Homeಅಂತರಾಷ್ಟ್ರೀಯನಿಮಗೆ ಇನ್ನಷ್ಟು ಶವಗಳು ಬೇಕೆಂದಿದ್ದರೆ, ನಿಧಿ ನಿಲ್ಲಿಸಿ!: ಟ್ರಂಪ್‌ಗೆ WHO ಮಹಾಕಾರ್ಯದರ್ಶಿ ಕಹಿಮಾತು

ನಿಮಗೆ ಇನ್ನಷ್ಟು ಶವಗಳು ಬೇಕೆಂದಿದ್ದರೆ, ನಿಧಿ ನಿಲ್ಲಿಸಿ!: ಟ್ರಂಪ್‌ಗೆ WHO ಮಹಾಕಾರ್ಯದರ್ಶಿ ಕಹಿಮಾತು

ಯುಎಸ್‌ಎಯು ಈ ತನಕ ವಿಶ್ವದಲ್ಲಿಯೇ ಅತೀ ಹೆಚ್ಚಿನ ಸಾವಿನ ಸಂಖ್ಯೆಯನ್ನು ದಾಖಲಿಸಿದ್ದು, ಪಿಡುಗು ಇನ್ನಷ್ಟು ಬಿಗಡಾಯಿಸುವುದನ್ನು  ತಡೆಯಲು ವಿಫಲವಾಗಿರುವ ಟ್ರಂಪ್ ಆಡಳಿತವು ಚೀನಾದತ್ತ ಬೆರಳು ತೋರಿಸಿ, ಗಮನವನ್ನು ಬೇರೆಡೆ ಸೆಳೆಯಲು ಯತ್ನಿಸುತ್ತಿದೆ.

- Advertisement -
- Advertisement -

ವಿಶ್ವ ಆರೋಗ್ಯ ಸಂಸ್ಥೆಗೆ ನೀಡುವ ನಿಧಿಯನ್ನು ನಿಲ್ಲಿಸುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ ಬೆನ್ನಲ್ಲೇ, ನಿಮಗೆ ಇನ್ನಷ್ಟು ಶವಗಳು ಬೇಕೆಂದಿದ್ದರೆ ನಿಧಿ ನಿಲ್ಲಿಸಿ WHO ಮಹಾಕಾರ್ಯದರ್ಶಿ ತೆದ್ರೋಸ್ ಅದನೋಮ್ ಗೆಬ್ರೆಯೇಸಸ್ ಖಾರವಾದ ಪ್ರತಿಕ್ರಿಯೆ ನೀಡಿದ್ದರು. ತದನಂತರ ಮಾತುಕತೆಯ ಮೂಲಕ ಈ ಸಮಸ್ಯೆ ಬಗೆಹರಿಸಿಕೊಳ್ಳಲು ಎರಡು ಬಣಗಳು ಒಪ್ಪಿಕೊಂಡಿವೆ ಎನ್ನಲಾಗಿದೆ.

‘ಕೋವಿಡ್ ಪಿಡುಗನ್ನು ಕೆಟ್ಟದಾಗಿ ನಿರ್ವಹಿಸಿದೆ ಮತ್ತು ಪಿಡುಗಿಗೆ ಸಂಬಂಧಿಸಿದ ಮಹತ್ವದ ಮಾಹಿತಿಯನ್ನು ಮುಚ್ಚಿಹಾಕಲು ಚೀನಾದೊಂದಿಗೆ ಸೇರಿ ಸಂಚು ನಡೆಸುತ್ತಿದೆ’ ಎಂದು ಆರೋಪಿಸಿ, ಯುಎಸ್‌ಎ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶ್ವ ಆರೋಗ್ಯ ಸಂಸ್ಥೆ (WHO)ಗೆ ಎಪ್ರಿಲ್ 15ರಂದು ನಿಧಿ ಸ್ಥಗಿತಗೊಳಿಸಿದ್ದಾರೆ.

“ವ್ಯತಿರಿಕ್ತ ವರದಿಗಳು ಮತ್ತು ಸ್ಪಷ್ಟ ಸಾಕ್ಷ್ಯಾಧಾರಗಳ ಹೊರತಾಗಿಯೂ ಜನವರಿ ಮಧ್ಯಭಾಗಕ್ಕೆ ಮುನ್ನ ಮನುಷ್ಯನಿಂದ ಮನುಷ್ಯನಿಗೆ ರೋಗ ಹರಡುತ್ತಿಲ್ಲ ಎಂಬ ಕಲ್ಪನೆಯನ್ನು ಸಂಸ್ಥೆಯು ಬೆಂಬಲಿಸಿದುದು ಮತ್ತು ಅದನ್ನು ಒಂದು ಸಾರ್ವಜನಿಕ ತುರ್ತುಸ್ಥಿತಿ ಎಂದು ಘೋಷಿಸುವಲ್ಲಿ ಮಾಡಿದ ವಿಳಂಬವು ಯುಎಸ್‌ಎಗೆ ಅಮೂಲ್ಯವಾದ ಸಮಯ ನಷ್ಟವನ್ನು ಉಂಟುಮಾಡಿತು” ಎಂದು ಟ್ರಂಪ್ ಆರೋಪಿಸಿದ್ದಾರೆ.

WHO ಮುಖ್ಯ ಕಛೇರಿ

ನಿಲ್ಲಿಸಲಾಗುವ ನಿಧಿಯ ಮೊತ್ತವನ್ನು ಆತ ಉಲ್ಲೇಖಿಸಿಲ್ಲವಾದರೂ, ಪ್ರಸ್ತುತ ವಿಶ್ವ ಆರೋಗ್ಯ ಸಂಸ್ಥೆಯ 5600 ಕೋಟಿ ಡಾಲರ್ ವಾರ್ಷಿಕ ಬಜೆಟಿನಲ್ಲಿ ಯುಎಸ್‌ಎಯ ದೇಣಿಗೆಯು 90 ಕೋಟಿ ಡಾಲರ್‌ಗಳಾಗಿವೆ. ಆದರೆ, ಈ ನಿರ್ಧಾರವು ಜಾರಿಗೆ ಬರುವ ಮೊದಲು ಯುಎಸ್‌ಎಯ ಕಾಂಗ್ರೆಸ್ ಅದನ್ನು ಅಂಗೀಕರಿಸಬೇಕಾಗಿದೆ.

ಜಾಗತಿಕವಾದ ಈ ಬಿಕ್ಕಟ್ಟನ್ನು ಎದುರಿಸುವ ಕೆಲಸದಲ್ಲಿ ಭಾಗವಹಿಸುತ್ತಿರುವವರು ಈ ಸುದ್ದಿಗೆ ಹರಿತವಾಗಿ ಪ್ರತಿಕ್ರಿಯಿಸಿದ್ದಾರೆ. ಟ್ರಂಪ್ ಮಾಡಿರುವ ಈ ನಿರ್ಧಾರ ಮತ್ತು ಚೀನಾ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಕುರಿತ ಆತನ ಹಿಂದಿನ ಹೇಳಿಕೆಗಳನ್ನು ಅವರು ಆರೋಪದ ಧ್ವನಿಯಲ್ಲಿ ದೂರಿದ್ದಾರೆ. ವಿಶ್ವದಾದ್ಯಂತ ಅತ್ಯಂತ ಮಹತ್ವದ ಮತ್ತು ಅತ್ಯಗತ್ಯವಾದ ಮಾನವೀಯ ಕೆಲಸಗಳನ್ನು ಮಾಡುತ್ತಿರುವ ವಿಶ್ವ ಆರೋಗ್ಯ ಸಂಸ್ಥೆಯನ್ನು ಟ್ರಂಪ್ ರಾಜಕೀಕರಣಗೊಳಿಸುತ್ತಿರುವುದಾಗಿ ಅನೇಕರು ದೂರಿದ್ದಾರೆ- ಅದೂ ಕೂಡಾ, ಅತ್ಯಂತ ಬಡದೇಶಗಳಲ್ಲಿ ಅದರ ಕಾರ್ಯಗಳು ತೀರಾ ಅಗತ್ಯವಾಗಿರುವಾಗ. ಈ ನಿರ್ಧಾರವು ಬಹಳಷ್ಟು ಸಾವುಗಳಿಗೆ ಕಾರಣವಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ನಾಯಕರು ಎಚ್ಚರಿಸಿದ್ದಾರೆ.

“ದಯವಿಟ್ಟು ಈ ವೈರಸನ್ನು ರಾಜಕೀಕರಣಗೊಳಿಸಬೇಡಿ. ರಾಷ್ಟ್ರಮಟ್ಟದಲ್ಲಿ ನೀವು ಹೊಂದಿರುವ ಭಿನ್ನಾಭಿಪ್ರಾಯದ ಲಾಭವನ್ನು ಅದು ಎತ್ತುತ್ತದೆ. ನಿಮಗೆ ಹಾಗೆಯೇ ಆಗಬೇಕೆಂದಿದ್ದರೆ, ನಿಮಗೆ ಇನ್ನಷ್ಟು ಶವಪೆಟ್ಟಿಗೆಗಳು ಬೇಕೆಂದಾದರೆ, ಹಾಗೆಯೇ ಮಾಡಿ” ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾಕಾರ್ಯದರ್ಶಿ ಡಾ. ತೆದ್ರೋಸ್ ಅದನೋಮ್ ಗೆಬ್ರೆಯೇಸಸ್ ಅವರು, ಕಳೆದ ವಾರ ನಿಧಿ ನಿಲ್ಲಿಸುವುದಾಗಿ ಟ್ರಂಪ್ ಬೆದರಿಕೆ ಹೂಡಿದಾಗಲೇ ಎಚ್ಚರಿಕೆ ನೀಡಿದ್ದರು. ಕೊರೋನ ವೈರಸ್ ಹರಡುವಿಕೆಯಲ್ಲಿ ಚೀನಾದ ಪಾತ್ರದ ಬಗ್ಗೆ ಕಾಂಗ್ರೆಷನಲ್ ತನಿಖೆ ನಡೆಸುವ ಯೋಚನೆ ಮಾಡುತ್ತಿರುವುದಾಗಿ ರಿಪಬ್ಲಿಕನ್ ಪಕ್ಷ ಮತ್ತು ಕಾಂಗ್ರೆಸ್ ಘೋಷಿಸಿರುವುದನ್ನು ಗಮನಿಸುವುದು ಕೂಡಾ ಅತ್ಯಗತ್ಯವಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಮಹಾಕಾರ್ಯದರ್ಶಿ ಡಾ. ತೆದ್ರೋಸ್ ಅದನೋಮ್ ಗೆಬ್ರೆಯೇಸಸ್

ಕೊರೋನ ಪಿಡುಗನ್ನು ನಿಯಂತ್ರಿಸಲು ವಿಫಲವಾದ ಬಳಿಕ ಟ್ರಂಪ್ ಆಡಳಿತ ಮತ್ತು ರಿಪಬ್ಲಿಕನ್ನರು ಚೀನಾವನ್ನು ದೂರುವ, ಮತ್ತು ವೈರಸನ್ನು ಬಚ್ಚಿಡಲು ಚೀನಾಕ್ಕೆ ನೆರವಾದುದಾಗಿ ವಿಶ್ವ ಆರೋಗ್ಯ ಸಂಸ್ಥೆ ಮತ್ತಿತರ ಜಾಗತಿಕ ಸಂಸ್ಥೆಗಳನ್ನು ದೂರುವ ವಿವರವಾದ ಯೋಜನೆ ಹಾಕಿಕೊಂಡಿರುವುದಾಗಿ ಟೀಕಾಕಾರರು ಎಚ್ಚರಿಸಿದ್ದಾರೆ. ಈ ತನಕ ಯುಎಸ್‌ಎಯು 34,000ಕ್ಕೂ ಹೆಚ್ಚು ಸಾವುಗಳನ್ನು ದಾಖಲಿಸಿದೆ.

ಯುಎಸ್‌ಎಯು ಈ ತನಕ ವಿಶ್ವದಲ್ಲಿಯೇ ಅತೀ ಹೆಚ್ಚಿನ ಸಾವಿನ ಸಂಖ್ಯೆಯನ್ನು ದಾಖಲಿಸಿದ್ದು, ಪಿಡುಗು ಇನ್ನಷ್ಟು ಬಿಗಡಾಯಿಸುವುದನ್ನು  ತಡೆಯಲು ವಿಫಲವಾಗಿರುವ ಟ್ರಂಪ್ ಆಡಳಿತವು ಚೀನಾದತ್ತ ಬೆರಳು ತೋರಿಸಿ, ಗಮನವನ್ನು ಬೇರೆಡೆ ಸೆಳೆಯಲು ಯತ್ನಿಸುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಗೆ ಹಣಕಾಸು ನಿಲ್ಲಿಸುವ ಇತ್ತೀಚಿನ ಕ್ರಮವು- ಕೋವಿಡ್-19 ಬಿಕ್ಕಟ್ಟಿಗೆ ಚೀನಾವನ್ನು ದೂರುವ ದೀರ್ಘಕಾಲೀನ ತನಿಖೆಯ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿದೆ.

ಡಿಸೆಂಬರ್ ನಂತರದಿಂದ ಈ ಪಿಡುಗನ್ನು ಹೇಗೆ ಎದುರಿಸಲಾಯಿತು ಎಂಬ ಕುರಿತು ಹಂತ ಹಂತವಾಗಿ ಮಾಹಿತಿ ನೀಡಲು ಒಂದು ಕಾಲಾನುಕ್ರಮಣಿಕೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಚೀನಾದ ಅಧಿಕಾರಿಗಳು ಬಿಡುಗಡೆಗೊಳಿಸಿದ್ದಾರೆ ಮತ್ತು ಚೀನಾದ ಅಧಿಕಾರಿಗಳು ಹಾಗೂ ಅಂತರರಾಷ್ಟ್ರೀಯ ಸಂಸ್ಥೆಗಳ ನಡುವೆ ಸಮನ್ವಯ ಮತ್ತು ಸಹಕಾರವನ್ನು ತೋರಿಸಿದ್ದಾರೆ.

ಒಂದು ವಾರದ ನಂತರ WHO ಮತ್ತು ಅಮೆರಿಕಾ ಸರ್ಕಾರದ ನಡುವೆ ಸಮನ್ವಯ ಬಂದಿದ್ದು ಮಾತುಕತೆಯ ಮೂಲಕ ಸಮಸ್ಯೆ ಪರಿಹಾರಕ್ಕೆ ಮುಂದಾಗಿವೆ ಎನ್ನಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವದಾದ್ಯಂತ ತನ್ನ ಮಾನವೀಯ ಕೆಲಸಗಳಿಗಾಗಿ ಹೆಸರುವಾಸಿಯಾಗಿದೆ ಮತ್ತು ಟ್ರಂಪ್ ಆಡಳಿತವು ಅದರ ಮೇಲೆ ಹೊರಿಸಿರುವ- ಈ ಪಿಡುಗಿಗೆ ಸಂಬಂಧಿಸಿದಂತೆ ಅದು ಶಾಮೀಲಾಗಿದೆ ಎಂಬ- ಆರೋಪವು ಅತಿರೇಕದ್ದಾಗಿದೆ. ಒಂದು ವೇಳೆ, ಕೆಲವು ಅಧಿಕಾರಿಗಳು ನಿಜವಾಗಿಯೂ ಯಾವುದಾದರೊಂದು ರೀತಿಯ ಮುಚ್ಚುಮರೆಯಲ್ಲಿ ತೊಡಗಿದ್ದರೂ, ಅದನ್ನು ನಂತರದಲ್ಲಿ ತನಿಖೆ ಮಾಡಬೇಕೇ ಹೊರತು, ಈ ಬಿಕ್ಕಟ್ಟು ತಾರಕಕ್ಕೇರಿರುವ ಈ ಹೊತ್ತಿನಲ್ಲಿ ಆಲ್ಲ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಅನುವಾದ: ನಿಖಿಲ್‌ ಕೋಲ್ಪೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

LEAVE A REPLY

Please enter your comment!
Please enter your name here

- Advertisment -

ದಟ್ಟಾರಣ್ಯದೊಳಗೆ ಮೂರು ದಿನಗಳನ್ನು ಕಳೆದಿದ್ದು ಹೇಗೆ..ದಾರಿ ತಪ್ಪಿದ ಬಳಿಕ ಏನಾಯ್ತು? ನಾಪತ್ತೆ ವಿಚಾರ ಬಿಚ್ಚಿಟ್ಟ ಶರಣ್ಯ

ಕಳೆದ ಗುರುವಾರ (ಏಪ್ರಿಲ್ 2, 2026) ಕೊಡಗಿನ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದ ಕೇರಳದ ಯುವತಿ ಶರಣ್ಯ, ಮೂರು ದಿನಗಳ ಬಳಿಕ, ಅಂದರೆ ನಾಪತ್ತೆಯಾದ ನಾಲ್ಕನೇ ದಿನ ಭಾನುವಾರ (ಏಪ್ರಿಲ್ 4,...

ಮಗಳ ವಿಚ್ಛೇದನ: ಸಿಹಿ ಹಂಚಿ, ಮೆರವಣಿಗೆಯಲ್ಲಿ ಆಕೆಯನ್ನು ಮನೆಗೆ ಕರೆತಂದ ನೀವೃತ್ತ ನ್ಯಾಯಾದೀಶ ಮತ್ತು ಕುಟುಂಬ

ಮೀರತ್: ಕೌಟುಂಬಿಕ ನ್ಯಾಯಾಲಯದಲ್ಲಿ ಮಗಳ ವಿಚ್ಛೇದನ ಅಂತಿಮವಾದ ನಂತರ ಆಕೆಯನ್ನು ಡೋಲು, ನೃತ್ಯಗಳ ಮೆರವಣಿಗೆಯಲ್ಲಿ ಸಂಭ್ರಮದಿಂದ ತಂದೆ ಮನೆಗೆ ಕರೆತಂದ ಘಟನೆ ಮೀರನ್ ನಲ್ಲಿ ನಡೆದಿದೆ.  ಪೋಷಕರ ಬೆಂಬಲದ ಅಪರೂಪದ ಮತ್ತು ಹೃದಯಸ್ಪರ್ಶಿ ಪ್ರದರ್ಶನದಲ್ಲಿ,...

“ನೀನು ನಿಜವಾಗಿಯೂ ಅಂಬೇಡ್ಕರ್ ಮಗಳಾ ಎಂದು ತಿಳಿಯಲು ನಾವು ನಿನ್ನ ಡಿಎನ್‌ಎ ಟೆಸ್ಟ್ ಮಾಡುತ್ತೇವೆ” ದೆಹಲಿ ಸಭೆಯಲ್ಲಿ ದಲಿತ ಟ್ರಾನ್ಸ್ ಹೋರಾಟಗಾರ್ತಿ ಗ್ರೇಸ್ ಬಾನುಗೆ ಜಾತಿ ನಿಂದನೆ ಆರೋಪ

ಕೇಂದ್ರ ಸರ್ಕಾರದ ವಿವಾದಾತ್ಮಕ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಕಾಯ್ದೆ, 2026ರ ವಿರುದ್ಧ ಕಳೆದ ಕೆಲ ವಾರಗಳಿಂದ ಇಡೀ ಟ್ರಾನ್ಸ್‌ಜೆಂಡರ್ ಮತ್ತು ಪ್ರಗತಿಪರ ಸಮುದಾಯ ಪ್ರತಿಭಟನೆ ನಡೆಸುತ್ತಿದೆ. ಈ ನಡುವೆ ಶುಕ್ರವಾರ...

‘ಮೋದಿ ಕ್ರಿಶ್ಚಿಯನ್ ಸಂಸ್ಥೆಗಳಲ್ಲಿ ಭಯ ಹುಟ್ಟಿಸಲು ಪ್ರಯತ್ನಿಸುತ್ತಿದ್ದಾರೆ’: ಎಫ್‌ಸಿಆರ್‌ಎ ತಿದ್ದುಪಡಿ ಕುರಿತು ಮಲ್ಲಿಕಾರ್ಜುನ ಖರ್ಗೆ

ಇಡುಕ್ಕಿ (ಕೇರಳ): ಸಾರ್ವಜನಿಕ ಮತ್ತು ಸಾಮಾಜಿಕ ಕಲ್ಯಾಣ ಕ್ಷೇತ್ರದಲ್ಲಿ ಕೆಲಸ ಮಾಡುವ ಕ್ರಿಶ್ಚಿಯನ್ ಸಂಸ್ಥೆಗಳು, ಎನ್‌ಜಿಒಗಳು ಮತ್ತು ನಾಗರಿಕ ಸಮಾಜದ ಮೇಲೆ ದಾಳಿ ಮಾಡಲು ಪ್ರಧಾನಿ ನರೇಂದ್ರ ಮೋದಿ ಎಫ್‌ಸಿಆರ್‌ಎ (ವಿದೇಶಿ ದೇಣಿಗೆ...

ವೈದ್ಯಕೀಯ, ತಾಂತ್ರಿಕ ಶಿಕ್ಷಣದಲ್ಲಿ ಎಸ್‌ಸಿ/ಎಸ್‌ಟಿ ಮೀಸಲಾತಿ ಹೆಚ್ಚಿಸಿದ ಒಡಿಶಾ ಸರ್ಕಾರ, ಒಬಿಸಿ ವಿದ್ಯಾರ್ಥಿಗಳಿಗೆ ಹೊಸ ಕೋಟಾ

ಮಹತ್ವದ ನಿರ್ಧಾರ ಕೈಗೊಂಡಿರುವ ಒಡಿಶಾ ಸರ್ಕಾರ, ವೈದ್ಯಕೀಯ, ಇಂಜಿನಿಯರಿಂಗ್ ಮತ್ತು ಇತರ ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣ ಕೋರ್ಸ್‌ಗಳಲ್ಲಿ ಪರಿಶಿಷ್ಟ ಪಂಗಡ (ಎಸ್‌ಟಿ), ಪರಿಶಿಷ್ಟ ಜಾತಿ (ಎಸ್‌ಸಿ) ಅಭ್ಯರ್ಥಿಗಳಿಗೆ ಮೀಸಲಾತಿಯನ್ನು ಗಣನೀಯವಾಗಿ ಹೆಚ್ಚಿಸಿದೆ....

ಶಾಲಾ ವಾರ್ಷಿಕೋತ್ಸವದಲ್ಲಿ ಲವಲವಿಕೆಯಿಂದ ಭಾಗವಹಿಸಿದ್ದ 6 ಮಕ್ಕಳು, ತಡರಾತ್ರಿ ಹೊತ್ತಿಗೆ ಶವವಾದರು : ಮಹಾರಾಷ್ಟ್ರದಲ್ಲೊಂದು ಹೃದಯ ವಿದ್ರಾವಕ ಘಟನೆ

ಶಾಲಾ ವಾರ್ಷಿಕೋತ್ಸವದಲ್ಲಿ ಬಹಳ ಉತ್ಸಾಹದಿಂದ ಭಾಗವಹಿಸಿದ್ದ ಆರು ಮಂದಿ ಮಕ್ಕಳು, ತಡ ರಾತ್ರಿ ಹೊತ್ತಿಗೆ ಶವವಾದ ಹೃದಯ ವಿದ್ರಾವಕ ಘಟನೆಯೊಂದು ಮಹಾರಾಷ್ಟ್ರದ ದಿಂಡೋರಿಯಲ್ಲಿ ಶುಕ್ರವಾರ (ಏ.3) ನಡೆದಿದೆ. ನಾಸಿಕ್‌ ನಗರದಿಂದ 20 ಕಿಲೋ...

ಕೇರಳ: ಕೊಲ್ಲಂನಲ್ಲಿ ಟಿವಿ ಚಾನೆಲ್ ಕಚೇರಿ ಮೇಲೆ ಸ್ಫೋಟಕ ವಸ್ತು ಎಸೆತ

ಕೊಲ್ಲಂ: ಇಲ್ಲಿನ ಟಿವಿ ಚಾನೆಲ್ ಒಂದರ ಕಚೇರಿಯ ಮೇಲೆ ಭಾನುವಾರ ಬೆಳಿಗ್ಗೆ ಸ್ಫೋಟಕ ವಸ್ತು ಎಸೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಆ ಪ್ರದೇಶ ಮತ್ತು ಚಾನೆಲ್ ಕಚೇರಿಯ ಸಿಸಿಟಿವಿ ದೃಶ್ಯಗಳಲ್ಲಿ ಇಬ್ಬರು...

ಹತ್ಯೆಯಾದ ಇರಾನ್ ಕಮಾಂಡರ್ ಖಾಸಿಮ್ ಸುಲೈಮಾನಿ ಅವರ ಸೊಸೆ, ಮೊಮ್ಮಗಳನ್ನು ಬಂಧಿಸಿದ ಅಮೆರಿಕ

ನವದೆಹಲಿ: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಶುಕ್ರವಾರ ತಮ್ಮ ಶಾಶ್ವತ ನಿವಾಸಿ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ನ ದಿವಂಗತ ನಾಯಕ ಖಾಸಿಮ್ ಸೊಲೈಮಾನಿ ಅವರ...

ಇರಾನ್ ಮೇಲೆ ಬೃಹತ್ ದಾಳಿ: ಹಲವು ಉನ್ನತ ನಾಯಕರನ್ನು ಕೊಲ್ಲಲಾಗಿದೆ ಎಂದು ವಿಡಿಯೋ ಹಂಚಿಕೊಂಡ ಟ್ರಂಪ್

ಟೆಹ್ರಾನ್ ಮೇಲೆ ನಡೆದ ದಾಳಿಯ ವೀಡಿಯೊವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಂಚಿಕೊಂಡಿದ್ದು, ಹಲವಾರು ಇರಾನ್ ಮಿಲಿಟರಿ ನಾಯಕರ ಸಾವಿಗೆ ಅದು ಕಾರಣ ಎಂದು ಹೇಳಿಕೊಂಡಿದ್ದಾರೆ. "ಟೆಹ್ರಾನ್‌ನಲ್ಲಿ ನಡೆದ ಈ ಬೃಹತ್ ದಾಳಿಯೊಂದಿಗೆ, ಇರಾನ್‌ನ...

ಅಸ್ಸಾಂ ಚುನಾವಣೆ : ನುಸುಳುಕೋರರಿಂದ ಯುವ ಕಲ್ಯಾಣಕ್ಕೆ ವರಸೆ ಬದಲಿಸಿದ ಬಿಜೆಪಿ

ಅಸ್ಸಾಂ ವಿಧಾನಸಭಾ ಚುನಾವಣೆಗೆ ನಾಲ್ಕು ದಿನಗಳು ಬಾಕಿ ಇರುವಾಗ ಬಿಜೆಪಿ ತನ್ನ ಪ್ರಚಾರದ ವರಸೆಯನ್ನು ಬದಲಿಸಿಕೊಂಡಿದೆ. ನುಸುಳುಕೋರರನ್ನು ಹೊರಹಾಕುತ್ತೇವೆ, ಅಕ್ರಮ ವಲಸೆಗೆ ಕಡಿವಾಣ ಹಾಕುತ್ತೇವೆಂದು ಅಬ್ಬರಿಸುತ್ತಿದ್ದ ಬಿಜೆಪಿಗರು, ಈಗ ನುಸುಳಕೋರರ ವಿಷಯವನ್ನು ಬದಿಗೊತ್ತಿದ್ದಾರೆ....