ಈ ವರ್ಷವೂ ರಾಜ್ಯದಲ್ಲಿ ಪ್ರವಾಹ ಉಂಟಾಗಿದ್ದು ಲಕ್ಷಾಂತರ ಹೆಕ್ಟೇರ್ ಬೆಳೆ ನಾಶವಾಗಿದೆ. ಸಾವಿರಾರು ಜನ ಬದುಕು ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಹಾಗಾಗಿ ಕಳೆದ ಬಾರಿಗಿಂತಲೂ ಈಬಾರಿ ಹೆಚ್ಚಿನ ನಷ್ಟವಾಗಿದ್ದರೂ ಸಹ ರಾಜ್ಯ ಸರ್ಕಾರ ಕಡಿಮೆ ಪರಿಹಾರ ಕೋರಿದೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, “ಮಳೆ ಮತ್ತು ಪ್ರವಾಹದಿಂದಾಗಿ ಈ ವರ್ಷ ಕಳೆದ ವರ್ಷಕ್ಕಿಂತ ದುಪ್ಪಟ್ಟು ನಷ್ಟ ಸಂಭವಿಸಿದೆ. ಹೀಗಿದ್ದರೂ ಕರ್ನಾಟಕದ ಬಿಜೆಪಿ ಸರ್ಕಾರ ಹೆಚ್ಚು ಪರಿಹಾರ ಕೇಳಲು ಹೋಗದೆ ಕಡಿಮೆ ಕೇಳಿ ರಾಜ್ಯಕ್ಕೆ ದ್ರೋಹ ಬಗೆಯುತ್ತಿದೆ. ಕರ್ನಾಟಕದ ಮುಖ್ಯಮಂತ್ರಿಗಳು ತಕ್ಷಣ ಮರುಸಮೀಕ್ಷೆಗೆ ಆದೇಶಿಸಿ ವೈಜ್ಞಾನಿಕವಾಗಿ ನಷ್ಟದ ಅಂದಾಜು ಮಾಡಬೇಕು” ಎಂದು ಒತ್ತಾಯಿಸಿದ್ದಾರೆ.
ಮಳೆ ಮತ್ತು ಪ್ರವಾಹದಿಂದಾಗಿ ಈ ವರ್ಷ ಕಳೆದ ವರ್ಷಕ್ಕಿಂತ ದುಪ್ಪಟ್ಟು ನಷ್ಟ ಸಂಭವಿಸಿದೆ. ಹೀಗಿದ್ದರೂ @BJP4Karnataka ಸರ್ಕಾರ ಹೆಚ್ಚು ಪರಿಹಾರ ಕೇಳಲು ಹೋಗದೆ ಕಡಿಮೆ ಕೇಳಿ ರಾಜ್ಯಕ್ಕೆ ದ್ರೋಹ ಬಗೆಯುತ್ತಿದೆ. @CMofKarnataka ಅವರು ತಕ್ಷಣ ಮರುಸಮೀಕ್ಷೆಗೆ ಆದೇಶಿಸಿ ವೈಜ್ಞಾನಿಕವಾಗಿ ನಷ್ಟದ ಅಂದಾಜು ಮಾಡಬೇಕು.
1/4 pic.twitter.com/lyaqJqytsP— Siddaramaiah (@siddaramaiah) November 9, 2020
ಇದನ್ನೂ ಓದಿ: ರಾಜ್ಯಕ್ಕೆ ಕೇಂದ್ರದ ಪರಿಹಾರ?: ಯಡಿಯೂರಪ್ಪಗೆ ಮಾಜಿ ಸಿಎಂ ಸಿದ್ದರಾಮಯ್ಯ ಸಲಹೆಗಳು!
ಮತ್ತೊಂದು ಟ್ವೀಟ್‌ನಲ್ಲಿ, “ಕಳೆದ ವರ್ಷ ಅತಿವೃಷ್ಟಿಯಿಂದ 9,94,556 ಹೆಕ್ಟೇರ್ ಬೆಳೆ ನಾಶ ಸೇರಿದಂತೆ ಒಟ್ಟು ನಷ್ಟಕ್ಕೆ ರೂ.25,518 ಕೋಟಿ ಪರಿಹಾರ ಕೇಳಿದ್ದ ಕರ್ನಾಟಕದ ಮುಖ್ಯಮಂತ್ರಿಗಳು, ಈ ಬಾರಿ 20,86,703 ಹೆಕ್ಟೇರ್ ಬೆಳೆ ನಾಶ ಸೇರಿದಂತೆ ಒಟ್ಟು ನಷ್ಟಕ್ಕೆ ರೂ 24,941.73 ಕೋಟಿ ಪರಿಹಾರ ಕೇಳಿರುವುದು ರಾಜ್ಯಕ್ಕೆ ಮಾಡಿರುವ ಅನ್ಯಾಯ ಅಲ್ಲವೇ?” ಎಂದು ಪ್ರಶ್ನಿಸಿದ್ದಾರೆ.
ಕಳೆದ ವರ್ಷ ಅತಿವೃಷ್ಟಿಯಿಂದ 9,94,556 ಹೆಕ್ಟೇರ್ ಬೆಳೆ ನಾಶ ಸೇರಿದಂತೆ ಒಟ್ಟು ನಷ್ಟಕ್ಕೆ ರೂ.25,518 ಕೋಟಿ ಪರಿಹಾರ ಕೇಳಿದ್ದ @CMofKarnataka,
ಈ ಬಾರಿ 20,86,703 ಹೆಕ್ಟೇರ್ ಬೆಳೆ ನಾಶ ಸೇರಿದಂತೆ ಒಟ್ಟು ನಷ್ಟಕ್ಕೆ ರೂ 24,941.73 ಕೋಟಿ ಪರಿಹಾರ ಕೇಳಿರುವುದು ರಾಜ್ಯಕ್ಕೆ ಮಾಡಿರುವ ಅನ್ಯಾಯ ಅಲ್ಲವೇ?
2/4 pic.twitter.com/GNLgH8rjU4— Siddaramaiah (@siddaramaiah) November 9, 2020
ಇದನ್ನೂ ಓದಿ: ನೆರೆ ಮತ್ತು ಬರ ಪರಿಹಾರಕ್ಕೆ ಕರ್ನಾಟಕಕ್ಕೆ ಬೇಕು 1 ಲಕ್ಷ ಕೋಟಿ ರೂಗಳ ವಿಶೇಷ ಪ್ಯಾಕೇಜ್…
“ಕಳೆದ ವರ್ಷ ರೂ.25,518 ಕೋಟಿ ಪರಿಹಾರ ಕೇಳಿದರೂ ಭಾರತದ ಪ್ರಧಾನಮಂತ್ರಿಗಳು ನೀಡಿರುವುದು ರೂ.1652 ಕೋಟಿ ಮಾತ್ರ. ರಾಜ್ಯದ ಬಿಜೆಪಿ ಸರ್ಕಾರವು ಸಮರ್ಪಕ ಸಮೀಕ್ಷಾ ವರದಿ ಮೂಲಕ ಪ್ರಧಾನಿಯವರ ಮೇಲೆ ಒತ್ತಡ ಹೇರಿದರೆ ಮಾತ್ರ ಹೆಚ್ಚಿನ ಪರಿಹಾರ ಸಿಗಲು ಸಾಧ್ಯ” ಎಂದು ಸಲಹೆ ನೀಡಿದ್ದಾರೆ.
ಕಳೆದ ವರ್ಷ ರೂ.25,518 ಕೋಟಿ ಪರಿಹಾರ ಕೇಳಿದರೂ @PMOIndia ನೀಡಿರುವುದು ರೂ.1652 ಕೋಟಿ ಮಾತ್ರ.@BJP4Karnataka ಸರ್ಕಾರ ಸಮರ್ಪಕ ಸಮೀಕ್ಷಾ ವರದಿ ಮೂಲಕ @PMOIndia ಮೇಲೆ ಒತ್ತಡ ಹೇರಿದರೆ ಮಾತ್ರ ಹೆಚ್ಚಿನ ಪರಿಹಾರ ಸಿಗಲು ಸಾಧ್ಯ.
3/4 pic.twitter.com/DU9qUFR48p— Siddaramaiah (@siddaramaiah) November 9, 2020
ಇದನ್ನೂ ಓದಿ: ನೆರೆ ಪರಿಹಾರ ನೀಡಲಾಗದ ಹೇಡಿ ಸರ್ಕಾರ ಕರ್ನಾಟಕದಲ್ಲಿದೆ: ಕಾಂಗ್ರೆಸ್ ಆರೋಪ
“ಮಳೆ/ಪ್ರವಾಹ ಬಂದು ಮೂರು ತಿಂಗಳುಗಳಾಗುತ್ತಾ ಬಂದರೂ ಇಲ್ಲಿಯ ವರೆಗೆ 51,812 ಸಂತ್ರಸ್ಥರಿಗೆ ನೀಡಿರುವ ಪರಿಹಾರ ಕೇವಲ ರೂ.36,57,79,972 ಮಾತ್ರ. ಎರಡನೇ ಹಂತದಲ್ಲಿ ಗುರುತಿಸಲಾದ 85,996 ಸಂತ್ರಸ್ತರಿಗೆ 70,70,87,961 ರೂಪಾಯಿ ಪರಿಹಾರ ಇನ್ನಷ್ಟೇ ನೀಡಬೇಕಾಗಿದೆ. ಉಳಿದವರ ಗತಿ ಏನು ಮುಖ್ಯಮಂತ್ರಿಗಳೇ?” ಎಂದು ಆಕ್ರೋಶ ಹೊರಹಾಕಿದ್ದಾರೆ.
ಮಳೆ/ಪ್ರವಾಹ ಬಂದು ಮೂರು ತಿಂಗಳುಗಳಾಗುತ್ತಾ ಬಂದರೂ ಇಲ್ಲಿಯ ವರೆಗೆ 51,812 ಸಂತ್ರಸ್ಥರಿಗೆ ನೀಡಿರುವ ಪರಿಹಾರ ಕೇವಲ ರೂ.36,57,79,972 ಮಾತ್ರ.
ಎರಡನೇ ಹಂತದಲ್ಲಿ ಗುರುತಿಸಲಾದ 85,996 ಸಂತ್ರಸ್ತರಿಗೆ 70,70,87,961 ರೂಪಾಯಿ ಪರಿಹಾರ ಇನ್ನಷ್ಟೇ ನೀಡಬೇಕಾಗಿದೆ. ಉಳಿದವರ ಗತಿ ಏನು @CMofKarnataka ?
4/4 pic.twitter.com/qbxJDvetgJ— Siddaramaiah (@siddaramaiah) November 9, 2020
ಇದನ್ನೂ ಓದಿ: ನೆರೆ ಪರಿಹಾರ ಕೊಡಿ ಎಂದ ಯತ್ನಾಳ್‌ಗೆ ಎಚ್ಚರಿಕೆಯ ನೋಟಿಸ್ ಕೊಟ್ಟ ಬಿಜೆಪಿ..
ಈ ಹಿಂದೆಯೂ ಕೂಡ ನೆರೆ ಪರಿಹಾರ ಕೇಳುವುದಕ್ಕೆ ಯಡಿಯೂರಪ್ಪನವರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿ, ರಾಜ್ಯದಿಂದ ಸರ್ವಪಕ್ಷ ನಿಯೋಗವನ್ನು ಕರೆದುಕೊಂಡುಹೋಗಿ. ನಿಮಗೆ ಪ್ರಧಾನಿಯ ಬಳಿ ಮಾತನಾಡಲು ಭಯವಾದರೆ, ನಾವೆ ಪರಿಹಾರ ಕೇಳುತ್ತೇವೆ ಎಂದು ಹೇಳಿದ್ದರು.
ಕರ್ನಾಟಕಕ್ಕೆ ನೀಡಬೇಕಾಗಿರುವ ಜಿಎಸ್‌ಟಿ ಪಾಲೂ ನೀಡದೇ ಕೇಂದ್ರ ಸರ್ಕಾರ ರಾಜ್ಯವನ್ನು ದಿವಾಳಿ ಮಾಡಿದೆ ಎಂದು ವಿರೋಧ ಪಕ್ಷಗಳು ಟೀಕೆ ಮಾಡಿದ್ದವು. ರಾಜ್ಯಕ್ಕೆ ಸಿಗಬೇಕಾದ ಯಾವುದೇ ಸೌಲಭ್ಯಗಳೂ ಸರಿಯಾಗಿ ಸಿಗುತ್ತಿಲ್ಲ ಎಂದು ರಾಜ್ಯದ ಜನತೆ ಕೇಂದ್ರ ಸರ್ಕಾರದ ಮೇಲೆ ಗರಂ ಆಗಿದ್ದರು. ಆದರೆ ನಮ್ಮ ರಾಜ್ಯದಿಂದ ಆಯ್ಕೆಯಾಗಿರುವ 25 ಜನ ಸಂಸದರು ಇದರ ಬಗ್ಗೆ ಒಂದೇ ಒಂದು ಮಾತನ್ನೂ ಆಡುತ್ತಿಲ್ಲ. ಇವರ ಪಕ್ಷ ನಿಷ್ಟೆ ನಮ್ಮ ರಾಜ್ಯವನ್ನು ಮತ್ತು ರಾಜ್ಯದ ಜನತೆಯನ್ನು ಬೀದಿಗೆಳೆಯುವದರಲ್ಲಿ ಸಂದೇಹವಿಲ್ಲ.
ಇದನ್ನೂ ಓದಿ: ಪ್ರವಾಹ: ಪ್ರಧಾನಿ ಮಾಡಿದ ಕನ್ನಡದ ಒಂದು ಟ್ವೀಟ್ ನೆರೆ ಪರಿಹಾರವಾಗಬಲ್ಲುದೇ?


