Homeಮುಖಪುಟಏಳು ವರ್ಷಗಳಲ್ಲಿ 55,607 ವೆಬ್‌ಸೈಟ್‌ಗಳನ್ನು ನಿರ್ಬಂಧಿಸಿದ ಭಾರತ: ವರದಿ

ಏಳು ವರ್ಷಗಳಲ್ಲಿ 55,607 ವೆಬ್‌ಸೈಟ್‌ಗಳನ್ನು ನಿರ್ಬಂಧಿಸಿದ ಭಾರತ: ವರದಿ

- Advertisement -
- Advertisement -

ಜನವರಿ 2015 ಮತ್ತು ಸೆಪ್ಟೆಂಬರ್ 2022ರ ನಡುವೆ ಭಾರತವು 55,607 ಯುಆರ್‌‌ಎಲ್‌ಗಳನ್ನು (ವೆಬ್‌ಸೈಟ್‌ಗಳನ್ನು) ನಿರ್ಬಂಧಿಸಿದೆ ಎಂದು ಭಾರತದ ಸಾಫ್ಟ್‌ವೇರ್ ಫ್ರೀಡಂ ಲಾ ಸೆಂಟರ್‌ನ ವರದಿ ಹೇಳಿರುವುದಾಗಿ ‘ನ್ಯೂಸ್‌ಲಾಂಡ್ರಿ’ ಜಾಲತಾಣ ಪ್ರಕಟಿಸಿದೆ.

ಇವುಗಳಲ್ಲಿ 26,474 ಯುಆರ್‌ಎಲ್‌ಗಳು (ಅಥವಾ 47.6 ಶೇ.) ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 69ಎ ಅಡಿಯಲ್ಲಿ ನಿರ್ಬಂಧಕ್ಕೊಳಪಟ್ಟಿವೆ. 46.8 ಪ್ರತಿಶತದಷ್ಟು ಯುಆರ್‌ಎಲ್‌ಗಳು ಹಕ್ಕುಸ್ವಾಮ್ಯ ಉಲ್ಲಂಘನೆಗಾಗಿ ನಿರ್ಬಂಧಕ್ಕೆ ಒಳಪಟ್ಟರೆ, ಉಳಿದವುಗಳನ್ನು ಅಶ್ಲೀಲತೆ, ಪೊರ್ನೊಗ್ರಫಿ, ಮಕ್ಕಳ ಮೇಲಿನ ಲೈಂಗಿಕ ನಿಂದನೆಯ ಕಾರಣಕ್ಕೆ ತಡೆಹಿಡಿಯಲಾಗಿದೆ.

ಈ ಯುಆರ್‌‌ಎಲ್‌‌ಗಳನ್ನು ಏಕೆ ನಿರ್ಬಂಧಿಸಲಾಗಿದೆ?

1. ಸೆಕ್ಷನ್ 69ಎ ಅಡಿಯಲ್ಲಿ ನಿರ್ಬಂಧ ಹೇರಲಾಗಿದೆ. ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆ, ರಕ್ಷಣೆ, ರಾಜ್ಯದ ಭದ್ರತೆ, ವಿದೇಶಿಗಳೊಂದಿಗಿನ ಸ್ನೇಹ ಸಂಬಂಧಗಳು, ಸಾರ್ವಜನಿಕ ಸುವ್ಯವಸ್ಥೆ ಮತ್ತು ಈ ಆಧಾರಗಳಿಗೆ ಸಂಬಂಧಿಸಿದ ಅಪರಾಧಗಳ ತಡೆ- ವಿಚಾರವಾಗಿ ಈ ಸೆಕ್ಷನ್ ಹೇಳುತ್ತದೆ.

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು 26,379 ಯುಆರ್‌ಎಲ್‌ಗಳನ್ನು ನಿರ್ಬಂಧಿಸಿದೆ, ಇದರ ಜೊತೆಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು 94 (ಮುಖ್ಯವಾಗಿ YouTube ಚಾನಲ್‌ಗಳು) ಯುಆರ್‌ಎಲ್‌ಗಳನ್ನು ಐಟಿ ನಿಯಮಗಳ ಮೂಲಕ ನಿರ್ಬಂಧಿಸಿದೆ.

ತಪ್ಪು ಮಾಹಿತಿ ಮತ್ತು ಪ್ರೊಪಗಾಂಡದಂತಹ ವಿಚಾರಗಳಿಗೆ ಸಂಬಂಧಿಸಿದಂತೆ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರಣಗಳಿವೆ. ಯುಎಪಿಎ ಅಡಿಯಲ್ಲಿ ನಿಷೇಧಗೊಂಡ ಸಂಸ್ಥೆಗಳ ಲಿಂಕ್‌ಗಳು ಬ್ಲಾಕ್ ಆಗಿವೆ. ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರ, 2021ರ ಜನರಲ್ ಬಿಪಿನ್ ರಾವತ್ ಅವರ ಸಾವಿಗೆ ಸಂಬಂಧಿಸಿದ ನಕಲಿ ಸುದ್ದಿಗಳನ್ನು ಪ್ರಸಾರ ಮಾಡಿದ ಯುಆರ್‌ಎಲ್‌ ಲಿಂಕ್‌ಗಳನ್ನು ರದ್ದು ಮಾಡಲಾಗಿದೆ.

2. ಹಕ್ಕುಸ್ವಾಮ್ಯ ಉಲ್ಲಂಘನೆಗಾಗಿ ನಿರ್ಬಂಧಿಸಲಾದ 26,024 ಯುಆರ್‌ಎಲ್‌‌ಗಳಿಗೆ ಸಂಬಂಧಿಸಿದಂತೆ, ಹೆಚ್ಚಿನ ಆದೇಶಗಳು ನ್ಯಾಯಾಲಯಗಳಿಂದ ಬಂದಿವೆ.

ಯುಎಸ್‌ ಕಾನೂನಿನ ಅಡಿಯಲ್ಲಿ ನಿರ್ಬಂಧಿಸುವಿಕೆ ಪ್ರಕ್ರಿಯೆ ನಡೆಯುತ್ತದೆ. ಏಕೆಂದರೆ ಗೂಗಲ್‌, ಮೆಟಾ (ಫೇಸ್‌ಬುಕ್‌, ಇನ್ಸ್‌ಸ್ಟಾಗ್ರಾಮ್‌, ವಾಟ್ಸ್‌ಅಪ್‌) ಮತ್ತು ಟ್ವಿಟರ್‌ ಸಂಸ್ಥೆಗಳು ಅಮೆರಿಕಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿವೆ. ಭಾರತವು 1928 ರಿಂದ ಬರ್ನ್ ಕನ್ವೆನ್ಷನ್‌ಗೆ ಸಹಿ ಹಾಕಿದೆ ಮತ್ತು 2018ರಲ್ಲಿ ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆಯ ಹಕ್ಕುಸ್ವಾಮ್ಯ ಒಪ್ಪಂದವನ್ನು ಒಪ್ಪಿಕೊಂಡಿದೆ.

3. ಒಟ್ಟು 1,065 ಯುಆರ್‌ಎಲ್‌ಗಳನ್ನು ಅಶ್ಲೀಲತೆ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಪೋನ್ರೋಗ್ರಫಿ ಕಾರಣಕ್ಕಾಗಿ ನಿರ್ಬಂಧಿಸಲಾಗಿದೆ. 2018ರಲ್ಲಿ ಉತ್ತರಾಖಂಡ ಹೈಕೋರ್ಟ್‌ನ ಆದೇಶದ ನಂತರ ಐಟಿ ಸಚಿವಾಲಯವು 857 ಯುಆರ್‌ಎಲ್‌ಗಳನ್ನು ತೆರವು ಮಾಡಿದರೆ, 238 ಅನ್ನು ಮುಂಬೈನ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ 2016 ರಲ್ಲಿ ನಿರ್ಬಂಧಿಸಿದ್ದಾರೆ.

4. ಇತರ ಕಾರಣಗಳಲ್ಲಿ- ಮಾನನಷ್ಟ, ಸಾರ್ವಜನಿಕ ಅವ್ಯವಸ್ಥೆ, ಕಾನೂನು ಮತ್ತು ಸುವ್ಯವಸ್ಥೆ, ನ್ಯಾಯಾಲಯದ ನಿಂದನೆ ಸೇರಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...