Homeಮುಖಪುಟರಾಜ್ಯಪಾಲರು ಸೂಚಿಸಿದರೆ ಇನ್ನು ಹತ್ತು ನಿಮಿಷದಲ್ಲಿ ಬಹುಮತ ಸಾಬೀತುಪಡಿಸುತ್ತೇವೆ: ಸಂಜಯ್‌ ರಾವತ್‌

ರಾಜ್ಯಪಾಲರು ಸೂಚಿಸಿದರೆ ಇನ್ನು ಹತ್ತು ನಿಮಿಷದಲ್ಲಿ ಬಹುಮತ ಸಾಬೀತುಪಡಿಸುತ್ತೇವೆ: ಸಂಜಯ್‌ ರಾವತ್‌

- Advertisement -
- Advertisement -

ಸುಪ್ರೀಂ ಬಿಜೆಪಿಗೆ ಬಹುಮತ ಸಾಬೀತು ಮಾಡಲು ಸೂಚಿಸಿಲ್ಲ. ಆದರೆ ಫಡ್ನವೀಸ್‌ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ಪೀಕರಿಸಿದರೂ ಕೂಡ ಅವರಿಗೆ ಬಹುಮತವಿಲ್ಲ. ಈಗಲೂ ನಮ್ಮನ್ನು ರಾಜ್ಯಪಾಲರು ಕರೆದರೆ ಇನ್ನು ಹತ್ತು ನಿಮಿಷದಲ್ಲಿ ಬಹುಮತ ಸಾಬೀತುಪಡಿಸುತ್ತೇವೆ ಎಂದು ಶಿವಸೇನೆಯ ಮುಖಂಡ ಸಂಜಯ್ ರಾವತ್‌ರವರು ಹೇಳಿದ್ದಾರೆ.

ನಿನ್ನೆ ದೇಶದ ಇತಿಹಾಸದಲ್ಲಿ ಪ್ರಜಾಪ್ರಭುತ್ವಕ್ಕೆ ಕಪ್ಪು ದಿನವಾಗಿತ್ತು. ರಾಜಭವನದಲ್ಲಿ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸಿದ ರೀತಿ ಆಕಸ್ಮಿಕವಾಗಿತ್ತು. ಏಕೆಂದರೆ ಮಹಾರಾಷ್ಟ್ರದ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದರೂ ಸಹ ಅದು ಮಹಾರಾಷ್ಟ್ರದ ಜನರಿಗೆ ತಿಳಿದಿರಲಿಲ್ಲ. ದೇಶದಲ್ಲಿ ಇದೇ ಮೊದಲ ಬಾರಿಗೆ ಇದು ಸಂಭವಿಸಿದೆ “ಎಂದು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.

ಇದನ್ನೂ ಓದಿ: ನಾಳೆಯೊಳಗೆ ಎರಡು ಪತ್ರಗಳನ್ನು ಸಲ್ಲಿಸಿ: ಮಹಾರಾಷ್ಟ್ರ ಮುಖ್ಯಮಂತ್ರಿಗೆ ಸುಪ್ರೀಂ ಸೂಚನೆ

ರಾಷ್ಟ್ರಪತಿಭವನ ಮತ್ತು ರಾಜಭವನದ ಇಂತಹ ದುರುಪಯೋಗ ದೇಶದ ಇತಿಹಾಸದಲ್ಲಿ ಎಂದಿಗೂ ನಡೆದಿರಲಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

“ಅಜಿತ್ ಪವಾರ್ ಅವರು ನಿನ್ನೆ ರಾಜಭವನಕ್ಕೆ ಸುಳ್ಳು ದಾಖಲೆಗಳನ್ನು ಕೊಟ್ಟಿದ್ದಾರೆ ಮತ್ತು ರಾಜ್ಯಪಾಲರು ಆ ದಾಖಲೆಗಳನ್ನು ಸ್ವೀಕರಿಸಿದ್ದಾರೆ. ಈಗ ರಾಜ್ಯಪಾಲರು ಬಹುಮತವನ್ನು ಸಾಬೀತುಪಡಿಸುವಂತೆ ಕೇಳಿಕೊಂಡರೂ ನಾವು ಅದನ್ನು ಈಗಲೇ ಮಾಡಬಹುದು. 49 ಎನ್‌ಸಿಪಿ ಶಾಸಕರು ನಮ್ಮೊಂದಿಗಿದ್ದಾರೆ” ಎಂದು ಅವರು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಉದ್ಧವ್‌ ಠಾಕ್ರೆಯವರು ಸಿಎಂ ಆಗದಿದ್ದುದ್ದಕ್ಕೆ ಬೇಸರಗೊಂಡು ಶಿವಸೇನೆಯ ಕಾರ್ಯಕರ್ತನೊಬ್ಬ ಆತ್ಮಹತ್ಯೆಗೆ ಪ್ರಯತ್ನಿಸಿರುವ ಘಟನೆ ಮಹಾರಾಷ್ಟ್ರದ ವಾಸೀಮ್‌ ಜಿಲ್ಲೆಯಲ್ಲಿ ಸಂಭವಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...