Homeಅಂತರಾಷ್ಟ್ರೀಯಪ್ಯಾಲೆಸ್ತೀನ್‌ಗೆ ವಿಶ್ವಸಂಸ್ಥೆ ಸದಸ್ಯತ್ವ: ನಿರ್ಣಯದ ಪರ ಭಾರತ ಮತದಾನ

ಪ್ಯಾಲೆಸ್ತೀನ್‌ಗೆ ವಿಶ್ವಸಂಸ್ಥೆ ಸದಸ್ಯತ್ವ: ನಿರ್ಣಯದ ಪರ ಭಾರತ ಮತದಾನ

- Advertisement -
- Advertisement -

ವಿಶ್ವಸಂಸ್ಥೆಯಲ್ಲಿ ಪ್ಯಾಲೆಸ್ತೀನ್‌ಗೆ ಪೂರ್ಣ ಸದಸ್ಯತ್ವ ನೀಡಬೇಕೆಂಬ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯದ ಕರಡು ಪರವಾಗಿ ಭಾರತ ಮತ ಚಲಾಯಿಸಿದೆ. ಭದ್ರತಾ ಮಂಡಳಿಯು ಈ ವಿಷಯವನ್ನು ಅನುಕೂಲಕರವಾಗಿ ಮರುಪರಿಶೀಲಿಸುವಂತೆ ನಿರ್ಣಯವು ಶಿಫಾರಸು ಮಾಡಿದೆ.

ಈ ನಿರ್ಣಯದ ಪರವಾಗಿ ಭಾರತ ಸೇರಿದಂತೆ ಒಟ್ಟು 143 ರಾಷ್ಟ್ರಗಳು ಮತ ಚಲಾಯಿಸಿದ್ದರೆ, 25 ರಾಷ್ಟ್ರಗಳು ಗೈರಾಗಿತ್ತು, ಒಂಬತ್ತು ರಾಷ್ಟ್ರಗಳು ನಿರ್ಣಯದ ವಿರುದ್ಧ ಮತ ಚಲಾಯಿಸಿವೆ. ನಿರ್ಣಯದ ವಿರುದ್ಧ ಅಮೆರಿಕ, ಇಸ್ರೇಲ್‌, ಪಪುವಾ ನ್ಯೂ ಗಿನಿ, ಪಲೌ, ನೌರು, ಮೈಕ್ರೋನೇಷ್ಯಾ, ಆರ್ಜೆಂಟಿನ, ಹಂಗೆರಿ, ಝೆಕಿಯಾ ಮತ ಚಲಾಯಿಸಿವೆ.

ವಿಶ್ವ ಸಂಸ್ಥೆಯ ಸದಸ್ಯತ್ವ ಪಡೆಯಲು ಫೆಲೆಸ್ತೀನ್‌ ಅರ್ಹವಾಗಿದೆ ಎಂದು ಸಂಯುಕ್ತ ಅರಬ್‌ ಸಂಸ್ಥಾನ ನಿರ್ಣಯ ಮಂಡಿಸಿದೆ. ವಿಶ್ವಸಂಸ್ಥೆ ಸನ್ನದಿನ ವಿಧಿ 4ರ ಅನ್ವಯ ಸದಸ್ಯತ್ವಕ್ಕೆ ಮಾನ್ಯತೆ ನೀಡಬೇಕು ಎಂದು ನಿರ್ಣಯ ಮಂಡಿಸಲಾಗಿತ್ತು. ಈ ನಿರ್ಣಯದ ಕುರಿತು 100ಕ್ಕೂ ಅಧಿಕ ರಾಷ್ಟ್ರೀಯ ಪ್ರತಿನಿಧಿಗಳು ಮಾತನಾಡಿದ್ದರು.

ಕಳೆದ ತಿಂಗಳು, ಸಾಮಾನ್ಯ ಸಭೆಯಲ್ಲಿ ವ್ಯಾಪಕ ಬೆಂಬಲದ ಹೊರತಾಗಿಯೂ ಭದ್ರತಾ ಮಂಡಳಿಗೆ ಸಲ್ಲಿಸಿದ ಇದೇ ರೀತಿಯ ನಿರ್ಣಯವನ್ನು ಯುನೈಟೆಡ್ ಸ್ಟೇಟ್ಸ್ ವೀಟೋ ಅಧಿಕಾರ ಚಲಾವಣೆ ಮಾಡಿ ರದ್ದುಗೊಳಿಸಿತ್ತು.  ಇದೀಗ ಯುಎಸ್ ಮತ್ತೊಮ್ಮೆ ವೀಟೋ ಅಧಿಕಾರ ಚಲಾವಣೆ ಮಾಡುವ ನಿರೀಕ್ಷೆಯಿದೆ.

1974ರಲ್ಲಿ ಪ್ಯಾಲೆಸ್ತೀನ್‌ ಲಿಬರೇಶನ್ ಆರ್ಗನೈಸೇಶನ್‌ನ್ನು ಪ್ಯಾಲೆಸ್ತೀನಿಯನ್ ಜನರ ಏಕೈಕ ಮತ್ತು ಕಾನೂನುಬದ್ಧ ಪ್ರತಿನಿಧಿಯಾಗಿ ಗುರುತಿಸಿದ ಮೊದಲ ಅರಬ್ ಅಲ್ಲದ ರಾಜ್ಯ ಭಾರತವಾಗಿದೆ. 1988ರಲ್ಲಿ ಪ್ಯಾಲೆಸ್ತೀನ್‌ ರಾಜ್ಯವನ್ನಾಗಿ ಗುರುತಿಸಿದ ದೇಶಗಳಲ್ಲಿ ಭಾರತವೂ ಒಂದಾಗಿದೆ. 1996ರಲ್ಲಿ ಭಾರತ ತನ್ನ ಪ್ರತಿನಿಧಿ ಕಚೇರಿಯನ್ನು ಕೂಡ ತೆರೆದಿದೆ.

UN ರಾಯಭಾರಿಯಲ್ಲಿ ಭಾರತದ ಖಾಯಂ ಪ್ರತಿನಿಧಿಯಾಗಿರುವ ರುಚಿರಾ ಕಾಂಬೋಜ್ ಅವರು ಈ ಮೊದಲು ಮಾತನಾಡಿ, ಯುಎನ್‌ನಲ್ಲಿ ಸದಸ್ಯತ್ವಕ್ಕಾಗಿ ಪ್ಯಾಲೆಸ್ತೀನ್‌ ಸಲ್ಲಿಸಿದ್ದ ಅರ್ಜಿಯನ್ನು ಭದ್ರತಾ ಮಂಡಳಿಯು ಅನುಮೋದಿಸಲಿಲ್ಲ, ಇದನ್ನು ವೀಟೋ ಬಳಸಿ ಅಮೆರಿಕ ತಡೆದಿತ್ತು ಎಂದು ಹೇಳಿದ್ದರು.

ಏಪ್ರಿಲ್‌ನಲ್ಲಿ ಪ್ಯಾಲೆಸ್ತೀನ್‌, ಯುಎನ್ ಸೆಕ್ರೆಟರಿ-ಜನರಲ್ ಆಂಟೋನಿಯೊ ಗುಟೆರೆಸ್‌ಗೆ ಪತ್ರವನ್ನು ಕಳುಹಿಸಿದ್ದು, ಯುಎನ್ ಪೂರ್ಣ ಸದಸ್ಯತ್ವಕ್ಕಾಗಿ ತನ್ನ ಅರ್ಜಿಯನ್ನು ಮತ್ತೊಮ್ಮೆ ಪರಿಗಣಿಸುವಂತೆ ವಿನಂತಿಸಿದೆ. ಒಂದು ರಾಜ್ಯಕ್ಕೆ ಪೂರ್ಣ UN ಸದಸ್ಯತ್ವವನ್ನು ನೀಡಬೇಕಾದರೆ, ಅದರ ಅರ್ಜಿಯನ್ನು ಭದ್ರತಾ ಮಂಡಳಿ ಮತ್ತು ಜನರಲ್ ಅಸೆಂಬ್ಲಿ ಎರಡರಿಂದಲೂ ಅನುಮೋದಿಸಬೇಕು, ಅಲ್ಲಿ ಮೂರನೇ ಎರಡರಷ್ಟು ಸದಸ್ಯರು ಹಾಜರಿರುತ್ತಾರೆ ಮತ್ತು ರಾಜ್ಯವನ್ನು ಪೂರ್ಣ ಸದಸ್ಯರಾಗಿ ಒಪ್ಪಿಕೊಳ್ಳಲು ಮತದಾನದ ಅಗತ್ಯವಿದೆ.

ಪ್ರಸ್ತುತ, ಪ್ಯಾಲೆಸ್ತೀನ್‌ ಯುಎನ್‌ನಲ್ಲಿ “ಸದಸ್ಯರಲ್ಲದ ವೀಕ್ಷಕ ರಾಜ್ಯ” ಆಗಿದೆ, 2012ರಲ್ಲಿ ಜನರಲ್ ಅಸೆಂಬ್ಲಿಯು ಪ್ಯಾಲೆಸ್ತೀನ್‌ಗೆ ಈ ಸ್ಥಾನಮಾನವನ್ನು ನೀಡಿದೆ. ಈ ಸ್ಥಿತಿಯು ಪ್ಯಾಲೆಸ್ತೀನ್‌ಗೆ ವಿಶ್ವ ಸಂಸ್ಥೆಯ ಪ್ರಕ್ರಿಯೆಗಳಲ್ಲಿ ಭಾಗವಹಿಸಲು ಅವಕಾಶ ನೀಡುತ್ತದೆ ಆದರೆ ಅದು ನಿರ್ಣಯಗಳ ಬಗ್ಗೆ ಮತ ಚಲಾಯಿಸಲು ಅವಕಾಶ ಇರುವುದಿಲ್ಲ.

ಅಕ್ಟೋಬರ್ 7, 2023ರಂದು ಯುದ್ಧ ಘೋಷಣೆ ಬಳಿಕ ಇಸ್ರೇಲ್‌ ಪ್ಯಾಲೆಸ್ತೀನ್‌ ಮೇಲೆ ನಡೆಸಿದ ದಾಳಿಗೆ ಗಾಝಾದಲ್ಲಿ ಈವರೆಗೆ 34,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ.

ಇದನ್ನು ಓದಿ: ‘ಸರ್ಜಿಕಲ್ ಸ್ಟ್ರೈಕ್’ ನಿಜವಾಗಿ ನಡೆದಿದೆಯೋ ಇಲ್ಲವೋ ಗೊತ್ತಿಲ್ಲ: ರೇವಂತ್ ರೆಡ್ಡಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಿಯಾಂಕ ಗಾಂಧಿ

ಗಾಜಾದಲ್ಲಿ ಇಸ್ರೇಲ್‌ನ ‘ಜನಾಂಗೀಯ ಕೃತ್ಯಗಳು’ ನಿಲ್ಲಬೇಕು: ಪ್ರಿಯಾಂಕಾ ಗಾಂಧಿ

0
ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ಮಿಲಿಟರಿ ದಾಳಿಯನ್ನು ಸ್ವೀಕಾರಾರ್ಹವಲ್ಲ ಮತ್ತು ಹತ್ಯಾಕಾಂಡ ಎಂದು ಹೇಳಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಇದನ್ನು ಜಗತ್ತಿನ ಪ್ರತಿಯೊಂದು ಸರ್ಕಾರ ಖಂಡಿಸಬೇಕು ಎಂದು ಶುಕ್ರವಾರ ಕರೆ...