Homeಮುಖಪುಟಮಹಿಳಾ ನಾಯಕಿ ಬಟ್ಟೆಗೆ ಕೈಹಾಕಲು ಆತನಿಗೆಷ್ಟು ಧೈರ್ಯ..?- ಬಿಜೆಪಿಯ ಚಿತ್ರಾ ವಾಘ್ ಆಕ್ರೋಶ

ಮಹಿಳಾ ನಾಯಕಿ ಬಟ್ಟೆಗೆ ಕೈಹಾಕಲು ಆತನಿಗೆಷ್ಟು ಧೈರ್ಯ..?- ಬಿಜೆಪಿಯ ಚಿತ್ರಾ ವಾಘ್ ಆಕ್ರೋಶ

ಘಟನೆ ಕುರಿತು ಗೌತಮ್ ಬುದ್ಧ ನಗರ ಪೊಲೀಸರು ಪ್ರಿಯಾಂಕಾ ಗಾಂಧಿಯವರಲ್ಲಿ ಕ್ಷಮೆಯಾಚಿಸಿದ್ದಾರೆ. ಅಲ್ಲದೇ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.

- Advertisement -
- Advertisement -

ಹತ್ರಾಸ್ ಸಂತ್ರಸ್ತ ಕುಟುಂಬವನ್ನು ಭೇಟಿಯಾಗಲು ಹೊರಟಿದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಮೇಲೆ ಕಳೆದ ಗುರುವಾರ ಉತ್ತರ ಪ್ರದೇಶ ಪೊಲೀಸರ ಹಲ್ಲೆ, ಅಧಿಕಾರಿಗಳ ವರ್ತನೆ ಭಾರಿ ಟೀಕೆಗೆ ಗುರಿಯಾಗಿತ್ತು.

ಎರಡನೇ ಬಾರಿಗೆ ಪ್ರಿಯಾಂಕಾ ಗಾಂಧಿ ವಾದ್ರಾ ಹತ್ರಾಸ್‌ಗೆ ತೆರಳುವಾಗ ದೆಹಲಿ-ಯುಪಿ ಗಡಿಯಲ್ಲಿ ಅವರ ಕುರ್ತಾ(ಬಟ್ಟೆ) ಹಿಡಿದುಕೊಂಡಿದ್ದ ಪೊಲೀಸ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಈ ಚಿತ್ರ ವೈರಲ್ ಆಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಮೇಲೆ ಒತ್ತಡ ಉಂಟುಮಾಡಿತ್ತು.

ಮಹಾರಾಷ್ಟ್ರ ಬಿಜೆಪಿಯ ಉಪಾಧ್ಯಕ್ಷೆ ಚಿತ್ರಾ ವಾಘ್ ಪ್ರಿಯಾಂಕಾ ಗಾಂಧಿಯವರ ಮೇಲೆ ನಡೆದ ಹಲ್ಲೆ ಮತ್ತು ದೌರ್ಜನ್ಯಕ್ಕೆ ಆಕ್ರೋಶ ಹೊರಹಾಕಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಚಿತ್ರಾ ವಾಘ್ ”ಮಹಿಳಾ ನಾಯಕಿಯ ಬಟ್ಟೆಗೆ ಕೈಹಾಕಲು ಪುರುಷ ಪೊಲೀಸರಿಗೆ ಎಷ್ಟು ಧೈರ್ಯ..? ಎಂದು ಪ್ರಶ್ನಿಸಿದ್ದಾರೆ. ಪೊಲೀಸರು ಮಹಿಳೆಯರ ಘನತೆ ಬಗ್ಗೆ ಕಾಳಜಿವಹಿಸಬೇಕು. ಭಾರತೀಯ ಸಂಸ್ಕೃತಿಯನ್ನು ನಂಬುವ ಮುಖ್ಯಮಂತ್ರಿ ಆದಿತ್ಯನಾಥ್ ಈ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಹತ್ರಾಸ್ ಸಂತ್ರಸ್ತ ಕುಟುಂಬ ಕೇಳುತ್ತಿರುವುದೇನು?: 5 ಪ್ರಶ್ನೆಗಳನ್ನು ಮುಂದಿಟ್ಟ ಪ್ರಿಯಾಂಕ ಗಾಂಧಿ

 

ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸಂತ್ರಸ್ತ ಯುವತಿಯ ಕುಟುಂಬವನ್ನು ಭೇಟಿ ಮಾಡಲು ಪ್ರಿಯಾಂಕಾ ಗಾಂಧಿ ಮತ್ತು ಅವರ ಸಹೋದರ ರಾಹುಲ್ ಗಾಂಧಿ ಸೇರಿದಂತೆ ಇತರ ಕಾಂಗ್ರೆಸ್ ಮುಖಂಡರು ಶನಿವಾರ ಮಧ್ಯಾಹ್ನ ಹತ್ರಾಸ್‌ಗೆ ತೆರಳುತ್ತಿದ್ದಾಗ ಪೊಲೀಸರು ಅವರನ್ನು ತಡೆದಿದ್ದರು.

ದೆಹಲಿ-ಯುಪಿ ಗಡಿಯಲ್ಲಿ  ಕಾಂಗ್ರೆಸ್ ಕಾರ್ಯಕರ್ತರು ಮತ್ತು ಗೌತಮ್ ಬುದ್ಧ ನಗರ (ನೋಯ್ಡಾ) ಪೊಲೀಸರ ನಡುವೆ ಜಟಾಪಟಿ ಸಂಭವಿಸಿತ್ತು. ಘಟನೆಯಲ್ಲಿ ಪೊಲೀಸರು ಕಾರ್ಯಕರ್ತರ ಮೇಲೆ ಲಾಠಿಚಾರ್ಜ್ ಮಾಡಲು ಮುಂದಾದಾಗ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ತಮ್ಮ ಕಾರ್ಯಕರ್ತರ ರಕ್ಷಣೆಗೆ ಮುಂದಾಗಿದ್ದರು. ಈ ಸಮಯದಲ್ಲಿ ಹೆಲ್ಮೆಟ್ ಧರಿಸಿದ ಪೊಲೀಸರು ಡಿಎನ್‌ಎ ಟೋಲ್ ಪ್ಲಾಜಾ ಬಳಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಧರಿಸಿದ್ಧ ಕುರ್ತಾಕ್ಕೆ ಕೈ ಹಾಕಿ ಹಿಡಿದಿದ್ದರು.

ಇದನ್ನೂ ಓದಿ: ಹತ್ರಾಸ್: ಕೊನೆಗೂ ಸಂತ್ರಸ್ತೆಯ ಮನೆ ತಲುಪಿದ ರಾಹುಲ್ ಗಾಂಧಿ-ವಿಡಿಯೋ ನೋಡಿ

ಹಿಂದಿ ಭಾಷೆಯಲ್ಲಿ ಟ್ವೀಟ್‌ ಮಾಡಿರುವ ಬಿಜೆಪಿ ನಾಯಕಿ ಚಿತ್ರಾ ವಾಘ್, “ಮಹಿಳಾ ರಾಜಕೀಯ ನಾಯಕಿಯ ಬಟ್ಟೆಗಳ ಮೇಲೆ ಪುರುಷ ಪೊಲೀಸ್ ಅಧಿಕಾರಿ ಕೈ ಹಾಕಲು ಎಷ್ಟು ಧೈರ್ಯ!” ಪೊಲೀಸರು ಯಾವಾಗಲೂ ತಮ್ಮ ಮಿತಿಗಳನ್ನು ಗಮನದಲ್ಲಿರಿಸಿಕೊಳ್ಳಬೇಕು’ ಎಂದಿದ್ದಾರೆ.

“ಭಾರತೀಯ ಸಂಸ್ಕೃತಿಯನ್ನು ನಂಬುವ ಯೋಗಿ ಆದಿತ್ಯನಾಥ್ ಜಿ, ಅಂತಹ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ. ಟ್ವೀಟ್ ಜೊತೆಗೆ, ಪ್ರಿಯಾಂಕಾ ಗಾಂಧಿಯವರ ಬಟ್ಟೆಯನ್ನು ಪೊಲೀಸ್ ಸಿಬ್ಬಂದಿ ಹಿಡಿದು ಎಳೆಯುತ್ತಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.

ಬಿಜೆಪಿ ನಾಯಕಿಯ ನಿಲುವನ್ನು ಮಹಾರಾಷ್ಟ್ರ ಯುವ ಕಾಂಗ್ರೆಸ್ ಮುಖ್ಯಸ್ಥ ಸತ್ಯಜಿತ್ ತಂಬೆ ಶ್ಲಾಘಿಸಿದ್ದಾರೆ.

 

ಕಳೆದ ವರ್ಷ ಬಿಜೆಪಿಗೆ ಸೇರಲು ಎನ್‌ಸಿಪಿಯನ್ನು ತೊರೆದ ಚಿತ್ರ ವಾಘ್ ಅವರು ತಮ್ಮ ಪಕ್ಷವನ್ನು ಬದಲಾಯಿಸಿದರೂ ತಮ್ಮ “ಸಂಸ್ಕಾರ” ಕ್ಕೆ ಅಂಟಿಕೊಂಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ತನಿಖೆಗೆ ಆದೇಶ

ಘಟನೆ ನಡೆದ ನಂತರ ಹಲ್ಲೆಯ ಚಿತ್ರಗಳು ಮತ್ತು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು, ರಾಜ್ಯ ಸರ್ಕಾರ ಮತ್ತು ಪೊಲೀಸರ ವಿರುದ್ಧ ವ್ಯಾಪಕ ಟೀಕಗಳು ಕೇಳಿಬಂದಿವೆ. ಹಾಗಾಗಿ ಗೌತಮ್ ಬುದ್ಧ ನಗರ ಪೊಲೀಸರು ಪ್ರಿಯಾಂಕಾ ಗಾಂಧಿಯವರಲ್ಲಿ ಕ್ಷಮೆಯಾಚಿಸಿದ್ದಾರೆ. ಅಲ್ಲದೇ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ ಎಂದು ತಿಳಿದುಬಂದಿದೆ.


ಇದನ್ನೂ ಓದಿ: ಅಡೆತಡೆ ದಾಟಿ ಹತ್ರಾಸ್ ತಲುಪಿದ ಭೀಮ್‌ ಆರ್ಮಿ ಆಜಾದ್‌ಗೆ ಠಾಕೂರ್ ಯುವಕರಿಂದ ಬಹಿರಂಗ ಬೆದರಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೆರಿಕದ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಬಗ್ಗೆ ಸ್ಯಾಮ್ ಪಿತ್ರೋಡಾ ಕೊಟ್ಟಿದ್ದ ವಿವರಣೆಯನ್ನು ‘ರಾಜಕೀಯ ಅಸ್ತ್ರ’...

0
ಲೋಕಸಭೆ ಚುನಾವಣೆ ಹಿನ್ನೆಲೆ ಪ್ರಧಾನಿ ಮೋದಿ ಹಾದಿಯಾಗಿ ಬಿಜೆಪಿ ನಾಯಕರು ವಿವಾದಾತ್ಮಕ ಹೇಳಿಕೆ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಮತ್ತು ಕಾಂಗ್ರೆಸ್‌ನ ಪ್ರಣಾಳಿಕೆ ವಿರುದ್ಧ ವಾಗ್ಧಾಳಿ ನಡೆಸುತ್ತಾ ಬಂದಿದ್ದಾರೆ. ಈ ಮಧ್ಯೆ ಭಾರತೀಯ ಸಾಗರೋತ್ತರ...