Homeಕರ್ನಾಟಕನೆರೆ ಸಂತ್ರಸ್ತರ ಪರಿಹಾರ ವಿಷಯ ಕೆಲಸಕ್ಕೆ ಬಾರದ ಪ್ರಶ್ನೆ!?: ಮಾಧುಸ್ವಾಮಿ ಉಡಾಫೆ

ನೆರೆ ಸಂತ್ರಸ್ತರ ಪರಿಹಾರ ವಿಷಯ ಕೆಲಸಕ್ಕೆ ಬಾರದ ಪ್ರಶ್ನೆ!?: ಮಾಧುಸ್ವಾಮಿ ಉಡಾಫೆ

- Advertisement -
- Advertisement -

ರಾಜ್ಯದಲ್ಲಿ ನೆರೆಯಿಂದ ಜನತೆ ಕಂಗಾಲಾಗಿದ್ದು, ಪರಿಹಾರಕ್ಕಾಗಿ ಎದುರು ನೋಡುತ್ತಿದ್ದಾರೆ. ಮಕ್ಕಳು, ವೃದ್ಧರು, ಮಹಿಳೆಯರು ಈಗಲೂ ಕಾಳಜಿ ಕೇಂದ್ರಗಳಲ್ಲಿ ಉಳಿದುಕೊಂಡಿದ್ದಾರೆ. ಪ್ರವಾಹದಿಂದ ಮನೆ, ಮಠ, ಆಸ್ತಿ-ಪಾಸ್ತಿ ಕಳೆದುಕೊಂಡು ಕಣ್ಣೀರಿಡುತ್ತಿದ್ದಾರೆ. ಆದರೆ ಇದ್ಯಾವುದು ರಾಜ್ಯ ಬಿಜೆಪಿ ಸರ್ಕಾರದ ಕಣ್ಣಿಗೆ ಮಾತ್ರ ಕಾಣುತ್ತಿಲ್ಲ. ಯಾಕಂದ್ರೆ ನೆರೆಗೆ ಪರಿಹಾರ ತೆಗೆದುಕೊಂಡು ಬನ್ನಿ ಸ್ವಾಮಿ ಅಂತಾ ಕೇಳಿದ್ರೆ, ಬಿಜೆಪಿ ಜನಪ್ರತಿನಿಧಿಗಳು ದುರ್ವರ್ತನೆ ತೋರುತ್ತಿದ್ದಾರೆ. ಕೇಂದ್ರದಿಂದ ನೆರೆಗೆ ಪರಿಹಾರ ಯಾಕೆ ಬೇಕು ಅಂತಾ ಪ್ರಶ್ನಿಸುವ ಮಟ್ಟಿಗೆ ಕೀಳು ರಾಜಕೀಯಕ್ಕಿಳಿದಿದ್ದಾರೆ.

ನಿನ್ನೆಯಷ್ಟೇ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಬಿಜೆಪಿ ಸಚಿವ ಜೆ.ಸಿ. ಮಾಧುಸ್ವಾಮಿ, ಉಡಾಫೆಯ ಮಾತುಗಳನ್ನಾಡಿದ್ದಾರೆ. ನೆರೆ ಸಂತ್ರಸ್ತರು ಹಾಗೂ ಪ್ರವಾಹದಿಂದ ಆದ ಹಾನಿಗೆ ಪರಿಹಾರದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ “ನೆರೆ ಪರಿಹಾರ ಹಾಗೂ ಸಂತ್ರಸ್ತರ ಬಗ್ಗೆ ಕೇಳುವ ಪ್ರಶ್ನೆಗಳು ಕೆಲಸಕ್ಕೆ ಬಾರದ್ದು” ಎಂಬ ರೀತಿ ಹೇಳಿಕೆ ನೀಡಿದ್ದಾರೆ. ಕೇಂದ್ರ ಸರ್ಕಾರದಿಂದ ನೆರೆ ಸಂತ್ರಸ್ತರಿಗೆ ಪರಿಹಾರ ಬಿಡುಗಡೆ ಮಾಡಿಲ್ಲ ಎಂದು ಕೇಳಿದ ಪ್ರಶ್ನೆಗೆ ಮನಸ್ಸಿಗೆ ಬಂದಂತೆ ಪ್ರಶ್ನೆ ಕೇಳುವುದು ಸರಿಯಲ್ಲ. ಸಿದ್ದರಾಮಯ್ಯ ಹೇಳಿಕೊಟ್ಟ ಗಿಣಿಯಂತೆ ವರ್ತಿಸಬೇಡಿ ಎಂದು ಅಸಂಬದ್ಧ ಹೇಳಿಕೆ ನೀಡಿದ್ದಾರೆ. ಹಾಗಾದ್ರೆ ಬಿಜೆಪಿ ನಾಯಕರಿಗೆ ನೆರೆ ಹಾವಳಿ, ಸಂತ್ರಸ್ತರ ಗೋಳಾಟ ಎಲ್ಲವೂ ಕೆಲಸಕ್ಕೆ ಬಾರದ ವಿಷಯವಾ? ಎಂದು ಸಾರ್ವಜನಿಕರು ಪ್ರಶ್ನಿಸಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇರಳ, ಮಹಾರಾಷ್ಟ್ರ ಸೇರಿದಂತೆ ಇತರೆ ರಾಜ್ಯಗಳಿಗೂ ಕೇಂದ್ರದಿಂದ ಪರಿಹಾರ ಸಿಕ್ಕಿಲ್ಲ. ಜನತೆಗೆ ಪರಿಹಾರ ಸಿಗದೇ ನಲುಗುತ್ತಿದ್ದಾರೆ. ರಾಜ್ಯದಿಂದ ಪರಿಹಾರ ಕೊಟ್ಟಿದೆಯಲ್ಲಾ ಅಂತಾ ದುರ್ವರ್ತನೆ ತೋರಿದ್ದಾರೆ. ಇಷ್ಟೇ ಅಲ್ಲ ಕೆಲ ದಿನಗಳ ಹಿಂದೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕೇಂದ್ರ ಸರ್ಕಾರವೇ ನೆರೆ ಪರಿಹಾರ ಕೊಡಬೇಕು ಎಂದೇನಿಲ್ಲ ಎಂದಿದ್ದರು. ಈಶ್ವರಪ್ಪ ರಾಜ್ಯದಿಂದ ಕೊಟ್ಟಿರುವ ಹತ್ತು ಸಾವಿರ ರೂಪಾಯಿ ಪರಿಹಾರವೇ ಹೆಚ್ಚು ಎಂಬಂತೆ ಹೇಳಿಕೆ ನೀಡಿ ರಾಜ್ಯದ ಜನತೆಯ ಕೆಂಗಣ್ಣಿಗೆ ಗುರಿಯಾಗಿದ್ದರು.

ಈಗ ಮತ್ತೊಬ್ಬ ಬಿಜೆಪಿ ಸಚಿವರು ಅಪ್ರಬುದ್ಧ ಹೇಳಿಕೆ ನೀಡಿದ್ದಾರೆ. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಆಡಳಿತದಲ್ಲಿದ್ದರೂ ಸಹ ಪರಿಹಾರ ತರುವಲ್ಲಿ ಮಾತ್ರ ರಾಜ್ಯ ಬಿಜೆಪಿ ವಿಫಲವಾಗಿದೆ. ಸಂತ್ರಸ್ತರಿಗೆ ಪರಿಹಾರ ತರುವ ವಿಷಯ ಬಿಜೆಪಿಗೆ ರಾಜಕೀಯ ವಿಷಯವಸ್ತುವಾಗಿರುವುದು ಮಾತ್ರ ವಿಪರ್ಯಾಸ.

ಇನ್ನು ಸಚಿವರ ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಬಹುತೇಕರು ಉಗ್ರವಾಗಿ ಖಂಡಿಸಿದ್ದಾರೆ. “ಹತ್ತು ಸಾವಿರ ಕೊಟ್ಟಿದ್ದೇ ಹೆಚ್ಚಾಯ್ತು ಅನ್ನುವ ಈಶ್ವರಪ್ಪ, ಕೇಂದ್ರದ ದುಡ್ಡು ಬೇಡವೆಂದ ತೇಜಸ್ವಿ ಸೂರ್ಯ ದಡ್ಡರು, ಅಪ್ರಬುದ್ಧರು ಎನ್ನುವ ಕಾರಣಕ್ಕೆ ಹೇಗೋ ಸಹಿಸಿಕೊಳ್ಳಬಹುದು. ಆದರೆ ಈತ ಪ್ರಕಾಂಡ ಪಂಡಿತ, ಸಂವಿಧಾನ ಓದಿಕೊಂಡಾತ. ರಾಜಕೀಯ ಹೇಳಿಕೆಗಳ ಸೂಕ್ಷ್ಮತೆ-ಅಸೂಕ್ಷ್ಮತೆಗಳ ಅರಿವಿರುವಾತ. ಹೇಳಿ‌ಕೇಳಿ ಮಾಜಿ ಸಮಾಜವಾದಿ ಕೂಡ. ಈತನಿಗೆ ಕ್ಷಮೆ ಇರಲು ಸಾಧ್ಯವೇ?” ಎಂದು ಪತ್ರಕರ್ತ ದಿನೇಶ್ ಕುಮಾರ್ ದಿನೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಪಹರಣ ಆರೋಪಕ್ಕೆ ಪುರಾವೆಯಿಲ್ಲ, ರಾಜಕೀಯದ ಷಡ್ಯಂತ್ರದಿಂದ ಬಂಧನ: ಹೆಚ್.ಡಿ ರೇವಣ್ಣ

0
ಲೈಂಗಿಕ ದೌರ್ಜನ್ಯದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯನ್ನು ಅಪಹರಿಸಿದ ಪ್ರಕರಣದಲ್ಲಿ ಎಸ್‌ಐಟಿಯಿಂದ ಬಂಧಿತರಾದ ಬಳಿಕ ಮೊದಲ ಬಾರಿಗೆ ಶಾಸಕ ಹೆಚ್‌.ಡಿ ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ...