Homeಕರ್ನಾಟಕಉನ್ನಾವೊ ಸಂತ್ರಸ್ತರಿಗೆ ನಾಳೆಯೊಳಗೆ ಯುಪಿ ಸರ್ಕಾರ 25 ಲಕ್ಷ ಪರಿಹಾರ ಕೊಡಬೇಕು: ಸುಪ್ರೀಂ ಆದೇಶ

ಉನ್ನಾವೊ ಸಂತ್ರಸ್ತರಿಗೆ ನಾಳೆಯೊಳಗೆ ಯುಪಿ ಸರ್ಕಾರ 25 ಲಕ್ಷ ಪರಿಹಾರ ಕೊಡಬೇಕು: ಸುಪ್ರೀಂ ಆದೇಶ

- Advertisement -
- Advertisement -

ಉನ್ನಾವೊ ಸಂತ್ರಸ್ತ ಕುಟುಂಬಕ್ಕೆ ನಾಳೆಯೊಳಗೆ ಉತ್ತರ ಪ್ರದೇಶ ಸರ್ಕಾರ 25 ಲಕ್ಷ ಪರಿಹಾರ ಕೊಡಬೇಕೆಂದು ಇಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಅಲ್ಲದೇ ಸಂತ್ರಸ್ತೆಯ ಕಾರು ಅಪಘಾತದ ತನಿಖೆಯನ್ನು ಒಂದು ವಾರದೊಳಗೆ ಮುಗಿಸಬೇಕೆಂದು, ಅತ್ಯಾಚಾರದ ತನಿಖೆಯನ್ನು 45 ದಿನದಲ್ಲಿ ಮುಗಿಸಬೇಕೆಂದು ಸಿಬಿಐಗೆ ಸುಪ್ರೀಂ ಕೋರ್ಟ್ ಗಡುವು ವಿಧಿಸಿದೆ.

ರಂಜನ್ ಗಗೋಯಿ ನೇತೃತ್ವದ ಪೀಠ ಇಂದು ಸುಪ್ರೀಂ ಕೋರ್ಟ್ ನಲ್ಲಿ ಧೀರ್ಘ ವಿಚಾರಣೆ ನಡೆಸಿತು. ಸಿಬಿಐ ಪರ ವಕೀಲ ತುಷಾರ್ ಮೆಹ್ತಾ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಬೇಕೆಂಬ ಮನವಿಯನ್ನು ತಳ್ಳಿ ಹಾಕಿ ಫೋನ್ ಮೂಲಕ ಮಾಹಿತಿ ಪಡೆದು ಇಂದೇ ಮಾಹಿತಿ ಒದಗಿಸುವಂತೆ ತಾಕೀತು ಮಾಡಿತು.

ಉನ್ನಾವೊ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ 5 ಪ್ರಕರಣಗಳನ್ನು ಉತ್ತರ ಪ್ರದೇಶದಿಂದ ದೆಹಲಿಗೆ ವರ್ಗಾವಣೆ ಮಾಡಬೇಕೆಂದು ಕೋರ್ಟ್ ಸೂಚಿಸಿದೆ. 2017ರಲ್ಲಿ ಸಂತ್ರಸ್ತೆ ಕೆಲಸ ಮುಗಿಸಿ ಬರುವಾಗ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ನಿಂದ ಲೈಂಗಿಕ ದೌರ್ಜನ್ಯವಾಗಿದೆಯೆಂದು ದೂರಿದ್ದಳು.

ಅಂದಿನಿಂದ ಆಕೆಯ ಮತ್ತು ಆಕೆಯ ಕುಟುಂಬದ ಮೇಲೆ ನಿರಂತರ ದೌರ್ಜನ್ಯ ನಡೆದಿದೆ. ಆಕೆಯ ತಂದೆಯನ್ನು ಕಾನೂನುಬಾಹಿರವಾಗಿ ಶಶಸ್ತ್ರ ಹೊಂದಿದರೆಂಬ ಆರೋಪದಿಂದ ಬಂಧಿಸಲಾಗಿತ್ತು. ಅದಕ್ಕೂ ಮೊದಲು ಅವರಿಗೆ ಶಾಸಕನ ತಮ್ಮ ಅತುಲ್ ಸೆಂಗಾರ್ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರು. ತದನಂತರ ಸಂತ್ರಸ್ತೆಯ ತಂದೆ ಜೈಲಿನಲ್ಲಿಯೇ ಅನುಮಾನಸ್ಪದವಾಗಿ ಸಾವನಪ್ಪಿದ್ದರು. ಭಾನುವಾರ ಸಂತ್ರಸ್ತೆಯು ಉನ್ನಾವೊ ದಿಂದ ಪ್ರಯಾಣಿಸುತ್ತಿರುವಾಗ ರಾಯ್ ಬರೇಲಿಯಲ್ಲಿ ಆಕೆಯ ಕಾರಿಗೆ ಅಪಘಾತವಾಗಿದ್ದು ಆಕೆಯ ಇಬ್ಬರು ಚಿಕ್ಕಮ್ಮಂದಿರು ಸಾವನಪ್ಪಿದ್ದಾರೆ. ಆಕೆಯು ಸಹ ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದಾಳೆ.

ಇಲ್ಲಿ ಪೊಲೀಸರ ಪಕ್ಷಪಾತಿತನ, ಅಧಿಕಾರಿಗಳ ನಿರ್ಲಕ್ಷ್ಯ, ಶಾಸಕನ ಹಣಬಲದಿಂದ ಆರೋಪವನ್ನು ಮುಚ್ಚಿಹಾಕಲು ಪ್ರಯತ್ನಿಸಲಾಗುತ್ತಿರುವುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಈ ಕುರಿತು ದೇಶಾದ್ಯಂತ ಪ್ರತಿಭಟನೆಗಳು ನಡೆದಿದ್ದವು.

” ಉನ್ನಾವೊ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನಡೆ ಸಮಾಧಾನ ತಂದಿದೆ. ಪ್ರಕರಣಗಳನ್ನು ದೆಹಲಿಗೆ ವರ್ಗಾಯಿಸಿರುವುದು, ಅಪಘಾತದ ವಿಚಾರಣೆಯನ್ನು ಒಂದು ವಾರದಲ್ಲಿ, ಅತ್ಯಾಚಾರದ ತನಿಖೆಯನ್ನು ನಲವತ್ತೈದು ದಿನಗಳಲ್ಲಿ ಮುಕ್ತಾಯ ಮಾಡುವುದು…ಎಲ್ಲವೂ. ಆದರೆ ಇವೆಲ್ಲಾ ಆಗೋಕೆ ಆಕೆ ತಂದೆಯನ್ನೂ, ತನ್ನ ಚಿಕ್ಕಮ್ಮಂದಿರಿಬ್ಬರನ್ನೂ ಕಳೆದುಕೊಂಡು ತಾನೂ ಕೋಮಾಗೆ ತಲುಪಬೇಕಾಯ್ತು ಎನ್ನುವುದು ದಿಗಿಲು ಹುಟ್ಟಿಸುವ ಸಂಗತಿ.
ನಮ್ಮ ರಾಜ್ಯದ ಅತೃಪ್ತರೆಂದು ಕರೆದುಕೊಳ್ಳುವ ಶಾಸಕರು ತಮ್ಮ ರಾಜೀನಾಮೆ ಸ್ವೀಕರಿಸುತ್ತಿಲ್ಲವೆಂದು ದಿನಕ್ಕೆರಡು ಬಾರಿ ಸುಪ್ರೀಂ ಕೋರ್ಟ್ ಕದ ತಟ್ಟುವುದು‌ ಕೂಡ ದಿಗಿಲಿನ ಮತ್ತೊಂದು ತುದಿ!” ಎಂದು ರೋಹಿತ್ ಅಗಸರಹಳ್ಳಿ ಪ್ರತಿಕ್ರಿಯಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಉನ್ನಾವ್ ರೇಪ್ ಕೇಸ್ – ಬಿಜೆಪಿಯಿಂದ ಆರೋಪಿ ಶಾಸಕ ಕುಲದೀಪ್ ಸಿಂಗ್ ಉಚ್ಛಾಟನೆ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...