Homeಮುಖಪುಟರಾಷ್ಟ್ರದಾದ್ಯಂತ ಜೇನುತುಪ್ಪ ಮಾದರಿಗಳ ಪರೀಕ್ಷೆಗೆ ಮುಂದಾದ FSSAI

ರಾಷ್ಟ್ರದಾದ್ಯಂತ ಜೇನುತುಪ್ಪ ಮಾದರಿಗಳ ಪರೀಕ್ಷೆಗೆ ಮುಂದಾದ FSSAI

CSE ನಡೆಸಿದ ಅಧ್ಯಯನವು ಚೀನಾದ ಸಕ್ಕರೆ ಪಾಕಗಳೊಂದಿಗೆ ಬೆರೆಸಿದ ಜೇನುತುಪ್ಪವನ್ನು ಹಲವಾರು ಬ್ರಾಂಡ್‌ಗಳು ಮಾರಾಟ ಮಾಡುತ್ತಿವೆ ಎಂದು ಹೇಳಿದೆ.

- Advertisement -
- Advertisement -

ಭಾರತದ ಆಹಾರ ಗುಣಮಟ್ಟ ನಿಯಂತ್ರಕವಾದ, ’ರೆಗ್ಯುಲೇಟರ್ ಫುಡ್ ಸೇಫ್ಟಿ ಅಂಡ್ ಸ್ಟ್ಯಾಂಡರ್ಡ್ಸ್ ಅಥಾರಿಟಿ ಆಫ್ ಇಂಡಿಯ’ (FSSAI) ರಾಷ್ಟ್ರದಾದ್ಯಂತ ಜೇನುತುಪ್ಪದ ಮಾದರಿಗಳನ್ನು ಸಂಗ್ರಹಿಸಿ ಅವುಗಳು ಕಲಬೆರಕೆಯಾಗಿದೆಯೆ ಎಂಬುವುದನ್ನು ಪರೀಕ್ಷಿಸುವ ಕೆಲಸವನ್ನು ಪ್ರಾರಂಭಿಸಿದೆ.

ಇತ್ತೀಚೆಗೆ ಭಾರತದ ಪ್ರಮುಖ ಜೇನುತುಪ್ಪ ಬ್ರಾಂಡ್‌ಗಳ ಮೇಲೆ ಅಧ್ಯಯನ ನಡೆಸಿದ್ದ ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್(CSE) ಡಾಬರ್, ಪತಂಜಲಿ ಮತ್ತು ಇಮಾಮಿ ಜಂಡು ಬ್ರಾಂಡುಗಳು ಕಲಬೆರಕೆ ಮಾಡಿದ ಜೇನುತುಪ್ಪವನ್ನು ಮಾರಾಟ ಮಾಡಿದೆ ಎಂದು ಆರೋಪಿಸಿತ್ತು.

ಇದನ್ನೂ ಓದಿ: ಪತಂಜಲಿ, ಡಾಬರ್, ಇಮಾಮಿ ಸೇರಿ ಹಲವು ಜೇನುತುಪ್ಪ ನಿಜಕ್ಕೂ ಕಲಬೆರಕೆಯದ್ದು!

CSE ನಡೆಸಿದ ಅಧ್ಯಯನವು ಚೀನಾದ ಸಕ್ಕರೆ ಪಾಕಗಳೊಂದಿಗೆ ಬೆರೆಸಿದ ಜೇನುತುಪ್ಪವನ್ನು ಹಲವಾರು ಬ್ರಾಂಡ್‌ಗಳು ಮಾರಾಟ ಮಾಡುತ್ತಿವೆ ಎಂದು ಹೇಳಿದೆ. ಈ ಹಿನ್ನಲೆಯಲ್ಲಿ ಭಾರತದಲ್ಲಿ ಮಾರಾಟವಾಗುವ ಜೇನುತುಪ್ಪದ ಬಗ್ಗೆ ಸಮಗ್ರ ದತ್ತಾಂಶವನ್ನು ರಚಿಸಲು FSSAI ಬಯಸಿದೆ ಎಂದು ದಿ ಪ್ರಿಂಟ್ ವರದಿ ಮಾಡಿದೆ.

ಜೇನುತುಪ್ಪ ಮಾದರಿಗಳನ್ನು ಪರೀಕ್ಷಿಸಲು FSSAI ಪುಣೆ ಮೂಲದ ಸೆಂಟ್ರಲ್ ಬೀ ರಿಸರ್ಚ್ ಅಂಡ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಅನ್ನು ಕೇಳಿ ಕೊಂಡಿದೆ. ಡಾಬರ್, ಪತಂಜಲಿ ಮತ್ತು ಇಮಾಮಿ ಜಂಡು ಜೇನುತುಪ್ಪದ ಕಂಪೆನಿಗಳನ್ನು ತಮ್ಮ ಉತ್ಪನ್ನದ ಮಾದರಿಗಳ ಪರೀಕ್ಷಾ ಫಲಿತಾಂಶಗಳನ್ನು ಸಲ್ಲಿಸುವಂತೆ ಕೇಳಲು ಇದು ಯೋಜಿಸಿದೆ.

ಇದನ್ನೂ ಓದಿ: ಜೀತಕ್ಕಿದ್ದ ಜೇನುಕುರುಬರ ಸೋಮಣ್ಣರ ಪಾರಂಪರಿಕ ಜ್ಞಾನದ ಕಣಜ ಕಂಡರೆ ಬೆರಗಾಗುತ್ತೀರಿ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನಿಂದನೆ ಸಾರ್ವಜನಿಕವಾಗಿ ನಡೆದಿದ್ದರೆ ಮಾತ್ರ ಎಸ್ಸಿ-ಎಸ್ಟಿ ಕಾಯ್ದೆಯಡಿ ಅಪರಾಧವಾಗುತ್ತದೆ: ಸುಪ್ರೀಂ ಕೋರ್ಟ್‌

0
ಸಾರ್ವಜನಿಕವಾಗಿ ಉದ್ದೇಶಪೂರ್ವಕ ಅವಮಾನ ಅಥವಾ ನಿಂದನೆ ಮಾಡಿದರೆ  ಮಾತ್ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ದೌರ್ಜನ್ಯ ತಡೆ ಕಾಯಿದೆಯಡಿಯಲ್ಲಿ ಅಪರಾಧವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಎಸ್ಸಿ-ಎಸ್ಟಿ ಕಾಯ್ದೆಯಡಿ ಅಪರಾಧವಾಗಬೇಕಿದ್ದರೆ 'ನಿಂದನೆಯು...