Homeಸಾಹಿತ್ಯ-ಸಂಸ್ಕೃತಿಕವನಒಂದಿಷ್ಟು ಜಪಾನೀ ಹಾಯ್ಕುಗಳು

ಒಂದಿಷ್ಟು ಜಪಾನೀ ಹಾಯ್ಕುಗಳು

- Advertisement -
- Advertisement -

1.

ಹೂತು ಹೋದ ದೇಗುಲ,
ಸಾವಧಾನವಾಗಿ ಅಗೆಯುವವನ ಜೊತೆ
ಮಾತ್ರ ಹಂಚಿಕೊಳ್ಳುತ್ತದೆ,
ತನ್ನ ಕರುಣಾಜನಕ ಕಥೆಯನ್ನ.
– Basho

2.

ತೊಟ್ಟಿಕ್ಕುತ್ತಿರುವ
ಮಂಜಿನ ಹನಿಗಳನ್ನ ನೋಡಿದರೆ,
ಹೇಗಾದರೂ ಮಾಡಿ
ತೊಳೆದುಬಿಡಬೇಕು ಅನಿಸುತ್ತದೆ,
ಈ ಹೊಲಸು ಜಗತ್ತನ್ನೊಮ್ಮೆ.
– Basho

3.

ಗಜ್ಜರಿ ಕೀಳುತ್ತಿರುವವನು
ದಾರಿ ತೋರಿಸುತ್ತಾನೆ,
ಗಜ್ಜರಿಯಿಂದಲೇ.
– Issa

4.

ಚಳಿಗಾಲದ ಸಂಜೆಗೆ
ಒಂದಿಷ್ಟು ಸಣ್ಣ ಹೊಲಿಗೆ,
ಬೊಂಬೆಯ ಮುಖದಲ್ಲಿ
ಅರಳಿದ ನಗು.
– Ingrid Kunschke

5.

ಹಳೆಯ ತಪ್ಪುಗಳು ಮರುಕಳಿಸುತ್ತಿವೆ
ಹೊಸ ತಪ್ಪುಗಳು ಸೃಷ್ಟಿಯಾಗುತ್ತಿವೆ ಎಂದರೆ
ವಸಂತ ಬಂದಿದೆ ಎಂದೇ ಅರ್ಥ.
– Issa

6.

ಚಳಿಗಾಲದ ಚಂದ್ರನ ಬೆಳಕು
ಒಂದು ನೆರಳಿಗೂ
ಕೈಗಳಿಲ್ಲ.
– Anon

7.

ಮೊದಲೇ ದೀರ್ಘರಾತ್ರಿ,
ಬೊಗಳಿ ಬೊಗಳಿ
ಇನ್ನೂ ಜಗ್ಗಿಬಿಟ್ಟಿತು ನಾಯಿ
– Santoka

8.

ಎಲ್ಲೆಲ್ಲಿ ಮನುಷ್ಯರಿದ್ದಾರೋ
ಅಲ್ಲೆಲ್ಲ ನೊಣಗಳಿವೆ,
ಅಲ್ಲೆಲ್ಲ ಬುದ್ಧರಿದ್ದಾರೆ.
– Issa

9.

ಹುಳುಗಳ ಬಗ್ಗೆ,
ಕೆಲವರು ಹಾಡಬಹುದು,
ಕೆಲವರಿಗೆ ಆಗುವುದಿಲ್ಲ.
– Issa

10.

ಕಾಗೆಗಳನ್ನು ನಕಲು ಮಾಡುವವರು
ಚೆನ್ನಾಗಿ ಕಾಣಿಸುತ್ತಾರೆ,
ಕಾಗೆಗಳಿಗಿಂತ.
– Issa

11.

ಹೂವಿನ ಪಕಳೆಗಳಂತೆ ಕಾಣುವ
ನಿನ್ನೆಯ ಹಿಮ
ಮತ್ತೆ ನೀರಾಗುತ್ತಿದೆ ಕರಗಿ.
– Gozan

12.

ವಸಂತ ನನ್ನ ಪ್ರಕಾರ
ಹೊತ್ತಿಗೆ ಮೊದಲು ಅರಳಿದ ಹೂಗಳು
ಹೃದಯದಲ್ಲಿ.
– Sumitaku Kenshin

13.

ಯಾಕೆ ಇಷ್ಟು ಅವಸರ?
ಎಲ್ಲಿಗೆ ಹೋದರೂ
ಕಾಣಿಸುತ್ತಾನೆ ಅದೇ ಚಂದ್ರ
ಇಂದು.
– Izumi Shikibu

14.

ಎಲ್ಲವೂ ಖಾಲಿ ಎಂದಮೇಲೆ
ಧೂಳು ಬೀಳಲು ಜಾಗ ಎಲ್ಲಿ?
– Hui Neng

15.

ಸೂರ್ಯ ಮುಳುಗಿಹೋದರೂ
ಸಂಜೆಯ ಬೆಳಕು
ಉಳಿದುಕೊಂಡಿದೆ ಇನ್ನೂ ಎಲೆಗಳಲ್ಲಿ
– Nijo Yoshimoto

16.

ಸೇತುವೆ ದಾಟುತ್ತಿದ್ದಾನೆ
ಸೇತುವೆಯನ್ನ,
ಆದರೆ ನದಿಯನ್ನಲ್ಲ.
– Mahasattva Fu

17.

ಒಂಟಿತನ
ಆ ಗಾಢ ಸುಂದರ ಬಣ್ಣ,
ಯಾವುದನ್ನ ಬಣ್ಣಿಸುವುದು
ಅಸಾಧ್ಯವೋ ಅದು.
– Jakuren

18.

ಚಂದ್ರನ ಬೆಳಕು
ಸರಿಯುತ್ತಿದೆ ಪೂರ್ವದತ್ತ,
ಹೂವಿನ ನೆರಳು
ತೆವಳುತ್ತಿದೆ ಪಶ್ಚಿಮದತ್ತ.
– Yosa Buson

19.

ಅಂತಃಕರಣದಿಂದ ನಾನು
ಯಾವುದನ್ನು ಮುಟ್ಟಿದರೂ
ಚುಚ್ಚುತ್ತದೆ
ಕವಳಿ ಕಂಟಿಯಂತೆ.
– Issa

20.

ಬೇಸಿಗೆ ನದಿ,
ಸೇತುವೆಯಿದ್ದರೂ
ನೀರಿನಲ್ಲಿ ಹೆಜ್ಜೆ ಹಾಕುತ್ತಿದೆ
ನನ್ನ ಕುದುರೆ.
– Massoka Shikhi

21.

ದೀಪ ಆರಿದಮೇಲೆ,
ಒಳಗೆ ಬಂದವು
ಕೆಲವು ತಂಪು ನಕ್ಷತ್ರಗಳು
ಕಿಟಕಿ ದಾಟಿ.
– Natsume Soseki

22.

ಆಗಿಂದಾಗ್ಗೆ ಮೋಡಗಳು,
ವಿರಾಮ ನೀಡುತ್ತಿವೆ
ಚಂದ್ರನ ನೋಡುವ ಕಣ್ಣುಗಳಿಗೆ.
– Basho

23.

ಶರತ್ಕಾಲದ ಮುಂಜಾವು,
ನನಗೆ ನನ್ನ ಅಪ್ಪನ ಮುಖ ತೋರಿಸಿತು
ನಾನು ದಿಟ್ಟಿಸಿದ ಕನ್ನಡಿ.
– Murakami Kijo

24.

ಜೀರುಂಡೆಯ ಹಾಡಿನಲ್ಲಿ ಶಬ್ದಗಳಿಲ್ಲ
ಆದರೂ ಯಾಕೋ
ಧ್ವನಿಸುತ್ತಿದೆ ದುಃಖದ ಹಾಡಿನಂತೆ.
– Izumi Shikibu

25.

ಸ್ವರ್ಗ ಮತ್ತು ನರಕ
ಏನೂ ಮಾಡುವುದಿಲ್ಲವಾದರೂ
ಅವು ಮಾಡದಿರುವುದು
ಏನೂ ಇಲ್ಲ.
– Chuang Tzu

26.

ಮೌನ
ಹೃದಯದೊಳಗೆ ದಾಖಲಾಗುತ್ತಿದೆ,
ಆಕಾಶದಲ್ಲಿ ಬಿದಿಗೆಯ ಚಂದ್ರ.
– Chiyo – ni

27.

ಕೊರೆಯುವ ಚಂದ್ರ,
ಚಪ್ಪಲಿ ಕೆಳಗೆ ಮುಟ್ಟಲು ಬಂದ
ಬೆಣಚು ಕಲ್ಲುಗಳು.
– Yosa Buson

28.

ಬೆಟ್ಟದ ಕೆಳಗೆ ಹಲವಾರು ದಾರಿಗಳು,
ಆದರೆ ಬೆಟ್ಟದ ತುದಿಯಿಂದ
ಒಬ್ಬ ಪ್ರಖರ ಚಂದ್ರ ಮಾತ್ರ ಕಂಡ.
– Ikkyu

29.

ಮಸುಕಾದ ಚಂದ್ರನ ಕೆಳಗೆ,
ನನ್ನ ತೋಳುಗಳೇ ನನ್ನ ದಿಂಬು
ನಾನೆಂದರೆ ಪ್ರೀತಿ ನನಗೆ.
– Yosa Buson

30.

ಅಲೆಗಳಿಲ್ಲ ಗಾಳಿಯಿಲ್ಲ
ಖಾಲಿ ದೋಣಿಯ ತುಂಬ
ಉಕ್ಕಿ ಹರಿದ ಬೆಳದಿಂಗಳು.
– Dogen Zenji

31.

ಸ್ವಂತದ್ದು ಏನೂ ಇಲ್ಲದಾಗ
ಎಲ್ಲ ದಾರಿಯೂ
ನಿನ್ನ ಮನೆಯ ದಾರಿಯೇ
– Muso Soseki

32.

ಹರಿದಂತೆಲ್ಲ ತಿಳಿಯಾಗುತ್ತಿದೆ
ರಾಡಿ ನೀರು
– Taneda Santoka

33.

ಜೀರುಂಡೆ!
ನೀನು ಕಾರಣ ಅಲ್ಲ ಆದರೂ
ಹಗಲು ಸಾಗುತ್ತಿದೆ ಕತ್ತಲಿನತ್ತ.
– Den Sute-jo

34.

ಚೆರ್ರಿ ಮರ ಹೂ ಬಿಟ್ಟಾಗ
ಹಕ್ಕಿಗಳಿಗೆ ಎರಡು ಕಾಲುಗಳು
ಕುದುರೆಗಳಿಗೆ ನಾಲ್ಕು.
– Uejima Onitsura

35.

ಸಿದ್ಧರಾಗಿ, ಸಾಯಲು ಸಿದ್ಧರಾಗಿ
ಒಂದೇ ಸಮನೇ ಕೂಗುತ್ತಿವೆ
ಚೆರ್ರಿ ಹೂಗಳು.
– Issa

36.

ಸಮಾಧಾನದ ಸಂಜೆ

ಮೀನಿನ ದೋಣಿ ಹಿಂತಿರುಗಿದೆ,

ಸೂರ್ಯನನ್ನು ತುಂಬಿಕೊAಡು.

– Horiuchi

37.

ಕರಗುವ ವಸ್ತುಗಳೆಲ್ಲ

ಅಮಾಯಕರಂತೆ ವರ್ತಿಸುತ್ತಿವೆ,

ವಸಂತದ ಅಳುಕು.

– Tagami Kikusha

38.

ರಾತ್ರಿಯಿಡೀ ನಿದ್ದೆಯಿಲ್ಲ,

ತುಂಬಿದ ಮಡಿಕೆ

ಬಿರುಕು ಬಿಡುವ ಸದ್ದಿಗೆ.

– ಬಾಶೋ

39.

ಶರತ್ಕಾಲ ಮುಗಿಯುತ್ತ ಬಂದರೂ

ಇನ್ನೂ ಚಿಟ್ಟೆಯಾಗಿಲ್ಲ,

ಈ ಕಂಬಳಿಹುಳು.

– ಬಾಶೋ

40.

ತಂಪು ಚಳಿಗಾಲದ ರಾತ್ರಿಗೆ

ಒಳ್ಳೆಯ ಬೆಂಕಿ ಆಗಬಹುದು,

ಹಳೆಯ ಕಟ್ಟಿಗೆ ತಲೆಯ ಬುದ್ಧ.

– ಬುಸಾನ್

41.

ಬಿರುಸಾಗಿ ಹನೀತಾ ಇರೋದು

ಕ್ಷಣದಲ್ಲೇ ಹಿಮವಾಗೋದು,

ಚಳಿಗಾಲದ ವಿಚಿತ್ರ ವಿನೋದ.

– ಬಾಶೋ

42.

ಮುಂಗಾರು ಮಳೆಯಲ್ಲಿ

ರೌದ್ರಾವತಾರ ತಾಳುತ್ತವೆ,

ಹೆಸರಿಲ್ಲದ ನದಿಗಳು ಕೂಡ.

– ಬುಸಾನ್

43.

ಮತ್ತು ಬರಿಸುವ ಹೂಗಳು,

ದಾರಿ ತಪ್ಪುವುದು

ಪ್ರಯಾಣದ ಒಂದು ಭಾಗ.

– Inahata Teiko

44.

ಹೋಗತ್ತೆ, ಬರತ್ತೆ,

ಪ್ರೀತಿ

ಒಂದು ಬೆಕ್ಕಿನಂತೆ.

– Issa

45.

ಕವಿತೆ ನಮ್ಮ ನಡುವೆ

ಅಸಾಧ್ಯವಾದ

ಒಂದು ಸಂಭಾಷಣೆ.

– Santoka

ಚಿದಂಬರ ನರೇಂದ್ರ

ಚಿದಂಬರ ನರೇಂದ್ರ
ಕವಿ, ಅನುವಾದಕ. ’ಚಿಕ್ಕಿ ತೋರಿಸ್ತಾವ ಚಾಚಿ ಬೆರಳ’, ’ಹೂಬಾಣ’, ’ಗಾಳೀ ಕೆನೆ’ ಪ್ರಕಟಿತ ಕವನ ಸಂಕಲನಗಳು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಣಿಪುರ ಬೆತ್ತಲೆ ಮೆರವಣಿಗೆ: ಗಲಭೆಕೋರರ ಗುಂಪಿಗೆ ಮಹಿಳೆಯರನ್ನು ಒಪ್ಪಿಸಿದ್ದ ಪೊಲೀಸರು, ಚಾರ್ಜ್‌ಶೀಟ್‌ನಲ್ಲಿ ಮಹತ್ವದ ಅಂಶಗಳು...

0
ಮಣಿಪುರ ಹಿಂಸಾಚಾರದ ಸಮಯದಲ್ಲಿ ನಡೆದಿದ್ದ ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ, ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಮಹತ್ವದ ಅಂಶಗಳ ಉಲ್ಲೇಖವಾಗಿದ್ದು, ಮಹಿಳೆಯರನ್ನು ಗಲಭೆಕೋರರ ಗುಂಪಿಗೆ ಪೊಲೀಸರೇ ಒಪ್ಪಿಸಿದ್ದಾರೆ ಎಂದು ತಿಳಿಸಿದೆ. ಪೊಲೀಸರ...