ಡಿ.ಕೆ.ಶಿವಕುಮಾರ್‌ಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ ದೆಹಲಿ ಹೈಕೋರ್ಟ್‌

ಅಕ್ರಮ ಹಣ ವರ್ಗಾವಣೆ ಅಕ್ರಮದಲ್ಲಿ ಬಂಧನಕ್ಕೆ ಒಳಗಾಗಿದ್ದ ಮಾಜಿ ಸಚಿವ, ಡಿ.ಕೆ.ಶಿವಕುಮಾರ್‌ ಅವರಿಗೆ ದೆಹಲಿ ಹೈಕೋರ್ಟ್‌ ಷರತ್ತು ಬದ್ಧ ಜಾಮೀನು ನೀಡಿದೆ. ಇದರಿಂದ ಡಿಕೆಶಿ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ.

ದೆಹಲಿಯ ತಿಹಾರ್‌ ಜೈಲಿನಲ್ಲಿದ್ದ ಡಿಕೆಶಿ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಅಲ್ಲದೇ ಡಿಕೆಶಿ ಅವರಿಂದ ಸಾಕ್ಷ್ಯನಾಶ ಸಾಧ್ಯತೆ ಕಡಿಮೆಯಿದೆ ಎಂಬುದನ್ನು ಮನಗಂಡ ನ್ಯಾಯಾಲಯದ ನ್ಯಾಯಮೂರ್ತಿ ಸುರೇಶ್‌ಕುಮಾರ್‌ ಕೈಟ್‌ ಅವರಿದ್ದ ಏಕಸದಸ್ಯ ಪೀಠ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ೨೫ ಲಕ್ಷ ರೂ. ಎರಡು ಬಾಂಡ್ ನೀಡಬೇಕು. ಪಾಸ್‌ಪೋರ್ಟ್‌‌ನ್ನು ಒಪ್ಪಿಸಬೇಕು ಮತ್ತು ವಿಚಾರಣೆಗೆ ಸಹಕರಿಸುವಂತೆ ಮತ್ತು ಹಾಜರಾಗುವಂತೆ ಷರತ್ತು ವಿಧಿಸಿ, ನ್ಯಾಯಾಲಯ ಜಾಮೀನು ನೀಡಿದೆ.

ಜಾರಿ ನಿರ್ದೇಶನಾಲಯದ ವಿಶೇಷ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿತ್ತು. ಹೀಗಾಗಿ ಜಾಮೀನಿಗಾಗಿ ಡಿಕೆಶಿ ದೆಹಲಿ ಹೈಕೋರ್ಟ್‌‌ಗೆ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಇಡಿ ಮತ್ತು ಡಿಕೆಶಿ ಪರ ವಕೀಲರ ವಾ-ಪ್ರತಿವಾದ ಆಲಿಸಿ, ಆದೇಶವನ್ನು ಇಂದಿಗೆ (ಬುಧವಾರ)  ಕಾಯ್ದಿರಿಸಿತ್ತು. ಈಗ ಜಾಮೀನು ದೊರೆತಿದ್ದು, ಒಂದೂವರೆ ತಿಂಗಳ ಜೈಲುವಾಸದ ಬಳಿಕ ಡಿಕೆಶಿ ಬಂಧನದಿಂದ ಹೊರಬಂದಿದ್ದಾರೆ.

ಇನ್ನು ಡಿಕೆಶಿ ಅವರನ್ನು ಸೋಮವಾರವಷ್ಟೇ ಭೇಟಿಯಾಗಿ ಧೈರ್ಯ ತುಂಬಿದ್ದ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿ, ದೆಹಲಿ ಹೈಕೋರ್ಟ್‌ ಜಾಮೀನು ನೀಡಿರುವುದು ಸಂತೋಷದ ವಿಚಾರ ಎಂದು ಹೇಳಿದ್ದಾರೆ. ಸಹೋದರ ಡಿ.ಕೆ.ಸುರೇಶ್ ಮಾತನಾಡಿ, ಒಂದೂವರೆ ತಿಂಗಳಿಂದ ಮಾನಸಿಕ ಹಿಂಸೆ ಅನುಭವಿಸುತ್ತಿದ್ದೆವು. ಜಾಮೀನು ಮಂಜೂರಾಗಿರುವುದು ಸಂತಸ ತಂದಿದೆ ಎಂದು ಹೇಳಿದ್ದಾರೆ. ಇತ್ತ ಡಿಕೆಶಿ ಅವರಿಗೆ ಜಾಮೀನು ಮಂಜೂರಾಗುತ್ತಿದ್ದಂತೆ ಕಾಂಗ್ರೆಸ್‌ ಕಾರ್ಯಕರ್ತರು, ಅಭಿಮಾನಿಗಳು, ಬೆಂಬಲಿಗರು ಸಂಭ್ರಮಾಚರಣೆ ಮಾಡಿದರು. ರಾಮನಗರ, ಕನಕಪುರ, ಬೆಂಗಳೂರು ಸೇರಿದಂತೆ ಹಲವೆಡೆ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಡಿಕೆಶಿ ಅವರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಸೆಪ್ಟಂಬರ್‌ ೩ರಂದು ಬಂಧಿಸಿದ್ದರು. ಸತತ ೪೯ ದಿನಗಳ ನಂತರ ಡಿಕೆಶಿ ಬಂಧಮುಕ್ತಗೊಂಡಿದ್ದಾರೆ. ಇನ್ನು ದೆಹಲಿಯಲ್ಲಿರುವ ಡಿಕೆಶಿಗೆ ಸೇರಿದ ಫ್ಲಾಟ್‌ಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಆಗ ಡಿಕೆಶಿ ನಿವಾಸದಲ್ಲಿ ಅಕ್ರಮ ಹಣ ಪತ್ತೆಯಾಗಿತ್ತು. ೮.೫೯ ಕೋಟಿ ಹಣವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದರು.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here