Homeಮುಖಪುಟದೆಹಲಿ | ಅಂಕಿತಾ ಭಂಡಾರಿ ನ್ಯಾಯಕ್ಕಾಗಿ ಪೋಷಕರಿಂದ ಆಹೋರಾತ್ರಿ ಧರಣಿ, ಕಾಂಗ್ರೆಸ್ ನಾಯಕರ ಸಾಥ್

ದೆಹಲಿ | ಅಂಕಿತಾ ಭಂಡಾರಿ ನ್ಯಾಯಕ್ಕಾಗಿ ಪೋಷಕರಿಂದ ಆಹೋರಾತ್ರಿ ಧರಣಿ, ಕಾಂಗ್ರೆಸ್ ನಾಯಕರ ಸಾಥ್

- Advertisement -
- Advertisement -

ಅಂಕಿತಾ ಭಂಡಾರಿ ಕೊಲೆ ಪ್ರಕರಣದಲ್ಲಿ ಹೆಸರು ತಳುಕು ಹಾಕಿಕೊಂಡಿದ್ದ ಬಿಜೆಪಿ ನಾಯಕ ದುಷ್ಯಂತ್ ಕುಮಾರ್ ಗೌತಮ್ ಅವರನ್ನು ಸಿಕ್ಕಿಂ ರಾಜ್ಯಪಾಲರನ್ನಾಗಿ ನೇಮಕ ಮಾಡಿರುವುದನ್ನು ವಿರೋಧಿಸಿ, ಅಂಕಿತಾ ಪೋಷಕರೊಂದಿಗೆ ಕಾಂಗ್ರೆಸ್ ನಾಯಕರು ದೆಹಲಿಯ ಇಂಡಿಯಾ ಗೇಟ್ ಬಳಿ ಬುಧವಾರ (ಅ.14) ಆಹೋರಾತ್ರಿ ಧರಣಿ ನಡೆಸಿದರು.

ಉತ್ತರಾಖಂಡದ ರಿಷಿಕೇಶದಲ್ಲಿ 2022ರಲ್ಲಿ 19 ವರ್ಷದ ಯುವತಿ ಅಂಕಿತಾ ಭಂಡಾರಿ ಅವರನ್ನು ಕೊಲೆ ಮಾಡಲಾಗಿತ್ತು. ರಿಷಿಕೇಶದ ಬಳಿಯ ಭೋಗ್‌ಪುರದಲ್ಲಿರುವ ‘ವನಂತರಾ ರೆಸಾರ್ಟ್’ನಲ್ಲಿ ರಿಸೆಪ್ಷನಿಸ್ಟ್ ಆಗಿದ್ದ ಅಂಕಿತಾ ಅವರನ್ನು ವಿಐಪಿ ಅತಿಥಿಯೊಬ್ಬರಿಗೆ ವಿಶೇಷ ಸೇವೆ (ಲೈಂಗಿಕವಾಗಿ ಸಹಕರಿಸುವಂತೆ) ನೀಡುವಂತೆ ಒತ್ತಾಯಿಸಲಾಗಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಅಂಕಿತಾ ಅವರನ್ನು, ರಿಷಿಕೇಶದ ಚಿಲಾ ಕಾಲುವೆಗೆ ತಳ್ಳಿ ಕೊಲೆ ಮಾಡಲಾಗಿತ್ತು ಎಂಬುವುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.

ಈ ಪ್ರಕರಣದಲ್ಲಿ ಬಿಜೆಪಿ ಮಾಜಿ ನಾಯಕ ವಿನೋದ್ ಆರ್ಯನ ಮಗ ಹಾಗೂ ರೆಸಾರ್ಟ್ ಮಾಲೀಕನಾಗಿದ್ದ ಪುಲಕಿತ್ ಆರ್ಯ, ರೆಸಾರ್ಟ್ ಮ್ಯಾನೇಜರ್ ಸೌರಭ್ ಭಾಸ್ಕರ್ ಮತ್ತು ಸಹಾಯಕ ಮ್ಯಾನೇಜರ್ ಅಂಕಿತ್ ಗುಪ್ತಾಗೆ ಮೇ 2025ರಲ್ಲಿ ಉತ್ತರಾಖಂಡದ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.

ನ್ಯಾಯಾಲಯ ಅಪರಾಧಿಗಳಿಗೆ ಶಿಕ್ಷೆ ವಿಧಿಸಿದರೂ ಅಂಕಿತಾ ಪೋಷಕರು ಮತ್ತು ಸಾರ್ವಜನಿಕರ ಹೋರಾಟ ನಿಂತಿಲ್ಲ. ಏಕೆಂದರೆ, ಅಂಕಿತಾ ಯಾರಿಗೆ ‘ವಿಶೇಷ ಸೇವೆ’ ನೀಡಲು ನಿರಾಕರಿಸಿದ್ದರೋ, ಆ ಪ್ರಭಾವಿ ವಿಐಪಿ ಯಾರು ಎಂಬುದನ್ನು ಸರ್ಕಾರ ಬಹಿರಂಗಪಡಿಸಿಲ್ಲ ಮತ್ತು ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಪೋಷಕರು ಆರೋಪಿಸುತ್ತಿದ್ದಾರೆ.

ಇತ್ತೀಚೆಗೆ (ಡಿಸೆಂಬರ್-ಜನವರಿ ಅವಧಿಯಲ್ಲಿ) ಆಡಿಯೋ ಕ್ಲಿಪ್‌ವೊಂದು ಸೋರಿಕೆಯಾಗಿದ್ದು, ಅದರಲ್ಲಿ ಹಿರಿಯ ಬಿಜೆಪಿ ನಾಯಕ ದುಷ್ಯಂತ್ ಕುಮಾರ್ ಗೌತಮ್ ಅವರ ಹೆಸರು ಕೇಳಿಬಂದಿದೆ. ಇದೀಗ ಅಕ್ಟೋಬರ್ 2026ರಲ್ಲಿ ದುಷ್ಯಂತ್ ಕುಮಾರ್ ಗೌತಮ್ ಅವರನ್ನು ಸಿಕ್ಕಿಂ ರಾಜ್ಯಪಾಲರನ್ನಾಗಿ ನೇಮಿಸಿರುವುದರಿಂದ, ಅಂಕಿತಾ ಅವರ ಪೋಷಕರು ನ್ಯಾಯಕ್ಕಾಗಿ ದೆಹಲಿಯ ಇಂಡಿಯಾ ಗೇಟ್ ಬಳಿ ಬುಧವಾರ (ಅ.14) ಆಹೋರಾತ್ರಿ ಧರಣಿ ನಡೆಸಿದರು.

ಅಂಕಿತಾ ಪೋಷಕರ ಹೋರಾಟಕ್ಕೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಪವನ್ ಖೇರಾ, ಸುಪ್ರಿಯಾ ಶ್ರೀನೇತ್, ಕಾಝೀ ನಿಝಾಮುದ್ದೀನ್ ಸೇರಿದಂತೆ ಕಾಂಗ್ರೆಸ್ ನಾಯಕರು ಸಾಥ್ ನೀಡಿದ್ದರು.

ಗುರುವಾರ ಮುಂಜಾನೆ ಸುಮಾರು 4 ಗಂಟೆಗೆ ಧರಣಿ ಸ್ಥಳಕ್ಕೆ ಆಗಮಿಸಿದ ದೆಹಲಿ ಪೊಲೀಸರು ಮತ್ತು ಸಿಆರ್‌ಪಿಎಫ್ ಸಿಬ್ಬಂದಿ ಅಂಕಿತಾ ಪೋಷಕರು, ಕಾಂಗ್ರೆಸ್ ನಾಯಕರು ಸೇರಿದಂತೆ ಧರಣಿ ಕುಳಿತರವನ್ನು ವಶಕ್ಕೆ ಪಡೆದರು. ನಂತರ ಬೆಳಿಗ್ಗೆ 5 ಗಂಟೆಯ ಸುಮಾರಿಗೆ ಎಲ್ಲರನ್ನೂ ಬಿಡುಗಡೆ ಮಾಡಿದರು.

ಪೊಲೀಸರ ವಶದಲ್ಲಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅಂಕಿತಾ ಅವರ ತಂದೆ, ದುಷ್ಯಂತ್ ಕುಮಾರ್ ಗೌತಮ್ ಅವರ ನೇಮಕಾತಿಯನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ 24 ಗಂಟೆಗಳ ಗಡುವು ನೀಡಿದ್ದಾರೆ. ಸರ್ಕಾರ ನಮ್ಮ ಬೇಡಿಕೆಗೆ ಮಣಿಯದಿದ್ದರೆ ದೇಶದಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಅಂಕಿತಾಳ ಸಾವಿನಲ್ಲಿ ಗೌತಮ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಆಕೆಯ ಕುಟುಂಬವು ಆರೋಪಿಸಿದೆ.

ಅಂಕಿತಾ ಕೊಲೆ ಪ್ರಕರಣದ ಸಿಬಿಐ ತನಿಖೆ ಪೂರ್ಣಗೊಳ್ಳುವವರೆಗೂ, ಸಿಕ್ಕಿಂ ರಾಜ್ಯಪಾಲರಾಗಿ ದುಷ್ಯಂತ್ ಕುಮಾರ್ ಗೌತಮ್ ಅವರ ನೇಮಕಾತಿಯನ್ನು ತಡೆಹಿಡಿಯಬೇಕೆಂದು ಪೋಷಕರು ಒತ್ತಾಯಿಸುತ್ತಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಂತಿಯುತ ಪ್ರತಿಭಟನಾಕಾರರು ಮತ್ತು ವಕೀಲರ ಮೇಲಿನ ಪೊಲೀಸ್ ದೌರ್ಜನ್ಯ: ಬಾಂಬೆ ಬಾರ್ ಅಸೋಸಿಯೇಷನ್‌ನಿಂದ ತೀವ್ರ ಖಂಡನೆ

ಅಕ್ಟೋಬರ್ 10, 2026 ರಂದು ನವದೆಹಲಿ ಮತ್ತು ಮುಂಬೈ ಸೇರಿದಂತೆ ವಿವಿಧ ನಗರಗಳಲ್ಲಿ ಶಾಂತಿಯುತ ಪ್ರತಿಭಟನಾಕಾರರು ಹಾಗೂ ವಕೀಲರ ಮೇಲೆ ನಡೆದಿರುವ ಪೊಲೀಸ್ ದೌರ್ಜನ್ಯ, ದೈಹಿಕ ಹಲ್ಲೆ ಮತ್ತು ಕಾನೂನುಬಾಹಿರ ಬಂಧನಗಳನ್ನು 'ಬಾಂಬೆ...

‘ದೇಶವನ್ನು ದಾರಿ ತಪ್ಪಿಸಬೇಡಿ’: ಸಿಜೆಪಿ ನಾಯಕರ ಬಂಧನ ಖಂಡಿಸಿದ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಮಾಧ್ಯಮ ಸಂಚಾಲಕ ಆಶಿಶ್ ಉಷಾ ಆಕ್ರೋಶ

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಕಾಕ್ರೋಚ್ ಜನತಾ...

ಎಸ್‌ಐಆರ್ ವಿರೋಧಿ ಹೋರಾಟಗಾರರ ಮೇಲೆ ಪೊಲೀಸರ ಕ್ರೌರ್ಯ: ವಿದ್ಯಾರ್ಥಿನಿಯ ಒಂದು ಕಿವಿಯ ಶ್ರವಣಶಕ್ತಿ ನಷ್ಟ, ರಾಹುಲ್ ಗಾಂಧಿ ಆರೋಪ

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮತ್ತು ಮತದಾರರ ಪಟ್ಟಿಯಲ್ಲಿನ ಅಕ್ರಮಗಳನ್ನು ವಿರೋಧಿಸಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ದೆಹಲಿ ಪೊಲೀಸರು ಯುವ ಕಾಂಗ್ರೆಸ್ ಹಾಗೂ ವಿದ್ಯಾರ್ಥಿ ಸಂಘಟನೆಗಳ ಕಾರ್ಯಕರ್ತರ ಮೇಲೆ...

SIR ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಸಂಸದ ಅಸಾದುದ್ದೀನ್ ಓವೈಸಿ

ಲೋಕಸಭಾ ಸಂಸದ ಹಾಗೂ ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು, ಚುನಾವಣಾ ಆಯೋಗದ ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (ಎಸ್‌ಐಆರ್) ಪ್ರಕ್ರಿಯೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಇದೇ ರೀತಿಯ ಬಾಕಿ...

SIR ಫಾರಂ-6 ವಿವಾದ : ವಿಚಾರಣೆ ದಿನಾಂಕ ಬದಲಾಯಿಸಿದ ಸುಪ್ರೀಂ ಕೋರ್ಟ್

ದೆಹಲಿ ಎಸ್‌ಐಆರ್ ಪ್ರಕ್ರಿಯೆಯ ಭಾಗವಾಗಿ ಯಾರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆಯೋ, ಆ ಮತದಾರರ ಹೆಸರುಗಳನ್ನು ಮರುಸೇರ್ಪಡೆ ಮಾಡಲು ಫಾರಂ 6 ಅನ್ನು ಭರ್ತಿ ಮಾಡುವಂತೆ ಕೇಳಲಾಗುತ್ತಿರುವ ಹಿನ್ನೆಲೆ, ಸುಪ್ರೀಂ ಕೋರ್ಟ್ ಇಂದು...

ನಮ್ಮನ್ನು ಪರಸ್ಪರ ಅನುಮಾನಿಸುವಂತೆ ಮಾಡುವುದು ಮೋದಿ ಸರ್ಕಾರದ ಉದ್ದೇಶ: ಸಿಇಸಿ ವಿರುದ್ಧದ ಹೋರಾಟದಲ್ಲಿ ಒಗ್ಗಟ್ಟಿಗೆ ಅಭಿಜೀತ್ ದೀಪ್ಕೆ ಕರೆ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಭಾಗಿಯಾಗಿರುವವರನ್ನು ಪರಸ್ಪರ ಅನುಮಾನಿಸುವಂತೆ ಮಾಡಿ, ಹೋರಾಟವನ್ನು ದುರ್ಬಲಗೊಳಿಸುವುದು ಮೋದಿ ಸರ್ಕಾರದ ತಂತ್ರವಾಗಿದೆ ಎಂದು ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ)...

SIR ವಿವಾದ: ಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿ ಮದನ್ ಲೋಕೂರ್ ನೇತೃತ್ವದಲ್ಲಿ ಅಕ್ಟೋಬರ್ 15ರಂದು ಸಾರ್ವಜನಿಕ ವಿಚಾರಣೆ!

ಭಾರತೀಯ ಚುನಾವಣಾ ಆಯೋಗವು ದೇಶಾದ್ಯಂತ ಕೈಗೊಂಡಿರುವ ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (Special Intensive Revision - SIR) ಪ್ರಕ್ರಿಯೆಯು ತೀವ್ರ ವಿವಾದಕ್ಕೆ ಹಾಗೂ ವಿರೋಧಕ್ಕೆ ಗುರಿಯಾಗಿರುವ ಬೆನ್ನಲ್ಲೇ, ಈ ಕುರಿತು...

DELHI PROTEST : ಸಿಜೆಪಿಯ ಸೌರವ್ ದಾಸ್, ಅಶುತೋಷ್ ರಾಂಕಾಗೆ 5 ದಿನಗಳ ನ್ಯಾಯಾಂಗ ಬಂಧನ

ಪ್ರತಿಭಟನಾ ಪ್ರದೇಶ ಎಂಬ ಮಾನ್ಯತೆಯನ್ನು ರದ್ದುಗೊಳಿಸಲಾಗಿರುವ ಜಂತರ್ ಮಂತರ್‌ಗೆ ಅಕ್ರಮವಾಗಿ ಪ್ರವೇಶಿಸುವ ಮೂಲಕ ಶಾಂತಿ ಕದಡುವುದಿಲ್ಲ ಎಂಬ ಬಾಂಡ್ ಉಲ್ಲಂಘಿಸಿದ ಆರೋಪದ ಮೇಲೆ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಾಯಕರಾದ ಸೌರವ್ ದಾಸ್...

ಎಸ್‌ಐಆರ್ ವಿರುದ್ಧದ ಹೋರಾಟಕ್ಕೆ ರೈತರ ಬೆಂಬಲ: ನವೆಂಬರ್ 26ರಂದು ದೇಶವ್ಯಾಪಿ ಪ್ರತಿಭಟನೆಗೆ ಸಂಯುಕ್ತ ಕಿಸಾನ್ ಮೋರ್ಚಾ ಕರೆ

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರುದ್ಧ ಹೋರಾಟ ನಡೆಸುತ್ತಿರುವ ವಿದ್ಯಾರ್ಥಿಗಳು ಮತ್ತು ಯುವಜನರಿಗೆ ಬೆಂಬಲವಾಗಿ ದೇಶಾದ್ಯಂತ ರೈತರನ್ನು ಬೀದಿಗಿಳಿಸಲು ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ನಿರ್ಧರಿಸಿದೆ. ಎಸ್‌ಐಆರ್ ಪ್ರಕ್ರಿಯೆಯನ್ನು...

‘ಪ್ರತಿಭಟನೆಗೆ ದ್ವಿಮುಖ ನೀತಿ ಇಲ್ಲ’: ಪ್ರತಿಭಟನಾಕಾರರ ಮೇಲೆ ಪೊಲೀಸರ ಬಲಪ್ರಯೋಗದ ಬಗ್ಗೆ ಸಮಗ್ರ ವರದಿ ಕೇಳಿದ ಡಿ.ಕೆ. ಶಿವಕುಮಾರ್

ಬೆಂಗಳೂರು: ಶಾಂತಿಯುತ ಪ್ರತಿಭಟನೆ ನಡೆಸುವುದು ಪ್ರಜಾಪ್ರಭುತ್ವದ ಮೂಲಭೂತ ಹಕ್ಕು. ದೆಹಲಿಯಲ್ಲಿ ಈ ಹಕ್ಕನ್ನು ಪ್ರತಿಪಾದಿಸಿ, ಬೆಂಗಳೂರಿನಲ್ಲಿ ಅದೇ ಹಕ್ಕನ್ನು ನಿರಾಕರಿಸುವ ದ್ವಿಮುಖ ನೀತಿ ಇರಬಾರದು ಎಂದು ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ....