Homeಮುಖಪುಟಬಾಲ ಗೃಹದಲ್ಲಿ ಬಾಲಕಿಗೆ ಚಪ್ಪಲಿಯಲ್ಲಿ ಥಳಿತ: ವಿಡಿಯೋ ವೈರಲ್

ಬಾಲ ಗೃಹದಲ್ಲಿ ಬಾಲಕಿಗೆ ಚಪ್ಪಲಿಯಲ್ಲಿ ಥಳಿತ: ವಿಡಿಯೋ ವೈರಲ್

- Advertisement -
- Advertisement -

ಉತ್ತರ ಪ್ರದೇಶದ ಆಗ್ರಾದಿಂದ ಶಾಕಿಂಗ್‌ ವಿಡಿಯೋವೊಂದು ವೈರಲ್ ಆಗಿದ್ದು, ಬಾಲ ಗೃಹದಲ್ಲಿ ಅಪ್ರಾಪ್ತ ಬಾಲಕಿಗೆ ಸುಪರಿಂಡೆಂಟ್‌ ಚಪ್ಪಲಿಯಲ್ಲಿ ಥಳಿಸುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ಈ ಕುರಿತ ವಿಡಿಯೋ ವೀಕ್ಷಿಸಿದ ಜಿಲ್ಲಾಧಿಕಾರಿಗಳು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾ ಪ್ರೊಬೇಷನರಿ ಅಧಿಕಾರಿಗೆ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿಗಳ ಶಿಫಾರಸ್ಸಿನ ಮೇರೆಗೆ ಘಟನೆಗೆ ಸಂಬಂಧಿಸಿ ಮಹಿಳಾ ಕಲ್ಯಾಣ ಇಲಾಖೆಯು ಅದೀಕ್ಷಕಿ ಪೂನಂ ಪಾಲ್ ಅವರನ್ನು ಅಮಾನತುಗೊಳಿಸಲಾಗಿದೆ. ಬಾಲ ಗೃಹಕ್ಕೆ ಜಿಲ್ಲಾ ಪ್ರೊಬೇಷನರಿ ಅಧಿಕಾರಿ ಅಜಯ್‌ ಪಾಲ್‌ ಭೇಟಿ ನೀಡಿದ್ದು, ಮಕ್ಕಳ ಮೇಲಿನ ಈ ರೀತಿಯ ದೌರ್ಜನ್ಯ ಸಹಿಸಲು ಅಸಾಧ್ಯ ಎಂದು ಹೇಳಿದ್ದಾರೆ.

ವೈರಲ್‌ ವಿಡಿಯೋದಲ್ಲಿ ಬಾಲಕಿ ಬೆಡ್‌ ಮೇಲೆ ಮಲಗಿರುವುದು ಕಂಡು ಬಂದಿದೆ. ಈ ವೇಳೆ ಬಂದ ಅಧೀಕ್ಷಕಿ ಬಾಲಕಿಗೆ ಚಪ್ಪಲಿಯಲ್ಲಿ ಮನ ಬಂದಂತೆ ಥಳಿಸುವುದು ಕಂಡು ಬಂದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಪೂನಂ ಪಾಲ್, ನಾನು ಡಿಪಿಒ ಅಜಯ್ ಪಾಲ್ ಸಿಂಗ್ ಅವರಿಗೆ ಈ ಕುರಿತು ವಿವರವನ್ನು ನೀಡಿದ್ದೇನೆ. ನಾನು ಈ ಬಗ್ಗೆ ಬೇರೆ ಏನೂ ಹೇಳುವುದಿಲ್ಲ ಎಂದು  ಹೇಳಿದ್ದಾರೆ.

ಬಾಲಕಿ ಇತರ ಪುಟ್ಟ ಮಕ್ಕಳನ್ನು ಜೊತೆಯಲ್ಲಿ ಕೂರಿಸಿಕೊಂಡು ಪೆಟ್ಟಿಗೆಯೊಂದರಲ್ಲಿ ಅಡಗಿ ಕುಳಿತುಕೊಳ್ಳುತ್ತಿದ್ದಳು. ಬಾಲಕಿ ಇತರ ಮಕ್ಕಳಿಗಿಂತ ದೊಡ್ಡವಳಾಗಿದ್ದಳು. ಈ ರೀತಿಯ ಅಪಾಯಕಾರಿ ಆಟ ಮಕ್ಕಳ ಪ್ರಾಣಕ್ಕೆ ಪ್ರಾಣಕ್ಕೆ ಕುತ್ತು ತರುವ ಸಾಧ್ಯತೆ ಇದ್ದು ಅದಕ್ಕೆ ಥಳಿಸಿರುವುದಾಗಿ ಹೇಳಿದ್ದಾರೆ ಎಂದು ಡಿಪಿಒ ಹೇಳಿದ್ದಾರೆ.

ಅಧೀಕ್ಷಕಿ ಮಕ್ಕಳಿಗೆ ಬುದ್ದಿ ಹೇಳಲು ಈ ರೀತಿ ಮಾಡಿದ್ದಾರೆ. ಆದರೆ ಅವರು ಕೋಪಗೊಂಡು ಚಪ್ಪಲಿಯಲ್ಲಿ ಥಳಿಸಿದ್ದಾರೆ. ಆದರೆ ಚಪ್ಪಲಿಯಲ್ಲಿ ಥಳಿಸಿರುವುದನ್ನು ಯಾವುದೇ ರೀತಿಯಲ್ಲಿ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಬಾಲ ಗೃಹದ ಇತರ ಸಿಬ್ಬಂದಿಗಳು ಸೆಪ್ಟೆಂಬರ್ 11 ರಂದು ಆಗ್ರಾದ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿಗೆ ಸಲ್ಲಿಸಿದ ಪತ್ರದಲ್ಲಿ ಅಧೀಕ್ಷಕಿ  ಪೂನಂ ಪಾಲ್,  ಸಿಬ್ಬಂದಿಗಳು  ಮತ್ತು ಮಕ್ಕಳ ಜೊತೆ ಅನುಚಿತವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ಇದನ್ನು ಓದಿ: ಕೇಂದ್ರ ಸಚಿವರನ್ನು ಪಕ್ಷದ ಕಚೇರಿಯಲ್ಲಿ ಕೂಡಿ ಹಾಕಿದ ಬಿಜೆಪಿ ಕಾರ್ಯಕರ್ತರು

 

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read