Homeಮುಖಪುಟದೆಹಲಿಯಲ್ಲಿ ಮಿತಿ ಮೀರಿದ ಪ್ರವಾಹ ಪರಿಸ್ಥಿತಿ, ಅಪಾಯದ ಮಟ್ಟ ತಲುಪಿದ ಯಮುನಾ ನದಿ - ಕಾರಣಗಳೇನು?

ದೆಹಲಿಯಲ್ಲಿ ಮಿತಿ ಮೀರಿದ ಪ್ರವಾಹ ಪರಿಸ್ಥಿತಿ, ಅಪಾಯದ ಮಟ್ಟ ತಲುಪಿದ ಯಮುನಾ ನದಿ – ಕಾರಣಗಳೇನು?

- Advertisement -
- Advertisement -

ಕಳೆದೆರಡು ದಿನಗಳಿಂದ ಮಳೆಯಾಗದಿದ್ದರೂ ಸಹ ದೆಹಲಿಯ ಯಮುನಾ ನದಿ ಅಪಾಯದ ಮಟ್ಟ ಮೀರಿ ಉಕ್ಕಿ ಹರಿಯುತ್ತಿದೆ. ಏಕೆಂದರೆ ಪಕ್ಕದ ಹರಿಯಾಣದಲ್ಲಿ ಹೆಚ್ಚಿನ ಮಳೆಯಾಗಿದ್ದು, ಹಥ್ನಿ ಕುಂಡ್ ಬ್ಯಾರೇಜ್‌ನಿಂದ ನೀರು ಬಿಡುತ್ತಿರುವುದರಿಂದ ದೆಹಲಿಯ ರಸ್ತೆಗಳು ನೀರಿನಿಂದ ಆವೃತವಾಗು ಪರಿಸ್ಥಿತಿ ಎದುರಾಗಿದೆ. ದೆಹಲಿಯಿಂದ 180 ಕಿ.ಮೀ ದೂರದಲ್ಲಿರುವ ಈ ಬ್ಯಾರೇಜ್‌ನಿಂದ ಪ್ರತಿ ವರ್ಷದ ಮಾನ್ಸೂನ್ ವೇಳೆ ಈ ಹಥ್ನಿ ಕುಂಡ್ ಬ್ಯಾರೇಜ್‌ನಿಂದ ಬಿಡುತ್ತಿದ್ದರೂ ಸಹ ಈ ಬಾರಿ ಅತಿ ಹೆಚ್ಚಿನ ಮಳೆಯಾಗಿರುವುದರಿಂದ ದೆಹಲಿ ನೀರಿನಿಂದ ಆವೃತವಾಗುವ ಪರಸ್ಥಿತಿ ಎದುರಾಗಿದೆ. ಪರಿಣಾಮ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಕೇಂದ್ರ ಜಲ ಆಯೋಗದ ಅಧಿಕಾರಿಗಳ ಪ್ರಕಾರ, ಈ ವರ್ಷ ಹಥ್ನಿ ಕುಂಡ್ ಬ್ಯಾರೇಜ್‌ನಿಂದ ಬಿಡುಗಡೆಯಾದ ನೀರು ಅತಿ ಕಡಿಮೆ ಸಮಯದಲ್ಲಿ ದೆಹಲಿ ತಲುಪಿದೆ ಎನ್ನಲಾಗಿದೆ. ಏಕೆಂದರೆ ನದಿ ಪಾತ್ರದ ಪ್ರವಾಹದ ಪ್ರದೇಶದ ಅತಿಕ್ರಮಣವಾಗಿರುವುದು, ನದಿಯ ಹೂಳೆತ್ತದೆ ಇರುವುದರಿಂದ ನೀರು ಅತಿ ಬೇಗನೆ ತಲುಪಿ ಪ್ರವಾಹ ಉಂಟಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ದೆಹಲಿಯು ಶನಿವಾರ ಮತ್ತು ಭಾನುವಾರದಂದು ವಿಪರೀತ ಮಳೆಗೆ ಸಾಕ್ಷಿಯಾಯಿತು. 40 ವರ್ಷಗಳಲ್ಲಿ ಜುಲೈ ತಿಂಗಳಿನಲ್ಲಿ ಅತಿ ಹೆಚ್ಚಿನ ಮಳೆಯನ್ನು ದೆಹಲಿ ದಾಖಲಿಸಿದೆ. ದೆಹಲಿಯಲ್ಲಿ ಶನಿವಾರ 100 ಮಿ.ಮೀ ಮಳೆಯಾದರೆ, ಭಾನುವಾರ ಬೆಳಗ್ಗೆ 8.30ಕ್ಕೆ 153 ಮಿ.ಮೀ ಮಳೆ ದಾಖಲಾಗಿದೆ. ಇಷ್ಟು ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಮಳೆಯಾಗಿದ್ದು ಪ್ರವಾಹಕ್ಕೆ ಕಾರಣವಾಗಿದೆ.

ಹಿಂದಿನ ವರ್ಷಗಳಿಗೆ ಹೋಲಿಸಿದರೆ ಹತ್ನಿಕುಂಡ್ ಬ್ಯಾರೇಜ್‌ನಿಂದ ಬಿಡುಗಡೆಯಾದ ನೀರು ದೆಹಲಿಗೆ ತಲುಪಲು ಕಡಿಮೆ ಸಮಯ ತೆಗೆದುಕೊಂಡಿರುವುದನ್ನು ನಾವು ಗಮನಿಸಿದ್ದೇವೆ. ಅತಿಕ್ರಮಣ ಮತ್ತು ಹೂಳು ತುಂಬಿರುವುದು ಮುಖ್ಯ ಕಾರಣ. ಮೊದಲು ನೀರು ಹರಿಯಲು ಹೆಚ್ಚು ಸ್ಥಳಾವಕಾಶವನ್ನು ಹೊಂದಿತ್ತು. ಸುಮಾರು 180 ಕಿಲೋಮೀಟರ್ ದೂರದಲ್ಲಿರುವ ಹರಿಯಾಣದ ಯಮುನಾನಗರದ ಬ್ಯಾರೇಜ್‌ನಿಂದ ನೀರು ದೆಹಲಿಯನ್ನು ತಲುಪಲು ಸುಮಾರು ಎರಡರಿಂದ ಮೂರು ದಿನಗಳನ್ನು ತೆಗೆದುಕೊಳ್ಳುತ್ತದೆ. ಆದರೆ ಈಗ ಬೇಗನೇ ಹರಿದುಬಂದಿದ್ದು ಪ್ರವಾಹಕ್ಕೆ ಕಾರಣವಾಗಿದೆ ಎಂದು ಜಲ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ರವರು ಗೃಹ ಸಚಿವ ಅಮಿತ್‌ ಶಾರವರಿಗೆ ಪತ್ರ ಬರೆದಿದ್ದು, ಜಿ20 ಸಮ್ಮೇಳನ ನಡೆಯುವುದರಿಂದ ಹಥ್ನಿ ಕುಂಡ್ ಬ್ಯಾರೇಜ್‌ನಿಂದ ನಿಧಾನಗತಿಯಿಂದ ನೀರು ಹರಿಸಬೇಕೆಂದು ಮನವಿ ಮಾಡಿದ್ದಾರೆ.

“ಅಗತ್ಯವಿಲ್ಲದಿದ್ದರೆ ಜನರು ಹೊರಗೆ ಹೋಗಬೇಡಿ ಮತ್ತು ಮನೆಯಿಂದ ಕೆಲಸ ಮಾಡುವಂತೆ ನಾನು ವಿನಂತಿಸುತ್ತೇನೆ. ನಾವು ಪೀಡಿತ ಪ್ರದೇಶಗಳಲ್ಲಿ ಶಾಲೆಗಳನ್ನು ಮುಚ್ಚಿದ್ದೇವೆ. ನಾವು ಪರಿಹಾರ ಶಿಬಿರಗಳಲ್ಲಿ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸುತ್ತಿದ್ದೇವೆ. ಮಧ್ಯಾಹ್ನದ ವೇಳೆಗೆ ಪ್ರವಾಹ ಪರಿಸ್ಥಿತಿ ತಗ್ಗುವ ಸಂಭವವಿದೆ ಎಂದು ಜಲ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ” ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಇದನ್ನೂ ಓದಿ: ಅಕ್ರಮ ಗಣಿಗಾರಿಕೆ: ಮಾಜಿ ಸಚಿವ ಮುನಿರತ್ನ ಸೇರಿ ನಾಲ್ವರ ವಿರುದ್ಧ FIR ದಾಖಲು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read