Homeಮುಖಪುಟಮಾಜಿ ಸಿಜೆಐ ರಂಜನ್ ಗೊಗೊಯ್ ವಿರುದ್ಧ ಮಾನನಷ್ಟ ಪ್ರಕರಣ ದಾಖಲು

ಮಾಜಿ ಸಿಜೆಐ ರಂಜನ್ ಗೊಗೊಯ್ ವಿರುದ್ಧ ಮಾನನಷ್ಟ ಪ್ರಕರಣ ದಾಖಲು

- Advertisement -
- Advertisement -

ಗುವಾಹಟಿಯ ಸ್ಥಳೀಯ ನ್ಯಾಯಾಲಯದಲ್ಲಿ ಸುಪ್ರೀಂಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಾಗಿದೆ ಎಂದು ಪಿಟಿಐ ಗುರುವಾರ ವರದಿ ಮಾಡಿದೆ.

ಅಸ್ಸಾಂ ಪಬ್ಲಿಕ್ ವರ್ಕ್ಸ್ ಅಧ್ಯಕ್ಷ ಅಭಿಜೀತ್ ಶರ್ಮಾ ಅವರು ಮಾಜಿ ಮುಖ್ಯ ನ್ಯಾಯಮೂರ್ತಿ ಗೊಗೊಯ್‌ ಮತ್ತು ರೂಪಾ ಪಬ್ಲಿಕೇಷನ್ಸ್ ವಿರುದ್ಧ ಮೊಕದ್ದಮೆ ಹೂಡಿದ್ದಾರೆ.

ಗೊಗೊಯ್ ಅವರ ಆತ್ಮಚರಿತ್ರೆ ‘ಜಸ್ಟೀಸ್ ಫಾರ್ ಎ ಜಡ್ಜ್‌’ ಕೃತಿಯನ್ನು ರೂಪಾ ಪಬ್ಲಿಕೇಷನ್ಸ್‌ ಪ್ರಕಟಿಸಿದ್ದು, “ಪುಸ್ತಕದಲ್ಲಿ ತಪ್ಪುದಾರಿಗೆಳೆಯುವ ಮತ್ತು ಮಾನಹಾನಿಕರ ವಿಷಯಗಳನ್ನು ಹೇಳಲಾಗಿದೆ. 1 ಕೋಟಿ ರೂ. ಪರಿಹಾರ ನೀಡಬೇಕು” ಎಂದು ಅಭಿಜೀತ್‌ ಶರ್ಮಾ ದಾವೆ ಹೂಡಿದ್ದಾರೆ.

ಮಾನಹಾನಿಕರ ಹೇಳಿಕೆಗಳು ಮತ್ತು ಆರೋಪಗಳನ್ನು ಹೊಂದಿರುವ ಯಾವುದೇ ಪುಸ್ತಕವನ್ನು ಇನ್ನು ಮುಂದೆ ಪ್ರಕಟಿಸದಂತೆ, ವಿತರಿಸದಂತೆ ಅಥವಾ ಮಾರಾಟ ಮಾಡದಂತೆ ರಾಜ್ಯಸಭಾ ಸಂಸದರಾಗಿರುವ ಗೊಗೊಯ್ ಮತ್ತು ಈ ಕೃತಿಯ ಪ್ರಕಾಶಕರಿಗೆ ತಡೆಯಾಜ್ಞೆ ನೀಡಬೇಕು ಎಂದು ಶರ್ಮಾ ಮನವಿ ಮಾಡಿದ್ದಾರೆ. ಈ ಪುಸ್ತಕವನ್ನು 2021 ರಲ್ಲಿ ಬಿಡುಗಡೆ ಮಾಡಲಾಯಿತು.

ಗೊಗೊಯ್ ಅವರು 2018 ಮತ್ತು 2019 ರ ನಡುವೆ ಭಾರತದ 46 ನೇ ಮುಖ್ಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದಾರೆ. ರಫೇಲ್ ಯುದ್ಧ ವಿಮಾನ ಒಪ್ಪಂದ, ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಮತ್ತು ಬಾಬರಿ ಮಸೀದಿ ವಿವಾದದಂತಹ ಹಲವಾರು ಪ್ರಮುಖ ಪ್ರಕರಣಗಳ ತೀರ್ಪುಗಳನ್ನು ನೀಡಿದ ನ್ಯಾಯಮೂರ್ತಿಗಳಲ್ಲಿ ಗೊಗೊಯ್ ಒಬ್ಬರು.

ಗೊಗೊಯ್ ಅವರು ತಮ್ಮ ಕೃತಿಯಲ್ಲಿ “ವೈಯಕ್ತಿಕ ದಾಳಿ” ನಡೆಸುತ್ತಿದ್ದಾರೆ ಎಂದು ಶರ್ಮಾ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

“ಸ್ಥಳೀಯ ರಾಜಕಾರಣಿಗಳಿಂದ ವಿಶೇಷವಾಗಿ ಅಭಿಜೀತ್ ಶರ್ಮಾ ಅವರಿಂದ ಸ್ಥಳೀಯ ಮಟ್ಟದಲ್ಲಿ ಎಸ್‌ಸಿಎನ್‌ಆರ್ (ಎನ್‌ಆರ್‌ಸಿಯ ರಾಜ್ಯ ಸಮನ್ವಯಕಾರ) ಮೇಲೆ ವೈಯಕ್ತಿಕ ದಾಳಿ ಹಾಗೂ ನ್ಯಾಯಾಧೀಶರು, ಮುಖ್ಯವಾಗಿ ನನ್ನ ಮೇಲೆ ಪರೋಕ್ಷ ದಾಳಿಗಳು ನಡೆದಿವೆ. ಹಜೇಲಾ (ಆಗಿನ ಎಸ್‌ಸಿಎನ್‌ಆರ್ ಪ್ರತೀಕ್ ಹಜೇಲಾ) ಅವರನ್ನು ಕಿರುಕುಳ ಮತ್ತು ಉದ್ದೇಶಿತ ತೊಂದರೆಗಳಿಂದ ರಕ್ಷಿಸಲು ನಾವು (ಪೀಠ) ಆದೇಶ ಹೊರಡಿಸಬೇಕು ಎಂಬ ಅಭಿಪ್ರಾಯಕ್ಕೆ ಬಂದಿದ್ದೆವು” ಎಂಬುದಾಗಿ ರಂಜನ್ ಗೊಗೊಯ್ ಅವರು ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ ಎಂದು ಶರ್ಮಾ ಹೇಳಿದ್ದಾರೆ.

ಇದನ್ನೂ ಓದಿರಿ: ಎಲ್ಲ ವಿಷಯಗಳಲ್ಲಿ ಕೇಂದ್ರ ಮೂಗು ತೂರಿಸುವಂತಿಲ್ಲ; ದೆಹಲಿ ಸರ್ಕಾರದ ಪರ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

“ಐಎಎಸ್ ಅಧಿಕಾರಿಯಾಗಿರುವ ಹಜೇಲಾ ಅವರಿಗೆ ಭದ್ರತಾ ಬೆದರಿಕೆ ಇದೆ ಎಂದು ಅಥವಾ ಹಜೇಲಾ ಅವರನ್ನು ಮಧ್ಯಪ್ರದೇಶಕ್ಕೆ ವರ್ಗಾವಣೆ ಮಾಡುವಂತೆ ಗೊಗೊಯ್ ಅವರ ಮೇಲೆ ತಾನು ಒತ್ತಡ ಸೃಷ್ಟಿಸಿದ್ದೆ ಎಂಬುದಕ್ಕೆ ಎಲ್ಲಿಯೂ ಉಲ್ಲೇಖ ಇಲ್ಲ. ಗೊಗೊಯ್ ಅವರು ಸಿಜೆಐ ಆಗಿ ಸೇವೆ ಸಲ್ಲಿಸುವಾಗ ಎಂದಿಗೂ ಯಾವುದೇ ವೈಯಕ್ತಿಕ ದಾಳಿ ನಡೆಸಿರಲಿಲ್ಲ” ಎಂದು ಶರ್ಮಾ ತಿಳಿಸಿದ್ದಾರೆ.

“ಹಜೇಲಾ ಅವರ ತವರು ರಾಜ್ಯ ಮಧ್ಯಪ್ರದೇಶಕ್ಕೆ ಇಂಟರ್ ಕೇಡರ್ ವರ್ಗಾವಣೆಯ ನಿಯೋಜನೆಗೆ 2019ರ ಅಕ್ಟೋಬರ್ 18ರಂದು ಪೀಠ ಆದೇಶ ಹೊರಡಿಸಿತ್ತು. ಹಜೇಲಾ ಮತ್ತು ಇತರೆ ಎನ್‌ಆರ್‌ಸಿ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತಹ, ಭ್ರಷ್ಟಾಚಾರ ಆರೋಪಗಳು ಮತ್ತು ಸಿಬಿಐ ತನಿಖೆ ಆದೇಶ ಬೆದರಿಕೆಗಳಂತಹ ಪೂರಕ ಘಟನೆಗಳು ನಡೆದವು. ಜತೆಗೆ ಮಾಧ್ಯಮಗಳಿಗೆ ಸಾಕಷ್ಟು ತಪ್ಪು ಮಾಹಿತಿಗಳನ್ನು ರವಾನಿಸುವ ಮೂಲಕ ವ್ಯಾಪಕ ಪ್ರಚಾರ ನೀಡಲಾಯಿತು. ಹೀಗಾಗಿ ಸಂವಿಧಾನದ 142ನೇ ವಿಧಿಯನ್ನು ಬಳಸಿ ಹಜೇಲಾ ಅವರನ್ನು ಅಂತರ್ ಕೇಡರ್ ವರ್ಗಾವಣೆ ಮಾಡುವ ಅಹಸಜ ಆದೇಶವನ್ನು ಹೊರಡಿಸುವಂತೆ ನ್ಯಾಯಪೀಠಕ್ಕೆ ನಾನು ಮನವೊಲಿಸಬೇಕಾಗಿತ್ತು” ಎಂದು ಗೊಗೊಯ್ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...