Homeಮುಖಪುಟದೆಹಲಿ: ಇಸ್ರೇಲಿ ದಾಳಿ ಖಂಡಿಸಿ ಪ್ಯಾಲೆಸ್ತೀನ್ ಪರ SFI ಸಂಘಟನೆಯಿಂದ ಪ್ರತಿಭಟನೆ

ದೆಹಲಿ: ಇಸ್ರೇಲಿ ದಾಳಿ ಖಂಡಿಸಿ ಪ್ಯಾಲೆಸ್ತೀನ್ ಪರ SFI ಸಂಘಟನೆಯಿಂದ ಪ್ರತಿಭಟನೆ

- Advertisement -
- Advertisement -

ಪ್ಯಾಲೆಸ್ತೀನ್ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯಿಂದಾಗಿ ಸಾವಿರಾರು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಸಮಯದಲ್ಲಿ ಪ್ಯಾಲೆಸ್ತೀನ್ ಪರ ಭಾರತದ ಅನೇಕ ಕಡೆ ಇಂತಹ ಪ್ರತಿಭಟನೆಗಳು ನಡೆಯುತ್ತಿದೆ.

ದೆಹಲಿಯ ಇಸ್ರೇಲಿ ರಾಯಭಾರ ಕಚೇರಿ ಬಳಿ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಸದಸ್ಯರು ಇಂದು (ಅ.23)  ಪ್ಯಾಲೆಸ್ತೀನ್ ಪರ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾಕಾರರನ್ನು ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ಈ ಬಗ್ಗೆ ಒಂದು ವಿಡಿಯೋವನ್ನು ಎಎನ್ಐ ಹಂಚಿಕೊಂಡಿದ್ದು, ವಿಡಿಯೋದಲ್ಲಿ ಪ್ರತಿಭಟನಾನಿರತರನ್ನು ಪೊಲೀಸರು ಎಳೆದುಕೊಂಡು ಹೋಗುವುದನ್ನು ಕಾಣಬಹುದು. ಪ್ರತಿಭಟನಾಕಾರರು ಪೋಸ್ಟರ್​​ನ್ನು ಹಿಡಿದುಕೊಂಡು ಇಸ್ರೇಲ್​​ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಪ್ಯಾಲೆಸ್ತೀನ್ ಪರ ಪ್ರತಿಭಟನೆ ಬಿಹಾರ ಹಾಗೂ ಕೋಲ್ಕತ್ತಾದಲ್ಲಿ ನಡೆದಿತ್ತು. ಅಕ್ಟೋಬರ್​​​ 13ರಂದು ಬಿಹಾರದಲ್ಲಿ ಪ್ಯಾಲೆಸ್ತೀನ್ ಪರ ಮೆರವಣಿಗೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಪ್ಯಾಲೆಸ್ತೀನ್ ಪರ ಘೋಷಣೆ ಮಾಡಿದ್ದಾರೆ. ಜತೆಗೆ ಇಸ್ರೇಲ್​​​ ಧ್ವಜಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು.

ಅಕ್ಟೋಬರ್​ 12ರಂದು ಕೋಲ್ಕತ್ತಾದಲ್ಲಿ ಪ್ಯಾಲೆಸ್ತೀನ್ ಪರ ಅಲ್ಪಸಂಖ್ಯಾತ ಯುವ ಒಕ್ಕೂಟವು ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ಕಮ್ರುಜ್ಜಮಾನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಹಮಾಸ್​​ ಅಕ್ಟೋಬರ್​​ 7ರಂದು ಬೆಳಿಗ್ಗೆ ಇಸ್ರೇಲ್​​ ಮೇಲೆ ರಾಕೆಟ್​​​ ದಾಳಿ ಮಾಡಿತ್ತು. ಆ ನಂತರ ಇಸ್ರೇಲ್​​​ ಗಾಜಾ ಪಟ್ಟಿ ಸೇರಿಸಿದಂತೆ ಹಮಾಸ್​​​ ತಾಣಗಳ ಮೇಲೆ ದಾಳಿ ಮಾಡಿದೆ. ಇದರ ಜತೆಗೆ ವೈಮಾನಿಕ ದಾಳಿಯನ್ನು ಕೂಡ ಮಾಡಿದೆ. ಹಮಾಸ್​​ ದಾಳಿಯಿಂದ 1,400 ಇಸ್ರೇಲಿಗರು ಹಾಗೂ ಇಸ್ರೇಲ್​​ ನಡೆಸಿದ ದಾಳಿಯಲ್ಲಿ 4,700 ಪ್ಯಾಲೆಸ್ಟೀನಿಯರು ಸಾವನ್ನಪ್ಪಿದ್ದಾರೆ.

ಪ್ಯಾಲೇಸ್ಟಿನಿಯನ್ ಆರೋಗ್ಯ ಸಚಿವಾಲಯದ ಪ್ರಕಾರ, ಗಾಜಾದಲ್ಲಿ ಸಾವಿನ ಸಂಖ್ಯೆ 4,741 ಏರಿಕೆಯಾಗಿದೆ. ಇಸ್ರೇಲ್​​ ಮುತ್ತಿಗೆ ಹಾಕಿದ ಪ್ರದೇಶದಲ್ಲಿ 16 ಸಾವಿರ ಜನ ಗಾಯಗೊಂಡಿದ್ದಾರೆ. ಇದರ ಜತೆಗೆ ಒತ್ತೆಯಾಳುಗಳನ್ನು ಹಮಾಸ್​​ ಕೆಲವರನ್ನು ಬಿಡುಗಡೆ ಮಾಡಿದೆ. ಇನ್ನು ಭಾರತ ತನ್ನ ಜನರನ್ನು ತವರಿಗೆ ಆಪರೇಷನ್​​ ಅಜಯ್​​ ಮೂಲಕ ಕರೆಸಿಕೊಳ್ಳುತ್ತಿದೆ.

ಇದನ್ನೂ ಓದಿ: ಗಾಜಾದಿಂದ ತೆರಳದಿದ್ದರೆ ಭಯೋತ್ಪಾದಕರೆಂದು ಪರಿಗಣಿಸಲಾಗುವುದು: ಪ್ಯಾಲೆಸ್ತೀನಿಯರಿಗೆ ಇಸ್ರೇಲ್ ಎಚ್ಚರಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸ್ವಾತಿ ಮಲಿವಾಲ್‌ ವಿರುದ್ಧ ದೂರು ನೀಡಿದ ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್

0
ದೆಹಲಿ ಎಎಪಿ ನಾಯಕಿ, ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್‌ ಮೇಲಿನ ಹಲ್ಲೆ ಪ್ರಕರಣ ವಿಭಿನ್ನ ತಿರುವನ್ನು ಪಡೆದುಕೊಂಡಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಬಿಭವ್ ಕುಮಾರ್ ಅವರು ಶುಕ್ರವಾರ ಎಎಪಿ...