Homeಸಾಹಿತ್ಯ-ಸಂಸ್ಕೃತಿಕವನಭಾಷೆಯ ರದ್ದು: ಮೂರು ಭಾಷೆಗಳನ್ನು ದಾಟಿ ಬಂದ ಕವನ

ಭಾಷೆಯ ರದ್ದು: ಮೂರು ಭಾಷೆಗಳನ್ನು ದಾಟಿ ಬಂದ ಕವನ

- Advertisement -
- Advertisement -

(“ಇತ್ತೀಚೆಗೆ ಭಾಷಾಧಿಪತ್ಯದ ಧೊರಣೆಯ ಬಗ್ಗೆ ರಹೀಂ ಪೊನ್ನಾಡ್ ಬರೆದ ಮಲೆಯಾಳಂ ಕವನಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಬಂದ ಹಿಂದೀ ಅನುವಾದವನ್ನು ನೋಡಿ ತೆಲುಗಿಗೆ ಅನುವಾದ ಮಾಡದೇ ಇರಲು ಸಾಧ್ಯವಾಗಲಿಲ್ಲ” ಎಂದು ಕವನವನ್ನು ತೆಲುಗಿಗೆ ಅನುವಾದ ಮಾಡಿದ ಮುಖಪುಟದ ಗೆಳೆಯ ಎನ್. ವೇಣುಗೋಪಾಲ್ ಬರೆದುಕೊಂಡಿದ್ದಾರೆ. ನನ್ನ ಸ್ಥಿತಿಯು ಸಹಾ ಅಂಥದ್ದೇ ಆಗಿರುವುದರಿಂದ ಕನ್ನಡಾನುವಾದ ನಮ್ಮೆಲ್ಲರಿಗಾಗಿ…)

ಒಂದು ದಿನ ಅರ್ಧ ರಾತ್ರಿ
ಆತ ಭಾಷೆಯ ಮೇಲೆ ನಿಷೇಧವೇರಿದ
‘ಇಂದಿನಿಂದ ಎಲ್ಲರದ್ದೂ ಒಂದೇ ಭಾಷೆ”
ಹಳೇ ಭಾಷಾ ಪದಗಳು ನಿಮ್ಮಲ್ಲಿದ್ದರೆ
ಅಂಚೆ ಕಚೇರಿಯಲ್ಲಿ ಬದಲಾಯಿಸಿ ಕೊಳ್ಳಬಹುದು’
ಎಂಬ ಗಂಭೀರ ಪ್ರಕಟಣೆ ಹೊರಡಿತು

ಅರ್ಧ ನಿದ್ರೆಯಲ್ಲಿದ್ದ ಜನರು
ಬೆಚ್ಚಿಬಿದ್ದು
ಓಟ ಶುರುಮಾಡಿದರು
ಪ್ರತಿಯೊಂದು ಜಾಗದಲ್ಲೂ ನಿಶ್ಶಬ್ಧ
ತಾಯಂದಿರು ಮಕ್ಕಳ ಬಾಯನ್ನು ಕೈಗಳಿಂದ ಮುಚ್ಚಿದ್ದಾರೆ
ಮುದುಕರ ಮುಖಗಳನ್ನು ಬಟ್ಟೆಯಿಂದ ಮರೆಮಾಚಿದ್ದಾರೆ
ದೇವಾಲಯಗಳಲ್ಲಿ ಹಾಡುಗಳು ನಿಂತುಹೋಗಿವೆ
ಮಸೀದಿಯಲ್ಲಿ ಅಜಾನ್ ಸಹಾ ಕೇಳಿಸುತ್ತಿಲ್ಲ
ರೇಡಿಯೋದಲ್ಲಿ ವೀಣಾ ವಾದನೆ ಬಿಟ್ಟರೆ ಮತ್ತೇನೂ ಕೇಳಿಸುತ್ತಿಲ್ಲ
ಟೀವಿ ಪರದೆಯ ಮೇಲೆ ಸನ್ನೆಯ ಭಾಷೆಯಲ್ಲೇ ವಾರ್ತೆಗಳು ಬರುತ್ತಿವೆ
ಪತ್ರಿಕೆಗಳ ಹೆಸರಲ್ಲಿ
ಸಂತೆಗೆ ಬಂದಿರುವುದು ಎಂಟು ಕಾಲಂಗಳು ಖಾಲಿ ಇರುವ ಬಿಳಿ ಕಾಗದಗಳು
ಎಲ್ಲಾ ಕೀಬೋರ್ಡ್‍ಗಳು ಮೌನತಾಳಿವೆ
ಮೊಬೈಲ್ ಸ್ಕ್ರೀನ್‍ಗಳ ಮೇಲೆ
ಗೊಂಬೆಗಳು ಮಾತ್ರ ಉಳಿದಿವೆ

ಅಂಚೆ ಕಚೇರಿಯ ಮುಂದೆ ನಿಶ್ಶಬ್ದವಾಗಿ ನಿಂತ ಉದ್ದನೆಯ ಕ್ಯೂ
ದಿನಕ್ಕೆರಡು ಪದಗಳನ್ನು ಮಾತ್ರ ಬದಲಾಯಿಸಿಕೊಳ್ಳಲು
ಅನುಮೋದನೆ ನೀಡಲಾಗಿದೆ
ಆದರೆ ಕೆಲವರು ಚೀಲಗಳ ತುಂಬಾ ಶಬ್ದಗಳನ್ನು ತುಂಬಿಕೊಂಡು ಬಂದಿದ್ದಾರೆ
ಟಿಫಿನ್ ಬಾಕ್ಸ್‌ಗಳಲ್ಲಿ ಬ್ಯಾಗುಗಳಲ್ಲಿ ಮಾತುಗಳನ್ನು
ತುಂಬಿಕೊಂಡು ಬಂದ ಪುಟಾಣಿ ಮಕ್ಕಳು ಕೂಡಾ ಕ್ಯೂನಲ್ಲಿ ನಿಂತಿದ್ದಾರೆ

‘ಅಮ್ಮ’ ಎಂಬ ಮಾತು ಕೊಟ್ಟವರಿಗೆ
‘ಮಾ’ ಎಂಬ ಮಾತು ಸಿಕ್ಕಿದೆ
‘ಅಪ್ಪ’ ಎಂಬ ಮಾತಿಗೆ
‘ಬಾಪ್‘ ಎಂಬ ಮಾತು ಸಿಕ್ಕಿತು
ಚಾಕೊಲೇಟ್, ಗೇಮ್ ಎಂಬ ಪದಗಳನ್ನು ಬದಲಾಯಿಸಿಕೊಳ್ಳಲು ಬಂದ ಮಕ್ಕಳನ್ನು
ಕೌಂಟರ್‌ನಿಂದ ಕಳುಹಿಸೇಬಿಟ್ಟರು
ಇಲ್ಲಿ ಭಾಷೆಯನ್ನು ಮಾತ್ರ ಬದಲಾಯಿಸಿಕೊಳ್ಳಬಹುದು ಎಂದರು

ಬದಲಾಯಿಸಲು ಶಬ್ಧಗಳಿಲ್ಲ ಎಂಬ ಕಾರಣಕ್ಕಾಗಿ
‘ಅಸಂತೃಪ್ತಿ’ ಎಂಬ ಪದವನ್ನು
‘ಹೆಣದ ವಸ್ತ್ರ’ ಎಂಬ ಪದವನ್ನು ಹಿಂದಕ್ಕೆ ಕಳುಹಿಸಿದರು

‘ಚೂರಿ’ ಪದವನ್ನು ಬದಲಾಯಿಸಲು ಬಂದವರನ್ನು ಓಡಿಸಿಬಿಟ್ಟರು
‘ಮದ್ದುಗುಂಡು’ ಎಂಬ ಪದ ಬದಲಾಯಿಸಿ ಎಂದರೆ
ಪೊಲೀಸರು ಸೆರೆ ಹಿಡಿದರು
ಕ್ಯೂನಲ್ಲಿ ನಿಂತು ನಿಂತು ಸುಸ್ತಾದ ಮುದುಕರು
ಕುಡಿಯಲು ನೀರು ಕೇಳಿದರೆ
ತುಪಾಕಿ ತೋಟಾಗಳಿಂದ ಬಾಯಿ ಮುಚ್ಚಿಸಿದರು

ಇದೆಲ್ಲವನ್ನೂ ನೋಡಿ ನೋಡಿ
ಸಾಕಾಗಿ ಮನೆಗೆ ಬಂದರೆ
ಮನೆ ಅಂಗಳದಲ್ಲಿ ಮಾತುಗಳ ರಾಶಿ ಬಿದ್ದಿದೆ
ಹೊಸ ಪದಗಳು, ಹಳೆ ಪದಗಳು, ಲಿಪಿ ಇಲ್ಲದ ಪದಗಳು
ಬದಲಾಯಿಸಿಕೊಂಡು ತರಬೇಕಾದ ಪದಗಳು

ಮನೆಯವರು ಎಲ್ಲವನ್ನೂ ರಾಶಿರಾಶಿಯಾಗಿ ಸುರಿದಿದ್ದಾರೆ
ಅಪ್ಪ ತನ್ನ ತಲೆದಿಂಬು ಒಳಗಿಂದ ತೆಗೆದ ಪದಗಳು
ನನಗೆ ಅರ್ಥವೇ ಆಗಲಿಲ್ಲ
ಅಮ್ಮ ತನ್ನ ಮಡಿಲಲ್ಲಿ ತುಂಬಿಕೊಂಡಿರುವ ಪದಗಳನ್ನು ನಾನೆಂದೂ ಕೇಳಲೇ ಇಲ್ಲ
ನನ್ನ ಹೆಂಡತಿ ಅಡುಗೆ ಮನೆಯಿಂದ ಎಳೆದುತಂದ ಪದಗಳನ್ನು ನೋಡಿದರೆ
ಅಷ್ಟು ಮಾತುಗಳ ಮಧ್ಯದಲ್ಲೇ ಆಕೆ ಅಡುಗೆ ಮಾಡುತ್ತಿದ್ದಳು ಅನಿಸಿತು
ನನ್ನ ಮಗಳ ಶಾಲೆಯ ಬ್ಯಾಗಿನಲ್ಲಿ ಹೋಂವರ್ಕ್ ಪದಗಳು
ನನ್ನ ಮಗನ ಪೆಟ್ಟಿಗೆಯಲ್ಲಿ ಹರಡಿರುವ ಜೋಷಿನ ಮಾತುಗಳು
ಎಷ್ಟೇ ಪದಗಳಿದ್ದರೂ ಬದಲಾಗಿ ಎರಡೇ ಎರಡು ಮಾತುಗಳು
ಮಾತ್ರ ಸಿಗುತ್ತವೆ ಎಂದು ಹೇಗೆ ಹೇಳಲಿ?

ಆ ಮಾತುಗಳ ಗಂಟಿನಲ್ಲಿ ತುಂಬಾ ಹುಡುಕಿದೆ
ಬಹಳ ಕಷ್ಟಪಟ್ಟ ಮೇಲೆ
ನನ್ನ ಕೈಗೆ ಎರಡು ಪದಗಳು ಸಿಕ್ಕವು
ಇರೋ ಬರೋ ಶಕ್ತಿ ಎಲ್ಲಾ ಬಳಸಿ
ಆ ಮಾತುಗಳನ್ನು ಹೊರಗೆ ಎಳೆದಿದೆ
ಒಂದು “ಪ್ರಜಾತಂತ್ರ” ಮತ್ತೊಂದು “ಬಹುಳ”

ಬೇಗ ಬೇಗ ಓಡಿಹೋಗಿ ಅಂಚೆ ಕಚೇರಿಗೆ ತಲುಪುವ ವೇಳೆಗೆ
ಮುಸ್ಸಂಜೆ ಕತ್ತಲಾಗುತ್ತಿತ್ತು
ನನ್ನ ಕೈಯಲ್ಲಿರುವ ಮಾತುಗಳನ್ನು ನೋಡಿ
ಬೆಚ್ಚಿಬಿದ್ದು ಎದ್ದು ನಿಂತರು
ಕೌಂಟರಿನ ಉದ್ಯೋಗಿಗಳು
ನನ್ನ ಕೈಯಲ್ಲಿನ ಮಾತುಗಳು ಜಾರಿ ಕೆಳಗೆ ಬಿದ್ದವು
ತುಂಬಾ ಜನ ಓಡಿ ಬಂದು ಸುತ್ತುವರೆಯುತ್ತಿರುವಂತೆ ಬೂಟು ಹೆಜ್ಜೆಗಳ ಸದ್ದು ಕೇಳಿಸಿತು
ಪ್ರಜ್ಞೆ ತಪ್ಪಿ ಬೀಳುತ್ತಿರುವ ನನಗೆ
ಎರಡೇ ಎರಡು ‘ಮಾತು’ಗಳು ಕೇಳಿಸಿತು
“ಸಾಯಿಸಿಬಿಡಿ” – “ದೇಶದ್ರೋಹಿಯನ್ನ”

ಮಲೆಯಾಳಂ ಮೂಲ : ರಹೀಮ್ ಪೊನ್ನಾಡ್
ಹಿಂದಿ : ಎ. ಆರ್. ಸಿಂಧು, ವೀಣಾ ಗುಪ್ತ
ತೆಲುಗು : ಎನ್.ವೇಣುಗೋಪಾಲ್
ಕನ್ನಡಾನುವಾದ : ಪದ್ಮಾ ಕೆ ರಾಜ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಈಶಾನ್ಯ ಭಾರತದಲ್ಲಿ ಕೇವಲ ನೂರು ವರ್ಷಗಳಲ್ಲಿ ಚರ್ಚ್ 60ಕ್ಕೂ ಅಧಿಕ ಭಾಷೆಗಳನ್ನು ಕೊಂದು ಇಂಗ್ಲಿಷ್ ಅನ್ನು ಸ್ಥಾಪಿಸಿದಾಗ, ಕೇರಳ ಸರಕಾರ ಕಾಸರಗೋಡಿನಲ್ಲಿ ಸಾವಿರಾರು ತುಳು, ಕನ್ನಡ, ಕೊಂಕಣಿ ಸಂಸಾರಗಳನ್ನು ಓಡಿಸಿದಾಗ ರಹೀಮರು ಕವನ ಬರೆಯಲಿಲ್ಲ!! ಮಂಗಳೂರು, ಚೆನ್ನೈ, ಮುಂಬಯಿ ಮುಂತಾದೆಡೆ ಕನ್ನಡ, ತುಳು, ತಮಿಳು, ಮರಾಠಿ ಭಾಷೆಗಳನ್ನು ಬಿಟ್ಟು ಹಿಡಿದದ್ದು ಹಿಂದಿಯನ್ನಲ್ಲ, ಇಂಗ್ಲಿಷನ್ನು!!! ಅವರ ಸಂಖ್ಯೆ ಈಗ ಶೇಕಡಾ 40 ದಾಟಿದೆ!!! ರಹೀಮರ ಪದ್ಯವನ್ನು ಅವರ ಮುಂದೆ ಓದಿದರೆ ಬಿದ್ದು ಬಿದ್ದು ನಗುತ್ತಾರೆ!!!

LEAVE A REPLY

Please enter your comment!
Please enter your name here

- Advertisment -

ವಿಜಯಪುರ : ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾಗೆ ಚಾಲನೆ

ರಾಜ್ಯದ ಆರು ಜಿಲ್ಲೆಗಳಲ್ಲಿ ನಡೆಯಲಿರುವ ಎಸ್‌ಐಆರ್‌ ವಿರೋಧಿ ಜನಜಾಗೃತಿ ಜಾಥಾಗೆ ವಿಜಯಪುರದ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ (ಜೂ.13) ಸಂಜೆ ಚಾಲನೆ ದೊರೆಯಿತು. ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಅಹಿಂದ ಮುಖಂಡ ಎಸ್ ಎಂ ಪಾಟೀಲ...

ಬಸವಣ್ಣನ ಕಲ್ಯಾಣದಲ್ಲಿ SIR ವಿರೋಧಿ ಜಾಥಾ.

ಬಸವಕಲ್ಯಾಣSIR ವಿರೋಧಿಸಿ ಕರ್ನಾಟಕದಾದ್ಯಂತ ನಡೆಯುತ್ತಿರುವ ಜಾಗೃತಿ ಜಾತಾವು ಬಸವಕಲ್ಯಾಣಕ್ಕೆ ತಲುಪಿತು. ಬಸವಕಲ್ಯಾಣದ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಜನರು ಜನವಿರೋಧಿ SIR ನ್ನೂ ವಿರೋಧಿಸಿ ನಿರ್ಣಯ ಕೈಗೊಂಡರು. ಸಭೆಯಲ್ಲಿ ಮಾತನಾಡಿದ ಜಾಥಾದ ಮುಖ್ಯಸ್ಥ...

ಸಂಸದ ಬಿ.ವೈ ರಾಘವೇಂದ್ರ ನಡೆಸುತ್ತಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ SIR ವಿರೋಧಿ ಜನಜಾಗೃತಿ ಜಾಥಾ ಕರಪತ್ರ ಹಂಚಿದ ಕಾರ್ಯಕರ್ತರು

ಶಿವಮೊಗ್ಗ : ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರು ಜಿಲ್ಲೆಯ ಸಾಗರ ತಾಲ್ಲೂಕಿನ ರೈಲು ನಿಲ್ದಾಣದಲ್ಲಿ ಕುಂದುಕೊರತೆಗಳ ಸಭೆ ನಡೆಸುತ್ತಿದ್ದ ವೇಳೆ ಎಸ್‌ಐಆರ್ ವಿರುದ್ಧ ’ಎದ್ದೇಳು ಕರ್ನಾಟಕ’ ಮತ್ತು ’ಎಸ್‌ಐಆರ್ ವಿರೋಧಿ ಒಕ್ಕೂಟ’ದ ಮುಖಂಡರು...

ಬೀದರ್‌ ನಿಂದ ಶುರವಾದ SIR ವಿರೋಧಿ ಜನಜಾಗೃತಿ ಜಾಥಾ

SIR ವಿರೋಧಿ ಕರ್ನಾಟಕ ಹಾಗೂ ಎದ್ದೇಳು ಕರ್ನಾಟಕವು ಕರ್ನಾಟಕದಲ್ಲಿ SIR ಜಾರಿಯನ್ನು ವಿರೋಧಿಸಿ ರಾಜ್ಯದ 5 ಸ್ಥಳಗಳಿಂದ ಜನಜಾಗೃತಿ ಜಾಥಾ ಆಯೋಜಿಸಿದೆ. ಇಂದು ಬೀದರ್‌ ನ ಅಂಬೇಡ್ಕರ್‌ ಸರ್ಕಲ್‌ ನಿಂದ ಆರಂಭವಾದ ಜಾಥಾವು...

ಒಬ್ಬರೇ ಒಬ್ಬ ಅರ್ಹ ಮತದಾರರ ಹೊರಗಿಡುವುದನ್ನು ಒಪ್ಪುವುದಿಲ್ಲ : ಯೂಸುಫ್ ಕನ್ನಿ

ಮತದಾರರ ಪಟ್ಟಿಯ ಪರಿಷ್ಕರಣೆ ಮಾಡಲಿ, ಆದರೆ, ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬೇಡವೇ ಬೇಡ. ಎಸ್‌ಐಆರ್‌ ಮೂಲಕ ಒಬ್ಬರೇ ಒಬ್ಬರು ಅರ್ಹ ಮತದಾರರನ್ನೂ ಪಟ್ಟಿಯಿಂದ ಹೊರಗಿಡುವುದನ್ನು ನಾವು ಒಪ್ಪುವುದಿಲ್ಲ ಎಂದು ಜಮಾಅತೆ ಇಸ್ಲಾಮಿ...

ಪ್ರಜಾಪ್ರಭುತ್ವದ ರಕ್ಷಣೆಗೆ ಎಸ್‌ಐಆರ್ (SIR) ವಿರುದ್ಧ ಜನಜಾಗೃತಿ ಜಾಥಾಕ್ಕೆ ಶಿವಮೊಗ್ಗದಲ್ಲಿ ಚಾಲನೆ

ಕೇಂದ್ರ ಸರ್ಕಾರದ ಎಸ್‌ಐಆರ್ (SIR) ನೀತಿಯ ವಿರುದ್ಧ ರಾಜ್ಯಾದ್ಯಂತ ಜನವಿರೋಧಿ ಅಲೆ ಎದ್ದಿದೆ. "ಸಂತ-ಶರಣರ ಈ ನಾಡಿನಲ್ಲಿ ಯಾವುದೇ ರೀತಿಯ ದುಷ್ಟ ಆಟ, ಮೋಸ, ವಂಚನೆಗೆ ಅವಕಾಶವಿಲ್ಲ" ಎಂಬ ದೃಢ ಸಂಕಲ್ಪದೊಂದಿಗೆ 'ಎಸ್‌ಐಆರ್...

ಜೂನ್ 13 ರಿಂದ ಕರ್ನಾಟಕದಲ್ಲಿ ‘SIR ವಿರೋಧಿ’ ಜನಜಾಗೃತಿ ಜಾಥ

ರಾಜ್ಯ ಚುನಾವಣಾ ಆಯೋಗವು ಎಸ್‌ಐಆರ್ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ನಾಗರಿಕರ ಆಕ್ಷೇಪಣೆಗಳಿಗೆ ಸ್ಪಂದಿಸದಿರುವ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಹಾಗೂ ‘ಎದ್ದೇಳು ಕರ್ನಾಟಕ’ ಸಂಘಟನೆಯ ವತಿಯಿಂದ ಜೂನ್ 13 ರಿಂದ...

‘ಕಾನೂನು ಪ್ರಕ್ರಿಯೆಯದುರುಪಯೋಗ’: ನ್ಯೂಸ್‌ಕ್ಲಿಕ್ ವಿರುದ್ಧದ ದೆಹಲಿ ಪೊಲೀಸ್, ಇಡಿ ಪ್ರಕರಣಗಳನ್ನು ರದ್ದುಗೊಳಿಸಿದ ಹೈಕೋರ್ಟ್

ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನಿಯಮಗಳ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ನ್ಯೂಸ್‌ಕ್ಲಿಕ್ ಸುದ್ದಿ ಸಂಸ್ಥೆ ಮತ್ತು ಅದರ ಮುಖ್ಯ ಸಂಪಾದಕ ಪ್ರಬೀರ್ ಪುರಕಾಯಸ್ಥ ವಿರುದ್ಧ ದೆಹಲಿ ಪೊಲೀಸರು ಹಾಗೂ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿದ್ದ ಪ್ರಕರಣಗಳನ್ನು ದೆಹಲಿ...

ಕಾಂಗ್ರೆಸ್ ಜೊತೆ ವಿಲೀನ? ಅದೆಲ್ಲ ಬರೀ ಸುಳ್ಳು ಎಂದ ಟಿಎಂಸಿ

ಕಾಂಗ್ರೆಸ್ ಪಕ್ಷದೊಂದಿಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿಲೀನವಾಗಬಹುದು ಎಂಬ ವರದಿಗಳನ್ನು ಟಿಎಂಸಿ ಉನ್ನತ ಮೂಲಗಳು ಬುಧವಾರ (ಇಂದು) ಸಂಪೂರ್ಣವಾಗಿ ತಳ್ಳಿಹಾಕಿವೆ. "ನಮ್ಮ ಪಕ್ಷಕ್ಕೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಮತ್ತು ವಿಲೀನಕ್ಕೆ...

ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕಾರ : ಬಿಜೆಪಿಯ ಸೀಟ್ ಚೋರಿ?

ರಾಜ್ಯಸಭಾ ಚುನಾವಣೆಗೆ ಮಧ್ಯಪ್ರದೇಶದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ಚುನಾವಣಾ ಆಯೋಗ ತಿರಸ್ಕರಿಸಿರುವುದು ದೇಶದಲ್ಲಿ ದೊಡ್ಡ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಕಾಂಗ್ರೆಸ್ ಈ ವಿಚಾರವನ್ನು ಬಹಳ ಗಂಭೀರವಾಗಿ ಪರಿಗಣಿಸಿ ಬುಧವಾರ (ಜೂ. 10)...