Homeಮುಖಪುಟಜಾತಿ-ವಿರೋಧಿ ಮಸೂದೆ ಅಂಗೀಕರಿಸಿದ ಕ್ಯಾಲಿಫೋರ್ನಿಯಾ ಅಸೆಂಬ್ಲಿ

ಜಾತಿ-ವಿರೋಧಿ ಮಸೂದೆ ಅಂಗೀಕರಿಸಿದ ಕ್ಯಾಲಿಫೋರ್ನಿಯಾ ಅಸೆಂಬ್ಲಿ

- Advertisement -
- Advertisement -

ಜಾತಿ ತಾರತಮ್ಯವನ್ನು ಕಾನೂನುಬಾಹಿರಗೊಳಿಸುವ ಮಸೂದೆಯನ್ನು ಕ್ಯಾಲಿಫೋರ್ನಿಯಾ ಸ್ಟೇಟ್ ಅಸೆಂಬ್ಲಿ ಸೋಮವಾರದಂದು (ಆಗಸ್ಟ್ 28) ಅಂಗೀಕರಿಸಿತು. ರಾಜ್ಯ ಅಸೆಂಬ್ಲಿಯಲ್ಲಿ ಅಂಗೀಕಾರ ಪಡೆಯುವ ಮೂಲಕ ಜಾತಿ ತಾರತಮ್ಯವನ್ನು ನಿಷೇಧಿಸುವ ಮೊದಲ ಅಮೆರಿಕದ ರಾಜ್ಯ ಕ್ಯಾಲಿಫೋರ್ನಿಯಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ಮಸೂದೆ ಪರವಾಗಿ 50 ಮತಗಳು ಮತ್ತು ಅದರ ವಿರುದ್ಧ ಕೇವಲ ಮೂರು ಮತಗಳು ಬಂದಿವೆ. ಇದನ್ನು ಮೊದಲು ಈ ವರ್ಷದ ಮೇ ತಿಂಗಳಲ್ಲಿ ರಾಜ್ಯದ ಸೆನೆಟ್ ಅಂಗೀಕರಿಸಿತು. ಈಗ ಅದಕ್ಕೆ ಒಪ್ಪಿಗೆ ಪಡೆಯಲು ರಾಜ್ಯ ಸೆನೆಟ್‌ಗೆ ಕಳುಹಿಸಲಾಗುತ್ತದೆ. ಮಸೂದೆಯನ್ನು ಸೆನೆಟ್ ಅನುಮೋದಿಸಿದ ನಂತರ, ಗವರ್ನರ್ ಗೇವಿನ್ ನ್ಯೂಸಮ್ ಅವರಿಗೆ ಕಳುಹಿಸಲಾಗುತ್ತದೆ. ನ್ಯೂಸಮ್ ಸಹಿ ಮಾಡಿದ ನಂತರ ಮಸೂದೆ ಕಾನೂನಾಗಿ ಜಾರಿಯಾಗುತ್ತದೆ.

ಡೆಮಾಕ್ರಟಿಕ್ ಪಕ್ಷದ ಶಾಸಕರಾದ ಸೆನೆಟರ್ ಆಯಿಷಾ ವಹಾಬ್ ಅವರು SB-403 ಬಿಲ್ ಅನ್ನು ರಚಿಸಿ ಮಾರ್ಚ್ 23ರಂದು, ಕ್ಯಾಲಿಫೋರ್ನಿಯಾ ಅಸೆಂಬ್ಲಿಯಲ್ಲಿ ಮಸೂದೆಯನ್ನು ಮಂಡಿಸಿದ್ದರು. ವಹಾಬ್ ರಾಜ್ಯ ಶಾಸಕಾಂಗಕ್ಕೆ ಆಯ್ಕೆಯಾದ ಮೊದಲ ಮುಸ್ಲಿಂ ಮತ್ತು ಅಫ್ಘಾನ್-ಅಮೆರಿಕನ್ ಆಗಿದ್ದಾರೆ. ”ಜಾತಿ ತಾರತಮ್ಯವು ಸಾಮಾಜಿಕ ನ್ಯಾಯ ಮತ್ತು ನಾಗರಿಕ ಹಕ್ಕುಗಳನ್ನು ನಿರಾಕರಿಸುವ ವಿಷಯವಾಗಿದೆ” ಎಂದು ವಿಧೇಯಕವನ್ನು ಮಂಡಿಸುವಾಗ ವಹಾಬ್ ಹೇಳಿದ್ದರು.

ಈ ಬಗ್ಗೆ ಮಾತನಾಡಿರುವ ಈಕ್ವಾಲಿಟಿ ಲ್ಯಾಬ್ಸ್ ಸಂಸ್ಥಾಪಕಿ ಮತ್ತು ಕಾರ್ಯನಿರ್ವಾಹಕ ನಿರ್ದೇಶಕಿ ತೇನ್ಮೋಳಿ ಸೌಂದರರಾಜನ್  ಅವರು, ”ಅಸೆಂಬ್ಲಿ ಮತವು ಯುಗಗಳ ಗೆಲುವಾಗಿದೆ. ಇಡೀ ಕ್ಯಾಲಿಫೋರ್ನಿಯಾ ರಾಜ್ಯದಾದ್ಯಂತ 700ಕ್ಕೂ ಹೆಚ್ಚು ವಕೀಲರು ಸಭೆಗಳನ್ನು ನಡೆಸಿದ ನಂತರ, ಜನರು ಜಾತಿ ಸಮಾನತೆಯ ರಕ್ಷಣೆಗಾಗಿ ಹೋರಾಟಗಳನ್ನು ಮಾಡಿದರು. ನನ್ನ ಇಡೀ ಜೀವನದಲ್ಲಿ ಜಾತಿಯತೆಯನ್ನು ಸಹಿಸಿಕೊಂಡ ಬಂದಿದ್ದೇನೆ. ಜಾತಿ-ದಮನಿತ ಕ್ಯಾಲಿಫೋರ್ನಿಯಾದವರು ಎದುರಿಸಿದ ಅನ್ಯಾಯ ಮತ್ತು ಸಂಕಷ್ಟಗಳನ್ನು ನಾನು ನೋಡಿದ್ದೇನೆ. ಇದರ ವಿರುದ್ಧ ಇಪ್ಪತ್ತು ವರ್ಷಗಳಿಂದ ಜಾತಿ-ದಮನಿತರು ಸಂಘಟಿತರಾಗಿದ್ದಾರೆ, ಆದ್ದರಿಂದ ನಾವು ಹಿಂಸಾತ್ಮಕ ದಾಳಿ ಮತ್ತು ತಾರತಮ್ಯದಿಂದ ಮುಕ್ತವಾಗಿ ಬದುಕಬಹುದು. ಈಗ , ಕ್ಯಾಲಿಫೋರ್ನಿಯಾ ಅಸೆಂಬ್ಲಿ ನಮ್ಮನ್ನು ಗೆಲುವಿನ ಹತ್ತಿರಕ್ಕೆ ತರಲು ನಿರ್ಣಾಯಕವಾಗಿ ಮತ ಹಾಕಿದೆ” ಎಂದು ತೇನ್ಮೋಳಿ ಹೇಳಿಕೊಂಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ನಾನು ಆರ್‌ಎಸ್‌ಎಸ್ ಸದಸ್ಯ, ಕರೆದರೆ ಸಂಸ್ಥೆಗೆ ಹಿಂತಿರುಗಲು ಸಿದ್ಧ..’; ಬೀಳ್ಕೊಡುಗೆ ಸಮಾರಂಭದಲ್ಲಿ ಘೋಷಿಸಿದ ಹೈಕೋರ್ಟ್‌...

0
ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಾಧೀಶರಾಗಿ ಸೋಮವಾರ ನಿವೃತ್ತರಾದ ನ್ಯಾಯಮೂರ್ತಿ ಚಿತ್ತ ರಂಜನ್ ದಾಶ್ ಅವರು, 'ನಾನು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸದಸ್ಯ' ಎಂದು ಹೇಳಿದ್ದಾರೆ. ನ್ಯಾಯಾಧೀಶರು ಮತ್ತು ಬಾರ್‌ ಕೌನ್ಸಿಲ್‌ ಸದಸ್ಯರ ಸಮ್ಮುಖದಲ್ಲಿ...