Homeಕರ್ನಾಟಕಸೌಜನ್ಯ ಪ್ರಕರಣ: SIT ತನಿಖೆಗೆ ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಹೋರಾಟ ಸಮಿತಿಯಿಂದ ಜು.28ಕ್ಕೆ ಧರಣಿ

ಸೌಜನ್ಯ ಪ್ರಕರಣ: SIT ತನಿಖೆಗೆ ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಹೋರಾಟ ಸಮಿತಿಯಿಂದ ಜು.28ಕ್ಕೆ ಧರಣಿ

- Advertisement -
- Advertisement -

ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣವನ್ನು SITತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ಶುಕ್ರವಾರ (ಜು.28) ಬೆಳಿಗ್ಗೆ11ರಂದು ಫ್ರೀಡಂ ಪಾರ್ಕ್‌ನಲ್ಲಿ ಧರಣಿ ನಡೆಸಲು ಪ್ರಗತಿಪರ ಸಂಘಟನೆಗಳ ಹೋರಾಟ ಸಮಿತಿ ಕರೆ ಕೊಟ್ಟಿದೆ.

ಈ ಕುರಿತು ಸಮಿತಿಯು ಪ್ರಕಟಣೆ ಹೊರಡಿಸಿದ್ದು, ”2012ರ ಆಕ್ಟೋಬರ್ 9ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಪಂಗಳದ ವಿದ್ಯಾರ್ಥಿನಿ ಸೌಜನ್ಯ ಎಂಬ 17 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಂತ ಘೋರವಾದ ಅತ್ಯಾಚಾರವನ್ನು ನಡೆಸಿ, ಆಕೆಯನ್ನು ಕೊಲೆ ಮಾಡಲಾಗಿತ್ತು, ಅದನ್ನು ಮುಚ್ಚಿ ಹಾಕಲು ಯತ್ನಿಸಿದ ಶಕ್ತಿಗಳ ವಿರುದ್ಧ ಬೆಳ್ತಂಗಡಿ, ಮಂಗಳೂರು ಹಾಗೂ ಬೆಂಗಳೂರು ಸೇರಿದಂತೆ ಇಡೀ ರಾಜ್ಯಾದ್ಯಂತ ನಡೆಸಿದ ನಿರಂತರ ಹೋರಾಟ ಹಾಗೂ ಬೆಂಗಳೂರಿನಲ್ಲಿ 50ಕ್ಕೂ ಹೆಚ್ಚು ಸಂಘಟನೆಗಳು ಹತ್ತು ದಿನ ನಡೆಸಿದ ಅನಿರ್ದಿಷ್ಟಾವಧಿ ಹೋರಾಟಗಳ ಫಲವಾಗಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲಾಗಿತ್ತು” ಎಂದು ತಿಳಿಸಿದೆ.

”ಈ ಪ್ರಕರಣದ ಕುರಿತು 11 ವರ್ಷಗಳ ಕಾಲ ದೀರ್ಘ ತನಿಖೆ ನಡೆಸಿದ ಸಿ.ಬಿ.ಐನ ವಿಶೇಷ ನ್ಯಾಯಾಲಯವು ತನಿಖಾಧಿಕಾರಿಗಳು ಆರೋಪಿ ಎಂದು ಗುರುತಿಸಲಾಗಿದ್ದ ಸಂತೋಷ್ ರಾವ್‌ರನ್ನು ದೋಷಮುಕ್ತಗೊಳಿಸಿ, ಈ ತನಿಖೆಯು ಲೋಪ-ದೋಷಗಳಿಂದ ಕೂಡಿದ್ದು, ಆ ಕಾರಣದಿಂದ ಈ ಪ್ರಕರಣವು ಮುಂದುವರಿದೆ ತನಿಖೆಗೆ ಅರ್ಹ ಪ್ರಕರಣವಾಗಿದೆ ಎಂದೂ ಹೇಳಿದ ಸಿಬಿಐ ತನಿಖೆಯ ಲೋಪಗಳನ್ನು ಪಟ್ಟಿ ಮಾಡಿರುವ ವಿಶೇಷ ನ್ಯಾಯಾಲಯವು ‘ಸಿಬಿಐನ ತನಿಖೆಯು ಸರಿಯಾದ ದಿಕ್ಕಿನಲ್ಲಿ ನಡೆದಿಲ್ಲ’ ಎಂದು ಬೊಟ್ಟು ಮಾಡಿದೆ, ಮತ್ತು ನಿರ್ದೋ ಸಂತೋಷ್ ರಾವ್ ಅವರಿಗೆ ಕಾನೂನು ಪರಿಹಾರ ನೀಡಬೇಕೆಂದು ಆದೇಶಿಸಿದೆ” ಎಂದು ಹೇಳಿದೆ.

ಸೌಜನ್ಯಳ ಮೇಲೆ ನಡೆದದ್ದು “ಅತ್ಯಂತ ಕ್ರೂರ ಅತ್ಯಾಚಾರ ಮತ್ತು ಕೊಲೆ” ಎಂದು ಪರಿಗಣಿಸಿದ್ದ ವಿಶೇಷ ನ್ಯಾಯಾಲಯವು ಇದನ್ನು ಆದ್ಯತೆಯಾಗಿ ಪರಿಗಣಿಸಿ ತನಿಖೆ ನಡೆಸಬೇಕು ಎಂದು ಆರಂಭದಲ್ಲಿಯೇ ರಾಜ್ಯ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶಿಸಿತ್ತು. ಆದರೆ, ಈ ವಿಶೇಷ ನ್ಯಾಯಾಲಯದ ನಿರ್ದೇಶನವನ್ನು ನಿರ್ಲಕ್ಷಿಸಿದ ಸಿ.ಬಿ.ಐ. ರಾಜಕೀಯ ಪ್ರಭಾವದಿಂದ ತನಿಖೆ ನಡೆಸಿ ನಿಜವಾದ ತಪ್ಪಿತಸ್ಥರನ್ನು ರಕ್ಷಿಸಿ ನಿರಪರಾಧಿಯೊಬ್ಬರನ್ನು ಬಲಿ ಹಾಕಿದ್ದು ಸ್ಪಷ್ಟವಾಗಿದೆ.

ಇದನ್ನೂ ಓದಿ: ಸೌಜನ್ಯ ಪ್ರಕರಣ: ವೀರೇಂದ್ರ ಹೆಗ್ಗಡೆ ವಿರುದ್ಧ ಸುದ್ದಿ ಪ್ರಕಟಿಸದಂತೆ ಕೋರ್ಟ್‌ ನಿರ್ಬಂಧ

ಜನಪರ ಸಂಘಟನೆಗಳು ಆರಂಭದಿಂದಲೂ ಎತ್ತಿತೋರಿಸಿರುವ ಲೋಪಗಳು ಹೀಗಿವೆ:

1) ತನಿಖೆ ನಡೆಯಬೇಕಿದ್ದ ಸುವರ್ಣಾವಧಿಯಲ್ಲಿ ಸರಿಯಾದ ತನಿಖೆ ನಡೆದಿಲ್ಲ.

2) ಮರಣೋತ್ತರ ಪರೀಕ್ಷೆಯನ್ನು ಅವೈಜ್ಞಾನಿಕವಾಗಿ ಮತ್ತು ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ಮಾಡಿರುವುದು ಕಂಡುಬಂದಿರುತ್ತದೆ. ಅದರಲ್ಲೂ ಬೆಳ್ತಂಗಡಿಯ ಸರ್ಕಾರಿ ಆಸತ್ರೆಯಲ್ಲಿ ಅಗತ್ಯ ಬೆಳಕು ಇಲ್ಲದ ವಾತಾವರಣದಲ್ಲಿ ಮಾಡಿರುವುದನ್ನೂ ಪ್ರಶ್ನಿಸಲಾಗಿಲ್ಲ.

3) ಅತ್ಯಾಚಾರ ನಡೆದ ಸ್ಥಳದಲ್ಲಿ ಬೆರಳು ಮತ್ತು ಹೆಜ್ಜೆ ಗುರುತುಗಳನ್ನು ಸಂಗ್ರಹಿಸಿಲ್ಲ.

4) ನಗ್ನ ಸ್ಥಿತಿಯಲ್ಲಿದ್ದ ಸೌಜನ್ಯ ಹಾಕಿಕೊಂಡಿದ್ದ ಬಟ್ಟೆಗಳು ಸಿಗದ ಕಾರಣ ಸ್ಥಳೀಯ ಪೊಲೀಸರು ಸೌಜನ್ಯಾ ಮನೆಯಿಂದ ಬಟ್ಟೆ ಸಂಗ್ರಹಿಸಿ ಸಾಕ್ಷ್ಯವೆಂದು ತೋರಿಸಲಾಗಿದೆ.

5) ಸೌಜನ್ಯಾಳ ಖಾಸಗಿ ಅಂಗಕ್ಕೆ ಮಣ್ಣು ತುಂಬಿಸಿ ಸಾಕ್ಷ್ಯ ನಾಶ ಮಾಡಲು ಪ್ರಯತ್ನಿಸಿರುವುದು, ಮಣ್ಣಿನ DNA ಪರೀಕ್ಷೆ ಆಗಬೇಕು.

6) ಸೌಜನ್ಯಳ ಗೆಳತಿಯನ್ನು ವಿಚಾರಣೆ ಮಾಡದಿರುವುದು.

7) ಒಬ್ಬನೇ ವ್ಯಕ್ತಿ ಈ ಕೃತ್ಯವನ್ನು ನಡೆಸಲಾಗದು ಎಂಬ ಅಂಶವನ್ನು ಕಡೆಗಣಿಸಿರುವುದು.

8) ಸ್ಥಳೀಯ ಸಾಕ್ಷಿಗಳು ಹೇಳಿದ ವ್ಯಕ್ತಿಗಳನ್ನು ಗಂಭೀರ ವಿಚಾರಣೆಗೆ ಒಳಪಡಿಸದೇ ಮಾನಸಿಕ ಚಿಕಿತ್ಸೆಯಲ್ಲಿದ್ದ ಸಂತೋಷ್ ರಾವ್‌ಗೆ ಇಡೀ ತನಿಖೆಯನ್ನು ಕೇಂದ್ರೀಕರಿಸಿರುವುದು.

9) ಘಟನೆ ನಡೆದ ದಿನ ಮತ್ತು ಸ್ಥಳದಲ್ಲಿ ಸಂತೋಷ್ ರಾವ್ ಇದ್ದುದನ್ನು ನೋಡಿದ ಯಾವುದೇ ಸಾಕ್ಷ್ಯಗಳು ಸಿಗದಿರುವುದು.

10) ಸಂತೋಷ್ ರಾವ್ ವಿರುದ್ಧ ಮಾಡಲಾದ ಚಾರ್ಜ್ ಶೀಟ್‌ನ ಆರೋಪಗಳನ್ನು ಸಾಬೀತು ಮಾಡಲಾಗದೆ ವಿಫಲವಾಗಿರುವುದು..

11) ವಿಡಿಯೋ ಮಾಡುವ ನಿಪುಣತೆ ಇಲ್ಲದ ಪೊಲೀಸ್ ಸಿಬ್ಬಂದಿಯನ್ನು ವಿಡಿಯೋ ಮಾಡಲು ನಿಯೋಜಿಸಿರುವುದು

12) ಪ್ರಮುಖ ಸಾಕ್ಷಿಯಾಗಿದ್ದ ಧರ್ಮಸ್ಥಳದ ಬಾಡ್‌ನ ರೂಮ್ ಬಾಂಡ್ ರವಿಪೂಜಾರಿಯ ಆತ್ಮಹತ್ಯೆಯನ್ನೂ ಹಾಗೂ ಮತ್ತೊಬ್ಬ ಸಾಕ್ಷಿ ರೂಮ್ ಬಾಯ್ ಗೋಪಾಲಕೃಷ್ಣಗೌಡರ ಅಸಹಜ ಸಾವನ್ನು ಪರಿಗಣಿಸದಿರುವುದು ಸಂಶಯಕ್ಕೆ ಎಡೆಮಾಡಿಕೊಡುತ್ತದೆ.

13) ನೇಚರ್ ಕ್ಯೂರ್ ಸೆಂಟರ್‌ನ ಸಿಸಿ ಕ್ಯಾಮೆರಾದ ರೆಕಾಡಿರ್ಂಗ್‌ಗಳನ್ನು ಉದ್ದೇಶಪೂರ್ವಕವಾಗಿ ಸೆಕ್ಯೂರ್ ಮಾಡದಿರುವುದು ಸಂಶಯಕ್ಕೆ ಎಡೆ ಮಾಡಿಕೊಡುತ್ತದೆ. ಹೀಗೆ. ಆರಂಭದ ಸ್ಥಳೀಯ ಪೊಲೀಸರ ತನಿಖೆ, ನಂತರ ರಾಜ್ಯದ ಸಿಐಡಿ ತನಿಖೆ, ಅನಂತರದ ಸಿಬಿಐ ತನಿಖೆಯೂ ಸೇರಿ ಈ 11 ವರ್ಷಗಳ ಕಾಲಾವಧಿಯಲ್ಲಿ ನಡೆದ ಎಲ್ಲ ತನಿಖೆಗಳು ತಪ್ಪಿತಸ್ಥರನ್ನು ರಕ್ಷಿಸುವ ಕೊಡೆಯ ಅಡಿಯಲ್ಲೇ ನಡೆದಂತಿವೆ.

ಹಾಗಾದರೆ, ಆತ್ಯಾಚಾರ ಮತ್ತು ಕೊಲೆ ಮಾಡಿದವರು ಯಾರು?

ನಿಜವಾದ ಅತ್ಯಾಚಾರಿಗಳನ್ನು ಮತ್ತು ಕೊಲೆಗಡುಕರನ್ನು ಪತ್ತೆ ಮಾಡಿ ಶಿಕ್ಷಿಸಬೇಕೆಂದು ಆಗ್ರಹಿಸಿ ನಾವಿಂದು ಮತ್ತೆ ಹೋರಾಟಕ್ಕೆ ಇಳಿದಿದ್ದೇವೆ ಎಂದು ಹೋರಾಟ ಸಮಿತಿ ಹೇಳಿದೆ.

1 ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ SIT ತನಿಖೆ ಆಗಬೇಕು. ವಿಶೇಷ ನ್ಯಾಯಾಲಯವು ಗುರುತಿಸಿರುವ ಲೋಪಗಳ ಆಧಾರದಲ್ಲಿ ತನಿಖೆ ನಡೆಯಬೇಕು, ಅದಕ್ಕಾಗಿ ವಿಶೇಷ ತನಿಖಾ ದಳವನ್ನು ರಚನೆ ಮಾಡಬೇಕು. ವಿಶೇಷ ನ್ಯಾಯಾಲಯವು ಗುರುತಿಸಿರುವಂತೆ ಮೂಲ ತನಿಖೆ ನಡೆಸಿದ ಅಧಿಕಾರಿಗಳು, ವೈದ್ಯಾಧಿಕಾರಿಗಳು ಹಾಗೂ ತನಿಖೆಯ ದಿಕ್ಕು ತಪ್ಪಿಸಿದ ಕಾಣದ ಕೈಗಳನ್ನು ಸಹ ಆರೋಪಿಗಳೆಂದು ಪರಿಗಣಿಸಬೇಕು.

2. ಈ ಪ್ರಕರಣಕ್ಕೂ ಹಿಂದೆ ಧರ್ಮಸ್ಥಳದ ಸುತ್ತಮುತ್ತಲ ಪ್ರದೇಶಗಳಲ್ಲಿ ನಡೆದಿರುವ ಸರಿಸುಮಾರು 462 ಆಸಹಜ ಸಾವಿನ ಪ್ರಕರಣಗಳ ಕುರಿತೂ ಸಮಗ್ರ ತನಿಖೆಗೆ ಆದೇಶಿಸಬೇಕು. ಆ ಮೂಲಕ ಅಸಹಾಯಕ ಜನರ ಅಸಹಜ ಸಾವಿಗೆ ಸರಣಿಗೆ ಕೊನೆ ಹಾಕಬೇಕು,

3. ಇದರಲ್ಲಿ ಸುಮಾರು 90 ಸಾವುಗಳು ಮಹಿಳೆಯರು ಮತ್ತು ಮಕ್ಕಳದಾಗಿವೆ ಎನ್ನುವುದು ಗಮನಾರ್ಹ. ಹಾಗಾಗಿ ರಾಜ್ಯ ಮಹಿಳಾ ಆಯೋಗ, ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಮತ್ತು ಮಾನವ ಹಕ್ಕುಗಳ ಆಯೋಗಗಳೂ ಈ ಬಗ್ಗೆ ತುರ್ತು ಗಮನ ಹರಿಸಬೇಕು ಎಂದು ಪ್ರಗತಿಪರ ಸಂಘಟನೆಗಳ ಹೋರಾಟ ಸಮಿತಿ ಆಗ್ರಹಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಓಂ ಬಿರ್ಲಾ ಪುತ್ರಿಯ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್; ಧ್ರುವ ರಾಠಿ ನಕಲಿ ಖಾತೆ ವಿರುದ್ಧ...

0
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರ ಪುತ್ರಿಯ ಬಗ್ಗೆ ಎಕ್ಸ್‌ನಲ್ಲಿ ಸಂದೇಶವನ್ನು ಪೋಸ್ಟ್ ಮಾಡಿದ ನಂತರ, ಮಹಾರಾಷ್ಟ್ರದ ಸೈಬರ್ ಪೊಲೀಸರು ಜನಪ್ರಿಯ ಯೂಟ್ಯೂಬರ್ ಧ್ರುವ ರಾಠಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಹಿರಿಯ...