ದೇಶದಲ್ಲಿ ಕೊರೊನಾ ಸಾಂಕ್ರಾಮಿಕ ರೋಗ ವ್ಯಾಪಜವಾಗಿ ಹರಡುತ್ತಿದ್ದರು ರೈಲ್ವೆ ನಿಲ್ದಾಣಗಳು ಮತ್ತು ರೈಲುಗಳಲ್ಲಿ ಜನ ಕೊರೊನಾ ನಿಯಮಗಳನ್ನು ಉಲ್ಲಂಘಿಸುತ್ತಿರುವುದರಿಂದ ರೈಲ್ವೆ ಇಲಾಖೆ ಮಾಸ್ಕ್ ಧರಿಸದಿದ್ದರೇ ದಂಡ ವಿಧಿಸಲು ನಿರ್ಧರಿಸಿದೆ.
ರೈಲು ಪ್ರಯಾಣಿಕರು ಮತ್ತು ಲ್ವೆ ನಿಲ್ದಾಣದ ಆವಣರದಲ್ಲಿರುವವರು ಫೇಸ್ ಮಾಸ್ಕ್ ಧರಿಸದಿದ್ದದ್ದೂ ಕಂಡುಬಂದಿದೆ ಹಾಗಾಗಿ ಇನ್ನು ಮುಂದೆ 500 ರೂಪಾಯಿ ದಂಡವನ್ನು ವಿಧಿಸುವುದಾಗಿ ಭಾರತೀಯ ರೈಲ್ವೆ ಶನಿವಾರ ಪ್ರಕಟಿಸಿದೆ.
ಕೊರೊನಾ ಸೋಂಕು ಹರಡುವುದನ್ನು ನಿರ್ಬಂಧಿಸುವುದಕ್ಕಾಗಿ ಆವರಣದಲ್ಲಿ ಉಗುಳುವುದು ಕಂಡು ಬಂದರೂ 500 ರೂಪಾಯಿ ದಂಡ ವಿಧಿಸಲಾಗುತ್ತದೆ. ಇದು ಕೂಡ ಕೊರೊನಾ ನಿಯಮಗಳ ಉಲ್ಲಂಘನೆ ಎಂದು ರೈಲ್ವೆ ಹೇಳಿದೆ. ಮುಂದಿನ ಸೂಚನೆಗಳನ್ನು ಪ್ರಕಟಿಸುವವರೆಗೆ ಆರು ತಿಂಗಳ ಅವಧಿಗೆ ತಕ್ಷಣ ಜಾರಿಗೆ ಬರುವಂತೆ ದಂಡ ವಿಧಿಸಲಾಗುವುದು ಎಂದು ಹೇಳಿದೆ.
ಇದನ್ನೂ ಓದಿ: ರಂಜಾನ್ ಉಪವಾಸ ಮುರಿದು ಪ್ಲಾಸ್ಮಾ ದಾನಮಾಡಿ ಕೊರೊನಾಪೀಡಿತ ಮಹಿಳೆಯರಿಬ್ಬರ ಜೀವ ಉಳಿಸಿದ ಮನ್ಸೂರಿ
“ಎಲ್ಲಾ ಪ್ರಯಾಣಿಕರು ನಿಲ್ದಾಣ ಪ್ರವೇಶ ಮತ್ತು ಪ್ರಯಾಣದ ಸಮಯದಲ್ಲಿ ಮಾಸ್ಕ್‌ಗಳನ್ನು ಧರಿಸಬೇಕು” ಎಂದು ಕೊರೊನಾ ನಿಯಂತ್ರಣ ಸಂಬಂಧ ಭಾರತೀಯ ರೈಲ್ವೆ ಇಲಾಖೆ 2020ರ ಮೇ 11ರಂದು ಜಾರಿಗೆ ತಂದಿರುವ ನಿಗದಿತ ಕಾರ್ಯವಿಧಾನವನ್ನು (ಸ್ಟಾಂಟರ್ಡ್ ಆಪರೇಟಿಂಗ್ ಪ್ರೊಸೀಜರ್ – ಎಸ್‌ಒಪಿ) ಉಲ್ಲೇಖಿಸಿ ರೈಲ್ವೆ ಆದೇಶಿಸಿದೆ.
ಸತತ ಮೂರನೇ ದಿನ ಭಾರತದಲ್ಲಿ 2,00,000 ಕ್ಕೂ ಹೆಚ್ಚು ಸೋಂಕಿನ ಪ್ರಕರಣಗಳು ವರದಿಯಾಗಿವೆ. ಕಳೆದ 24 ಗಂಟೆಗಳಲ್ಲಿ 2,34,692 ಜನರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ.
ಇದನ್ನೂ ಓದಿ: ಬಂಗಾಳ: ಸೀತಾಲ್ಕುಚ್ಚಿ ಗೋಲಿಬಾರ್ ವಿಡಿಯೋ ವೈರಲ್, ಕೇಂದ್ರ ಪಡೆಗಳ ಮೇಲೆ ಸಂಶಯದ ಹುತ್ತ!


