ಕಳೆದ ನಾಲ್ಕು ತಿಂಗಳಿನಿಂದ ದೆಹಲಿಯ ಗಡಿಗಳಲ್ಲಿ ಆರಂಭವಾಗಿ ದೇಶಾದ್ಯಂತ ಪಸರಿಸಿರುವ ರೈತ ಹೋರಾಟ ತೀವ್ರಗೊಂಡಿದೆ. ದೇಶದ ಜನರಲ್ಲಿ ಹೋರಾಟದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ರೈತ ಮುಖಂಡರು ಮಾಡುತ್ತಿದ್ದು, ಗುಜರಾತ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದ ರೈತ ಮುಖಂಡ ಯುದುವೀರ್ ಸಿಂಗ್ ಅವರನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ.
ದೇಶದ ಎಲ್ಲಾ ರಾಜ್ಯಗಳನ್ನು ರೈತರನ್ನು ಹೋರಾಟಕ್ಕೆ ಕರೆತರುವ, ಅವರಲ್ಲಿ ಹೋರಾಟದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಸಂಯುಕ್ತ ಕಿಸಾನ್ ಮೋರ್ಚಾದ ರೈತ ಮುಖಂಡರು ಮಾಡುತ್ತಿದ್ದಾರೆ. ಈ ಹಿನ್ನೆಲೆ ಗುಜರಾತ್‌ನ ಮೊಟೆರಾದ ಹೋಟೆಲ್ ಒಂದರಲ್ಲಿ ಭಾರತೀಯ ಕಿಸಾನ್ ಯೂನಿಯನ್ ರಾಷ್ಟ್ರೀಯ ಕಾರ್ಯದರ್ಶಿ ಯುದುವೀರ್ ಸಿಂಗ್ ಮಾತನಾಡುತ್ತಿದ್ದರು.
ಗುಜರಾತ್‌ನಲ್ಲಿ ಏಪ್ರಿಲ್ 4-5 ರಂದು ಕಿಸಾನ್ ಮಹಾಪಂಚಾಯತ್‌ಗಳು ಜರುಗಲಿವೆ. ಈ ಕುರಿತು ಸಂಯುಕ್ತ ಕಿಸಾನ್ ಮೋರ್ಚಾ ಪರವಾಗಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದ ಯುದುವೀರ್ ಸಿಂಗ್ ಮತ್ತು ಜೆ.ಕೆ.ಪಟೇಲ್ ಸೇರಿದಂತೆ ಹಲವರನ್ನು ಗುಜರಾತ್ ಸರ್ಕಾರ ಯಾವುದೇ ಮಾಹಿತಿ ನೀಡದೇ ಬಂಧಿಸಿದೆ. “ಗುಜರಾತ್ ಸರ್ಕಾರದ ಸರ್ವಾಧಿಕಾರಿತನ ನೋಡಿ, ಇವರ ವಿರುದ್ಧ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುವುದು ಕಡ್ಡಾಯವಾಗಿದೆ” ಎಂದು ಕಿಸಾನ್ ಏಕ್ತಾ ಮೋರ್ಚಾ ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಿದೆ.
ಇದನ್ನೂ ಓದಿ: ಮೋದಿ ಸರ್ಕಾರದ ಬಳಿ ಅಭಿವೃದ್ದಿಯ ಅಜೆಂಡಾವಿಲ್ಲ, ಕೋಮುವಾದ ಅಜೆಂಡಾ ಮಾತ್ರವಿದೆ: ಯುದುವೀರ್ ಸಿಂಗ್
ಅಹಮದಾಬಾದ್‌ನ ಮೊಟೆರಾದಲ್ಲಿ ಹೋಟೆಲ್‌ವೊಂದರಲ್ಲಿ ರೈತರ ಆಂದೋಲನ ಕುರಿತು ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದಾಗ, ಪತ್ರಿಕಾಗೋಷ್ಠಿ ನಡೆಸಲು ಅವರಿಗೆ “ಅನುಮತಿ” ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಎಲ್ಲರನ್ನು ವಶಕ್ಕೆ ಪಡೆದಿದ್ದಾರೆ.
Farmer leaders Yudhvir Singh, Gajendra Singh, Ranjit Singh, J.K. Patel arrested from a press conference in Ahmedabad today.
The press conference was in lieu of Mahapanchayats to be held in Gujarat on Apr 4,5.
Clearly the Govt is scared of the "Bheed"#आज_भारत_बंद_है pic.twitter.com/5ubal9dROk
— Vocal (@Vocal_T2T) March 26, 2021
ಭಾರತೀಯ ಕಿಸಾನ್ ಯೂನಿಯನ್ ರಾಷ್ಟ್ರೀಯ ಕಾರ್ಯದರ್ಶಿ ಯುದುವೀರ್ ಸಿಂಗ್, ಕರ್ನಾಟಕದ ಶಿವಮೊಗ್ಗ, ಹಾವೇರಿಗಳಲ್ಲಿ ನಡೆದಿದ್ದ ರೈತ ಮಹಾಪಂಚಾಯತ್ ಮತ್ತು ಬೆಂಗಳೂರಿನಲ್ಲಿ ನಡೆದಿದ್ದ ವಿಧಾನಸೌಧ ಚಲೋ ರ್‍ಯಾಲಿಯಲ್ಲಿ ಭಾಗವಹಿಸಿ ರಾಜ್ಯದ ಜನರಲ್ಲಿ ರೈತ ಹೋರಾಟದ ಬಗ್ಗೆ ಜಾಗೃತಿ ಮೂಡಿಸಿದ್ದರು.
ಇದನ್ನೂ ಓದಿ: ರೈತ ವಿರೋಧಿ ಕೃಷಿ ಕಾಯ್ದೆ ತಂದು ಶೋಷಿಸುತ್ತಿರುವವರೆ ನಿಜ ಭಯೋತ್ಪಾದಕರು- ನಟ ಚೇತನ್ ಕಿಡಿ


