ದೇಶದಲ್ಲಿ ಕೊರೊನಾ ಎರಡನೇ ಅಲೆ ವಿಪರಿತವಾಗಿ ಹಬ್ಬುತ್ತಿದ್ದು, ಕೇಂದ್ರ ಸರ್ಕಾರ ಪರಿಸ್ಥಿತಿ ನಿಭಾಯಿಸುತ್ತಿರುವ ರೀತಿಗೆ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಒಂದು ವರ್ಷದ ತಯಾರಿಯ ಹೊರತಾಗಿಯೂ ನಮ್ಮ ಈಗಿನ ಪರಿಸ್ಥಿತಿಯು ನಿರಾಶಾದಾಯಕವಾಗಿದೆ ಎಂದು ಪಕ್ಷದ ನಾಯಕರೊಂದಿಗೆ ನಡೆದ ಸಭೆಯಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ.
ಕೊರೊನಾ ಸೋಂಕಿತರಿಗೆ ಆಮ್ಲಜನಕ, ಆಸ್ಪತ್ರೆಯಲ್ಲಿ ಹಾಸಿಗೆಗಳು ಮತ್ತು ಲಸಿಕೆಗಳ ಕೊರತೆ ಬಗ್ಗೆ ಪದೇ ಪದೇ ರಾಜ್ಯಗಳು ಮನವಿ ಸಲ್ಲಿಸುತ್ತಿದ್ದರು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮೌನ ವಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲಸಿಕೆ ನೀಡಿಕೆ ಮಾನದಂಡದ ವಯಸ್ಸನ್ನು 45 ರಿಂದ 25 ವರ್ಷದವರೆಗೂ ವಿಸ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ. ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವುದು ರಾಜಕೀಯಕ್ಕಿಂತ ದೊಡ್ಡ ರಾಷ್ಟ್ರೀಯ ಸವಾಲು ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.
Let us ensure that the suggestions our party puts forward are considered by GOI in the spirit of true democratic traditions. Taking on these challenging times as Indians rather than as political opponents will be true Rajadharma.: Congress President. Smt. Sonia Gandhi pic.twitter.com/qunq0HA6Wk
— Congress (@INCIndia) April 17, 2021
ಇದನ್ನೂ ಓದಿ: ಬಿಜೆಪಿ ನಾಯಕರು ಚುನಾವಣೆ ಬಗ್ಗೆ ಮಾತ್ರ ಚಿಂತಿತರಾಗಿದ್ದಾರೆ, ಆಡಳಿತದ ಬಗ್ಗೆ ಅಲ್ಲ: ಸಿದ್ದರಾಮಯ್ಯ ಆಕ್ರೋಶ
ಕೊರೊನಾ 2ನೇ ಅಲೆ ದೇಶಕ್ಕೆ ಅಘಾತಕಾರಿಯಾಗಿ ಅಪ್ಪಳಿಸಿದೆ. ಆದರೆ, ನಮಗೆ ಒಂದು ವರ್ಷ ತಯಾರಿ ನಡೆಸಲು ಅವಕಾಶವಿದ್ದರೂ ದೇಶ ಈ ಪರಿಸ್ಥಿತಿ ತಲುಪಿರುವುದು ವಿಷಾದನೀಯ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.
ಔಷಧಿಗಳ ಕೊರತೆ, ಲಸಿಕೆಗಳ ಕೊರತೆ, ವೈದ್ಯಕೀಯ ಆಮ್ಲಜನಕದ ಕೊರತೆ ಸಮಸ್ಯೆಯ ಕುರಿತು ಸುದ್ದಿಗಳು ಓದುವಾಗ ನನಗೆ ತುಂಬಾ ಕಳವಳವಾಗಿದೆ. ದೇಶಾದ್ಯಂತ ಕೊರೊನಾ ಲಸಿಕೆಯ ಕೊರತೆ, ರೆಮ್‌ಡೆಸಿವಿರ್‌ನಂತಹ ಜೀವ ಉಳಿಸುವ ಔಷಧಿಗಳ ಕೊರತೆಯ ಬಗ್ಗೆಯೂ ವರದಿಯಾಗುತ್ತಿದೆ ಇವುಗಳು ನನ್ನನ್ನು ಹೆಚ್ಚು ಕಳವಳಕ್ಕೆ ದೂಡಿವೆ ಎಂದಿದ್ದಾರೆ.
“ಕೊರೊನಾ ವಿಚಾರದಲ್ಲಿ ಪ್ರತಿಪಕ್ಷಗಳ ರಚನಾತ್ಮಕ ಸಲಹೆಗಳನ್ನು ಕೇಳುವ ಬದಲು, ಸಲಹೆಗಳನ್ನು ನೀಡಿದ್ದಕ್ಕಾಗಿ ಪ್ರತಿಪಕ್ಷದ ನಾಯಕರ ಮೇಲೆ ಕೇಂದ್ರ ಸಚಿವರು ದಾಳಿ ಮಾಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ‘ಕರ್ಣನ್’ ಸಿನಿಮಾ ವಿಮರ್ಶೆ; ಘನತೆಗಾಗಿ ತಳ ಸಮುದಾಯದ ಪ್ರತಿರೋಧದ ಸೃಜನಶೀಲ ಅಭಿವ್ಯಕ್ತಿ


