Homeಮುಖಪುಟರಾಮನ ಹೆಸರಿಗೆ ಕಳಂಕ ತರಬೇಡಿ’: ರಾಮಮಂದಿರ ದೇಣಿಗೆ ಪ್ರಕರಣದ ಚಾರ್ಜ್‌ಶೀಟ್‌ ವಿಳಂಬದ ಕುರಿತು ಕಾಂಗ್ರೆಸ್‌ ಆಕ್ರೋಶ

ರಾಮನ ಹೆಸರಿಗೆ ಕಳಂಕ ತರಬೇಡಿ’: ರಾಮಮಂದಿರ ದೇಣಿಗೆ ಪ್ರಕರಣದ ಚಾರ್ಜ್‌ಶೀಟ್‌ ವಿಳಂಬದ ಕುರಿತು ಕಾಂಗ್ರೆಸ್‌ ಆಕ್ರೋಶ

- Advertisement -
- Advertisement -

ಅಯೋಧ್ಯೆಯ ರಾಮಮಂದಿರದ ದೇಣಿಗೆ ಹಣದಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ಚಾರ್ಜ್‌ಶೀಟ್‌ ಸಲ್ಲಿಕೆ ಕುರಿತು ಕಾಂಗ್ರೆಸ್‌ ಪ್ರಶ್ನೆಗಳನ್ನು ಎತ್ತಿದ್ದು, ಪ್ರಕರಣದಲ್ಲಿ ಪ್ರಭಾವಿ ವ್ಯಕ್ತಿಗಳನ್ನು ರಕ್ಷಿಸಲಾಗುತ್ತಿದೆಯೇ ಎಂಬ ಅನುಮಾನ ವ್ಯಕ್ತಪಡಿಸಿದೆ. ದೇಣಿಗೆ ನಿರ್ವಹಣೆ ಮತ್ತು ಹಣಕಾಸು ವ್ಯವಸ್ಥೆಯ ಸಮಗ್ರ ಫೋರೆನ್ಸಿಕ್ ಆಡಿಟ್‌ (ವಿಧಿವಿಜ್ಞಾನ ಲೆಕ್ಕಪರಿಶೋಧನೆ) ನಡೆಸಬೇಕು ಎಂದು ಪಕ್ಷ ಆಗ್ರಹಿಸಿದೆ.

ಮಂಗಳವಾರ ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಹಾಗೂ ಸಂವಹನ ವಿಭಾಗದ ಉಸ್ತುವಾರಿ ಜೈರಾಮ್‌ ರಮೇಶ್‌, ತನಿಖೆಯಲ್ಲಿ ಸಂಪೂರ್ಣ ಪಾರದರ್ಶಕತೆ ಇರಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

‘ರಾಮನ ಹೆಸರಿಗೆ ಕಳಂಕ ತರಬೇಡಿ’

ಜೈರಾಮ್‌ ರಮೇಶ್‌ ತಮ್ಮ ‘X’ (ಟ್ವಿಟರ್) ಖಾತೆಯಲ್ಲಿ, ರಾಮಮಂದಿರ ದೇಣಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 22ರ ‘ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್’ ಮಾಧ್ಯಮ ವರದಿಯನ್ನು ಉಲ್ಲೇಖಿಸಿ, ಬಾಲಿವುಡ್ ಹಾಡಿನ ಸಾಲಾದ ‘ರಾಮನ ಹೆಸರಿಗೆ ಕಳಂಕ ತರಬೇಡಿ’ (ರಾಮ್ ಕಾ ನಾಮ್ ಬದ್ನಾಮ್ ನಾ ಕರೋ) ಎಂಬ ಸಂದೇಶದೊಂದಿಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ದೇಣಿಗೆ ಅಕ್ರಮ ಪ್ರಕರಣದ ತನಿಖೆ ಆರಂಭವಾಗಿ ಸುಮಾರು ಮೂರು ತಿಂಗಳು ಪೂರ್ಣಗೊಳ್ಳುವ ಹಂತಕ್ಕೆ ಬಂದಿದ್ದರೂ ಇನ್ನೂ ಚಾರ್ಜ್‌ಶೀಟ್‌ ಸಲ್ಲಿಕೆಯಾಗದಿರುವುದನ್ನು ಅವರು ಪ್ರಶ್ನಿಸಿದ್ದಾರೆ. ಪ್ರಕರಣದಲ್ಲಿ ‘ದೊಡ್ಡ ಕುಳ’ಗಳನ್ನು ರಕ್ಷಿಸಲಾಗುತ್ತಿದೆಯೇ ಎಂಬ ಅನುಮಾನ ಮೂಡುತ್ತಿದೆ ಎಂದು ಆರೋಪಿಸಿರುವ ರಮೇಶ್‌, ಪ್ರಕರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಮೌನದ ಬಗ್ಗೆಯೂ ಪ್ರಶ್ನಿಸಿದ್ದಾರೆ. ರಾಮಮಂದಿರ ಟ್ರಸ್ಟ್‌ ಅನ್ನು ಏಕೆ ವಿಸರ್ಜಿಸಬಾರದು ಎಂಬ ಪ್ರಶ್ನೆಯನ್ನೂ ಅವರು ಎತ್ತಿದ್ದು, ಕೇವಲ ಸಣ್ಣ ಆರೋಪಿಗಳಷ್ಟೇ ಅಲ್ಲದೆ, ಮೇಲ್ವಿಚಾರಣೆ ನಡೆಸುತ್ತಿದ್ದವರ ಹೊಣೆಗಾರಿಕೆಯನ್ನೂ ಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ.

105 ಅಕ್ರಮ ಹಣ ತೆಗೆಯುವ ಘಟನೆ ಪತ್ತೆ

ವರದಿಗಳ ಪ್ರಕಾರ, ರಾಮಮಂದಿರ ಆವರಣದ ಸಿಸಿಟಿವಿ ದೃಶ್ಯಗಳ ವಿಧಿವಿಜ್ಞಾನ ಪರಿಶೀಲನೆಯಲ್ಲಿ 105 ಬಾರಿ ದೇಣಿಗೆ ಹಣವನ್ನು ಅಕ್ರಮವಾಗಿ ತೆಗೆದಿರುವ ಘಟನೆಗಳು ಪತ್ತೆಯಾಗಿವೆ. ಇದು ಆರಂಭಿಕ ತನಿಖೆಯಲ್ಲಿ ವರದಿಯಾಗಿದ್ದ 70 ಘಟನೆಗಳಿಗಿಂತ ಹೆಚ್ಚಿನ ಸಂಖ್ಯೆಯಾಗಿದೆ ಎಂದು ಎಸ್‌ಐಟಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸೆ.25ರೊಳಗೆ ಚಾರ್ಜ್‌ಶೀಟ್ ಸಲ್ಲಿಕೆ

ಇದರ ನಡುವೆ, ಸುಪ್ರೀಂ ಕೋರ್ಟ್‌ಗೆ ಉತ್ತರ ಪ್ರದೇಶ ಸರ್ಕಾರದ ಪರವಾಗಿ ಹಾಜರಾಗಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ಪ್ರಕರಣದ ಮೊದಲ ಚಾರ್ಜ್‌ಶೀಟ್‌ ಅನ್ನು ಸೆಪ್ಟೆಂಬರ್‌ 25ರೊಳಗೆ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ. ಮೊದಲ ಆರೋಪಿಯ ಬಂಧನದಿಂದ 90 ದಿನಗಳ ಅವಧಿ ಸೆಪ್ಟೆಂಬರ್‌ 25ರಂದು ಪೂರ್ಣಗೊಳ್ಳಲಿದ್ದು, ಆ ಅವಧಿಯೊಳಗೆ ಚಾರ್ಜ್‌ಶೀಟ್‌ ಸಲ್ಲಿಸದಿದ್ದರೆ ಆರೋಪಿಗಳಿಗೆ ಕಾನೂನಿನಡಿ ಡೀಫಾಲ್ಟ್‌ (ಸಹಜ) ಜಾಮೀನು ಪಡೆಯುವ ಅವಕಾಶ ಎದುರಾಗಬಹುದು ಎಂದು ಮೆಹ್ತಾ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.

ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯಕಾಂತ್‌ ನೇತೃತ್ವದ ಪೀಠವು, ವಿಶೇಷ ತನಿಖಾ ತಂಡ (SIT) ಸೀಲ್ಡ್‌ ಕವರ್‌ನಲ್ಲಿ ಸಲ್ಲಿಸಿರುವ ವಿವರವಾದ ಸ್ಥಿತಿಗತಿ ವರದಿಯನ್ನು ಪರಿಶೀಲಿಸಿದೆ. ತನಿಖೆ ಬಹುತೇಕ ಪೂರ್ಣಗೊಂಡಿದೆ ಎಂದು ಸರ್ಕಾರದ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಫೋರೆನ್ಸಿಕ್ ಆಡಿಟ್‌ಗೆ ಕಾಂಗ್ರೆಸ್‌ ಆಗ್ರಹ

ರಾಮಮಂದಿರ ಟ್ರಸ್ಟ್‌ನ ಹಣಕಾಸು ಹಾಗೂ ಆಡಳಿತ ವ್ಯವಸ್ಥೆಯ ಸಮಗ್ರ ಫೋರೆನ್ಸಿಕ್‌ ಆಡಿಟ್‌ ನಡೆಸಬೇಕು ಎಂದು ಕಾಂಗ್ರೆಸ್‌ ಆಗ್ರಹಿಸಿದೆ. ತನಿಖೆಯಲ್ಲಿ ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ತನಿಖೆ ಸಂಪೂರ್ಣ ಪಾರದರ್ಶಕವಾಗಿರಬೇಕು ಎಂಬುದು ಪಕ್ಷದ ಬೇಡಿಕೆಯಾಗಿದೆ. ಈ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್‌ ಮೇಲ್ವಿಚಾರಣೆಯಲ್ಲಿಯೇ ತನಿಖೆ ನಡೆಯಬೇಕು ಎಂಬ ಬೇಡಿಕೆಯನ್ನೂ ಕಾಂಗ್ರೆಸ್‌ ಮುಂದಿಟ್ಟಿದೆ.

ರಾಮಮಂದಿರದ ದೇಣಿಗೆ ನಿರ್ವಹಣೆಯಲ್ಲಿ ಅಕ್ರಮಗಳ ಆರೋಪಗಳು ಕೇಳಿಬಂದ ಬಳಿಕ ಹಲವು ಅರ್ಜಿದಾರರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದು, ಅವುಗಳಲ್ಲಿ ಸಿಬಿಐ (CBI) ತನಿಖೆ ಮತ್ತು ಟ್ರಸ್ಟ್‌ನ ಹಣಕಾಸಿನ ಫೋರೆನ್ಸಿಕ್‌ ಆಡಿಟ್‌ಗೆ ಆಗ್ರಹವೂ ಸೇರಿದೆ.

ಜುಲೈನಲ್ಲಿ ಎಸ್‌ಐಟಿ ರಚನೆ

ರಾಮಮಂದಿರ ದೇಣಿಗೆ ಅಕ್ರಮದ ಆರೋಪಗಳ ಕುರಿತು ಸುಪ್ರೀಂ ಕೋರ್ಟ್‌ ನಿರ್ದೇಶನದ ಮೇರೆಗೆ ಜುಲೈ 26 ರಂದು ಎರಡನೇ ಎಸ್‌ಐಟಿಯನ್ನು (SIT) ರಚಿಸಲಾಗಿತ್ತು. ತನಿಖಾ ತಂಡದಲ್ಲಿ ಫೋರೆನ್ಸಿಕ್ ಆಡಿಟರ್‌ ಅನ್ನು ಸೇರಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ನ್ಯಾಯಾಲಯ ಈ ಹಿಂದೆ ಸೂಚಿಸಿತ್ತು. ತನಿಖೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ಪಾರದರ್ಶಕತೆ ಖಚಿತಪಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದೂ ಪೀಠ ಹೇಳಿತ್ತು.

ಈ ಹಿನ್ನೆಲೆಯಲ್ಲಿ, ಸೆಪ್ಟೆಂಬರ್‌ 25ರೊಳಗೆ ಚಾರ್ಜ್‌ಶೀಟ್‌ ಸಲ್ಲಿಸುವುದಾಗಿ ಸರ್ಕಾರ ಸುಪ್ರೀಂ ಕೋರ್ಟ್‌ಗೆ ನೀಡಿರುವ ಮಾಹಿತಿ ಹಾಗೂ ಇದೇ ವಿಚಾರವಾಗಿ ಕಾಂಗ್ರೆಸ್‌ ಎತ್ತಿರುವ ಪ್ರಶ್ನೆಗಳು ಪ್ರಕರಣಕ್ಕೆ ಹೊಸ ರಾಜಕೀಯ ಆಯಾಮ ನೀಡಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಂದೇ ಮಾತರಂ ಕಡ್ಡಾಯವಲ್ಲ, ಹಾಡದಿದ್ದರೆ ಶಿಕ್ಷೆಯಿಲ್ಲ: ಸುಪ್ರೀಂ ಕೋರ್ಟ್ ಸ್ಪಷ್ಟನೆ

‘ವಂದೇ ಮಾತರಂ’ ದೇಶದ ರಾಷ್ಟ್ರೀಯ ಗೀತೆಯಾಗಿ (National Song) ಮುಂದುವರಿಯಲಿದೆ, ಆದರೆ ಸಂವಿಧಾನದ ವಿಧಿ 25 ಮತ್ತು 26ರ ಅಡಿಯಲ್ಲಿ ನೈಜ ಧಾರ್ಮಿಕ ಆಕ್ಷೇಪಣೆ ಹೊಂದಿರುವ ಯಾವುದೇ ವ್ಯಕ್ತಿಯು ಅದರ ಕೆಲವು ಚರಣಗಳನ್ನು...

ಉತ್ತರ ಪ್ರದೇಶ ಸೇರಿದಂತೆ 3 ರಾಜ್ಯಗಳ 12 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ದಿನಾಂಕ ಘೋಷಣೆ

ಭಾರತೀಯ ಚುನಾವಣಾ ಆಯೋಗವು (ಇಸಿಐ) 11 ರಾಜ್ಯಸಭಾ ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆಗಳು ಹಾಗೂ ಪಶ್ಚಿಮ ಬಂಗಾಳದ ಒಂದು ಸ್ಥಾನಕ್ಕೆ ಉಪಚುನಾವಣೆಯನ್ನು ಅಕ್ಟೋಬರ್ 16ರಂದು ನಡೆಸುವುದಾಗಿ ಘೋಷಿಸಿದೆ. ದ್ವೈವಾರ್ಷಿಕ ಚುನಾವಣೆಯಲ್ಲಿ ಮತದಾನ ನಡೆಯಲಿರುವ 11 ಸ್ಥಾನಗಳ...

ಪತ್ರಕರ್ತ ರವಿ ನಾಯರ್ ಬಂಧನ ಮುಂದುವರಿಕೆ: ಅದಾನಿ ಮಾನನಷ್ಟ ಪ್ರಕರಣದಲ್ಲಿ ಬಿಡುಗಡೆ ಅರ್ಜಿ ಮುಂದೂಡಿದ ಗುಜರಾತ್ ಹೈಕೋರ್ಟ್ 

ಅದಾನಿ ಎಂಟರ್‌ಪ್ರೈಸಸ್ ವಿರುದ್ಧದ ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ ಬಂಧನ ಪ್ರಶ್ನಿಸಿ ಪತ್ರಕರ್ತ ರವಿ ನಾಯರ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಗುಜರಾತ್ ಹೈಕೋರ್ಟ್ ಸೋಮವಾರ ಮುಂದೂಡಿದೆ. ನಾಯರ್ ಅವರ ಅರ್ಜಿಗೆ ಪ್ರತಿಕ್ರಿಯಿಸಲು ಅದಾನಿ ಎಂಟರ್‌ಪ್ರೈಸಸ್‌ಗೆ...

SIR ಹೆಸರಿನಲ್ಲಿ ಚುನಾವಣಾ ಆಯೋಗದ ವಿಐಪಿ ಹಾಗೂ ಸಾಮಾನ್ಯ ಮತದಾರರು ಎಂಬ ಪದವೇ ಅಸಂವಿಧಾನಿಕ: ಮಲ್ಲಿಕಾರ್ಜುನ ಖರ್ಗೆ

ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಹೆಸರಿನಲ್ಲಿ ದೇಶದ ಪ್ರಜೆಗಳ ಮತದಾನದ ಹಕ್ಕನ್ನೇ ಕಸಿಯಲಾಗುತ್ತಿದೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರದ ವಿರುದ್ಧ...

ದೆಹಲಿ ಎಸ್‌ಐಆರ್‌: ಮುಸ್ಲಿಂ, ಎಸ್‌ಸಿ ಹಾಗೂ ವಲಸಿಗರ ಪ್ರದೇಶಗಳಲ್ಲೇ ಭಾರೀ ಮತದಾರರ ಹೆಸರುಗಳ ಹೊರಗಿಡುವಿಕೆ: ವರದಿ

ನವದೆಹಲಿ: ದೆಹಲಿಯಲ್ಲಿ ನಡೆದಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ನಂತರ ಪ್ರಕಟಿಸಲಾದ ಕರಡು ಮತದಾರರ ಪಟ್ಟಿಯಲ್ಲಿ ಈ ಹಿಂದೆ ನೋಂದಾಯಿತರಾಗಿದ್ದ ಸುಮಾರು ಮೂವರಲ್ಲಿ ಒಬ್ಬರ ಹೆಸರು ಕಾಣೆಯಾಗಿರುವುದು ಗಮನಾರ್ಹ ಸಂಗತಿಯಾಗಿ ಹೊರಹೊಮ್ಮಿದೆ. ಅದರಲ್ಲೂ...

ಅಪಹರಣ ಪ್ರಕರಣದಲ್ಲಿ ಬಂಧನ: ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಗೆ ಶರಣಾದ ದಲಿತ ಯುವಕ

ಉತ್ತರ ಪ್ರದೆಶದ ಪ್ರತಾಪ್‌ಗಢದ ಪಟ್ಟಿ ಪೊಲೀಸ್ ಠಾಣೆಯ ತನಿಖಾ ಕೊಠಡಿಯ ಶೌಚಾಲಯದಲ್ಲಿ ಸೋಮವಾರ ಮುಂಜಾನೆ 22 ವರ್ಷದ ದಲಿತ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪ್ರತಾಪ್‌ಗಢ ಎಸ್‌ಪಿ,...

‘ಬಾಂಗ್ಲಾದೇಶಿ’ ಎಂಬ ಹಣೆಪಟ್ಟಿ, 87 ದಿನಗಳ ಬಂಧನ, ಬಳಿಕ ಜಾಮೀನು : ಇದು ಬಂಗಾಳಿ ಮುಸ್ಲಿಮನ ಕರುಣಾಜನಕ ಕಥೆ

ಜಲೀಲ್ ಅಖ್ತರ್ ಅವರು ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರ ಜಿಲ್ಲೆಯ ಬಾಗ್ರೋಯಿ ಗ್ರಾಮದಲ್ಲಿ 70 ವರ್ಷಗಳ ಕಾಲ ಅತ್ಯಂತ ಶಾಂತಿಯುತ ಮತ್ತು ನಿರಾಳವಾದ ಜೀವನವನ್ನು ನಡೆಸುತ್ತಿದ್ದರು. ಭೂ ರಹಿತ ಗ್ರಾಮಸ್ಥರಾಗಿದ್ದ ಅವರು, ದಿನಗೂಲಿ...

ಕೆಲಸ ಮಾಡಿಕೊಟ್ಟ ಅಧಿಕಾರಿಗಳಿಗೆ ಗೌರವಯುತವಾಗಿ ಕೊಡುವುದು ಧರ್ಮ: ಸಚಿವ ಶಿವಲಿಂಗೇಗೌಡ ವಿವಾದದ ಹೇಳಿಕೆ ಲೋಕಾಯುಕ್ತ ಮತ್ತು ರಾಜ್ಯಪಾಲರಿಗೆ ದೂರು

ಜನಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಸಚಿವ ಕೆ.ಎಂ. ಶಿವಲಿಂಗೇಗೌಡ ನೀಡಿದ್ದಾರೆನ್ನಲಾದ ಹೇಳಿಕೆಯೊಂದು ಭಾರಿ ವಿವಾದಕ್ಕೆ ಕಾರಣವಾಗಿದ್ದು, ಸಚಿವರ ವಿರುದ್ಧ ಹಾಸನ ಜಿಲ್ಲಾ ಲೋಕಾಯುಕ್ತ ಕಚೇರಿಗೆ ವಕೀಲರು ದೂರು ಸಲ್ಲಿಸಿದ್ದಾರೆ. ವಕೀಲ ಎಂ.ಡಿ. ಗೋಪಾಲಗೌಡ ನೇತೃತ್ವದ...

‘ನಿಮಗೆ ಮೀಸಲಾತಿ ಏಕೆ ಬೇಕು..?’; ಪ್ರಯಾಗ್‌ರಾಜ್ ಎನ್‌ಎಲ್‌ಯು ಪ್ರಾಧ್ಯಾಪಕರಿಂದ ದಲಿತ ವಿದ್ಯಾರ್ಥಿಗೆ ಜಾತಿ ತಾರತಮ್ಯ

ಪ್ರಯಾಗ್‌ರಾಜ್‌ನ ಡಾ. ರಾಜೇಂದ್ರ ಪ್ರಸಾದ್ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ (ಎನ್‌ಎಲ್‌ಯು) ಕಾನೂನು ವಿಭಾಗದ ಮುಖ್ಯಸ್ಥರ ವಿರುದ್ಧ ದಲಿತ ವಿದ್ಯಾರ್ಥಿಯೊಬ್ಬರು ಮಾಡಿದ ಜಾತಿ ಆಧಾರಿತ ತಾರತಮ್ಯ ಮತ್ತು ಅವಮಾನದ ಆರೋಪಗಳ ಬಗ್ಗೆ ತನಿಖೆ ನಡೆಸಲು...

KPSC ಅಕ್ರಮ: ಅಲೋಕ್ ಕುಮಾರ್ ನೇತೃತ್ವದಲ್ಲಿ SIT ತನಿಖೆಗೆ ಹೈಕೋರ್ಟ್ ಆದೇಶ

ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ಇತ್ತೀಚೆಗೆ ನಡೆಸಿದ್ದ ಪಶುವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಬೃಹತ್ ಅಕ್ರಮಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಸೋಮವಾರ ಅತ್ಯಂತ ಮಹತ್ವದ ಆದೇಶ ಹೊರಡಿಸಿದೆ. ಈ ಬಹುಕೋಟಿ ನೇಮಕಾತಿ...