Homeಮುಖಪುಟದೆಹಲಿ ಚುನಾವಣೆ: ಅಂತಿಮ ಮತದಾನದ ಶೇಕಡಾವಾರು ಪ್ರಮಾಣವನ್ನು ಬಿಡುಗಡೆ ಮಾಡದ ಚುನಾವಣಾ ಆಯೋಗ!

ದೆಹಲಿ ಚುನಾವಣೆ: ಅಂತಿಮ ಮತದಾನದ ಶೇಕಡಾವಾರು ಪ್ರಮಾಣವನ್ನು ಬಿಡುಗಡೆ ಮಾಡದ ಚುನಾವಣಾ ಆಯೋಗ!

ಡೇಟಾವನ್ನು ಸಾಮಾನ್ಯವಾಗಿ ಮತದಾನ ನಡೆದ ಅದೇ ಸಂಜೆ ಬಿಡುಗಡೆ ಮಾಡಲಾಗುತ್ತದೆ. ಆದರೆ ದೆಹಲಿ ವಿಧಾನಸಭಾ ಚುನಾವಣೆಯ ಮತದಾನದ ಸುಮಾರು 22 ಗಂಟೆಗಳ ನಂತರವೂ ಅಂತಿಮ ಶೇಕಡಾವಾರು ಪ್ರಮಾಣ ಎಷ್ಟು ಎಂಬುದನ್ನು ಚುನಾವಣಾ ಆಯೋಗ ಇನ್ನೂ ಬಿಡುಗಡೆ ಮಾಡಿಲ್ಲ. 

- Advertisement -
- Advertisement -

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಿನ್ನೆ ನಡೆದ ವಿಧಾನಸಭಾ ಚುನಾವಣೆಯ ಅಂತಿಮ ಮತದಾನದ ಶೇಕಡಾವಾರು ಪ್ರಮಾಣವನ್ನು ಚುನಾವಣಾ ಆಯೋಗ ಬಿಡುಗಡೆ ಮಾಡಿಲ್ಲ ಎಂಬುದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

“ಮತದಾನದ ಹಲವು ಗಂಟೆಗಳ ನಂತರವೂ ಮತದಾನದ ಅಂಕಿಅಂಶಗಳನ್ನು ಏಕೆ ಬಿಡುಗಡೆ ಮಾಡುತ್ತಿಲ್ಲ? ಸಂಪೂರ್ಣ ಆಘಾತಕಾರಿ ವಿಷಯವಾಗಿದೆ. ಚುನಾವಣಾ ಆಯೋಗ ಏನು ಮಾಡುತ್ತಿದೆ? ” ಎಂದು ಅರವಿಂದ್‌ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ಡೇಟಾವನ್ನು ಸಾಮಾನ್ಯವಾಗಿ ಮತದಾನ ನಡೆದ ಅದೇ ಸಂಜೆ ಬಿಡುಗಡೆ ಮಾಡಲಾಗುತ್ತದೆ. ಆದರೆ ದೆಹಲಿ ವಿಧಾನಸಭಾ ಚುನಾವಣೆಯ ಮತದಾನ ಶನಿವಾರ ಸಂಜೆ 6 ಗಂಟೆಗೆ ಮುಕ್ತಾಯಗೊಂಡಿದೆ. ಸುಮಾರು 22 ಗಂಟೆಗಳ ನಂತರವೂ ಸಹ 1.47 ಕೋಟಿ ಅರ್ಹ ಮತದಾರರಲ್ಲಿ ಎಷ್ಟು ಜನರು ಮತ ಚಲಾಯಿಸಿದ್ದಾರೆ ಎಂಬುದನ್ನು ಚುನಾವಣಾ ಆಯೋಗ ಇನ್ನೂ ಬಿಡುಗಡೆ ಮಾಡಿಲ್ಲ.

ಮತದಾನ ಮುಗಿದ ಸುಮಾರು 17 ಗಂಟೆಗಳ ನಂತರ, ಇಸಿ ಇನ್ನೂ ದೆಹಲಿ ಅಸೆಂಬ್ಲಿ ಎಲೆಕ್ಷನ್ಸ್ 2020ರ ಅಂತಿಮ ಮತದಾನದ ಡೇಟಾವನ್ನು ನೀಡಿಲ್ಲ. “ಡೇಟಾವನ್ನು ಪರಿಷ್ಕರಿಸಲಾಗುತ್ತಿದೆ, ಅಂತಿಮ ಮತದಾನದ ಶೇಕಡಾವಾರು ಪ್ರಮಾಣವನ್ನು ಇಂದು ಸಂಜೆಯ ವೇಳೆಗೆ ಸಾರ್ವಜನಿಕಗೊಳಿಸಲಾಗುವುದು” ಎಂದು ಅಧಿಕಾರಿಗಳು ಹೇಳುತ್ತಾರೆ ಎಂದು ಅರವಿಂದ್‌ ಗುಣಶೇಖರ್‌ ಎಂಬುವವರು ತಿಳಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಜಸ್ಥಾನ: ಬಿಜೆಪಿ ಸರ್ಕಾರದ ಯೋಜನೆಯಲ್ಲಿ 1,140 ಕೋಟಿ ರೂ.ನಷ್ಟ: ತಮ್ಮದೇ ಸರಕಾರದ ವಿರುದ್ಧ ಆರೋಪಿಸಿದ...

0
ರಾಜಸ್ಥಾನದ ಬಿಜೆಪಿ ಸರಕಾರ ಅಧಿಕಾರಕ್ಕೇರಿದ ಆರು ತಿಂಗಳಲ್ಲೇ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಮುಖ್ಯಮಂತ್ರಿಯ ಅಧೀನದ ಇಲಾಖೆಯಲ್ಲಿನ ವಸತಿ ಯೋಜನೆಯಲ್ಲಿನ ಲೋಪದೋಷವನ್ನು ಕ್ಯಾಬಿನೆಟ್ ಸಚಿವರೋರ್ವರು ಬಹಿರಂಗಪಡಿಸಿದ್ದು, ಇದರಿಂದ ಸರಕಾರದ ಬೊಕ್ಕಸಕ್ಕೆ 1,146 ಕೋಟಿ ರೂ. ನಷ್ಟವಾಗಿದೆ...