ಅತ್ಯಾಚಾರ ಹಾಗೂ ಹತ್ಯೆಗೀಡಾದ ದಲಿತ ಯುವತಿಯ ಪೋಷಕರಿಗೆ ಸಾಂತ್ವನ ಹೇಳಲು ಹೊರಟಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮೇಲೆ ಉತ್ತರ ಪ್ರದೇಶ ಪೊಲೀಸರು ನಡೆಸಿದ ದೌರ್ಜನ್ಯವನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತೀವ್ರವಾಗಿ ಖಂಡಿಸಿದ್ದಾರೆ.
“ಅಹಿಂಸಾ ಪ್ರತಿಪಾದಕ ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ಜನ್ಮದಿನದ ಮುನ್ನ ಇಂದು ಉತ್ತರ ಪ್ರದೇಶ ಪೊಲೀಸರು ರಾಷ್ಟ್ರೀಯ ಪಕ್ಷದ ನಾಯಕರ ಮೇಲೆ ಅಮಾನವೀಯ ವರ್ತನೆ ತೋರಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಪ್ರತಿಭಟನಾ ಅಸ್ತ್ರವನ್ನು ಹಾಡುಹಗಲೇ ದಹಿಸುವ ಯತ್ನ” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಹತ್ರಾಸ್ ಅತ್ಯಾಚಾರ: ಸಂತ್ರಸ್ಥೆಯ ತಂದೆಗೆ ಧಮಕಿ ಹಾಕುತ್ತಿರುವ ಜಿಲ್ಲಾಧಿಕಾರಿ ವಿಡಿಯೋ ವೈರಲ್
ಯಾವುದೇ ಸರಕಾರ ಶಾಂತಿಯುತ ಪ್ರತಿಭಟನೆಯನ್ನು ನಡೆಸುತ್ತಿದ್ದ ನಾಯಕರ ಕೊರಳಪಟ್ಟಿಗೆ ಕೈ ಹಾಕುತ್ತಾರೆ ಎಂದರೆ, ಉತ್ತರ ಪ್ರದೇಶ ಪೊಲೀಸರ ಹಿಂದೆ ಅಲ್ಲಿ ಅಧಿಕಾರ ಹಿಡಿದವರ "ನಿರ್ದೇಶನ" ಇಲ್ಲದಿರಲು ಸಾಧ್ಯವೇ? ಇಂತಹ ಧೋರಣೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕೊಡಲಿ ಪೆಟ್ಟು ಕೊಟ್ಟಂತಾಗಿದೆ.
4/5— H D Kumaraswamy (@hd_kumaraswamy) October 1, 2020
“ವಿಶ್ವದ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ರಾಜಕೀಯ ವಿರೋಧಿಗಳನ್ನು ಹಣಿಯಲು ಉತ್ತರ ಪ್ರದೇಶ ಪೊಲೀಸರು ಮುಂದಾಗಿದ್ದಾರೆ ಎಂದರೆ, ದಲಿತ ಬಾಲಕಿಯ ಪೋಷಕರನ್ನು ಹೊರಗಿಟ್ಟು ಆಕೆಯ ಶವವನ್ನು ಕತ್ತಲಲ್ಲಿ ಸುಟ್ಟಿದ್ದಾರೆ ಎಂಬುದರಲ್ಲಿ ನನಗೆ ಉತ್ಪ್ರೇಕ್ಷೆ ಕಾಣುತ್ತಿಲ್ಲ” ಎಂದು ಅವರು ಹೇಳಿದ್ದಾರೆ.
“ಯಾವುದೇ ಸರಕಾರ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ನಾಯಕರ ಕೊರಳಪಟ್ಟಿಗೆ ಕೈ ಹಾಕುತ್ತಾರೆ ಎಂದರೆ, ಉತ್ತರ ಪ್ರದೇಶ ಪೊಲೀಸರ ಹಿಂದೆ ಅಲ್ಲಿ ಅಧಿಕಾರ ಹಿಡಿದವರ ’ನಿರ್ದೇಶನ’ ಇಲ್ಲದಿರಲು ಸಾಧ್ಯವೇ? ಇಂತಹ ಧೋರಣೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕೊಡಲಿ ಪೆಟ್ಟು ಕೊಟ್ಟಂತಾಗಿದೆ” ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಮೈತ್ರಿಗೆ ಯೋಗ್ಯ ಪಕ್ಷವಲ್ಲ: ಎಚ್.ಡಿ ಕುಮಾರಸ್ವಾಮಿ ವಾಗ್ದಾಳಿ
ವಿಡಿಯೋ ನೋಡಿ: ರಾಮ ರಾಜ್ಯ ಎಂದರೆ ದಲಿತ, ಮಹಿಳೆ, ಅಲ್ಪ ಸಂಖ್ಯಾತರ ಮೇಲೆ ಅತ್ಯಾಚಾರ, ದಾಳಿ ಮಾಡುವಂತದ್ದೇ?