Homeಕರ್ನಾಟಕಗೌರಿ ಲಂಕೇಶ್ ನೆನಪು: ಗೌರವ ನಮನ, ಸಂವಾದ ಕಾರ್ಯಕ್ರಮ - ಸಿಎಂ ಸಿದ್ದರಾಮಯ್ಯ ಭಾಗಿ

ಗೌರಿ ಲಂಕೇಶ್ ನೆನಪು: ಗೌರವ ನಮನ, ಸಂವಾದ ಕಾರ್ಯಕ್ರಮ – ಸಿಎಂ ಸಿದ್ದರಾಮಯ್ಯ ಭಾಗಿ

- Advertisement -
- Advertisement -

ಪತ್ರಕರ್ತೆ ಗೌರಿಲಂಕೇಶ್ ಅವರು ಹತ್ಯೆಯಾಗಿ ನಾಳೆ(ಸೆ.5)ಗೆ ಆರು ವರ್ಷ ಕಳೆಯುತ್ತಿದೆ. ಈ ಹಿನ್ನೆಲೆಯಲ್ಲಿ ನಾಳೆ (ಸೆ.05) ಬೆಳಿಗ್ಗೆ 8ಗಂಟೆ ಸುಮಾರಿಗೆ ಚಾಮರಾಜಪೇಟೆಯಲ್ಲಿನ ಗೌರಿ ಸಮಾಧಿ ಬಳಿ ಗೌರವನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಾಳೆ ಸಂಜೆ 5 ಗಂಟೆಗೆ ಟೌನ್‌ ಹಾಲ್‌ನಲ್ಲಿ ಗೌರಿ ನೆನಪು ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ.

‘ಇಲ್ಲಿ ಬಿತ್ತಿಹ ಬೀಜ ಜಗದೆಲ್ಲೆಡೆ ಚಿಗುರಿದೆ ನೋಡ’ ಎನ್ನುವ ನುಡಿನಮನ ಕಾರ್ಯಕ್ರಮದಲ್ಲಿ ಸಿನಿಮಾ ನಟ ದುನಿಯಾ ವಿಜಯ್, ಕವಯಿತ್ರಿ ಮಮತಾ ಜಿ ಸಾಗರ್, ಫಾದರ್ ಜೆರಾಲ್ಡ್ ಡಿಸೋಜಾ (ಸಂತ ಜೋಸೆಫ್‌ ಲಾ ಕಾಲೇಜು) ಹಾಗೂ ಮುಸ್ಲಿಮ್ ಮುಖಂಡರಾದ ಅಮ್ಮದ್ ಪಾಷಾ ಅವರು ಭಾಗಿಯಾಗಲಿದ್ದಾರೆ.

ಕಾವ್ಯ ನಮನ ಕಾರ್ಯಕ್ರಮದಲ್ಲಿ ಪ್ರಖ್ಯಾತ ಗಾಯಕರಾದ ಪಿಚ್ಚಳ್ಳಿ ಶ್ರೀನಿವಾಸ್, ಜನಾರ್ಧನ್ ಚಿನ್ನಿ, ಗೊಲ್ಲಳ್ಳಿ ಶಿವಪ್ರಸಾದ್ ಹಾಗೂ ಚಿಂತನ್ ವಿಕಾಸ್ ಭಾಗವಹಿಸಲಿದ್ದಾರೆ.

ಗೌರಿ ನೆನಪು ಕಾರ್ಯಕ್ರಮ: ಸಂಜೆ 5ಗಂಟೆಗೆ

ನಮ್ಮೆಲ್ಲರ ನಲ್ಮೆಯ ಗೌರಿ ನಮ್ಮನ್ನು ಅಗಲಿ ಆರು ವರ್ಷಗಳು ಕಳೆದವು. ಅವರ ನೆನಪಿನಲ್ಲಿ ನಾಳೆ ಸಂಜೆ 5 ಗಂಟೆಗೆ ಟೌನ್‌ ಹಾಲ್‌ನಲ್ಲಿ ಗೌರಿ ಸ್ಮಾರಕ ಟ್ರಸ್ಟ್‌ನಿಂದ ಸಂವಾದ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿರಿಯ ರೈತ ಮುಖಂಡ ರಾಕೇಶ್ ಟಿಕಾಯತ್, ರಾಜಕೀಯ ಕಾರ್ಯಕರ್ತೆ ಏಂಜಿಲಾ ರಂಗದ್, ಖ್ಯಾತ ಬಹುಭಾಷಾ ನಟ ಪ್ರಕಾಶ್ ರೈ, ಕೇರಳದ ಮಾಜಿ ಸಚಿವೆ, ಶಾಸಕಿ ಶೈಲಜ ಟೀಚರ್, ಖ್ಯಾತ ಪತ್ರಕರ್ತೆ (ದೆಹಲಿ) ಸುಪ್ರಿಯಾ ಶ್ರೀನಾಟೆ ಹಾಗೂ ಮುಸ್ಲಿಮ್ ಒಕ್ಕೂಟದ ಮುಖಂಡರಾದ ಯಾಸೀನ್ ಮಲ್ಫೆ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಕುರಿತು ಮಾಹಿತಿಗಾಗಿ ವಿಎಸ್‌ ಶ್ರೀಧರ್ 9448127571, ಕೆಎಲ್ ಅಶೋಕ್ 9448256816, ದೀಪು 7353770203 ಇವರನ್ನು ಸಂಪರ್ಕಿಸಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...