ಕಳೆದುಹೋದನು ಹೇಗೆ ಪರಶುರಾಮ?

ರಾಮ ರಾಮಾ ರಾಮ ಅಯ್ಯೋ ಶ್ರೀರಾಮಾ ಎಲ್ಲಿರುವನೋ ನನ್ನ ಪರಶುರಾಮ ಮರಳಿ ಕೊಡುವೆಯಾ ಮಗನ ರಾಮ ಶ್ರೀರಾಮಾ ಇಲ್ಲದಿರೆ ನನ್ನನ್ನೂ ಬಲಿ ತೆಗೆದುಕೋ ರಾಮಕೈಯಲ್ಲಿ ಬಂದೂಕು ಹಿಡಿದನಂತೆ ನನ್ನಂಥ ಹೆಣ್ಣನ್ನೇ ಹೊಡೆದನಂತೆ ‘ಅಮ್ಮ’ ಎನ್ನುತ್ತಲೇ ಎದೆ ಸೀಳುವಾಗ ಹೆತ್ತಮ್ಮನನ್ನೇ ಮರೆತಿದ್ದನಂತೆ ಹೇಗೆ ನಂಬಲಿ...

ಕಾದಿದ್ದೇನೆ

ಎಷ್ಟೆಂದು ಬಿಚ್ಚಿಡಲಿ ನನ್ನೊಳಗನ್ನು? ಹೇಗೆ ನಿರೂಪಿಸಲಿ ನನ್ನ ನಂಬಿಕೆಯನ್ನು ಒಂದೊಂದೇ ವಸ್ತ್ರ ಕಳಚಿ ಬೆತ್ತಲಾಗಿಸಿ ದೇಹದ ಇಂಚಿಂಚನ್ನೂ ಭೂತಗನ್ನಡಿಯಲ್ಲಿ ಉಗುರು, ಹಲ್ಲಿನ ಗುರುತಿಗಾಗಿ ತಡಕಾಡುವಾಗ ನಾನು ಹೆಣ್ಣಾದ ನೋವು ಎದೆಯ ಗೀರನ್ನು ಆಳವಾಗಿಸಿದೆಹೆಣ್ಣೆಂಬ ಆಕಾರವೇ ಜೊಲ್ಲು ಸುರಿಸುವಂತಿರುವಾಗ ಮಧ್ಯರಾತ್ರಿಯ ಉಬ್ಬುತಗ್ಗುಗಳ ಕನವರಿಕೆಯಲ್ಲಿ ದಕ್ಕಿಸಿಕೊಂಡ...

ಕವನ | ಕನಸಾಗಿ ಬಿಡಲಿ ಈ ವಾಸ್ತವ

ಗಿರೀಶ್ ತಾಳಿಕಟ್ಟೆ |ಏನಾಗಿದೆ ಈ ದೇಶಕೆ ಎಲ್ಲಿಂದ ಬಂತು ಇಂಥಾ ದುರ್ಬುದ್ಧಿ ಈ ನನ್ನ ನೆಲಕೆ…ಕಿಟಾರನೆ ಚೀರಿಕೊಂಡು ಕೆಟ್ಟ ಕನಸಿಂದ ಹೊರಬರಬೇಕು ಅನಿಸುತಿದೆ ಆದರೆ ಸಾಧ್ಯವಾಗುತಿಲ್ಲ ಯಾಕೆಂದರೆ ಇದು ಕನಸಲ್ಲ.... ವಾಸ್ತವ..!!!ಆ ದೇವರಲಿ ನನ್ನದು ಒಂದೇ ಕೋರಿಕೆ ಈ ವಾಸ್ತವ ಕನಸಾಗಿ ಬಿಡಲಿ ನನ್ನ ಈ ಅನುಭವವೆಲ್ಲ ಗಾಢ ನಿದಿರೆಯಾಗಿಬಿಡಲಿ…ಇಲ್ಲವಾದರೆ ನಾ...

ಕವನ | ಹೋಗಿ, ಬರಬೇಡಿ

ವಿಕಾಸ್ ಆರ್ ಮೌರ್ಯ | ಅತಿಥಿ ದೇವೋಭವ ನಿಮ್ಮ ದೇವಭಾಷೆಯಲ್ಲಿ ನೀವು ಬರೆದಿಟ್ಟುಕೊಂಡಿರಿ ನಮಗೆ ಕೊಟ್ಟಿಗೆಯಲ್ಲಿ ತಂಗಳವೋ, ಹಳಸಿದ್ದೋ ನೀಡಿದಿರಿ ನಾವು ಕಣ್ಣಿಗೊತ್ತಿ ತಿಂದಿದ್ದೆವು ನೀವು ಮನೆಯೊಳಗೆ ಉಣಿಸಿದ ಇತಿಹಾಸವೇ ಇಲ್ಲ ಈಗೇನೋ ನಮ್ಮನೆ ಆತಿಥ್ಯ ಬಯಸಿದ್ದೀರಿ ನಾವು ಬರೆದವರಲ್ಲ, ಬದುಕಿದವರು ಹಸಿವೆಂದು ಬಂದವರಿಗೆ ಹಳಸಿದ್ದನ್ನು ನೀಡೆವು ತಂಗಳಾದರೂ ಸರಿಯೇ ಬಿಸಿ ಮಾಡಿ...

ನೆಲದವ್ವನ ಬಿರುಕು – ಕವನ

ನೆತ್ತರ ಪಾದದ ಚರಿತ್ರೆ ಮುಗಿಯಲೇ ಇಲ್ಲ ನೋವ ಮುಕ್ಕಳಿಸುವ ರಾತ್ರಿಗಳಲ್ಲೂ ಧಣಿಗಳ ಮನೆಯಲ್ಲಿ ಹಬ್ಬದೂಟ...! ಸತ್ತ ನಾಯಿ ಎಳೆವ ನ್ಯಾಯಕ್ಕಾಗಿ ಗುಡಿಸಲಿಗೆ ಬಿದ್ದ ಬೆಂಕಿ ಈಗಲೂ ನನ್ನ ಎದೆಸುಡುತ್ತದೆ..ನ್ಯಾಯ ಎಂಬುದು ನಿಷಿದ್ಧವಾಗಿ ಬಹಳ ಕಾಲವಾಗಿದೆ ಬಂಧೂಕಿನ ನಳಿಕೆಯಲಿ ಮುಗ್ಧರ ಎದೆಸೀಳುವ ಸೀಳುನಾಯಿಗಳೆಲ್ಲಾ ಈಗ ದೇಶಭಕ್ತರ ಪಟ್ಟಕ್ಕೇರಿವೆ ಕೊಂದದ್ದಷ್ಟೇ ಚರಿತ್ರೆಯಾಗಿಸಿ ಮೆರೆದಾಡಿಸುವ ಇಲ್ಲಿ ಅಮಾಯಕರ ನೋವು-ಸಾವು ಯಾರ...

ಪಬ್ಲಿಕ್ ರಂಗಣ್ಣ ಒಂದು `ಕಂಡ’ ಕಾವ್ಯ

ನಂ ಪಬ್ಲಿಕ್ ರಂಗಣ್ಣ ಹ್ಯೇಳಿದ್ರಲ್ಲಿ ತ್ಯೆಪ್ಪೇನೈತಿ? ನೆಪ್ತಿ ಇರುಲಿ ಈ ದ್ಯೇಸದ ಶತಮಾನುದ ಸತ್ಯುವ ಮೊದ್ಲು ನುಡುದುದ್ದೆ ನಂ ರಂಗಣ್ಣ!ಅತ್ತ ಮೋದಿ ಮಹಾತ್ಮ ನೋಟು ಬ್ಯಾನು ಮಾಡುತ್ತಿದ್ದಂಗೆ ಇತ್ತ ರೊಚ್ಚಿಗೆದ್ದ ನಂ ರಂಗಣ್ಣ ಪಬ್ಲಿಕ್ ಮಠದ ಪೀಠವನೇರಿ, ಮಾತು ಬಾರದ ಮುದ್ದು ಸಾದ್ವಿಯ ಮಗ್ಗುಲಿಗೆ ಎಳಕೊಂಡು ಮಾಡಿದ್ದೇ ಮಾಡಿದ್ದು.... ಮಾಡಿದ್ದೇ ಮಾಡಿದ್ದು.... ..... ಇಶ್ಲೇಷಣೆಯ ಕ್ಲಾಸು!ಕೈಯಲ್ಲಿ ಪುಡುಗಾಸು ಹಿಡುದ ಭಾರತ ಬ್ಯಾಂಕು, ಪೋಸ್ಟಾಪೀಸುಗಳ ಮುಂದೆ ನಿಂತು ಟೇಮು...

ನಿನ್ನ ಕೊನೆ ಹತ್ತು ಸೆಕೆಂಡುಗಳು

ಕೆಲವೊಮ್ಮೆ ಅನಿಸುತ್ತೆ ನೀನು ಇಲ್ಲೇ ಇದ್ದೀ ಎಂದಿನಂತೆ ನಿನ್ನ ಬಿಡುವಿಲ್ಲದ ಕೆಲಸದಲ್ಲಿ ಮುಳುಗಿಹೋಗಿದ್ದೀ.. ಅದಕೆಂದೇ ಈ ವಾರ ಮನೆಗೆ ಬರದೇ ಹೋದೀ..ಆದರೆ ಮಿಕ್ಕ ಸಮಯದಲ್ಲೆ ನಿಜ ಮುಖಕ್ಕೆ ರಾಚುತ್ತೆ ನೀನಿನ್ನು ಬರಲ್ಲ ಎಂದೆಂದೆಂದಿಗೂ ಬರಲ್ಲ ಅನ್ನೋ ಕಹಿಸತ್ಯ ಅರಿವಾಗುತ್ತೆ ಹೃದಯ ಕಂಪಿಸುತ್ತೆ ಕಾಲುಗಳು ನಡುಗುತ್ತೆ ಹೊಟ್ಟೆಯೊಳಗೆ ಸಂಕಟವಾಗಿ ಒಳಗಿರೋದೆಲ್ಲಾ ಕಕ್ಕುವಂತಾಗುತ್ತೆ.. ಆದರೆ ನನ್ನಂತೆ...