Homeರಂಜನೆಕ್ರೀಡೆಕಾಮನ್‌ವೆಲ್ತ್ ಕ್ರೀಡಾಕೂಟ 2022: ವೇಟ್ ಲಿಫ್ಟಿಂಗ್‌ನಲ್ಲಿ ಚಿನ್ನದ ಪದಕದ ಸನಿಹ ಸಂಕೇತ್ ಸರ್ಗರ್

ಕಾಮನ್‌ವೆಲ್ತ್ ಕ್ರೀಡಾಕೂಟ 2022: ವೇಟ್ ಲಿಫ್ಟಿಂಗ್‌ನಲ್ಲಿ ಚಿನ್ನದ ಪದಕದ ಸನಿಹ ಸಂಕೇತ್ ಸರ್ಗರ್

- Advertisement -
- Advertisement -

ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯಲಿರುವ ಕಾಮನ್ ವೆಲ್ತ್ ಕ್ರೀಡಾಕೂಟದ ಎರಡನೇ ದಿನವಾದ ಇಂದು ಭಾರತಕ್ಕೆ ಹಲವು ಪದಕಗಳು ಲಭಿಸುವ ನೀರಿಕ್ಷೆಯಿದೆ. 55 ಕೆಜಿ ವಿಭಾಗದ ವೇಟ್ ಲಿಫ್ಟಿಂಗ್‌ನಲ್ಲಿ 113 ಕೆಜಿ ಭಾರ ಎತ್ತಿರುವ ಭಾರತದ ಸ್ಪರ್ಧಿ ಸಂಕೇತ್ ಸರ್ಗರ್ ಚಿನ್ನದ ಪದಕದ ಸನಿಹದಲ್ಲಿದ್ದಾರೆ. ಅವರು ತಮ್ಮ ಎರಡನೇ ಮತ್ತು ಮೊದಲ ಪ್ರಯತ್ನದಲ್ಲಿ 111 ಕೆಜಿ ಮತ್ತು 107 ಕೆಜಿ ಎತ್ತಿದ್ದರು.

ಇಂದು ಸ್ಟಾರ್ ವೇಟ್ ಲಿಫ್ಟರ್ ಮೀರಾಭಾಯಿ ಚಾನು ರವರು ಭಾರತದ ಪರವಾಗಿ ಕಣಕ್ಕಿಳಿದಿದ್ದಾರೆ. ಟೋಕಿಯೋ ಒಲಂಪಿಕ್ಸ್ ನ ಬೆಳ್ಳಿ ವಿಜೇತೆ ಆಗಿರುವ ಚಾನು ಕಾಮನ್ ವೆಲ್ತ್ ನ ಪದಕವನ್ನು ಗೆಲ್ಲುವ ಫೆವರೀಟ್‌ಗಳಲ್ಲಿ ಒಬ್ಬರಾಗಿದ್ದಾರೆ.

ಭಾರತದ ಶ್ರೀ ಹರಿ ನಟರಾಜ್ ಪುರುಷರ ವಿಭಾಗದ 100 ಮೀ ಬ್ಯಾಕ್ ಸ್ಟ್ರೋಕ್ ಈಜು ಸ್ಪರ್ಧೆಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದು ಪದಕದ ಭರವಸೆ ಮೂಡಿಸಿದ್ದಾರೆ. ಶುಕ್ರವಾರದ ಪಂದ್ಯದಲ್ಲಿ 54.68. ಸೆ.ಗಳೊಂದಿಗೆ 3 ನೇ ಸ್ಥಾನ ಹಾಗೂ ಪಂದ್ಯದಲ್ಲಿ ಒಟ್ಟಾರೆ 5 ನೇ ಸ್ಥಾನ ಪಡೆದು ಸೆಮಿಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

ಮಹಿಳಾ ಬಾಕ್ಸರ್ ಟೋಕಿಯೊ ಒಲಂಪಿಕ್ಸ್ ನಲ್ಲಿ ಕಂಚು ಮತ್ತು 2018 ಮತ್ತು 2019 ರ ವಿಶ್ವ ಚಾಂಪಿಯನ್ ಷಿಪ್ ನಲ್ಲಿ ಬೆಳ್ಳಿ ಪದಕ ಪಡೆದಿರುವ ಲವ್ಲೀನಾ ಬೊರ್ಗೊಹೈನ್ ಕಾಮನ್ ವೆಲ್ತ್ ಗೇಮ್ಸ್ ನ ಬಾಕ್ಸಿಂಗ್ ತಂಡದ ನೇತೃತ್ವ ವಹಿಸಿಕೊಂಡಿದ್ದು ಸ್ವರ್ಣ ಪದಕ ಗೆದ್ದುಕೊಡಬಲ್ಲ ನಿರೀಕ್ಷೆ ಹುಟ್ಟಿಸಿದ್ದಾರೆ.

ಇದನ್ನೂ ಓದಿ: ಟಿ20ಯಲ್ಲಿ ದಾಖಲೆ ಬರೆದ ನಾಯಕ ರೋಹಿತ್ ಶರ್ಮಾ: ವೆಸ್ಟ್…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬೈಕ್‌ನಲ್ಲಿ ಓವರ್‌ಟೇಕ್ ಮಾಡಿದ್ದಕ್ಕೆ ದಲಿತ ಯುವಕನನ್ನು ಮರಕ್ಕೆ ಕಟ್ಟಿ ಥಳಿತ: ಅವಮಾನ ತಾಳಲಾರದೆ ಆತ್ಮಹತ್ಯೆ

0
ಬೈಕ್‌ನಲ್ಲಿ ಓವರ್‌ಟೇಕ್ ಮಾಡಿದ ಎಂಬ ಕ್ಷುಲ್ಲಕ ಕಾರಣಕ್ಕೆ ದಲಿತ ಯುವಕನ ಬೈಕ್ ಮತ್ತು ಮೊಬೈಲ್ ಕಿತ್ತುಕೊಂಡು ಸವರ್ಣೀಯರು ಮರಕ್ಕೆ ಕಟ್ಟಿ ಥಳಿಸಿರುವ ಮತ್ತು ಆ ಯುವಕ ಅವಮಾನ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ಜಾತಿ...