Homeಮುಖಪುಟಕೇಂದ್ರದ ಹೈಡ್ರೋಕಾರ್ಬನ್ ಯೋಜನೆಗೆ ಅನುಮತಿಸುವುದಿಲ್ಲ: ತಮಿಳುನಾಡು ಸಿಎಂ ಪಳನಿಸ್ವಾಮಿ

ಕೇಂದ್ರದ ಹೈಡ್ರೋಕಾರ್ಬನ್ ಯೋಜನೆಗೆ ಅನುಮತಿಸುವುದಿಲ್ಲ: ತಮಿಳುನಾಡು ಸಿಎಂ ಪಳನಿಸ್ವಾಮಿ

- Advertisement -
- Advertisement -

ನಾವು ಕಾವೇರಿ ಜಲಾನಯನ ಪ್ರದೇಶವನ್ನು ಸಂರಕ್ಷಿತ ಕೃಷಿ ವಲಯವೆಂದು ಘೋಷಿಸುತ್ತೇವೆ. ಇಲ್ಲಿ ಹೈಡ್ರೋಕಾರ್ಬನ್ ಯೋಜನೆಗೆ ನಾವು ಅನುಮತಿಸುವುದಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ತಿಳಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ಈ ಕುರಿತು ವಿಶೇಷ ಕಾನೂನು ತರಲು ನಾವು ಕಾನೂನು ತಜ್ಞರೊಂದಿಗೆ ಮಾತನಾಡುತ್ತೇವೆ. ನಾನು ಮುಖ್ಯಮಂತ್ರಿ ಆಗಿದ್ದರೂ, ಈ ಸಮಸ್ಯೆಯನ್ನು ಒಬ್ಬ ರೈತನಾಗಿ ನೋಡುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

ಕಡಲಾಚೆಯ ಮತ್ತು ಕಡಲೊಳಗಿನ ತೈಲ ಮತ್ತು ಅನಿಲ ಪರಿಶೋಧನೆಗಾಗಿ, ಅಭಿವೃದ್ಧಿ ಮತ್ತು ಉತ್ಪಾದನಾ ಯೋಜನೆಗಳಿಗಾಗಿ ಅಲ್ಲಿ ಹೈಡ್ರೋಕಾರ್ಬನ್ ಜಾರಿಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದಕ್ಕೆ ತಮಿಳುನಾಡು ಸಿಎಂ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಮೊದಲು ಅವರು ಈ ಯೋಜನೆಯನ್ನು ವಿರೋಧಿಸಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದರು. ಅದರಲ್ಲಿ ಹೈಡ್ರೋಕಾರ್ಬನ್‌ಗಳ ಪರಿಶೋಧನೆ ಮತ್ತು ಹೊರತೆಗೆಯುವಿಕೆಯನ್ನು ಒಳಗೊಂಡ ಯೋಜನೆಗಳು ತಮಿಳುನಾಡಿನ ರೈತರು ಮತ್ತು ಕಾರ್ಯಕರ್ತರು ಮತ್ತು ಇತರ ಪಾಲುದಾರರಿಂದ ಬಲವಾದ ಪ್ರತಿರೋಧವನ್ನು ಎದುರಿಸುತ್ತಿವೆ ಎಂದು ನಾನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ ಎಂದು ತಿಳಿಸಿದ್ದರು.

ಮುಂದುವರಿದು “ಈ ಹೆಚ್ಚಿನ ಯೋಜನೆಗಳು ಕಾವೇರಿ ಡೆಲ್ಟಾ ಜಿಲ್ಲೆಗಳಲ್ಲಿ ನೆಲೆಗೊಂಡಿವೆ. ಇದು ಪರಿಸರೀಯವಾಗಿ ಒಂದು ದುರ್ಬಲವಾದ ವಲಯ ಆದರೆ ರಾಜ್ಯದ ಅತ್ಯಂತ ಫಲವತ್ತಾದ ಪ್ರದೇಶ ಮತ್ತು ಭತ್ತದ ಬಟ್ಟಲು ಎಂದು ಕರೆಸಿಕೊಂಡಿದೆ. ಈ ಯೋಜನೆಗಳಿಗೆ ವಿರೋಧವು ಭಾವನಾತ್ಮಕವಾಗಿದೆ ಮತ್ತು ತೀವ್ರವಾಗಿದೆ. ಆದ್ದರಿಂದ, ಈ ಯೋಜನೆಗಳನ್ನು ಅನುಷ್ಠಾನಗೊಳಿಸುವಾಗ ಜನರನ್ನು ಮತ್ತು ಎಲ್ಲಾ ಪಾಲುದಾರರನ್ನು ಕರೆದೊಯ್ಯುವುದು ಬಹಳ ಅವಶ್ಯಕವಾಗಿದೆ ಇದರಿಂದ ಅವರ ಸಹಕಾರ ಮತ್ತು ಒಳಗೊಳ್ಳುವಿಕೆ ಖಾತ್ರಿವಾಗುತ್ತದೆ. ಪ್ರಸ್ತುತ ಅಧಿಸೂಚನೆಯು ಈ ಮನೋಭಾವಕ್ಕೆ ವಿರುದ್ಧವಾಗಿದೆ” ಎಂದು ಪತ್ರದಲ್ಲಿ ತಿಳಿಸಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...