Homeಮುಖಪುಟ‘ದಿ ವೈರ್‌’ ಮೇಲೆ ದೆಹಲಿ ಪೊಲೀಸರ ಕಾರ್ಯಾಚರಣೆ; ಡಿಜಿಪಬ್‌ ಖಂಡನೆ

‘ದಿ ವೈರ್‌’ ಮೇಲೆ ದೆಹಲಿ ಪೊಲೀಸರ ಕಾರ್ಯಾಚರಣೆ; ಡಿಜಿಪಬ್‌ ಖಂಡನೆ

- Advertisement -
- Advertisement -

ದೆಹಲಿ ಪೊಲೀಸ್ ಕ್ರೈಂ ಬ್ರಾಂಚ್ ಪೊಲೀಸರು ‘ದಿ ವೈರ್‌’ ಸುದ್ದಿಜಾಲತಾಣದ ಸಂಸ್ಥಾಪಕ ಸಂಪಾದಕರಾದ ಸಿದ್ಧಾರ್ಥ್ ವರದರಾಜನ್, ಎಂ.ಕೆ.ವೇಣು, ಸಿದ್ಧಾರ್ಥ್ ಭಾಟಿಯಾ, ಉಪಸಂಪಾದಕರಾದ ಜಾಹ್ನವಿ ಸೇನ್, ಉತ್ಪನ್ನ ಮತ್ತು ಉದ್ಯಮ ಮುಖ್ಯಸ್ಥ ಮಿಥುನ್ ಕಿಡಂಬಿ ಅವರ ಮನೆಗಳ ಮೇಲೆ ಕಾರ್ಯಾಚರಣೆ ನಡೆಸಿದ್ದಾರೆ. ದೆಹಲಿ ಮತ್ತು ಮುಂಬೈನಲ್ಲಿ ಮುತ್ತಿಗೆಹಾಕಲಾಗಿದೆ ಎಂದು ‘ದಿ ವೈರ್‌’ ತಿಳಿಸಿದೆ.

ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ನೀಡಿರುವ ದೂರಿನ ಅನ್ವಯ ಎಫ್‌ಐಆರ್‌ ದಾಖಲಾಗಿದ್ದು, ಈ ಸಂಬಂಧ ಸೆಕ್ಷನ್ 91ರ ಅಡಿಯಲ್ಲಿ ನೋಟಿಸ್ ನೀಡಲಾಗಿದೆ.

ವೈರ್ ಸಂಸ್ಥೆಯ ಐವರೂ ಪೊಲೀಸರಿಗೆ ಸಹಕರಿಸಿದ್ದಾರೆ. ಪೋಲಿಸರು ಕೇಳಿದ ಎಲ್ಲ ತಾಂತ್ರಿಕ ಸಾಧನಗಳನ್ನು ನೀಡಲಾಗಿದೆ. ವಶಪಡಿಸಿಕೊಂಡ ಫೋನ್‌ಗಳು, ಕಂಪ್ಯೂಟರ್‌ಗಳು ಮತ್ತು ಐಪ್ಯಾಡ್‌ಗಳನ್ನು ತಟಸ್ಥ ಸ್ಥಳದಲ್ಲಿ ಇರಿಸಲು ಬೇಡಿಕೆ ಇರಿಸಿದ್ದೇವೆ. ಡಿವೈಸ್‌ಗಳು ಮತ್ತು ಅವುಗಳಲ್ಲಿನ ಡೇಟಾದ ಸಮಗ್ರತೆಯನ್ನು ಖಚಿತಪಡಿಸಿಕೊಳ್ಳಲು ಕ್ರಮ ವಹಿಸಿದ್ದೇವೆ ಎಂದು ‘ದಿ ವೈರ್‌’ ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಎಲ್ಲ ಸಹಕಾರದ ಹೊರತಾಗಿಯೂ ದೆಹಲಿಯ ಭಗತ್ ಸಿಂಗ್ ಮಾರ್ಕೆಟ್‌ನಲ್ಲಿರುವ ‘ದಿ ವೈರ್‌’ನ ಕಚೇರಿಯನ್ನೂ ಶೋಧಿಸಲಾಗಿದೆ. ನಮ್ಮ ವಕೀಲರೊಬ್ಬರನ್ನು ಆ ಸ್ಥಳದಲ್ಲಿದ್ದ ಅಧಿಕಾರಿಗಳು ಹೊರಗೆ ತಳ್ಳಿದ್ದಾರೆ. ನಮ್ಮ ಅಕೌಂಟ್ ಸಿಬ್ಬಂದಿ ಬಳಸುವ ಎರಡು ಕಂಪ್ಯೂಟರ್‌ಗಳಿಂದ ಹಾರ್ಡ್ ಡಿಸ್ಕ್‌ಗಳನ್ನೂ ಕ್ರೈಂ ಬ್ರಾಂಚ್‌ನವರು ವಶಕ್ಕೆ ಪಡೆದಿದ್ದಾರೆ ಎಂದಿದೆ.

ಬಿಜೆಪಿ ಸಾಮಾಜಿಕ ಮಾಧ್ಯಮ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ಸಲ್ಲಿಸಿದ ದೂರಿನ ಆಧಾರದ ಮೇಲೆ ವಂಚನೆ, ಫೋರ್ಜರಿ, ಮಾನನಷ್ಟ ಮತ್ತು ಕ್ರಿಮಿನಲ್ ಪಿತೂರಿ ಆರೋಪದ ಮೇಲೆ ಸಂಪಾದಕರ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಎರಡು ದಿನಗಳ ನಂತರ ಈ ದಾಳಿಗಳು ನಡೆದವು.

‍“ಪೊಲೀಸರು ಅಕ್ಟೋಬರ್‌ 31ರ ಸಂಜೆ 4.40ರ ಸುಮಾರಿಗೆ ಬಂದು 6 ಗಂಟೆಗೆ ವಾಪಾಸಾದರು” ಎಂದು ವೇಣು ಅವರು ‘ಸ್ಕ್ರಾಲ್‌’ಗೆ ತಿಳಿಸಿದ್ದಾರೆ. “ಅಮಿತ್ ಮಾಳವಿಯಾ ಸಲ್ಲಿಸಿದ ದೂರಿನ ಕಾರಣಕ್ಕಾಗಿ ದೆಹಲಿ ಪೊಲೀಸ್ ಅಪರಾಧ ವಿಭಾಗದ ಪರವಾಗಿ ಇಲ್ಲಿಗೆ ಬಂದಿದ್ದೇವೆ ಎಂದು ಅವರು ಹೇಳಿದರು. ಅವರು ನನ್ನ ಐಫೋನ್ ಮತ್ತು ಐಪ್ಯಾಡ್ ಅನ್ನು ವಶಕ್ಕೆ ಪಡೆದಿದ್ದಾರೆ” ಎಂದು ವಿವರಿಸಿದ್ದಾರೆ.

ನಾವು ಅವರಿಗೆ ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ ಎಂದಿರುವ ವರದರಾಜನ್, “ಅವರು ಕೇಳಿದ ಡಿವೈಸ್‌ಗಳು ಮತ್ತು ಪಾಸ್‌ವರ್ಡ್‌ಗಳನ್ನು ನಾವು ನೀಡಿದ್ದೇವೆ. ಅವರು ನಾಲ್ಕು ಸಾಧನಗಳನ್ನು ತೆಗೆದುಕೊಂಡಿದ್ದಾರೆ. ಒಂದು ಮ್ಯಾಕ್‌ಬುಕ್, ಎರಡು ಐಫೋನ್‌ಗಳು ಮತ್ತು ಒಂದು ಐಪ್ಯಾಡ್ ಅವರ ವಶಕ್ಕೆ ನೀಡಲಾಗಿದೆ” ಎಂದು ಸ್ಕ್ರಾಲ್‌ಗೆ ತಿಳಿಸಿದ್ದಾರೆ.

ಡಿಜಿಟಲ್ ಸುದ್ದಿ ವೇದಿಕೆಗಳ ಸಂಸ್ಥೆ ಖಂಡನೆ

11 ಡಿಜಿಟಲ್ ನ್ಯೂಸ್‌ ಸಂಸ್ಥೆಗಳ ಸಂಘಟನೆಯಾದ ‘ಡಿಜಿಪಬ್‌ ನ್ಯೂಸ್‌ ಇಂಡಿಯಾ ಫೌಂಡೇಷನ್‌’ ದಾಳಿಯನ್ನು ಖಂಡಿಸಿದೆ. ಆಡಳಿತಾರೂಢ ಬಿಜೆಪಿಯ ವಕ್ತಾರರು ಸಲ್ಲಿಸಿದ ದೂರಿನ ಆಧಾರದ ಮೇಲೆ ತಕ್ಷಣದ ಮತ್ತು ಅನಿಯಂತ್ರಿತ ದಾಳಿ ನಡೆಸಿರುವುದು ದುರುದ್ದೇಶಪೂರಿತವಾಗಿದೆ ಎಂದಿದೆ.

ಭಾರತದಲ್ಲಿ ಪತ್ರಿಕೋದ್ಯಮದ ವಿರುದ್ಧ ಭೀತಿಯನ್ನು ಸೃಷ್ಟಿಸುವುದು ಈ ದಾಳಿಯ ಉದ್ದೇಶವಾಗಿದೆ ಎಂದು ಡಿಜಿಪಬ್ ಹೇಳಿಕೆಯಲ್ಲಿ ತಿಳಿಸಿದೆ.

“ಇದಲ್ಲದೆ ದಿ ವೈರ್ ಹೊಂದಿರುವ ಗೌಪ್ಯ, ಸೂಕ್ಷ್ಮ ಡೇಟಾವನ್ನು ವಶಪಡಿಸಿಕೊಳ್ಳುವ ಮತ್ತು ನಕಲು ಮಾಡುವ ಅಪಾಯವೂ ದಾಳಿಯಲ್ಲಿ ಇರುವುದನ್ನು ತಳ್ಳಿಹಾಕಲಾಗುವುದಿಲ್ಲ” ಎಂದು ಆತಂಕ ವ್ಯಕ್ತಪಡಿಸಿದೆ.

ವೈರ್‌ v/s ಮೆಟಾ ಮತ್ತು ಮಾಳವಿಯಾ

ಬಿಜೆಪಿಯ ಐಟಿ ಮುಖ್ಯಸ್ಥ ಅಮಿತ್ ಮಾಳವಿಯಾ ವರದಿ ಮಾಡಿದ ನಂತರ ಯೋಗಿ ಆದಿತ್ಯನಾಥ್‌ ಕುರಿತ ಇನ್‌ಸ್ಟಾಗ್ರಾಮ್‌ ಪೋಸ್ಟ್‌ಅನ್ನು ತೆಗೆದುಹಾಕಲಾಗಿದೆ ಎಂದು ‘ದಿ ವೈರ್‌’ ವರದಿ ಮಾಡಿದ ಬಳಿಕ, ವಿವಾದ ಭುಗಿಲೆದ್ದಿತು.

“ಪೋಸ್ಟ್‌ನಲ್ಲಿ ನ್ಯೂಡಿಟಿ (ನಗ್ನತೆ) ಇದೆ ಎಂದು ಪೋಸ್ಟ್‌ಅನ್ನು ತೆರವು ಮಾಡಲಾಗಿದೆ. ಇಲ್ಲಿ ನಗ್ನತೆ ಮತ್ತು ಲೈಂಗಿಕ ವಿಷಯದ ಮಾರ್ಗಸೂಚಿ ಉಲ್ಲಂಘನೆಯಾಗಿದೆ” ಎಂದು ಸೂಚನೆಯನ್ನು Superhumans of Cringetopia ಖಾತೆಗೆ ನೀಡಿರುವುದಾಗಿ ವೈರ್‌ ಆರೋಪಿಸಿತ್ತು.

ಕೆಲವು ಸ್ವಯಂಚಾಲಿತ ವ್ಯವಸ್ಥೆಯಲ್ಲಿನ ದೋಷದಿಂದಾಗಿ ಪೋಸ್ಟ್ ಅನ್ನು ತೆಗೆದುಹಾಕಲಾಗಿದೆ ಎಂದು ಹಲವರು ಭಾವಿಸಿದರು. ಆದರೆ ಅಕ್ಟೋಬರ್ 10ರಂದು ‘ದಿ ವೈರ್’ ಬೇರೆಯ ಆರೋಪ ಮಾಡಿ, “ಮಾಳವಿಯಾ ಅವರ ನಿರ್ದೇಶನದ ಮೇರೆಗೆ ಮೆಟಾ ಪೋಸ್ಟ್‌ ತೆಗೆದುಹಾಕಿದೆ” ಎಂದಿತ್ತು.

ಇದನ್ನೂ ಓದಿರಿ: ಗುಜರಾತ್‌: ‘ಮೊರ್ಬಿ ಸೇತುವೆ ನವೀಕರಣದ ವೇಳೆ ಹಳೆಯ ತಂತಿ ಬದಲಿಸಿರಲಿಲ್ಲ’

“ಇನ್‌ಸ್ಟಾಗ್ರಾಮ್‌ನ ಎಕ್ಸ್-ಚೆಕ್ (ಕ್ರಾಸ್‌ಚೆಕ್‌) ಕಾರ್ಯಕ್ರಮದ ಸವಲತ್ತು ಪಡೆಯುವ ಮೂಲಕ ಮಾಳವಿಯಾ ರಿಪೋರ್ಟ್ ಮಾಡಿದ್ದಾರೆ. ಹೀಗಾಗಿ ಅವರು ವರದಿ ಮಾಡುವ ಯಾವುದೇ ಪೋಸ್ಟ್‌ಗಳನ್ನು ತಕ್ಷಣವೇ ಪ್ಲಾಟ್‌ಫಾರ್ಮ್‌ನಿಂದ ತೆಗೆದುಹಾಕಲಾಗುತ್ತದೆ. ಮೆಟಾ ನಿಯಮಗಳನ್ನು ಉಲ್ಲಂಘಿಸದಿದ್ದರೂ ಯಾವುದೇ ಪರಿಶೀಲನೆಯಾಗಿಲ್ಲ” ಎಂದು ವೈರ್‌ ವರದಿ ಆರೋಪಿಸಿತ್ತು. ಈ ವರದಿಯ ಬಳಿಕ ‘ದಿ ವೈರ್‌’ ಮತ್ತು ‘ಮೆಟಾ’ ನಡುವೆ ವಾಗ್ವಾದ ನಡೆದಿತ್ತು.

ಮತ್ತೊಂದು ವರದಿ ಬರೆದ ವೈರ್‌‌, “ವೈರ್‌ನ ಸಂಪಾದಕರಾದ ಸಿದ್ಧಾರ್ಥ್ ವರದರಾಜನ್‌ ‌ಹಾಗೂ ಪತ್ರಕರ್ತೆ ಜಾಹ್ನವಿ ಸೇನ್‌ ಅವರ ಖಾತೆಗಳನ್ನು ಮೆಟಾ ಸಂಸ್ಥೆಯು ‘ವಾಚ್‌ಲಿಸ್ಟ್’ನಲ್ಲಿ ಇಟ್ಟಿದೆ” ಎಂದು ಆರೋಪಿಸಿತು. ವಾಗ್ವಾದ ನಡೆದು ಅಂತಿಮವಾಗಿ ‘ದಿ ವೈರ್‌’- ತನ್ನ ವರದಿಗಳನ್ನು ಮರುಪರಿಶೀಲಿಸುವುದಾಗಿ ತಿಳಿಸಿತ್ತು.

“ನಾವು ನಮ್ಮ ವಿಷಯದ ನಿರ್ಧಾರಗಳ ಪರಿಶೀಲನೆಯನ್ನು ಸ್ವೀಕರಿಸುತ್ತೇವೆ. ಆದರೆ ಸುಳ್ಳು ಆರೋಪಗಳನ್ನು ತಿರಸ್ಕರಿಸುತ್ತೇವೆ. ದಿ ವೈರ್ ಈ ವಂಚನೆಯ ಬಲಿಪಶು ಎಂದು ನಾವು ಭಾವಿಸುತ್ತೇವೆ, ಆದರೆ ಅಪರಾಧಿ ಅಲ್ಲ” ಎಂದಿತ್ತು. ಇದಾದ ಬಳಿಕ ಮಾಳವಿಯ ದೂರು ನೀಡಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಸರ್ಕಾರಿ ಪೊಲೀಸ್ ಒಂದು ರಾಜಕೀಯ ಪಕ್ಷದ ವಕ್ತಾರ ದೂರು ನೀಡಿದಾಕ್ಷಣ ಪತ್ರಕಾ ಸಂಸ್ಥೆ ಮೇಲೆ ದಾಳಿ ಮಾಡತ್ತೆ ಅಂದರೆ ಪೊಲೀಸರು ಸಂವಿಧಾನದ ಪ್ರಕಾರ ಕೆಲಸಮಾಡುತ್ತಾ ಇದ್ದಾರೊ ಅಥವಾ ಆ ಪಕ್ಷದ ಗುಲಾಮಗಿರಿ ಮಾಡುತ್ತಾ ಇದ್ದಾರಾ ಅದು ಸಾರ್ವಜನಿಕರ ತೆರಿಗೆ ಹಣದಿಂದ ಸಂಬಳ ಸವಲತ್ತು ಪಡೆದು? ಇವರೆಲ್ಲಾ ಸಗಣಿ ತಿನ್ನೋಕೆಯೇ ಲಾಯಕ್ಕೂ.

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...