ್ತೆ ಮರೀನಾ ಸಿಲ್ವಾ ಅವರು ದೇಶದ ಮುಂದಿನ ಪರಿಸರ ಸಚಿವರಾಗಲಿದ್ದಾರೆ ಎಂದು ಲುಲಾ ಡಾ ಸಿಲ್ವಾ ಗುರುವಾರ ಘೋಷಿಸಿದ್ದಾರೆ.

37 ಜನ ಸಚಿವರ ಪಟ್ಟಿ ಮಾಡಲಾಗಿದ್ದು ಅದರಲ್ಲಿ ಮೊದಲ ಬಾರಿಗೆ ದಾಖಲೆಯ 11 ಜನ ಮಹಿಳೆಯರಿಗೆ ಸ್ಥಾನ ನೀಡಲಾಗಿದೆ ಎಂದು ತಿಳಿದುಬಂದಿದೆ. ಬ್ರೆಜಿಲ್‌ನ ಮೂಲನಿವಾಸಿ ಜನರ ಮಂತ್ರಿಯಾಗಿ ಸೋನಿಯಾ ಗುಜಜಾರಾರನ್ನು ಆಯ್ಕೆ ಮಾಡಿದರೆ ಸೋಯಾಬೀನ್ ಉತ್ಪಾದಕ ಕಾರ್ಲೋಸ್ ಫವಾರೊ ಅವರನ್ನು ಕೃಷಿ ಮಂತ್ರಿಯಾಗಿ ಲುಲಾ ಹೆಸರಿಸಿದ್ದಾರೆ.

ಅಮೆಜಾನ್ ಮಳೆಕಾಡಿನ ನಾಶದ ವಿರುದ್ಧ ನಿರಂತರವಾಗಿ ಹೋರಾಟ ನಡೆಸಿದ್ದ ಮರೀನಾ ಸಿಲ್ವಾ ಅವರು ನೂತನ ಪರಿಸರ ಸಚಿವರಾಗಲಿದ್ದಾರೆ. ಹೊಸ ಆಡಳಿತವು ಪ್ರಬಲವಾದ ಕೃಷಿ ವ್ಯವಹಾರದ ಹಿತಾಸಕ್ತಿಗಳಿಂದ ದೂರವಿದ್ದರೂ ಸಹ ಕಾಡಿನಲ್ಲಿ ಅಕ್ರಮ ಅರಣ್ಯನಾಶವನ್ನು ಹತ್ತಿಕ್ಕಲು ಆದ್ಯತೆ ನೀಡುತ್ತದೆ ಎಂದು ಲುಲಾ ಘೋಷಿಸಿದ್ದಾರೆ.

ಈಜಿಪ್ಟ್‌ನಲ್ಲಿ ಇತ್ತೀಚೆಗೆ ನಡೆದ ಯುಎನ್ ಹವಾಮಾನ ಸಮ್ಮೇಳನದಲ್ಲಿ ಲುಲಾ ಮತ್ತು ಮರೀನಾ ಸಿಲ್ವಾ ಭಾಗವಹಿಸಿದ್ದರು. 2030 ರ ವೇಳೆಗೆ ವಿಶ್ವದ ಅತಿ ದೊಡ್ಡ ಮಳೆಕಾಡು ಮತ್ತು ಹವಾಮಾನ ಬದಲಾವಣೆಯ ವಿರುದ್ಧ ಹೋರಾಡುವ ಪ್ರಮುಖ ಕಾಡಾದ ಅಮೆಜಾನ್‌ ಅನ್ನು ಸಂಪೂರ್ಣವಾಗಿ ರಕ್ಷಿಸಲಾಗುವುದು ಎಂದು ಭರವಸೆ ನೀಡಲಾಗಿದೆ.

ಸಿಲ್ವಾ ಅವರು ನೇತೃತ್ವದ ಸಚಿವಾಲಯದ ಹೆಸರನ್ನು ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಎಂದು ಬದಲಾಯಿಸಲಾಗುವುದು ಎನ್ನಲಾಗಿದೆ.

ಮರೀಯಾ ಸಿಲ್ವಾ

ಮರೀಯಾ ಸಿಲ್ವಾ ಅಮೆಜಾನ್‌ನಲ್ಲಿ ಜನಿಸಿದರು ಮತ್ತು ಆರಂಭದಲ್ಲಿ ರಬ್ಬರ್ ಟ್ಯಾಪರ್ ಆಗಿ ಕೆಲಸ ಮಾಡಿದರು. ಆನಂತರ ಲುಲಾ ಅವರ ಅಧ್ಯಕ್ಷರಾಗಿದ್ದ ಮೊದಲ ಅವಧಿಯಲ್ಲಿ ಪರಿಸರ ಮಂತ್ರಿಯಾಗಿ ಅವರು ಹಲವಾರು ಸಂರಕ್ಷಣಾ ಪ್ರದೇಶಗಳ ರಚನೆ ಮತ್ತು ಪರಿಸರ ಅಪರಾಧಿಗಳ ವಿರುದ್ಧ ಪ್ರಮುಖ ಕಾರ್ಯಾಚರಣೆಗಳನ್ನು ನಡೆಸಿದ್ದಾರೆ. ಹೊಸ ಉಪಗ್ರಹ ಕಣ್ಗಾವಲುಗಳೊಂದಿಗೆ ಅರಣ್ಯನಾಶದ ವಿರುದ್ಧ ಅತ್ಯಾಧುನಿಕ ಕಾರ್ಯತಂತ್ರವನ್ನು ಮೇಲ್ವಿಚಾರಣೆ ಮಾಡಿದ್ದ ಹಿರಿಮೆ ಅವರದ್ದಾಗಿದೆ.

ಹೆಚ್ಚಾಗಿ ನಾರ್ವೆ ಬೆಂಬಲಿತ ಅಮೆಜಾನ್ ದೇಣಿಗೆ ಪಡೆದು ಮಳೆಕಾಡುಗಳನ್ನು ಸಂರಕ್ಷಿಸುವ ಅತಿದೊಡ್ಡ ಅಂತರರಾಷ್ಟ್ರೀಯ ಪ್ರಯತ್ನವನ್ನು ಅವರು ನಡೆಸಿದ್ದರು. ಆದರೆ ಆನಂತರ ಲುಲಾ ಕೃಷಿಕರ ಪರ ನಿಂತಾಗ ಮರೀಯಾ ಸಿಲ್ವಾ ರಾಜೀನಾಮೆ ನೀಡಿದ್ದರು.

ಈಗ ಮತ್ತೆ ಲುಲಾ ಅವರು ಮರೀನಾ ಅವರನ್ನು ಮನವೊಲಿಸಿದ್ದಾರೆ ಎನ್ನಲಾಗಿದ್ದು ಅದಕ್ಕಾಗಿ ಅವರು ಪರಿಸರ ಖಾತೆಯ ಸಚಿವರಾಗಲು ಒಪ್ಪಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಬ್ರೆಜಿಲ್, ಲುಲಾ ಮತ್ತು ಗುಲಾಬಿ ಅಲೆ 2.0; ಕತ್ತಿಯಂಚಿನ ನಡಿಗೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...