Homeಚಳವಳಿಅವರು ಮನೆಯಲ್ಲಿದ್ದರೂ ಸಾಯುತ್ತಿದ್ದರು: ರೈತರ ಸಾವಿನ ಬಗ್ಗೆ ನಾಲಗೆ ಹರಿಯ ಬಿಟ್ಟ ಹರಿಯಾಣ ಕೃಷಿ ಸಚಿವ

ಅವರು ಮನೆಯಲ್ಲಿದ್ದರೂ ಸಾಯುತ್ತಿದ್ದರು: ರೈತರ ಸಾವಿನ ಬಗ್ಗೆ ನಾಲಗೆ ಹರಿಯ ಬಿಟ್ಟ ಹರಿಯಾಣ ಕೃಷಿ ಸಚಿವ

ಕೆಲವು ರೈತರು ಸಹಾನುಭೂತಿಗಾಗಿ ಮತ್ತು ಕೆಲವರು ಜಾತಿಯ ಕಾರಣಕ್ಕಾಗಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

- Advertisement -
- Advertisement -

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನನ್ನು ವಿರೋಧಿಸಿ ನಡೆಯುತ್ತಿರುವ ಹೋರಾಟದಲ್ಲಿ ಹಲವಾರು ರೈತರು ಸಾವನ್ನಪ್ಪಿದ್ದಾರೆ. ಈ ರೈತರ ಕುರಿತ ಪ್ರಶ್ನೆಗಳಿಗೆ ಹರಿಯಾಣ ಕೃಷಿ ಸಚಿವ ಜೆ.ಪಿ. ದಲಾಲ್, ಅವರು ಮನೆಯಲ್ಲಿದ್ದರೂ ಸಾಯುತ್ತಿದ್ದರು. ಕೆಲವು ರೈತರು ಸಹಾನುಭೂತಿಗಾಗಿ ಮತ್ತು ಕೆಲವರು ಜಾತಿಯ ಕಾರಣದಿಂದಾಗಿ ತಮ್ಮ ಪ್ರಾಣವನ್ನು ಕಳೆದುಕೊಂಡರು ಎಂದು ಉತ್ತರಿಸಿ ವಿವಾದಕ್ಕೊಳಗಾಗಿದ್ದಾರೆ.

ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ಆಂದೋಲನದಲ್ಲಿ ವಿವಿಧ ಕಾರಣಗಳಿಂದ ಸುಮಾರು 200 ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ಮಾದ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಅವರು (ರೈತರು) ಮನೆಯಲ್ಲಿಯೂ ಸಾಯುತ್ತಿದ್ದರು. ಅವರು ಇಲ್ಲಿ ಸಾಯುತ್ತಿಲ್ಲವೇ? ನನ್ನ ಮಾತುಗಳನ್ನು ಕೇಳಿ, ಒಂದೆರೆರಡು ಲಕ್ಷ ಜನರಲ್ಲಿ, ಆರು ತಿಂಗಳಲ್ಲಿ 200 ಮಂದಿ ಸಾಯುದಿಲ್ಲವೇ? ಕೆಲವರು ಹೃದಯಾಘಾತದಿಂದ ಸಾವಿಗೀಡಾದರು, ಕೆಲವರು ಜ್ವರದಿಂದ ಸಾವಿಗೀಡಾದರು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮೋದಿ ಸತ್ಯ ಒಪ್ಪಿಕೊಂಡಿದ್ದಾರೆ, ಹಾಗೆಯೆ ಕಾಯ್ದೆ ವಾಪಸ್ ಪಡೆಯಲಿ: ದರ್ಶನ್ ಪಾಲ್

“ಒಂದು ವಿಷಯ ಹೇಳಿ, ಭಾರತದಲ್ಲಿ ಸರಾಸರಿ ಜೀವಿತಾವಧಿ ಎಷ್ಟು ಮತ್ತು ವರ್ಷದಲ್ಲಿ ಎಷ್ಟು ಮಂದಿ ಸಾಯುತ್ತಾರೆ. 135 ಕೋಟಿ ಜನರಲ್ಲಿ ಪ್ರತಿಯೊಬ್ಬ ನಾಗರಿಕನ ಸಾವಿಗೆ ನನ್ನ ಸಹಾನುಭೂತಿಯಿದೆ. ಭಾರತವು ಒಂದೇ ಆಗಿದ್ದು, ಪ್ರತಿಯೊಬ್ಬ ಭಾರತೀಯನ ಹಕ್ಕುಗಳು ಒಂದೇ” ಎಂದು ಹೇಳಿದ್ದಾರೆ.

ಆಂದೋಲನದ ಸಮಯದಲ್ಲಿ ರೈತರು ಪ್ರಾಣ ಕಳೆದುಕೊಂಡ ರೀತಿ ಕುರಿತು ಮಾಧ್ಯಮಗಳ ಪ್ರಶ್ನೆಗಳಿಗೆ ದಲಾಲ್, “ಅವರು ಯಾವುದೇ ಅಪಘಾತದಲ್ಲಿ ಸಾಯಲಿಲ್ಲ, ಅವರು ತಮ್ಮ ಸ್ವಂತ ಇಚ್ಛೆಯಿಂದ ಸಾವನ್ನಪ್ಪಿದರು…. ಅವರಿಗೆ ನನ್ನ ಸಂತಾಪವನ್ನು ಅರ್ಪಿಸುತ್ತೇನೆ. ಕೆಲವರು ಸಹಾನುಭೂತಿಗಾಗಿ ಮತ್ತು ಕೆಲವರು ಜಾತಿಯ ಕಾರಣದಿಂದಾಗಿ ತಮ್ಮ ಪ್ರಾಣವನ್ನು ಕಳೆದುಕೊಂಡರು” ಎಂದು ಅವರು ಹೇಳಿದ್ದಾರೆ.

ದಲಾಲ್‌ ಅವರ ಹೇಳಿಕೆಗೆ ಕಾಂಗ್ರೆಸ್‌‌ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, “ಸಂವೇದನಾಶೀಲ ಮತ್ತು ಸಂಸ್ಕೃತಿಯಿಲ್ಲದ ವ್ಯಕ್ತಿ ಮಾತ್ರ ತಮ್ಮ ಬೇಡಿಕೆಗಳಿಗಾಗಿ ಹೆಣಗಾಡುತ್ತಿರುವ ಅನ್ನದಾತರಿಗೆ ಅಂತಹ ಪದಗಳನ್ನು ಬಳಸಬಹುದು. ಆದರೆ, ಇಷ್ಟಾಗಿಯು ಅವರಿಗೆ ನಾಚಿಕೆಪಡುತ್ತಿಲ್ಲ. ಈ ಹಿಂದೆ ರೈತರನ್ನು ಪಾಕಿಸ್ತಾನಿ, ಚೀನೀ ಬೆಂಬಲಿಗರು ಎಂದು ಕರೆದಿದ್ದ ಹರಿಯಾಣದ ಕೃಷಿ ಸಚಿವ ಜೆ.ಪಿ. ದಲಾಲ್ ಅವರನ್ನು ರಾಜ್ಯದ ಮಂತ್ರಿ ಮಂಡಳಿಯಿಂದ ವಜಾಗೊಳಿಸಬೇಕು” ಎಂದು ಹೇಳಿದ್ದಾರೆ.

ಇದನ್ನೂ ಓದಿ: ರೈತರಿಗೆ ಪ್ರತಿಭಟಿಸುವ ಹಕ್ಕಿದೆ: ರೈತ ಹೋರಾಟ ಬೆಂಬಲಿಸಿದ ಅಮೆರಿಕ ರಾಜಕಾರಣಿಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಅಮೆರಿಕದ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಬಗ್ಗೆ ಸ್ಯಾಮ್ ಪಿತ್ರೋಡಾ ಕೊಟ್ಟಿದ್ದ ವಿವರಣೆಯನ್ನು ‘ರಾಜಕೀಯ ಅಸ್ತ್ರ’...

0
ಲೋಕಸಭೆ ಚುನಾವಣೆ ಹಿನ್ನೆಲೆ ಪ್ರಧಾನಿ ಮೋದಿ ಹಾದಿಯಾಗಿ ಬಿಜೆಪಿ ನಾಯಕರು ವಿವಾದಾತ್ಮಕ ಹೇಳಿಕೆ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಮತ್ತು ಕಾಂಗ್ರೆಸ್‌ನ ಪ್ರಣಾಳಿಕೆ ವಿರುದ್ಧ ವಾಗ್ಧಾಳಿ ನಡೆಸುತ್ತಾ ಬಂದಿದ್ದಾರೆ. ಈ ಮಧ್ಯೆ ಭಾರತೀಯ ಸಾಗರೋತ್ತರ...