Homeಮುಖಪುಟಗೂಗಲ್ ನಮ್ಮನ್ನು ಹಾಳು ಮಾಡಿದೆ : ಮನ್‌ಕಿ ಬಾತ್‌ ನಲ್ಲಿ ಪಿಎಂ ಮೋದಿ ಹೇಳಿಕೆ

ಗೂಗಲ್ ನಮ್ಮನ್ನು ಹಾಳು ಮಾಡಿದೆ : ಮನ್‌ಕಿ ಬಾತ್‌ ನಲ್ಲಿ ಪಿಎಂ ಮೋದಿ ಹೇಳಿಕೆ

- Advertisement -
- Advertisement -

ಮನ್ ಕಿ ಬಾತ್‌ನ 59 ನೇ ಆವೃತ್ತಿಯ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿದ ಪ್ರಧಾನಿ ನರೇಂದ್ರ ಮೋದಿಯವರು “ನಾನು ಪುಸ್ತಕಗಳನ್ನು ಓದುತ್ತಿದ್ದೆ ಆದರೀಗ ಯಾವುದೇ ಉಲ್ಲೇಖವನ್ನು ಪಡೆಯಲು  ಗೂಗಲ್ ಸುಲಭವಾಗಿ ಸಿಗಲಿದೆ. ಹಾಗಾಗಿ ಗೂಗಲ್‌ ನಮ್ಮ ಓದುವ ಅಭ್ಯಾಸವನ್ನು ಹಾಳು ಮಾಡಿದೆ” ಎಂದಿದ್ದಾರೆ.

ಕಾರ್ಯಕ್ರಮದ ಸಮಯದಲ್ಲಿ, ಹರಿಯಾಣದ ರೋಹ್ಟಕ್‌ನ ವಿದ್ಯಾರ್ಥಿ ಅಖಿಲ್ ಅವರು ತಮ್ಮ ಕಾರ್ಯನಿರತ ವೇಳಾಪಟ್ಟಿಯ ಹೊರತಾಗಿಯೂ ಟಿವಿ, ಚಲನಚಿತ್ರಗಳು ಅಥವಾ ಪುಸ್ತಕಗಳನ್ನು ಓದಲು ಸಮಯ ಸಿಗುತ್ತದೆಯೇ ಎಂದು ಪ್ರಧಾನಿಯನ್ನು ಕೇಳಿದರು.

ಅದಕ್ಕುತ್ತರಿಸಿದ ಮೋದಿ “ನಾನು ಯಾವಾಗಲೂ ಪುಸ್ತಕಗಳನ್ನು ಓದುವುದರಲ್ಲಿ ಒಲವು ಹೊಂದಿದ್ದೆ, ಆದರೆ ಚಲನಚಿತ್ರಗಳನ್ನು ನೋಡುವ ಆಸಕ್ತಿ ಹೊಂದಿರಲಿಲ್ಲ. ನಾನು ನಿಯಮಿತವಾಗಿ ಟಿವಿ ನೋಡುವುದಿಲ್ಲ, ಆದಾಗ್ಯೂ, ಕೆಲವೊಮ್ಮೆ ನಾನು ಡಿಸ್ಕವರಿ ಚಾನೆಲ್ ನೋಡುತ್ತಿದ್ದೆ” ಎಂದು ಹೇಳಿದರು.

“ನಾನು ಪುಸ್ತಕಗಳನ್ನು ಸಹ ಓದುತ್ತಿದ್ದೆ. ಆದರೆ ಈ ದಿನಗಳಲ್ಲಿ ನಾನು ಹೆಚ್ಚು ಓದಲು ಸಾಧ್ಯವಿಲ್ಲ. ಗೂಗಲ್ ನಮ್ಮನ್ನು ಹಾಳು ಮಾಡಿದೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಮತ್ತೊರ್ವ ಬಾಲಕನ ಪ್ರಶ್ನೆಗೆ ರಾಜಕೀಯ ಪ್ರವೇಶಿಸುವ ಆಸೆ ಎಂದಿಗೂ ಇರಲಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್‌ಸಿಸಿ) ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರ ಪ್ರಶ್ನೆಗಳಿಗೆ ಉತ್ತರಿಸಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮತದಾನ ನಡೆದ 48 ಗಂಟೆಗಳಲ್ಲಿ ಅಂಕಿಅಂಶಗಳ ಬಿಡುಗಡೆ: ಚು.ಆಯೋಗದಿಂದ ಪ್ರತಿಕ್ರಿಯೆ ಕೇಳಿದ ಸುಪ್ರೀಂಕೋರ್ಟ್‌

0
ಮತದಾನ ಮುಗಿದ 48 ಗಂಟೆಗಳ ಒಳಗೆ ಮತದಾನ ಕೇಂದ್ರವಾರು ಮತದಾರರ ಅಂಕಿಅಂಶಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲು ನಿರ್ದೇಶನ ನೀಡುವಂತೆ ಕೋರಿ ಎನ್‌ಜಿಒ ಎಡಿಆರ್ ಸಲ್ಲಿಸಿದ ಮನವಿಗೆ ಸುಪ್ರೀಂಕೋರ್ಟ್ ಶುಕ್ರವಾರ ಒಂದು ವಾರದೊಳಗೆ ಭಾರತೀಯ...