ಸಿಬಿಐ
PC: News First

ಇಂದು ಬೆಳ್ಳಂಬೆಳಿಗ್ಗೆಯ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ನಿವಾಸಗಳ ಮೇಲೆ ಭ್ರಷ್ಟಾಚಾರ ಆರೋಪದಲ್ಲಿ ಸಿಬಿಐ ದಾಳಿ ನಡೆಸಿದೆ. ಈ ದಾಳಿಯನ್ನು ಕಾಂಗ್ರೆಸ್ ಪಕ್ಷವು ತೀವ್ರವಾಗಿ ಖಂಡಿಸಿದ್ದು, ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದೆ.

ಕಾಂಗ್ರೆಸ್ ಪಕ್ಷದ ಕರ್ನಾಟಕ ರಾಜ್ಯದ ಉಸ್ತುವಾರಿಗಳಾದ ರಣದೀಪ್ ಸಿಂಗ್ ಸುರ್ಜೇವಾಲ, “ಮೋದಿ-ಯಡಿಯೂರಪ್ಪ ಜೋಡಿಯು ಕುತಂತ್ರಗಳ ಮೂಲಕ ಬೆದರಿಕೆ ಹಾಕುತ್ತಿದೆ. ತನ್ನ ಕೈಗೊಂಬೆ ಸಿಬಿಐ ಮೂಲಕ ಡಿಕೆ ಶಿವಕುಮಾರ್ ನಿವಾಸಗಳ ಮೇಲೆ ದಾಳಿ ಮಾಡಿಸುತ್ತಿದೆ. ಇದರಿಂದ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಸಿಬಿಐ ಮೊದಲು ಯಡಿಯೂರಪ್ಪ ಸರ್ಕಾರದ ಭ್ರಷ್ಟಾಚಾರಗಳನ್ನು ಕಂಡುಹಿಡಿಯಬೇಕು. ಆದರೆ ಈ ದಾಳಿಯು ಕುತಂತ್ರದ ನಡೆಯಷ್ಟೇ” ಎಂದು ಟ್ವೀಟ್ ಮಾಡಿದ್ದಾರೆ.

“ಮೋದಿ ಮತ್ತು ಯಡಿಯೂರಪ್ಪ ಸರ್ಕಾರಗಳ ಮತ್ತು ಬಿಜೆಪಿಯ ಮುಂಚೂಣಿಯ ಸಂಸ್ಥೆಗಳಾದ ಸಿಬಿಐ-ಇಡಿ-ಆದಾಯ ತೆರಿಗೆ ಇಲಾಖೆಯ ಇಂತಹ ಪ್ರಯತ್ನಗಳಿಗೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರು ತಲೆಬಾಗುವುದಿಲ್ಲ ಅಥವಾ ಮಂಡಿಯೂರುವುದಿಲ್ಲ ಎಂದು ತಿಳಿಯಲಿ” ಎಂದು ಅವರು ಕಿಡಿಕಾಡಿದ್ದಾರೆ.

ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ನಿವಾಸಗಳ ಮೇಲೆ ಸಿಬಿಐ ದಾಳಿ

“ಪ್ರಬಲ ಪ್ರಾದೇಶಿಕ ರಾಜ್ಯ ನಾಯಕರನ್ನು ಗುರಿಯಾಗಿಸುವುದು ಬಿಜೆಪಿ / ಆರ್‌ಎಸ್‌ಎಸ್ ಸಂಯೋಜನೆಯ ಕಾರ್ಯತಂತ್ರದ ಒಂದು ಭಾಗವಾಗಿದೆ. ಡಿಕೆ ಶಿವಕುಮಾರ್ ಗಟ್ಟಿ ಮನುಷ್ಯ, ಅವರು ತಮ್ಮ ಆರೋಪದಿಂದ ಮುಕ್ತರಾಗುತ್ತಾರೆ” ಎಂದು ಕಾಂಗ್ರೆಸ್‌ ನಾಯಕ ದಿಗ್ವಿಜಯ್ ಸಿಂಗ್ ಟ್ವೀಟ್ ಮಾಡಿದ್ದಾರೆ.

“ಸಿಬಿಐ ಈಗ ಕೇಂದ್ರ ಬೆದರಿಕಾ ದಳವಾಗಿ ಮಾರ್ಪಟ್ಟಿದೆ” ಎಂದು ಜೈರಾಮ್ ರಮೇಶ್ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಪಕ್ಷ ನಾಯಕ ಸಿದ್ದರಾಮಯ್ಯ, “ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್‌ ಮನೆ ಮೇಲೆ ನರೇಂದ್ರ ಮೋದಿ ಸರ್ಕಾರ ನಡೆಸಿರುವ ಸಿಬಿಐ ದಾಳಿ ರಾಜಕೀಯ ದುಷ್ಟತನದ ಪರಮಾವಧಿ. ಇದು ಕಾಂಗ್ರೆಸ್ ಪಕ್ಷವನ್ನು ರಾಜಕೀಯವಾಗಿ ಎದುರಿಸಲಿಕ್ಕಾಗದ BJP ನಾಯಕರ ನೈತಿಕ ದಿವಾಳಿತನವನ್ನು ತೋರಿಸುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕೊರೊನಾದಿಂದ ದೇವರೆ ಕಾಪಾಡುವುದಾದರೆ ನೀವು ಯಾಕೆ ? ರಾಜಿನಾಮೆ ಕೊಟ್ಟು ಹೋಗಿ: ಡಿ. ಕೆ. ಶಿವಕುಮಾರ್‌

ಸಿಬಿಐ ದಾಳಿ ಎಂಬುದು ಬಿಜೆಪಿಯ ಶಾಶ್ವತ ಚುನಾವಣಾ ಪ್ರಕ್ರಿಯೆ ಆಗಿದೆ. ಉಪ ಚುನಾವಣೆಯ ಸೋಲುವ ಭೀತಿ ಬಿಜೆಪಿಯಿಂದ ಏನೆಲ್ಲ ಮಾಡಿಸುತ್ತಿದೆ.! ದ್ವೇಷ ರಾಜಕಾರಣದ ಸಿಬಿಐ ದಾಳಿಯನ್ನು ಖಂಡಿಸುತ್ತೇವೆ ಎಂದು ಕಾಂಗ್ರೆಸ್ ಹೇಳಿದೆ.

“ಸಿಬಿಐ ಎಂಬುದು ಕೇಂದ್ರ ತನಿಖಾ ದಳ ಎಂಬುದರಿಂದ ಬಿಜೆಪಿ ತನಿಖಾ ದಳ ಎಂದು ಬದಲಾಗಿದೆ. ಇನ್ನು ಇಡಿ ಸಂಸ್ಥೆಯು ಬಿಜೆಪಿ ಪಕ್ಷದ ಚುನಾವಣಾ ಮೋರ್ಚಾ ಘಟಕವಾಗಿ ಬದಲಾಗಿದೆ. ಅನೇಕ ಹೋರಾಟಗಳ ಮೂಲಕ ಮಹನೀಯರು ಕಟ್ಟಿದ ಭಾರತದ ಪ್ರಜಾಪ್ರಭುತ್ವವನ್ನು ಬಿಜೆಪಿಗರು ನಾಶ ಮಾಡಲು ಹೊರಟಿದ್ದಾರೆ!” ಎಂದು ಹೇಳಿದೆ.

“ಡಿಕೆ ಶಿವಕುಮಾರ್‌ ಅವರ ನಾಯಕತ್ವಕ್ಕೆ ಬೆದರಿ ಉಪಚುನಾವಣೆಯಲ್ಲಿ ಸೋಲುವ ಭೀತಿಯಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಇಂತಹ ನೀಚ ರಾಜಕೀಯ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ಇಂತಹ ಗೊಡ್ಡು ಬೆದರಿಕೆಗಳಿಗೆ ಜಗ್ಗುವುದಿಲ್ಲ. ನರೇಂದ್ರ ಮೋದಿ ನಿಮಗೆ ನೈತಿಕತೆಯಿದ್ದರೆ ಮೊದಲು ಯಡಿಯೂರಪ್ಪ ಕುಟುಂಬದ ಹಗರಣಗಳನ್ನು ತನಿಖೆಗೆ ಒಳಪಡಿಸಲು ಆದೇಶ ನೀಡಿ” ಎಂದು ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದ್ದಾರೆ.

ಇದನ್ನೂ ಓದಿ: ಎರಡೂ ಕಡೆ ಪಕ್ಷಾಂತರಗಳು ಇನ್ನು ಮುಂದೆ ತುಂಬಾ ಹೆಚ್ಚಾಗಲಿವೆ: ಡಿ.ಕೆ ಶಿವಕುಮಾರ್‌

“CBI ದಾಳಿ ರಾಜಕೀಯ ಪ್ರೇರಿತ. ಶಿರಾ ಹಾಗೂ R.R.ನಗರ ಉಪಚುನಾವಣೆಯ ಸಂದರ್ಭದಲ್ಲೇ ಈ ದಾಳಿ ನಡೆದಿರುವುದು ಅದರ ಹಿಂದಿನ ಉದ್ದೇಶ ತೋರಿಸುತ್ತದೆ. ಬಿಜೆಪಿ ನಾಯಕರು ತಮ್ಮ ದ್ವೇಷದ ರಾಜಕಾರಣಕ್ಕೆ ತಕ್ಕ ಬೆಲೆ ತೆರುವ ದಿನ ದೂರವಿಲ್ಲ. ಸಂಚಿನ ದಾಳಿಯ ಮೂಲಕ ಕಾಂಗ್ರೆಸ್ ನಾಯಕರ ಮಾನಸಿಕ ಸ್ಥೈರ್ಯ ಕಸಿದುಕೊಳ್ಳಲು ಸಾಧ್ಯವಿಲ್ಲ. ಅದು ಬಿಜೆಪಿ ನಾಯಕರ ಭ್ರಮೆಯಷ್ಟೆ. ಕೇಂದ್ರದ ತಾಳಕ್ಕೆ ತಕ್ಕಂತೆ ಕುಣಿಯುವ CBIಗೆ ಯಡಿಯೂರಪ್ಪ ಮತ್ತು ಅವರ ಮಗನ ಬ್ರಹ್ಮಾಂಡ ಭ್ರಷ್ಟಾಚಾರ ಕಣ್ಣಿಗೆ ಕಾಣಿಸುತ್ತಿಲ್ಲವೆ? ಪ್ರತಿ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರ ಮೇಲೆ ದಾಳಿ ನಡೆಸುವುದ್ಯಾಕೆ?” ಎಂದು ಕಾಂಗ್ರೆಸ್‌‌ನ ಮಾಜಿ ನಾಯಕ ಗುಂಡುರಾವ್ ಹೇಳಿದ್ದಾರೆ.

 

ಭ್ರಷ್ಟಾಚಾರ ಆರೋಪದಲ್ಲಿ ಸಿಬಿಐ, ಬೆಂಗಳೂರಿನ ಸದಾಶಿವನಗರದಲ್ಲಿರುವ ಮನೆ, ಕನಕಪುರ ತಾಲ್ಲೂಕಿನ ದೊಡ್ಡ ಆಲನಹಳ್ಳಿ ಮನೆ ಸೇರಿದಂತೆ ಡಿಕೆ ಶಿವಕುಮಾರ್ ಜೊತೆ ಸಂಬಂಧ ಇರುವ 15 ಸ್ಥಳಗಳ ಮೇಲೆ ದಾಳಿ ನಡೆಸಿ ತನಿಖೆ ನಡೆಸುತ್ತಿದೆ.

ಕೆಲದಿನಗಳ ಹಿಂದೆಯಷ್ಟೇ ಸಿಬಿಐ ವಿಚಾರಣೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದಾಗ ಅದರ ವಿರುದ್ಧ ಡಿಕೆಶಿ ಕೋರ್ಟ್‌ನಲ್ಲಿ ರಿಟ್ ಸಲ್ಲಿಸಿದ್ದರು. ಅಷ್ಟರಲ್ಲಾಗಲೇ ಇಂದು 60 ಕ್ಕೂ ಹೆಚ್ಚು ಸಿಬಿಐ ಅಧಿಕಾರಿಗಳು ಯಾವುದೇ ಸುಳಿವು ಕೊಡದೇ ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಕನಕಪುರದಲ್ಲಿ ಯೇಸುಕ್ತಿಸ್ತನ ಪ್ರತಿಮೆ ವಿವಾದ: ರಾಜಕೀಯ ಅಥವಾ ಅಧಿಕಾರಕ್ಕಾಗಿ ಅಲ್ಲ, ಆತ್ಮತೃಪ್ತಿಗಾಗಿ – ಡಿ.ಕೆ ಶಿವಕುಮಾರ್‌

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here