Homeಮುಖಪುಟಪ್ರತ್ಯೇಕ ರಾಜ್ಯ ಹೋರಾಟದಿಂದ ಸಿಎಂ ಗಾದಿಯವರೆಗೆ; 'ಜಾರ್ಖಂಡ್ ಹುಲಿ' ಚಂಪೈ ಸೊರೇನ್

ಪ್ರತ್ಯೇಕ ರಾಜ್ಯ ಹೋರಾಟದಿಂದ ಸಿಎಂ ಗಾದಿಯವರೆಗೆ; ‘ಜಾರ್ಖಂಡ್ ಹುಲಿ’ ಚಂಪೈ ಸೊರೇನ್

- Advertisement -
- Advertisement -

ಅಕ್ರಮ ಭೂ ವರ್ಗಾವಣೆಯ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಜಾರ್ಖಂಡ್ ಮುಕ್ತಿ ಮೋರ್ಚಾ ಮುಖ್ಯಸ್ಥ ಹೇಮಂತ್ ಸೊರೇನ್ ಅವರನ್ನು ಜಾರಿ ನಿರ್ದೇಶನಾಯಕ ಬಂಧಿಸಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿದ ನಂತರ, ಪಕ್ಷವು ಸಾರಿಗೆ ಸಚಿವರಾಗಿದ್ದ ಚಂಪೈ ಸೊರೇನ್ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಿದೆ. ಜಾರ್ಖಂಡ್ ಪ್ರತ್ಯೇಕ ರಾಜ್ಯದ ಹೋರಾಟದಿಂದ ರಾಜಕೀಯ ಜೀವನ ಪ್ರವೇಶಿಸಿದ ಚಂಪೈ ಸೊರೇನ್ ಅವರಿಗೆ, ತಮ್ಮ ಸರ್ಕಾರದ ಬಹುಮತ ಸಾಬೀತುಪಡಿಸಲು 10 ದಿನಗಳ ಕಾಲಾವಕಾಶವಿದೆ.

67 ವರ್ಷದ ಚಂಪೈ ಸೊರೇನ್ ಅವರು 1990ರ ದಶಕದಲ್ಲಿ ಜಾರ್ಖಂಡ್ ರಾಜ್ಯವನ್ನು ರಚಿಸುವ ಹೋರಾಟಕ್ಕೆ ನೀಡಿದ ಮಹತ್ವದ ಕೊಡುಗೆಗಾಗಿ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರು ಅವರನ್ನು “ಜಾರ್ಖಂಡ್ ಹುಲಿ” ಎಂದು ಕರೆಯುತ್ತಾರೆ. ಇದೀಗ ಜಾರ್ಖಂಡ್ ರಾಜ್ಯದ 12ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

90ರ ದಶಕದ ಆರಂಭದಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಮುಖ್ಯಸ್ಥ ಮತ್ತು ಹೇಮಂತ್ ಸೊರೇನ್ ಅವರ ತಂದೆ ಶಿಬು ಸೊರೇನ್ ಅವರೊಂದಿಗೆ ಚಂಪೈ ಕೆಲಸ ಮಾಡಲು ಪ್ರಾರಂಭಿಸಿದರು. 1991ರಲ್ಲಿ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಉಪಚುನಾವಣೆಯಲ್ಲಿ ಸ್ಪರ್ಧಿಸಿ, ಸಾರೈಕೆಲಾ ಸ್ಥಾನವನ್ನು ಗೆಲ್ಲುವ ಮೂಲಕ ರಾಜಕೀಯ ಜೀವನವು ಪ್ರಾರಂಭವಾಯಿತು.

ಸರ್ಕಾರಿ ಶಾಲೆಯಲ್ಲಿ 10ನೇ ತರಗತಿ ಉತ್ತೀರ್ಣರಾದ ಚಂಪೈ ಸೊರೇನ್ ಚಿಕ್ಕ ವಯಸ್ಸಿನಲ್ಲಿ ವಿವಾಹವಾದರು. ಅವರು ನಾಲ್ಕು ಗಂಡು ಮತ್ತು ಮೂರು ಹೆಣ್ಣು ಮಕ್ಕಳನ್ನು ಹೊಂದಿದ್ದಾರೆ. ರಾಜಕೀಯಕ್ಕೆ ಸೇರುವ ಮೊದಲು, ಅವರು ತಮ್ಮ ತಂದೆ ಸಿಮಲ್ ಸೊರೇನ್ ಅವರೊಂದಿಗೆ ಜಮೀನಿನಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದರು.

ಅವರು ಸೆಪ್ಟೆಂಬರ್ 2010 ಮತ್ತು ಜನವರಿ 2013 ರ ನಡುವೆ ಅರ್ಜುನ್ ಮುಂಡಾ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದರು. ಹೇಮಂತ್ ಸೊರೇನ್ 2019ರಲ್ಲಿ ಅಧಿಕಾರಕ್ಕೆ ಬಂದ ನಂತರ, ಚಂಪೈ ಸೊರೇನ್ ಅವರು ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯ ಜತೆಗೆ ಸಾರಿಗೆ ಸಚಿವರಾದರು.

ಅವರು ಜಾರ್ಖಂಡ್‌ನ ಕೊಲ್ಹಾನ್ ಪ್ರದೇಶದ ಆರನೇ ಮುಖ್ಯಮಂತ್ರಿ, ರಾಝ್ಯದ 12ನೇ ಮುಖ್ಯಮಂತ್ರಿಯಾಗಿದ್ದಾರೆ. ಇದು ಪೂರ್ವ ಸಿಂಗ್‌ಭೂಮ್, ಪಶ್ಚಿಮ ಸಿಂಗ್‌ಭೂಮ್ ಮತ್ತು ಸೆರೈಕೆಲಾ-ಖಾರ್ಸಾವಾನ್ ಜಿಲ್ಲೆಗಳನ್ನು ಒಳಗೊಂಡಿದೆ. ಹಿಂದೆ ಜಾರ್ಖಂಡ್ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿ ಸೇವೆ ಸಲ್ಲಿಸಿದ ಅವರು ಪ್ರಮುಖ ಬುಡಕಟ್ಟು ನಾಯಕ ಮತ್ತು ರಾಜಕಾರಣಿ.

“ಜಾರ್ಖಂಡ್‌ನ ಹುಲಿ” ಎಂದು ಕರೆಯಲ್ಪಡುವ ಚಂಪೈ ಸೊರೆನ್ 1990 ರ ದಶಕದಲ್ಲಿ ಪ್ರತ್ಯೇಕ ಜಾರ್ಖಂಡ್ ರಾಜ್ಯ ರಚನೆಯ ಹೋರಾಟದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದರು. ಕೃಷಿಕ ಕುಟುಂಬದಲ್ಲಿ ಜನಿಸಿದ ಚಂಪೈ ಸೊರೆನ್ ತಮ್ಮ ಆರಂಭಿಕ ಶಿಕ್ಷಣವನ್ನು ಸರ್ಕಾರಿ ಶಾಲೆಯಲ್ಲಿ ಪಡೆದರು ಮತ್ತು 10 ನೇ ತರಗತಿಯವರೆಗೆ ಶಿಕ್ಷಣ ಪಡೆದಿದ್ದಾರೆ.

ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ದೊಂದಿಗೆ ತನ್ನನ್ನು ತಾನು ಹೊಂದಿಕೊಂಡು ಪ್ರತ್ಯೇಕ ಜಾರ್ಖಂಡ್ ಬೇಡಿಕೆಯ ಸಮಯದಲ್ಲಿ ಅವರ ರಾಜಕೀಯ ಜೀವನ ಪ್ರಾರಂಭವಾಯಿತು. ಅವರು ಜೆಎಂಎಂ ಅಧ್ಯಕ್ಷ ಶಿಬು ಸೊರೇನ್ ಅವರ ನಿಷ್ಠಾವಂತರು ಎಂದು ಹೇಳಲಾಗುತ್ತದೆ.

81 ಸದಸ್ಯರ ಜಾರ್ಖಂಡ್ ಅಸೆಂಬ್ಲಿಯಲ್ಲಿ, ಜೆಎಂಎಂ ನೇತೃತ್ವದ ಮೈತ್ರಿಕೂಟವು 47 ಶಾಸಕರನ್ನು ಹೊಂದಿದ್ದು, ಜೆಎಂಎಂನಿಂದ 29, ಕಾಂಗ್ರೆಸ್‌ನಿಂದ 17 ಮತ್ತು ಆರ್‌ಜೆಡಿಯ ಒಬ್ಬರು ಶಾಸಕರಿದ್ದಾರೆ. ಬಿಜೆಪಿ 26 ಸದಸ್ಯರನ್ನು ಹೊಂದಿದ್ದರೆ, ಎಜೆಎಸ್‌ಯು ಪಕ್ಷವು ಮೂರು ಸದಸ್ಯರನ್ನು ಹೊಂದಿದೆ. ಹೆಚ್ಚುವರಿಯಾಗಿ, ಎನ್‌ಸಿಪಿ ಮತ್ತು ಸಿಪಿಐ (ಎಂಎಲ್) ತಲಾ ಒಬ್ಬ ಶಾಸಕರನ್ನು ಮತ್ತು ಇಬ್ಬರು ಸ್ವತಂತ್ರರನ್ನು ಹೊಂದಿದೆ.

ಇದನ್ನೂ ಓದಿ; ಮನಿ ಲಾಂಡರಿಂಗ್ ಪ್ರಕರಣ: 5 ದಿನ ಇಡಿ ವಶಕ್ಕೆ ಮಾಜಿ ಸಿಎಂ ಹೇಮಂತ್ ಸೊರೇನ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣಾ ಬಾಂಡ್‌: ಎಸ್ಒಪಿ ಮಾಹಿತಿ ನೀಡಲು ಮತ್ತೆ ನಿರಾಕರಿಸಿದ ಎಸ್‌ಬಿಐ

0
ದೇಶದಲ್ಲಿ ಭಾರೀ ಸದ್ದು ಮಾಡಿದ್ದ ಚುನಾವಣಾ ಬಾಂಡ್‌ಗೆ ಸಂಬಂಧಿಸಿದಂತೆ ಎಸ್‌ಒಪಿ ಮಾಹಿತಿಯನ್ನು ನೀಡಲು ಭಾರತೀಯ ಸ್ಟೇಟ್‌ ಬ್ಯಾಂಕ್‌ ಮತ್ತೆ ನಿರಾಕರಿಸಿದ್ದು, ಕೇಂದ್ರ ಮಾಹಿತಿ ಆಯೋಗಕ್ಕೆ (ಸಿಐಸಿ) ನಿರಾಕರಣೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು ಆರ್‌ಟಿಐ...